Monday, 16 December 2019

#ಮನುಷ್ಯ ಎಷ್ಟೇ #ಸಿರಿವಂತನಾದರೂ ತಿನ್ನಲು ಸಾದ್ಯವಾಗುವುದು ಕೆಲವೇ ತುತ್ತು #ಅನ್ನ ಮಾತ್ರ. ತನ್ನ ಜಿವಮಾನದಲ್ಲಿ ಎಷ್ಟೇ ಸಂಪಾದಿಸಿರಬಹುದು; ಸದಾ ಸಂತೃಪ್ತನೇ ಇರಬಹುದು; ಆದರೆ ಮರಣದ ನಂತರ ಸರ್ವವೂ ಮಣ್ಣಲ್ಲಿ ಮಣ್ಣಾಗುವುದು ಸಾರ್ವಕಾಲಿಕ ಸತ್ಯ. ಈ ಸತ್ಯ ಅರಿತಾಗಿಯೂ ತನ್ನ ಶ್ರೀಮಂತಿಕೆಯ ಅಹಂಕಾರದಿಂದ ಇನ್ನಿಲ್ಲದ ದರ್ಪವನ್ನು ಮಾಡುತ್ತಿರುತ್ತಾರೆ. #ದಾನ – #ಧರ್ಮ ಮಾಡುತ್ತ ತಾನೇ ಮೇಲಿದ್ದೇನೆ ಎಂಬ ಭಾವ ಆತನಲ್ಲಿರಬಹುದು. ಆದರೆ ಆತನನ್ನು ಮೀರಿದ ಶಕ್ತಿಯೊಂದಿದೆ ಎಂಬುದನ್ನು ನೆನಪಿಸಿಕೊಳ್ಳುವ ಅಪೂರ್ವ ಸಂದರ್ಭ ಶ್ರಾವಣ ಶನಿವಾರ. ಪ್ರತಿ ಶ್ರಾವಣ ಮಾಸದ ಶನಿವಾರಗಳಂದು ಕಿರಿಯರು – ಹಿರಿಯರು, ಬಡವ - ಬಲ್ಲಿಗನೆನ್ನದೆ ಎಲ್ಲರೂ ಭಿಕ್ಷೆ ಬೇಡುವ ಆಚರಣೆಯನ್ನು ಕಾಣಬಹುದು. ಇದಕ್ಕೆ ’ಪಡಿ’ ಬೇಡುವುದು ಎನ್ನುತ್ತಾರೆ. ಈ ಮೂಲಕ ನಮ್ಮೊಳಗಿನ ಅಹಂಕಾರ ತೊಡೆದು ಭಗವಂತನ ಮುಂದೆ ಸರ್ವರೂ ಸಮಾನರು ಎಂಬ ಸಂದೇವನ್ನು ಸಾರಬೇಕೆಂಬುದು ಇದರ ಹಿಂದಿನ ಉದ್ದೇಶ. 

ಪ್ರಸ್ತುತ #ವಿಕಾರಿ ನಾಮ ಸಂವತ್ಸರದಲ್ಲಿ 3, 10, 17, 24.08.2019ರಂದು #ಶ್ರಾವಣ_ಶನಿವಾರವು ಸಂಭವಿಸಲಿದ್ದು, ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ನಮ್ಮ ನಾಡು, ನಮ್ಮ ನುಡಿ, ನಮ್ಮ Someಸ್ಕೃತಿ

No comments:

Post a Comment