Monday, 16 December 2019

ವೈಕುಂಠ ದಲ್ಲಿರುವ ನಾಯಿಗಳ ಹೆಸರೇನು

*ವೈಕುಂಠ ದಲ್ಲಿರುವ  ನಾಯಿಗಳ ಹೆಸರೇನು?*

 ಶಾಮ - ಶಬಲ

 ವೈವಸ್ವತಕುಲದಲ್ಲಿ ಉದ್ಭವಿಸಿದ ಶಾಮ ಶಬಲ ಎನ್ನುವ ಎರಡು ಶ್ವಾನಗಳಿಗೆ ಯಾರು ಪ್ರತಿನಿತ್ಯ ತಾವು ಭೋಜನಕ್ಕೆ ಕೂಡುವ ಮೊದಲು ಅನ್ನವನ್ನು ಕೊಡುತ್ತಾರೋ ಅಂತಹ ಪುಣ್ಯಜೀವಿಗಳಿಗೆ ನರಕಾದಿ ಅನರ್ಥಗಳಾಗಲಿ ಅಥವಾ ಯಾವದೇ ತರಹದ ಹಿಂಸೆಗಳನ್ನಾಗಲಿ ಕೊಡದೇ ಆ ಎರಡೂ ಶ್ವಾನಗಳೂ ವೈಕುಂಠದ ಮಾರ್ಗವನ್ನು ತೋರಿಸುತ್ತವೆ . 

ಅರ್ಥಾತ್ ವೈಕುಂಠಕ್ಕೆ ಹೋಗುವ ಸಾಧನವನ್ನು ಅಂತಹ ಜೀವಿಗಳಿಂದ ಮಾಡಿಸಿ ಭಗವತ್ಪ್ರಸಾದ ಲಭ್ಯವಾಗುವಂತೆ ಅನುಗ್ರಹಿಸುತ್ತವೆ ಅಂತ ಅರ್ಥ

  ‌‌‌‌    ವೈಶ್ವದೇವ ಆದನಂತರ ಪ್ರತಿಯೊಬ್ಬ ವಿವಾಹಿತ ಪುರುಷರು ಶಾಮ-ಶಬಲರಿಗೆ ಆಹುತಿ ನೀಡಬೇಕು 
ಎನ್ನುವದರಲ್ಲಿ ಎರಡು ಮಾತು ಇಲ್ಲಾ . 

ಈಗ ವೈಶ್ವದೇವ ಮಾಡದೇ ಊಟ ಮಾಡುವವರ ಸಂಖ್ಯೆಯೇ ಜಾಸ್ತಿ ಇರೋದ್ರಿಂದ ಅಂಥವರು ಊಟಕ್ಕೆ ಕೂಡುವ ಪೂರ್ವದಲ್ಲಿ ಚಿತ್ರಾವತಿ ಇಟ್ಟ ನಂತರ ಆ ಎರಡು ತತ್ತುಗಳನ್ನು ತೆಗೆದಿಡಬೇಕು ಹಾಗೂ ಬೇರೆ ಮನೆಗೆಳಿಗೆ ಊಟಕ್ಕೆ ಹೋಗಿರ್ತೀವಿ ಅಲ್ಲಿ ಕೆಲವೊಮ್ಮೆ ವೈಶ್ವದೇವಾದಿಗಳು ಆಗಿರೋದಿಲ್ಲಾ , ಅಲ್ಲದೇ ನಮಗೇ ಕೆಲವೊಂದು ಸಾರ್ತಿ ವೈಶ್ವದೇವಾದಿಗಳನ್ನು ಮುಗಿಸಿ ಹೊಗಲು ಆಗಿರುವದಿಲ್ಲ ಅಂತಹ ಸಂದರ್ಭಗಳಲ್ಲಿ ಆ ಎರಡು ತತ್ತುಗಳನ್ನು ತೆಗೆದಿಡಬೇಕು ಅಲ್ಲದೇ ಸ್ತ್ರೀಯರೂ ಸಹ ತಮ್ಮ ತಮ್ಮ ಪತಿಗಳು ವೈಶ್ವದೇವಾದಿಗಳನ್ನು ಮಾಡಿದರೂ ಸಹ ಪ್ರತಿಯೊಬ್ಬ ಸ್ತ್ರೀಯರೂ ಸಹ ತಾವು ಊಟಕ್ಕೆ ಕೂಡುವ ಮೊದಲು ಎರಡು ತುತ್ತುಗಳನ್ನು ತೆಗೆದಿಡಬೇಕು ಎಂದು ಮೊದಲಿಂದಲೂ ಬಂದ ಪದ್ಧತಿ ಇರುವದರಿಂದ ಈ ಕ್ರಮವನ್ನು ಅನುಸರಿಸುವದು ವಿಹತವಾದದ್ದು 

ಕಳೆದ ವರ್ಷದ ಮೇಮೋರಿಯಲ್ಲಿ‌ಇಷ್ಟು ಕಥೆ ಇತ್ತು ಅದ್ದರಿಂದ ಶಾಮ ಶಬಲ ರ ಹೆಸರು ಮಾತ್ರ ಇಂದಿನ ಪ್ರೆಶ್ನೆ ಯಲ್ಲಿ ಕೇಳಿದೆ ಧನ್ಯವಾದಗಳು

ಇನ್ನೂ ಶ್ರೀದರ್ ಶ್ರೀ ಸರ್ ರವರ ಒಂದು ಚಿಕ್ಕ ಕಥೆ ಇಂತಿದೆ 

ದೇವತೆಗಳ ರಾಜ ಇಂದ್ರ ದೇವನು ಒಂದು ನಾಯಿಯನ್ನು ಹೊಂದಿದ್ದನು. ಅದರ ಹೆಸರು ಸರಮಾ.ಈ ಸರಮಾ ನಾಯಿಯು ದೇವತೆಗಳಿಂದ ರಾಕ್ಷಸರು ಕಸಿದುಕೊಂಡು ಹೋಗಿದ್ದ ಹಸುಗಳನ್ನು ಮರಳಿ ತರುವುದಕ್ಕೆ ಸಹಾಯ ಮಾಡಿತ್ತು ಎಂದು ಹೇಳಲಾಗಿದೆ.

ಸರಮಾ ( ಶ್ವಾನವೇ) ನಾಯಿಯೇ ಎಲ್ಲ ನಾಯಿಗಳಿಗೂ ತಾಯಿಯಾಗಿದೆ ಮತ್ತು ಇದು  ದಕ್ಷನ ಮಗಳು ಕೂಡ ( ಅಂದರೆ ಸತಿಯ ತಂಗಿ ಕೂಡ ಹೌದು ) . ಭಗವತ್ ಪುರಾಣದಲ್ಲಿ ಸರಮಾನನ್ನು ಎಲ್ಲ ಜಾತಿಯ ನಾಯಿಗಳಿಗೆ ತಾಯಿ ಎಂದು   ಸರಮಾನನ್ನು ಪೂಜಿಸಲಾಗುತ್ತದೆ.                  ನಾಯಿಯನ್ನು ಋುಗ್ವೇದದಲ್ಲಿ ಕೂಡ ಉಲ್ಲೇಖಿಸಲಾಗಿದೆ. ಮನೆಯ ಕಾವಲುಗಾರನಾಗಿ, ರಕ್ಷಕನಾಗಿರುವ ಕಾರಣ ವರುಣನಾಗಿದ್ದು ಅದನ್ನು ವಸ್ತೋಪತಿ ಎಂದು ಹೆಸರಿಸಲಾಗಿದೆ.

ಧನ್ಯವಾದಗಳು

No comments:

Post a Comment