Monday, 16 December 2019

ಮಡಿ

ಉಪಯುಕ್ತ ಮಾಹಿತಿ

ದೇವಸ್ಥಾನಗಳಲ್ಲಿ, ಮನೆಯಲ್ಲಿ ಮಡಿ ಮಡಿ ಅಂತ ಮಡಿ ಮಾಡುವವರನ್ನು ನೀವು ನೋಡಿರಬಹುದು. ಕೆಲವರಿಗೆ ಇದು ಅತಿರೇಕ ಅಂತ ಅನ್ನಿಸಿರಲೂಬಹುದು. ಆದರೆ, ನಿಜವಾದ ಮಡಿ ಅಂದರೆ ಯಾವುದು? ಇದು ಕೆಲವರಿಗೆ ಮಾತ್ರ ಸಂಬಂಧಿಸಿದ್ದಾ ಅಥವಾ ಯಾರು ಬೇಕಾದರೂ ಆಚರಿಸಬಹುದಾಗಿದ್ದಾ? ಈ ಸೂಕ್ಷ್ಮವಾದ ವಿಷಯ ಕುರಿತು ವಿಷ್ಣುದಾಸ ನಾಗೇಂದ್ರಾಚಾರ್ಯ ಅವರು ಅತ್ಯಂತ ವಿಸ್ತೃತವಾಗಿ ವಿವರಿಸಿದ್ದಾರೆ.

ಜ್ಯೋತಿಷ್ಯ ಎನ್ನುವ ಅದ್ಭುತ ಶಾಸ್ತ್ರ ಇವತ್ತು ಮಂಗಗಳ ಕೈಯಲ್ಲಿರುವ ಮಾಣಿಕ್ಯವಾಗಿದೆ ಎಂದ ಮಾತ್ರಕ್ಕೆ ಜ್ಯೋತಿಷ್ಯದ ಬೆಲೆ ಕಡಿಮೆಯಾಗುವದಿಲ್ಲ. ಹಾಗೆಯೇ, ಮಡಿಯನ್ನು ಸರಿಯಾಗಿ ಆಚರಿಸದೆ, ಶುಚಿತ್ವಕ್ಕೆ ಬೆಲೆ ಕೊಡದೆ ಮಡಿ ಮಾಡುವ ಜನರನ್ನು ಕಂಡು ನಿಮಗೆ ರೋಸಿಹೋಗಿರಬಹುದು, ಅದಕ್ಕೆ ಉತ್ತರ - ಮಡಿಯನ್ನು ಬಿಡುವುದಲ್ಲ, ಶುದ್ಧವಾಗಿ ಮಡಿಯನ್ನು ಮಾಡಿ ಅವರಿಗೆ ಪಾಠ ಕಲಿಸುವದು. ಮಾಡಿ ಅದನ್ನು ಎನ್ನುತ್ತಾರೆ ವಿಷ್ಣುದಾಸ.

ಸ್ನಾನ ಮಾಡುವಾಗ, ಪೂಜೆ ಪುನಸ್ಕಾರ ಕೈಗೊಂಡಿರುವಾಗ, ಜಪತಪ ಮಾಡುವಾಗ, ಮೈಲಿಗೆಯಾದಾಗ, ಅಡುಗೆ ಮಾಡುವಾಗ, ಭೋಜನಕ್ಕೆ ಕುಳಿತುಕೊಳ್ಳುವಾಗ ಗಂಡಸರು ಮತ್ತು ಹೆಂಗಸರು ಯಾವ ರೀತಿ ಮಡಿಯ ನಿಮಯಗಳನ್ನು ಪಾಲಿಸಬೇಕು ಎಂದು ಕೂಡ ವಿಷ್ಣುದಾಸ ಅವರು   ತಿಳಿಸಿಕೊಟ್ಟಿದ್ದಾರೆ  ಸ್ನಾನ ಮಾಡುವಾಗ ಮಡಿ

ಸ್ನಾನ ಎಂದರೆ ಮೈಮೇಲೆ ನೀರು ಸುರಿದುಕೊಳ್ಳುವುದಲ್ಲ. ಮೊದಲಿಗೆ ಆಚಮನ ಮಾಡಿ, ಸಂಕಲ್ಪ ಮಾಡಿ, ಶ್ರೀಹರಿಯನ್ನು ಪ್ರಾರ್ಥನೆ ಮಾಡಿ, ಗಂಗಾದಿ ತೀರ್ಥಗಳನ್ನು ಸ್ಮರಿಸಿ, ಮಂತ್ರಗಳನ್ನು ಪಠಿಸಿ ಮಾಡುವದೇ ಸ್ನಾನ. ಇದರಿಂದಲೇ ಮನುಷ್ಯ ಮಡಿಯಾಗುವದು. ಕೇವಲ ಸ್ನಾನ ಮಾಡುವದರಿಂದ ಮಡಿಯಾಗುವದೇ ಇಲ್ಲ. 

ಹೀಗೆ ವಿಷ್ಣುಸ್ಮರಣಪೂರ್ವಕವಾಗಿ ಶುದ್ಧವಾದ ಕ್ರಮದಲ್ಲಿ ತಲೆಸ್ನಾನವನ್ನು ಮಾಡಿದ ನಂತರ ಮನುಷ್ಯ ಭಗವಂತನ ಪೂಜೆ ಮಾಡಲು ಅರ್ಹನಾಗುತ್ತಾನೆ. ಆದರೆ ಅದಕ್ಕೂ ಮತ್ತಷ್ಟು ನಿಯಮಗಳಿವೆ.

1. ಸ್ನಾನ ಮಾಡುವಾಗ ಬೆತ್ತಲೆಯಾಗಬಾರದು. ಬೆತ್ತಲೆಯಾಗಿ ಮಾಡಿದ ಸ್ನಾನದಿಂದ ಮನುಷ್ಯ ಮಡಿಯಾಗುವದಿಲ್ಲ.

2. ಸ್ನಾನ ಮಾಡುವಾಗ ಎರಡು ಬಟ್ಟೆ ಇರಲೇ ಬೇಕು. ಉಟ್ಟ ಬಟ್ಟೆ, ಮೈ ವರೆಸಿಕೊಳ್ಳುವ ಬಟ್ಟೆ.

3. ಮೈ ವರೆಸಿಕೊಳ್ಳುವ ಬಟ್ಟೆಯನ್ನೂ ತೋಯಿಸಿ ಸ್ನಾನ ಮಾಡಿ, ಆ ಬಟ್ಟೆಯನ್ನು ಹಿಂಡಿ ಅದರಿಂದಲೇ ಮೈ ವರೆಸಿಕೊಳ್ಳಬೇಕು. ಆಗ ಮಾತ್ರ ಪೂಜೆಯ ಮಡಿಗೆ ಅರ್ಹರಾಗುತ್ತೇವೆ. ಮೈಲಿಗೆಯ ಬಟ್ಟೆಯಿಂದ ವರೆಸಿಕೊಂಡರೆ ಪೂಜೆಯ ಮಡಿಗೆ ಅರ್ಹತೆ ದೊರೆಯುವದಿಲ್ಲ. ಮಡಿಯಲ್ಲಿಯೇ ವಸ್ತ್ರವನ್ನು ಒಣಗಿ ಹಾಕಿದ್ದರೆ, ಸ್ನಾನ ಮಾಡಿ, ಸ್ನಾನದ ಕಾಲದಲ್ಲಿಯೇ ಮಡಿಮಾಡಿಕೊಂಡ ಒದ್ದೆಯ ಉತ್ತರೀಯದಿಂದ ಒಮ್ಮೆ ವರೆಸಿಕೊಂಡು ಆ ಬಳಿಕ ಒಣಗಿದ ಮಡಿವಸ್ತ್ರವನ್ನು ತೆಗೆದುಕೊಂಡು, ಆ ಒಣಗಿದ ವಸ್ತ್ರದಿಂದ ಪೂರ್ಣವಾಗಿ ಮೈ ವರೆಸಿಕೊಳ್ಳಬಹುದು. ವರೆಸಿಕೊಂಡ ತಕ್ಷಣ ನೀರಿನಲ್ಲಿ ಹನ್ನೆರಡು ಊರ್ಧ್ವಪುಂಢ್ರಗಳನ್ನು ಧರಿಸಬೇಕು. ಇಲ್ಲದಿದ್ದರೆ ಮಡಿವಸ್ತ್ರವನ್ನುಡುವ ಅರ್ಹತೆ ಒದಗುವುದಿಲ್ಲ. ಕಾರಣ ಬಟ್ಟೆ ಉಡುವುದೂ ಸಹ ದೇವರ ಸೇವೆ, ಸತ್ಕರ್ಮ. ಅದನ್ನು ಮಾಡಬೇಕಾದರೆ ಮೈಮೇಲೆ ಊರ್ಧ್ವಪುಂಢ್ರಗಳಿರಲೇ ಬೇಕು.

4. ಸ್ನಾನ ಮಾಡಿದ ನಂತರ ಮೈಯಿಂದ ನೀರು ಸೋರಿಸಿಕೊಂಡು ನಡೆದು ಬರಬಾರದು

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು

No comments:

Post a Comment