ಬಹು ವರ್ಷಗಳ ಕಾಲ ಮಕ್ಕಳಿಲ್ಲದೆ ಯಾತಿಸುತಿದ್ದ #ಅತ್ರಿ_ಮಹರ್ಷಿ ಮತ್ತು #ಅನಸೂಯಾದೇವಿ ದಂಪತಿಗಳು ಪುತ್ರ ಸಂತಾನಕ್ಕಾಗಿ ತಪಸ್ಸನ್ನಾಚರಿಸುತ್ತಾರೆ. ತಪಸ್ಸಿಗೆ ಮೆಚ್ಚಿ #ಬ್ರಹ್ಮ, #ವಿಷ್ಣು, #ಮಹೇಶ್ವರರು ಪ್ರತ್ಯಕ್ಷರಾಗಿ ತಮ್ಮ ಅಂಶಗಳಿರುವ ಮೂರು ಮಕ್ಕಳನ್ನು ದಂಪತಿಗಳಿಗೆ ದಯಪಾಲಿಸುತ್ತಾರೆ. ಇದರ ಪರಿಣಾಮವಾಗಿ ಬ್ರಹ್ಮನಿಂದ #ಚಂದ್ರನೂ, ವಿಷ್ಣುವಿನಿಂದ #ದತ್ತನೂ ಹಾಗೂ ಶಿವನಿಂದ #ದೂರ್ವಾಸನೂ ಜನಿಸುತ್ತಾರೆ.
ವಿಶ್ವ ಗುರುಗಳಾಗಿರುವ #ದತ್ತಾತ್ರೇಯನನ್ನು #ಶಂಖ, #ಚಕ್ರ, #ತ್ರಿಶೂಲ, #ಡಮರುಗ, #ಕಮಂಡಲಗಳೊಂದಿಗೆ ಬಿಂಬಿಸಿರುವುದನ್ನು ಕಾಣಬಹುದು. ಇದಲ್ಲದೆ #ಗೋವು ಮತ್ತು #ನಾಲ್ಕು_ನಾಯಿಗಳನ್ನೂ ಸಹ ಕಾಣಬಹುದು. ಈ ನಾಯಿಗಳು ನಾಲ್ಕು ವೇದಗಳಾದ #ಋಗ್, #ಯಜುರ್, #ಸಾಮ, ಹಾಗೂ #ಅಥರ್ವ ವೇದಗಳಾಗಿಗೂ, ನಾಲ್ಕು ಯುಗಗಳಾದ #ಕೃತ, #ತ್ರೇತ, #ದ್ವಾಪರ ಹಾಗೂ #ಕಲಿಯುಗಗಳಾಗಿಯೂ, ನಾಲ್ಕು ಪ್ರಪಂಚದ ಸ್ಥಿಥಿಗಳಾದ #ಪರ, #ಪಷ್ಯಂತಿ, #ಮದ್ಯಮ ಹಾಗೂ #ವೈಖರಿಗಳಾಗಿಯೂ ಬಿಂಬಿಸಲಾಗಿದೆ.
ಪ್ರತಿ ವರ್ಷ ಮಾರ್ಗಶಿರ ಕೃಷ್ಣ ಪೌರ್ಣಿಮೆಯಂದು ಶ್ರೀ ದತ್ತಾತ್ರೇಯ ಜಯಂತಿಯನ್ನು ದೇಶದಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ದಿನ ಆತನ ಬ್ರಹ್ಮ ಮುಖಕ್ಕೆ #ಋಷಿಪೂಜೆಯನ್ನು, ವಿಷ್ಣುಮುಖಕ್ಕೆ #ಸತ್ಯನಾರಾಯಣ ಪೂಜೆಯನ್ನು ಮತ್ತು ರುದ್ರಮುಖಕ್ಕೆ #ರುದ್ರಾಭಿಷೇಕವನ್ನು ಮಾಡಲಾಗುತ್ತದೆ.
ನಮ್ಮ ನಾಡು, ನಮ್ಮ ನುಡಿ, ನಮ್ಮ Someಸ್ಕೃತಿ
No comments:
Post a Comment