Monday, 16 December 2019

ಧನುರ್ಮಾಸ..

~^~
࿗ ಧನುರ್ಮಾಸ ࿗

*ದಶಂಬರ ೧೭' ಮಂಗಳವಾರ ೨೦೧೯ - ಜನವರಿ ೧೪' ಮಂಗಳವಾರ ೨೦೨೦*

ಮಾರ್ಗಶಿರಕ್ಕೆ ಆಗ್ರ-ಹಾಯಣ ಎನ್ನುತ್ತಾರೆ. ಹಾಯಣ ಎಂದರೆ ಮಾಸ. ಆಗ್ರ ಎಂದರೆ ಮೊದಲನೆಯದು. ಸಮೃದ್ಧಿ ಸಂತೃಪ್ತಿ ಸೌಂದರ್ಯ, ಸುಭಗತೆಗಳೇ ಪರಮಾತ್ಮಸೃಷ್ಠಿಯ ವಿಶಿಷ್ಟ ಲಕ್ಷಣವೆಂಬತೆ
"ಮಾಸಾನಾಂ ಮಾರ್ಗಶೀರ್ಷೋಸ್ಮಿ"ಎಂದು ಋತ-ಸತ್ಯಗಳ ಸಾಕಾರರೂಪಿಯಾದ ಶ್ರೀಕೃಷ್ಣ ಮಾರ್ಗಶಿರ ಮಾಸವೆಂದರೆ ತಾನು ಎಂದು ಸಾರಿ ಹೇಳಿದ್ದಾನೆ.

ಇದೇ ಮಾರ್ಗಶಿರದಲ್ಲಿ ಧನುರ್ಮಾಸವು ಹರ್ಷೋಲ್ಲಾಸವನ್ನು ತರುವುದರ ಜೊತೆ ತಾಯಿಯ ಧನುರ್ಮಾಸ ಪೂಜಾ ವೈಭವತೆಗೆ ಸಾಕ್ಷಿಯಾಗಲಿದೆ. 'ದಕ್ಷಿಣಾಯನ' ಎಂಬ ಕತ್ತಲೆಯನ್ನು ಹೊರದೂಡಿ 'ಉತ್ತರಾಯಣ'ಎಂಬ ಬೆಳಕನ್ನು ಸಂಧಿಸುವ ಈ ಉತ್ತಮ ಕಲ್ಪದಲ್ಲಿ ಸರ್ವಮಂಗಳೆಯನ್ನು ಶೃದ್ಧಾ ಭಕ್ತಿಯಿಂದ ಪೂಜಿಸಿ ಪ್ರಾರ್ಥಿಸಿದರೆ ಸರ್ವಾಭೀಷ್ಟಗಳೂ ಪುಣ್ಯಪ್ರದವಾಗಿ ಲಭಿಸುತ್ತದೆ. 
ಎಷ್ಟೇ ಕಠಿಣವಾದರೂ ಮೈ ಕೊರೆಯುವ ಚಳಿಯ ತೀವ್ರತೆಯನ್ನು ಜಡತ್ವವನ್ನು ಮಂಜಿನ ತಂಬೆಲರನ್ನು ಲೆಕ್ಕಿಸದೆ ಪ್ರದೋಷಕಾಲದ ನಿದ್ರಿಸಿದ ಪ್ರಕೃತಿಯ ನೀರವ ಸೌಂದರ್ಯವನ್ನು ಆಸ್ವಾದಿಸುತ್ತಾ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ದೇವಿಗೆ ನಡೆಯುವ ಉಷಾ ಕಾಲದ ಧನುರ್ಮಾಸದ ಮಹಾಪೂಜೆಯನ್ನು ಕಂಡು ಕೃತಾರ್ಥರಾಗಲು ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ನಾಳಿನ ಮಂಗಳವಾರದಿಂದ ಪ್ರಾತಃಕಾಲ ತಾಯಿಯ ಧನುಪೂಜೆಗೆ ಭಕ್ತ ಸಾಗರವೇ ಹರಿದು ಬರಲಿದೆ.

ಅನನ್ಯ ಭಕ್ತಿಯಿಂದ ಪರಮೇಶ್ವರಿಯ ಶರಣು ಹೋಗಿ,
ಏಕಾಗ್ರಚಿತ್ತರಾಗಿ ಧನುರ್ಮಾಸ ಪೂಜೆಯಲ್ಲಿ ಪಾಲ್ಗೊಂಡು ಅವಳ ಕೃಪೆಯಿಂದ ನಮ್ಮ ಸಕಲ ತಾಪತ್ರಯ ಮುಕ್ತವಾಗಿ ಇಷ್ಟಾರ್ಥಸಿದ್ಧಿಯಾಗಿ  ಧನಧಾನ್ಯ ಪುತ್ರಾದಿ ಸೌಖ್ಯಭಾಗ್ಯಗಳನ್ನು ಹೊಂದುವುದರಲ್ಲಿ ಸಂಶಯವಿಲ್ಲ.

"ಧನುರ್ಮಾಸವು (ಕೋದಂಡ ಮಾಸ, ಚಾಪ ಮಾಸ)
ಇಪ್ಪತ್ತೊಂಭತ್ತು ದಿನಗಳ ಸುಧೀರ್ಘ ಅವಧಿಯಾಗಿದ್ದು ಸೂರ್ಯನು ತನ್ನ ಚಲನೆಯನುಸಾರವಾಗಿ ಧನುರ್ರಾಶಿಯಿಂದ ಮಕರರಾಶಿಗೆ ಪ್ರವೇಶಿಸುವ ಹಿಂದೂ ಪಂಚಾಂಗದ ಒಂಭತ್ತನೇಯ ತಿಂಗಳಾಗಿರುತ್ತದೆ. 
ಈ ವರ್ಷದಲ್ಲಿ ಮಾರ್ಗಶಿರ ಮಾಸವು ಕಳೆದ ನವಂಬರ ೨೭'ರಿಂದ ದಶಂಬರ ೨೬'ರ ವರೆಗೆ ಹಾಗು ೨೭'ರಿಂದ ಪುಷ್ಯ ಮಾಸವು ಆವೃತ್ತಿಯಲ್ಲಿದ್ದು ಪ್ರಸ್ತುತ ೨೦೧೯-೨೦೨೦'ನೇ ವರ್ಷದ ಅನ್ವಯ ನಾಳಿನ ದಶಂಬರ ೧೭'ನೇ ಮಂಗಳವಾರ ದಿಂದ ಮೊದಲ್ಗೊಂಡು ಬರುವ ಜನವರಿ ೧೪'೨೦೨೦ ನೇ ಮಂಗಳವಾರದ ವರೆಗೆ ಚಾಲ್ತಿಯಲ್ಲಿದ್ದು,'ಮಾರ್ಗಶಿರ' ಹಾಗೂ 'ಪುಷ್ಯ' ಮಾಸದ ಮಧ್ಯಭಾಗದಲ್ಲಿ ಧನುರ್ಮಾಸವು ಕೂಡಿರುತ್ತದೆ.

'ಧನುರ್ಮಾಸ' ಎಂದರೆ ಸೂರ್ಯನು ಮೂಲಾ ನಕ್ಷತ್ರದಿಂದ ಹಿಡಿದು ಉತ್ತರಾಷಢ ನಕ್ಷತ್ರವು ೧'ನೇ ಪಾದದವರೆಗಿನ ಧನುರಾಶಿಯಲ್ಲಿ ಸಂಚರಿಸುವ ಸಮಯವನ್ನು ಧನುರ್ಮಾಸ ಎಂದು ಕರೆಯುತ್ತಾರೆ. 

ಧನುರ್ಮಾಸದ ಆರಂಭವು ಸೂರ್ಯನ ಪರಿಚಲನೆಯ ಆಧಾರದ ಮೇಲೆ ನಿರ್ಧಾರಿತವಾಗಿದ್ದು , 
ಸೂರ್ಯನ ಧನುರ್ರಾಶಿಯ ಪ್ರವೇಶವನ್ನು 
'ಧನುರ್ ಸಂಕ್ರಮಣವೆಂದು(ಇಂದಿನ ದಿನ) ಹಾಗು ಧನುರ್ರಾಶಿಯಿಂದ ಮಕರ ರಾಶಿಗೆ ಸೂರ್ಯನ ಪ್ರವೇಶವನ್ನು ಮಕರ ಸಂಕ್ರಮಣವೆಂದೂ ,ಈ ಎರಡೂ ಸಂಕೀರ್ಣಅವಧಿಗಳ ನಡುವಿನ ಇಪ್ಪತ್ತೊಂಭತ್ತು ದಿನಗಳೇ ಧನುರ್ಮಾಸ.

(೧) ಮಕರ ಸಂಕ್ರಮಣದಿಂದ ಕರ್ಕಾಟಕ ಸಂಕ್ರಮಣದ ವರೆಗಿನ ಆರು ತಿಂಗಳು ಉತ್ತರಾಯಣ 
(೨) ಕರ್ಕಾಟಕ ಸಂಕ್ರಮಣದಿಂದ ಮಕರ ಸಂಕ್ರಮಣದ ವರೆಗಿನ ಆರು ತಿಂಗಳು ದಕ್ಷಿಣಾಯನ.
'ಆಯನ' ಎಂದರೆ ಪಥ, ಸಂಚಲನ ಎಂದರ್ಥ.
ಪರಿಸಮಾಪ್ತಿಗೊಳ್ಳುವ ಒಂದು ತಿಂಗಳ ಅವಧಿ.

ಮಕರ ಸಂಕ್ರಮಣದಿಂದ ಕರ್ಕಾಟಕ ಸಂಕ್ರಮಣದ ವರೆಗಿನ ೬'ತಿಂಗಳು *ಉತ್ತರಾಯಣ*  ಕರ್ಕಾಟಕ ಸಂಕ್ರಮಣದಿಂದ ಮಕರ ಸಂಕ್ರಮಣದ ವರೆಗಿನ ೬' ತಿಂಗಳು *ದಕ್ಷಿಣಾಯನ* ದೇವಾನು-ದೇವತೆಗಳಿಗೆ ವರ್ಷದ ಆರು ಪಂಚಾಂಗದ ತಿಂಗಳುಗಳು ಒಂದು ದಿನಕ್ಕೆ ಸರಿಸಮಾನ ವಾಗಿರುತ್ತದೆ. ಇದನ್ನು 'ಉತ್ತರಾಯಣ' ಎಂದು ಕರೆಯುತ್ತಾರೆ. ಇದು ಹಗಲು.
ಹಾಗು ಉಳಿದ ಮತ್ತೊಂದು ಆರು ತಿಂಗಳುಗಳು ಒಂದು ರಾತ್ರಿಗೆ ಸರಿಸಮಾನ ವಾಗಿರುತ್ತದೆ. ಇದನ್ನು 'ದಕ್ಷಿಣಾಯನ' ಎಂದು ಕರೆಯುವರು. ಇದು ರಾತ್ರಿ.

ಆದ್ದರಿಂದ ಧನುರ್ಮಾಸವು ದಕ್ಷಿಣಾಯಣದ ಕಟ್ಟಕಡೆಯ ತಿಂಗಳಾಗಿರುತ್ತದೆ. ದಕ್ಷಿಣಾಯನದ ಆರು ತಿoಗಳುಗಳಲ್ಲಿ ಎರಡೆರಡು ತಿಂಗಳಿಗೆ ಒಂದು ಯಾಮದಂತೆ ಯಾಮತ್ರಯ ಪರಮಾತ್ಮನಿಗೆ ಅತ್ಯoತ ಪ್ರಿಯವಾಗಿದ್ದು  ಮೊದಲಿನ ಎರಡು ಯಾಮಗಳು ಚಾತುರ್ಮಾಸ್ಯ ಕಾಲವಾಗಿದೆ. ಮೂರು ಯಾಮಗಳಲ್ಲಿ  ಆಷಾಢ ಏಕಾದಶಿಯಿಂದ ಪ್ರಾರಂಭವಾದ ಚಾತುರ್ಮಾಸ್ಯದಲ್ಲಿ ಮಲಗಿದ ದೇವತೆಗಳು ಕಾರ್ತೀಕ ಮಾಸದ ಶುಕ್ಲ ಉತ್ಥಾನದ್ವಾದಶಿಯಂದು ಜಾಗೃತರಾಗುತ್ತಾರೆ. ಮಾರ್ಗಶಿರ ಮಾಸವಾದರು ಮೂರನೇ ಯಾಮದ ಕಡೆ ಪ್ರಹರವಾಗಿದ್ದು ಬಳಿಕ ಬರುವ ಧನುರ್ಮಾಸ ದೇವತೆಗಳ ಅರುಣೋದಯದ ಕಾಲವಾಗಿದೆ.

ದಕ್ಷಿಣಾಯನವು ಮುಗಿದು ಉತ್ತರಾಯಣವು ಅಂತೆಯೇ ಉತ್ತರಾಯಣವು ಮುಗಿದು ದಕ್ಷಿಣಾಯನವು ಆರಂಭವಾಗುವ ಕಾಲಕ್ಕೆ ಸಂಧಿಕಾಲವೆಂದು ಹೇಳುತ್ತಾರೆ. ರಾತ್ರಿಯು ಮುಗಿದು ಸೂರ್ಯೋದಯವಾಗುವ ತನಕದ ಬ್ರಾಹ್ಮೀ ಮುಹೂರ್ತವೂ ಒಂದು ಸಂಧಿಕಾಲ. ಪೂರ್ವಾಹ್ನ ಮತ್ತು ಅಪರಾಹ್ನ ಇವುಗಳ ನಡುವಿನ ಮಧ್ಯಾಹ್ನವೂ ಹಗಲು-ರಾತ್ರಿಗಳ ನಡುವಿನ ಸಾಯಂಕಾಲವೂ ಸಂವತ್ಸರಗಳ, ಋತುಗಳ, ತಿಂಗಳುಗಳ ಅಂತ್ಯ- ಆದಿಗಳ ನಡುವಿನ ಸಮಯವೂ ಸಂಧಿಕಾಲಗಳಾಗಿವೆ. ಸಂಧಿಕಾಲವೆಂದರೆ ಪ್ರಕೃತಿಯಲ್ಲಿ ಬಹುಮುಖ್ಯ ಮಾರ್ಪಾಟುಗಳಾಗುವ ಕಾಲವಾಗಿದ್ದು ಸಂಧಿಕಾಲದಲ್ಲಿ ಉತ್ಪನ್ನವಾಗುವ ಈಶ್ವರೀ ಚೈತನ್ಯವು ಸಂಧ್ಯಾ ಎನಿಸುವುದು. ಈ ಶಕ್ತಿಗೆ ಮಾಡುವ ವಂದನೆಯು ಸಂಧ್ಯಾವಂದನೆ ಎನಿಸಿ ಧನುರ್ಮಾಸವೆಂದು ಪರಿಗಣಿಸಲ್ಪಟ್ಟಿದೆ.

ಧನುರ್ಮಾಸದ ಪ್ರಾರಂಭದ ಘಳಿಗೆಯು ದೇವಾನು'ದೇವತೆಗಳಿಗೆ ಇರುಳು ಸಮಾಪ್ತಿಯಾಗಿ ಹಗಲು ಪ್ರಾರಂಭಗೊಂಡು ಸಕಲ ಬ್ರಹ್ಮಾಂಡಕ್ಕೂ ಬ್ರಾಹ್ಮೀ ಮುಹೂರ್ತದ ಆರಂಭವೆಂಬ  ಪ್ರತೀತಿ. ಆದರಿಂದ ದೇವತಾರಾಧನೆಗೆ ಉತ್ತರಾಯಣವು ಯೋಗ್ಯವಾದ ಕಾಲ. ಇದರ ಪ್ರಕಾರ ಸರ್ವದೈವಿಕ ಶಕ್ತಿಗಳು ಧನುರ್ಮಾಸದ ಈ ಸನ್ನಿವೇಶದಲ್ಲಿ ಮುಂಜಾನೆಯ ಬ್ರಾಹ್ಮೀ ಮುಹೂರ್ತ (ಸೂರ್ಯೋದಯದ ಮೊದಲಿನ ೯೦'ನಿಮಿಷಗಳ ಅವಧಿ)ದಲ್ಲಿ ಎಚ್ಚರಗೊಳ್ಳುತ್ತಾರೆ ಎಂಬ ದೃಢವಾದ ನಂಬಿಕೆಯಿದೆ.

ಬೆಳಗ್ಗಿನ ಜಾವ ರಾತ್ರಿಮುಗಿದು ಅರುಣೋದಯದ ತನಕದ ಬ್ರಾಹ್ಮೀ ಮುಹೂರ್ತವು ಶಾಂತವೂ, ರಮಣೀಯವೂ ಆಗಿದ್ದು ಆಧ್ಯಾತ್ಮಿಕ ಸಾಧನೆಗೆ ಸಂಧ್ಯಾವಂದನೆಗೆ, ಧ್ಯಾನಕ್ಕೆ,ದೇವತಾರಾಧನೆಗೆ ಶ್ರೀ ದೇವಿಯ ಸಾಕ್ಷಾತ್ಕಾರಕ್ಕೆ ಅತ್ಯಂತ ಪ್ರಶಸ್ತವಾಗಿರುತ್ತದೆ.
ಅದೇ ತೆರನಾಗಿ ತಾಯಿ ಮಂಗಳಾದೇವಿಗೆ ನಾಳೆಯಿಂದ  ವಿಶೇಷ ಧನುರ್ಮಾಸ ಪೂಜೆಯು ಮುಂಜಾನೆಯ ಸೂರ್ಯೋದಯದ ಮುಂಚಿತವಾಗಿ ೫.೪೫'ಕ್ಕೆ ಸರಿಯಾಗಿ ನಡೆಯಲಿದೆ.

ಪ್ರಾತಃಕಾಲದ  ಸವಿನಿದ್ದೆಯಿಂದೆದ್ದ ಜಗನ್ಮಾತೆಯು ಜಲಾಭಿಷೇಕದೊಂದಿಗೆ ಶುಚಿರ್ಭೂತಳಾಗಿ ಧನುರ್ಮಾಸದ ಮಹಾಪೂಜೆಯನ್ನು ಸ್ವೀಕರಿಸಲು ಹಾಗೂ ತನ್ನನ್ನು ಕಾಣಲು ತವಕದಿಂದ ಆಗಮಿಸಿದ ಸರ್ವರಿಗೂ ತನ್ನ ಮೂಲ ಬಿಂಬ ಸ್ವರೂಪದಲ್ಲಿ ದರ್ಶನವನ್ನೀಯ್ದು ಜಿನುಗುವ ಧಾರಪಾತ್ರೆಯೊಂದಿಗೆ ಸ್ವರ್ಣದೃಷ್ಟಿ ನೇತ್ರಳಾಗಿ..ಮಾಂಗಲ್ಯ, ಪುರಾತನ ವಜ್ರ ಕಂಠೀ ಹಾರವನ್ನು ಧರಿಸಿ ಪುಷ್ಪ ಹಾರಗಳನ್ನು ತೊಟ್ಟು ನಮ್ಮೆಲ್ಲರಿಗೂ ಧನ್ಯತೆಯ ಭಾವವನ್ನು ಕರಣಿಸುವಳು.

ಮಂಗಳೆ ಅರ್ಚನಾ ಪ್ರಿಯೆ. ದೇವಿಯ ಚರಣಾರವಿಂದದ ಬಳಿಯ ಶ್ರೀ ಚಕ್ರ ಪೀಠಕ್ಕೆ ಕುಂಕುಮದಿಂದ ಅರ್ಚನೆಯು ನಡೆದ ನಂತರ ಮಂಗಳಮ್ಮನಿಗೆ ಧನುರ್ಮಾಸದ ಮಹಾಪೂಜೆಯು ನಡೆಯುತ್ತದೆ. ಬಳಿಕ ನಿತ್ಯಪೂಜೆಯಂತೆ ಆರತಿಯು ನಡೆಯುತ್ತದೆ.
ಧನುರ್ಮಾಸದಲ್ಲಿ ಪ್ರತಿದಿನ ಬ್ರಾಹ್ಮೀ ಮುಹೂರ್ತದಲ್ಲಿ  ಧನುಪೂಜೆಯಿಂದ ಬಿಂಬದಲ್ಲಿ ಪೂರ್ಣಕಳಾ ಸಾನಿಧ್ಯಳಾಗಿ ಮೆರೆದು ಪ್ರಸನ್ನಳಾಗುವ ದೇವಿಯಲ್ಲಿ ಪ್ರೀತಿಯಿಂದ ಏನನ್ನೇ ಪ್ರಾರ್ಥಿಸಿಕೊಂಡರೂ ಅಪೇಕ್ಷಿತ ವಾಂಛಿತ ಫಲವನ್ನು ಕರುಣಿಸಿ ನಮ್ಮೆಲ್ಲರನ್ನು ಉದ್ಧರಿಸುತ್ತಾಳೆ.

ಅಲ್ಲದೆ ದೇವಳದಲ್ಲಿ *೧೯೯೪*'ರಿಂದ ಧನುರ್ಮಾಸ ಪೂಜೆಯನ್ನು *ಸೇವಾರೂಪ*ದಲ್ಲಿ 
ನಡೆಸಲು ಆರಂಭವಾಯಿತು.

*ನೀವೇದಯನ್ ಮೇ ಮುದ್ಗಾನ್ನo ಸ ವೈ ಭಾಗವತೋತ್ತಮಃ ಕೊದಂಡಸ್ಥೆ ಸವಿತರಿ ಮುದ್ಗಾನ್ನಂ ಯೋ ನಿವೇದಯೇತ್ ಸಹಸ್ರವಾರ್ಷಿಕೀ ಪೂಜಾ ದಿನೈನೈಕೇನ ಸಿಧ್ಯತ*

ಧನುರ್ಮಾಸದಲ್ಲಿ ಯಾರು ಒಂದು ತಿಂಗಳ ಪರ್ಯಂತ ಅರಣೋದಯ ಪೂರ್ವದಲ್ಲಿ ಎದ್ದು ಭಕ್ತಿಯಿಂದ ಹುಗ್ಗಿಯ ನೈವೇದ್ಯವನ್ನು ಮಾಡಿ ಅರ್ಪಿಸಿದಲ್ಲಿ ಸಹಸ್ರವರ್ಷದ ಪೂಜಾಫಲವು ಲಭಿಸುತ್ತದೆ.
ಅಂತೆಯೇ ಧನುರ್ಮಾಸದಲ್ಲಿ ವಿಶೇಷತಃ ಶ್ರೀದೇವಿಯ ಪ್ರೀತ್ಯರ್ಥವಾಗಿ 'ಬೆಳ್ತಿಗೆ ಅನ್ನ, ಹೆಸರು ಬೇಳೆ, ಕೊಬ್ಬರಿ ಹೆಚ್ಚಿನ ಪ್ರಮಾಣದ ತುಪ್ಪವನ್ನು ಸೇರಿಸಿ ಸವಿಯಾದ ಘೃತಾನ್ನವನ್ನು (ಮುದ್ಗಾನ್ನ) ದೇವಿಗೆ ನೈವೇದ್ಯವನ್ನಾಗಿ ಅರ್ಪಿಸಲಾಗುತ್ತದೆ. 
ಅಲ್ಲದೆ ಮಕರ ಸಂಕ್ರಾಂತಿಯ ದಿನದಂದು ಇದೇ ತೆರನಾಗಿ ನೈವೇದ್ಯವನ್ನು ಲಘು ಉಪಹಾರದಂತೆ ಪ್ರಸಾದರೂಪದಲ್ಲಿ ಭಕ್ತಾದಿಗಳಿಗೆ ನೀಡಲಾಗುತ್ತದೆ.

ತಾಯಿಯ ಮೇಲೆ ಪೂರ್ಣ ವಿಶ್ವಾಸದಿಂದ ಮನಃಬಿಚ್ಚಿ ಕಷ್ಟ ಸುಖಗಳನ್ನು ಹೇಳಿಕೊಳ್ಳುವ ನಮಗೆ ರಕ್ಷಿಸಲು ಆಕೆಯೊಬ್ಬಳೇ ಸಮರ್ಥಳು ಎನ್ನುವುದಕ್ಕೆ ನಾಳಿನಿಂದ ಆಗಮಿಸತಕ್ಕ ಭಜಕ ವೃಂದವೇ ಸಾಕ್ಷಿಯಾಗಲಿದೆ.
ಮಂಗಳೆಯನ್ನು ನಂಬಿ ಬದುಕುವವರಿಗೆ ಕಷ್ಟವೆಂಬುವುದು ಇಲ್ಲ. ತನ್ನ ದಯೆಯಿಂದ ನಮ್ಮೆಲ್ಲರನ್ನು ಆಕೆ ಸುಖದಲ್ಲಿರಿಸಿದ್ದಾಳೆ. ಮಹಾಪುಣ್ಯಕರವಾದ ಧನುರ್ಮಾಸದ ಪ್ರಾತಃಕಾಲದಲ್ಲಿ ದೇವಿಯ ಸನ್ನಿಧಿಗೆ ಪೊಡಮಟ್ಟು ಮಂಗಳಾಂಭೆಗೆ ನಡೆಯುವ ಧನುಪೂಜೆಯನ್ನು ಕಣ್ತುಂಬಿಕೊಂಡು ಬಾಳಿನಲ್ಲಿ ಸಾರ್ಥಕತೆಯನ್ನು ಪಡೆಯೋಣ. ಸರ್ವರ ಮನೋ ಸಂಕಲ್ಪಗಳೂ ಸಿದ್ಧಿಸಿ ಭವಿಷ್ಯದಲ್ಲಿ 

ಶ್ರೀ ಮಂತ್ರಾಲಯಾಂಬಿಕೆ ಸ್ತೋತ್ರ "

ರಚನೆ : ಆಚಾರ್ಯ ನಾಗರಾಜು ಹಾವೇರಿ 

ಮುದ್ರಿಕೆ : ವೇಂಕಟನಾಥ 

ಮಂಗಳ ತರಂಗಿಣಿ ನಿಲಯೇ ।

ಮಂಗಳಗಾತ್ರೇ ಮಂಗಳದೇವಿಯೇ ।

ಮಂಗಳಾಂಗ ನರಸಿಂಹನ ರಾಣಿಯೇ ।। ಪಲ್ಲವಿ ।।

ಮಂಚಾಲಿ ಪುರ ವಾಸೇ ।

ವಾಂಛಿತಾರ್ಥ ಪೂರೈಸೆ -

ಮಂತ್ರಾಲಯಾಂಬಿಕೆ ।। ಚರಣ ।।

ಮಂತ್ರಬೀಜ ಮಂತ್ರಮೇಯನ -

ವಲ್ಲಭೆ ದುರ್ಗೆಯೇ ।

ಮಂತ್ರವಿದ ಮಂತ್ರಾಲಯ -

ಪುರಾಧೀಶನ ತಾಯೇ ।। ಚರಣ ।।

ಯೋಗಿ ಕುಲ ತಿಲಕ ಗುರುರಾಜರ-

ಪೊರೆಯುತ ।

ಮಗು ಪರಿಪಾಲ ವೇಂಕಟನಾಥ-

ನರ್ಧಾ೦ಗಿ ಕಾಯೇ ।। ಚರಣ ।।

" ವಿವರಣೆ "

ಮಂಗಳ ತರಂಗಿಣಿ = ನದಿ / ತುಂಗಭದ್ರಾ ನದೀ 

ಮಂಗಳ ಗಾತ್ರೇ = ಶುಭ ಶರೀರವುಳ್ಳ / ಸುಂದರಿ ( ಶ್ರೀ ಮಹಾಲಕ್ಷ್ಮೀದೇವಿಯರು )

ಮಂಗಳದೇವಿ = ಶ್ರೀ ಮಹಾಲಕ್ಷ್ಮೀದೇವಿಯರು 

ಮಂಗಳಾಂಗ = ಮನೋಹರವಾದ ಶರೀರವುಳ್ಳವ ( ಶ್ರೀ ಹರಿ )

ವಾಂಛಿತ = ಇಷ್ಟಾರ್ಥ / ಅಭೀಷ್ಟ 

" ಮಂತ್ರಬೀಜ "

ಬೀಜ ಮಂತ್ರಗಳಿಗೆ ಕಾರಣನಾದವ / ಪ್ರತಿಪಾದ್ಯ ( ಶ್ರೀಮನ್ನಾರಾಯಣ )

ಮಂತ್ರಮೆಯ = ಮಂತ್ರಗಳಿಂದ ತಿಳಿಯಲ್ಪಡುವವನು ( ಶ್ರೀ ಹರಿ )

" ದುರ್ಗೆಯೇ "

ಎಲ್ಲ ಜೀವರ ಹೃದಯ ಗುಹೆಯಲ್ಲಿ ಪತಿಯಾದ ಶ್ರೀ ಹರಿಯೊಡನೆ ಸದಾ ಕಾಲದಲ್ಲಿ ನಿಯಾಮಕಳಾಗಿರುವಳು 

 " ಪರಮ ಮುಖ್ಯವಾಗಿ ಶ್ರೀ ಹರಿಯೇ " ದುರ್ಗ " ನಾಮಕ " 

ದುರ್ಲಭೋ ದುರ್ಗಮೋ ದುರ್ಗಾ-

ದೂರಾವಾಸೋ ದುರಾರಿಹಾ ।। ವಿ ಸ ನಾ - 96 ।। 

" ದುರ್ಗಮ "

- ಅಗಮ್ಯೋ ದುರ್ಗಮ:

- ಭಕ್ತ್ಯಾಪುನರ್ದುಃಖೇನಗಮ್ಯತೇ ಅವಗಮ್ಯತೇ ಚ ಭಗವಾನ್

- ದುರ್ಗಾ ಇತಿ ಮೀಯತೇ

- ದುರ್ಗೇಷು ಶಾಸ್ತ್ರೇಷು ಮೀಯತೇ " ದುರ್ಗ "

- ದುರ್ಗೇಷು ಗತಸ್ತನ್ನಾಮಾ

- ದುಃಖಿಷು ದುಃಖಿಭಿರವಗಮ್ಯತೇ

- ದುಃಖೇನ ಚಾವಗತಃ

- ಅನವಗತಶ್ಚ ದುಷ್ಟಾನಾಮ್

- ಶಿಷ್ಟ ಪಾಲನಾಯ ದುಷ್ಟಾನನಭಿಗಚ್ಛಟಿ ಚ

- ಅಪಗಮಯತಿ ದುಃಖಂ ದುರಿತಂ ಚ ।। 

" ಭಕ್ತರು ಮಾಡುವ ಶ್ರೀ ದುರ್ಗಾ ಸ್ಮರಣೆಯ ಫಲ " 

" ಮಾರ್ಕಂಡೇಯ ಪುರಾಣ " ದಲ್ಲಿ.... 

ದುರ್ಗೇ ಸ್ಮೃತಾಹರಸಿ -

ಭೀತಿಮಶೇಷಜಂತೋ: ।

ಸ್ವಸ್ಥ್ಯ: ಸ್ಮೃತಾಮತಿ -

ಮತೀವ ಶುಭಾಂ ದದಾಸಿ ।। 

ದಾರಿದ್ರ್ಯ ದುಃಖ ಭಯ -

ಹಾರಿಣಿ ಕಾ ತ್ವದನ್ಯಾ ।

ಸರ್ವೋಪಕಾರ ಕರುಣಾಯ-

ಸದಾರ್ದ್ರಚಿತ್ತಾ ।। 

ಹೇ ಶ್ರೀ ದುರ್ಗಾದೇವೀ! ನಿನ್ನ ಭಕ್ತರು ಭಯಕ್ಕೆ ಒಳಗಾಗಿ ನಿನ್ನನ್ನು ನಮಸ್ಕರಿಸಿದರೆ ಅವರ ಎಲ್ಲಾ ಭಯಗಳನ್ನೂ ಪರಿಹರಿಸುವೆ! 

ನಿರ್ಭೀತರಾಗಿರುವವರಾಗಿ ಸ್ವಸ್ಥ ಚಿತ್ತದಿಂದ ನಿನ್ನನ್ನು ಅವರೇ ಸ್ಮರಿಸಿದರೆ - ಅತ್ಯಂತ ಮಂಗಳಕರವಾದ ಜ್ಞಾನವನ್ನು ಕೊಡುವಿ!! 

ಹೀಗೆ ಸರ್ವರಿಗೂ ಸರ್ವ ವಿಧವಾದ ಉಪಕಾರವನ್ನು ನಿನ್ನ ಸ್ಮರಣೆ ಮಾತ್ರದಿಂದ ದಯಪಾಲಿಸಲು ನಿನ್ನಂತೆ ಕರುಣಾರ್ದ ಚಿತ್ತರು ಯಾರಿದ್ದಾರೆ!!! 

ಹೃಷ್ಮನಾಗುವ ಸ್ಮರಣೆ ಮಾತ್ರದಿ " ಹೃದ್ಗುಹಾವಾಸಿ " ಎಂಬ ಬಿರುದಾಂಕಿತನಾದ " ಶ್ರೀ ಹರಿಯ ನಿಜ ಪತ್ನಿ " ಯಾದ ನಿನಗೆ ಇದೇ ಭೂಷಣ!!!!

ಮಂತ್ರವಿದ = ಮಂತ್ರ ತಿಳಿದವರು / ಮಂತ್ರಜ್ಞ ( ಶ್ರೀ ರಾಯರು )

ಮಗು ಪರಿಪಾಲ = ಶ್ರೀ ಪ್ರಹ್ಲಾದ ರಕ್ಷಕನಾದ ಶ್ರೀ ನರಸಿಂಹದೇವರು!!

ಗುರು ವಿಜಯ ಪ್ರತಿಷ್ಠಾನ

*ಮಂಗಳದೇವಿ ದೇವಸ್ಥಾನ, ಬೋಲಾರ* 

 ಮುಖ್ಯದೇವರು: ಮಂಗಳಾದೇವಿ (ಪಾರ್ವತಿದೇವಿ)

ಈ ಕ್ಷೇತ್ರಕ್ಕೆ ಮಂಗಳೂರು ಎಂದು ಹೆಸರು ಬರಲು ಮುಖ್ಯಕಾರಣವೆಂದರೆ ಇಲ್ಲಿಯ ಗ್ರಾಮದೇವತೆಯಾದ ಮಂಗಳಾದೇವಿ ಎಂದು ತಿಳಿದು ಬರುತ್ತದೆ. ದೇವಸ್ಥಾನದ ಮಧ್ಯಭಾಗದಲ್ಲಿ ದೇವಿಯು ಪದ್ಮಾಸನ ಸ್ಥಿತಿಯಾಗಿದ್ದಾಳೆ. ಈ ದೇವಾಲಯವು ಕೇರಳ ಶೈಲಿಯಲ್ಲಿದ್ದು ಮರದಕೆತ್ತನೆಯಿಂದ ನಿರ್ಮಿಸಲಾಗಿದೆ. ಇಲ್ಲಿ ಮದುವೆಯಾಗದ ಕನ್ಯೆಯರು ದೇವಿಯನ್ನು ಪೂಜಿಸಿದರೆ ಅವರಿಗೆ ತಕ್ಕ ವರಗಳು ದೊರಕುತ್ತವೆ ಎಂಬ ನಂಬಕೆ ಇದೆ.

ಕಥೆ:
ಕ್ರಿ.ಶ. 10ನೇ ಶತಮಾನದಲ್ಲಿ ತುಳುನಾಡಿನ ರಾಜನು ಗೊರಕದಂಡಿ ಎಂಬ ಸ್ಥಳದಲ್ಲಿ ನೆಲೆಸಿದ್ದ ನೇಪಾಲದ ಇಬ್ಬರು ಸನ್ಯಾಸಿಗಳನ್ನು ನೋಡಲು ಹೊರಟನು. 

ತುಳು ದೊರೆಯನ್ನುಕಂಡ ಸನ್ಯಾಸಿಗಳು, ದೊರೆಗೆ ಜ್ಞಾನದ ಬಗ್ಗೆ ಉಪದೇಶವನ್ನು ಮಾಡಿ, ನಿನ್ನರಾಜ್ಯವು ಪವಿತ್ರ ಸ್ಥಳವಾಗಿದ್ದು, ಋಷಿ ಮುನಿಗಳ ತಪೋಭೂಮಿಯಾಗಿ, ಅವರ ಒಳ್ಳೆಯ ಕಾರ್ಯದ ವರಭೂಮಿಯಾಗಿದೆ ಎಂದು ರಾಜನಿಗೆ ತಿಳಿಸಿದರು.

 ಅವನೊಂದಿಗೆ ಅವನ ಅರಮನೆಗೆ ಬಂದು, ಅವರು ತಿಳಿಸಿದ ಜಾಗದಲ್ಲಿ ಅಗೆಯಲು, ಲಿಂಗ ಮತ್ತು ಧಾರಪತ್ರ (ಮಂಗಳಾದೇವಿಯ ಪ್ರತಿರೂಪ) ಎಂಬ ಮೂರ್ತಿಗಳನ್ನು ತೆಗೆದು, 

ಆ ಮೂರ್ತಿಗಳಿಗೆ ದೇವಾಲಯವನ್ನು ಕಟ್ಟಿಸಿ ನಾಗ ದೇವತೆಯನ್ನುಕಾಯಲು ಇಟ್ಟು, ತುಳುರಾಜನು ನೇಪಾಲದ ಸನ್ಯಾಸಿಗಳ ನೇತೃತ್ವದಲ್ಲಿ ಈ ಗುಡಿಯನ್ನು ನಿರ್ಮಿಸಿದರೆಂದು ತಿಳಿದು ಬರುತ್ತದೆ.

ನವರಾತ್ರಿ: 9 ದಿನಗಳವರೆಗೆ ವಿಶೇಷ ಪೂಜೆಗಳು ನಡೆಯುತ್ತವೆ. ಈ 9 ದಿನಗಳ ಪೂಜೆಯಲ್ಲಿ 7ನೇ, 8ನೇ ಮತ್ತು 9ನೇ ದಿನಗಳಲ್ಲಿ ದೇವಿಯನ್ನು ಚಂಡಿಕಾ, ಮಹಾಸರಸ್ವತಿ ಮತ್ತು ವಾಗ್ದೇವಿ ಎಂದು ಪೂಜಿಸಲಾಗುತ್ತದೆ.

 9ನೇ ದಿನ ಆಯುಧಪೂಜೆಯನ್ನು ಹಾಗೂ 10ನೇ ದಿನ ರಥೋತ್ಸವವನ್ನು ನೆರವೇರಿಸಲಾಗುತ್ತದೆ.

ಲಕ್ಷ ದೀಪೋತ್ಸವ: ಕಾರ್ತಿಕದ ಬಹುಳ ನವಮಿಯಂದು ಸಾವಿರಾರು ದೀಪಗಳನ್ನು ಹಚ್ಚಿ, ಕತ್ತಲೆಯನ್ನು ದೂಡಿ, ಬೆಳಕನ್ನು ಆಹ್ವಾನಿಸುವುದು ಹಬ್ಬದ ಸಂಕೇತವಾಗಿದೆ.

ವಾರ್ಷಿಕ ಹಬ್ಬ: ಮಾರ್ಚ್, ಈ ದಿನದಂದು ಸಾವಿರಾರು ಭಕ್ತರು ಸೇರಿ ಧ್ವಜಾರೋಹಣದೊಂದಿಗೆ ಹಬ್ಬವನ್ನುಆರಂಭಿಸಲಾಗುತ್ತದೆ.

ವಿಶೇಷ ಪೂಜೆಗಳು: ಪಂಚಾಮೃತಾಭಿಷೇಕ, ದುರ್ಗಾಹೋಮ, ಮಂಗಳಾರತಿ, ಶ್ರೀ ಕನ್ನಿಕೆ ಪೂಜಾ, ಅಷ್ಟೋತ್ತರ ಅರ್ಚನಾ, ಕುಂಕುಮಾರ್ಚನೆ, ಚಂಡಿಕಾಯಾಗ.

ವಿಳಾಸ: ಮಂಗಳಾದೇವಿ ದೇವಸ್ಥಾನ, ಮಂಗಳಾದೇವಿ ರಸ್ತೆ, ಮಂಗಳ ನಗರ, ಬೋಲಾರ, ಮಂಗಳೂರು, ಕರ್ನಾಟಕ, ಪಿನ್ಕೋಡ್ 575001

ಎಲ್ಲಾ ದಿನಗಳಲ್ಲಿಯೂ ತೆರೆದಿರುತ್ತದೆ. ಬೆಳಿಗ್ಗೆ 6.00 ಗಂಟೆಯಿಂದ 10.00 ಗಂಟೆಯವರೆಗೆ

ಪುನಃ ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ

ನಂತರ: ಮಧ್ಯಾಹ್ನ 4 ಗಂಟೆಯಿಂದ ರಾತ್ರಿ 8.30 ರವರೆಗೆ ಪ್ರತಿ ಶುಕ್ರವಾರದಂದು ರಾತ್ರಿ 9 ರವರೆಗೆ ತೆರೆದಿರುತ್ತದೆ.

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು

No comments:

Post a Comment