Monday, 16 December 2019

ನರಕಾಸುರ #ಜನ್ಮ #ರಹಸ್ಯ!

#ನರಕಾಸುರ #ಜನ್ಮ #ರಹಸ್ಯ!
#ಭೂದೇವಿಯ ಗರ್ಭದಲ್ಲಿರುವಾಗಲೇ ಈ ನರಕಾಸುರನು ತುಂಬಾ ವೀರನೂ ಬಹುಬಲಪರಾಕ್ರಮವುಳ್ಳವನೂ, ಸಹಿಸಲಸಾಧ್ಯನೂ ಆಗುವನೆಂದು ತಿಳಿದು #ಬ್ರಹ್ಮನೇ ಮೊದಲಾದ ದೇವತೆಗಳು ಅವನು ಗರ್ಭದಿಂದೀಚೆಗೆ ಬರುವ (ಜನನವಾಗುವ) ಕಾಲ ಬಂದರೂ ಜನನವಾಗದಿರುವಂತೆ ಬಹಳದಿವಸ ಗರ್ಭದಲ್ಲಿಯೇ ಅವರು ತಮ್ಮ ಶಕ್ತಿಯಿಂದ ತಡೆದರು. ಇದರಿಂದಾಗಿ ತುಂಬಾ ಶೋಕಗೊಂಡವಳಾಗಿ ಭೂಮಿಯು ಮತ್ತೆಮತ್ತೆ ರೋಧಿಸಿದಳು. ತುಂಬಿದ ಗರ್ಭವುಳ್ಳ ಭೂದೇವಿಯು ಆ ಗರ್ಭಭಾರವನ್ನು ಹೊರಲಾರದೇ ರಕ್ಷಕನೂ, ಒಡೆಯನೂ ಆದ #ಮಾಧವನನ್ನು ಮರೆಹೊಕ್ಕಳು. ಭೂದೇವಿಯಿಂದ ಸ್ತುತಿಸಲ್ಪಡಲು #ಹರಿಯು ಪ್ರತ್ಯಕ್ಷನಾಗಿ, ಹಿಂದೆ ತಾನು #ವರಾಹ ರೂಪದಲ್ಲಿದ್ದಾಗ ಋತುಮತಿಯಾದ ಭೂದೇವಿಯನ್ನು ಕಾಮಿಸಿ ದೇವಿಯ ಉದರದಲ್ಲಿ ಗರ್ಭವನ್ನುಂಟುಮಾಡಿದ್ದು, ಜನನಕಾಲವು ಬಂದರೂ ಆ ಗರ್ಭವು ಇನ್ನೂ ಜನನವನ್ನು ಹೊಂದದೆ ಪೂರ್ಣಗರ್ಭಿಣಿಯಾದ ದೇವಿಯು ದಿನದಿನವೂ ಪೀಡೆಯನ್ನು ಅನುಭವಿಸುತ್ತಿರುವುದನ್ನು ಮಾಧವನು ನೋಡಿದನು.

#ನಾರಾಯಣನು ಋತುಮತಿಯಾದ ದೇವಿಯು ಯಾವ ಗರ್ಭವನ್ನು ಧರಿಸಿದೆಯೋ ಅದು #ವರಾಹನಿಂದ ಜನಿಸಿದುದಾದರೂ #ರಾಕ್ಷಸ ಸ್ವಭಾವವುಳ್ಳದುದು. ಈ ಗರ್ಭವು ಹೀಗೆ ರಾಕ್ಷಸ ಸ್ವಭಾವ ಮತ್ತು ಪರಾಕ್ರಮವುಳ್ಳದ್ದೆಂದು ತಿಳಿದು ಬ್ರಹ್ಮನೇ ಮೊದಲಾದ ದೇವತೆಗಳು ತಮ್ಮ ಶಕ್ತಿಯಿಂದ ಹೊರಗೆ ಬರದಂತೆ ಅದನ್ನು ನಿನ್ನ ಗರ್ಭದಲ್ಲಿಯೇ ತಡೆದು ಬಂಧಿಸಿರುವ ವಿಷಯವನ್ನು ಭೂದೇವಿಗೆ ತಿಳಿಸಿದನು.

ಮುಂದೆ ಆದಿಸೃಷ್ಟಿಯಿಂದ ಇಪ್ಪತ್ತೆಂಟನೆಯ #ಚತುರ್ಯುಗವು ಬರಲು #ತ್ರೇತಾಯುಗದ ಮಧ್ಯದಲ್ಲಿ ಈ ಮಗನನ್ನು ಹಡೆಯುವೆ ಹಾಗೂ ಸತ್ಯಯುಗವಾದ ತ್ರೇತಾಯುಗವು ಅರ್ಧ ಕಳೆಯುವವರೆಗೆ ಈ ಮಹಾಗರ್ಭವನ್ನು ಧರಿಸು. ಅಲ್ಲಿಯ ವರೆಗೆ ನಿನಗೆ ಅವಧಿಯನ್ನು ಕೊಟ್ಟಿರುವೆನು. ಹೀಗೆ ಹೇಳಿ ಭಗವಂತನಾದ #ವಿಷ್ಣುವು ಗರ್ಭಿಣಿಯೂ, ದುಃಖಿತಳೂ ತನ್ನ ಪ್ರಿಯಮಡದಿಯೂ ಆದ ಭೂದೇವಿಯನ್ನು #ಶಂಖದ ಅಗ್ರಭಾಗದಿಂದ ನಾಭಿಪ್ರದೇಶದಲ್ಲಿ ಸ್ಪರ್ಶಿಸಿದನು (ನೇವರಿಸಿದನು).

ಹೀಗೆ ವಿಷ್ಣುವಿನಿಂದ ಸ್ಪರ್ಶಿಸಲ್ಪಟ್ಟಮೇಲೆ ಭೂದೇವಿಯ ಶರೀರವೂ ಗರ್ಭವೂ ತುಂಬ ಹಗುರವನ್ನು ಹೊಂದಿ ಭೂಮಿಯು ತುಂಬಾ ಸುಖಗೊಂಡಳು. ಈ ಕಾರಣದಿಂದ ಜಗತ್ತನ್ನು ಧರಿಸುವವಳೂ, ಮಹಾಬಲಶಾಲಿನಿಯೂ ಆದ ಭೂದೇವಿಯು ಜಗತ್ತನ್ನು ಧರಿಸುವುದರಿಂದ “#ಜಗದ್ಧಾತ್ರೀ” ಎಂದು ಪ್ರಸಿದ್ಧಳಾದಳು.

ಮುಂದೆ ಈ ಗರ್ಭವು ತ್ರೇತಾಯುಗದ ಮಧ್ಯದಲ್ಲಿ #ರಾಮನೆಂಬುವವನಿಂದ #ರಾವಣನೆಂಬ ವೀರನು ಹತನಾದಮೇಲೆ ಜನನವನ್ನು ಹೊಂದುವುದೆಂದು ನಾರಾಯಣನು ಹೇಳಿದನು.

#ನರಕಾಸುರ #ಸಂಹಾರ - #ನರಕಚತುರ್ದಶಿ ಬಗ್ಗೆ ತಿಳಿಯಲು #Someಸ್ಕೃತಿ ಫೇಸ್ ಬುಕ್ ಪೇಜ್‌ಅನ್ನು ನೋಡಿ. 
ನಮ್ಮ #ನಾಡು, ನಮ್ಮ #ನುಡಿ, ನಮ್ಮ Someಸ್ಕೃತಿ

ಉಲ್ಲೇಖ : #ಶ್ರೀ #ಕಾಲಿಕಾಪುರಾಣಂ

No comments:

Post a Comment