#ಭಾರತೀಯ ಜ್ಯೋತಿಷ್ಯಾಸ್ತ್ರದಲ್ಲಿ ಒಟ್ಟು 27 #ನಕ್ಷತ್ರ ಗಳನ್ನು ಗುರುತಿಸಲಾಗಿದೆ. ಅದರಲ್ಲಿ #ಸ್ವಾತಿ ಮತ್ತು #ರೋಹಿಣಿ ನಕ್ಷತ್ರಗಳನ್ನು #ಚಂದ್ರನ ಮಡದಿಯರೆಂದು ಪರಿಗಣಿಸಲಾಗಿದೆ.
ಸಮುದ್ರದ ನೀರಿನಲ್ಲಿ ಬಾಯಿ ತೆಗೆದುಕೊಂಡಿರುವ #ಕಪ್ಪೆಚಿಪ್ಪುಗಳಿಗೆ, ಸ್ವಾತಿ ನಕ್ಷತ್ರದಂದು ಮಳೆಯ ಹನಿಗಳು ಬಿದ್ದರೆ ಆ ಹನಿಗಳು ಶುದ್ಧ ಮುತ್ತುಗಳಾಗಿ ಪರಿವರ್ತಿಸಲ್ಪಡುತ್ತದೆ ಎಂಬ ನಂಬಿಕೆಯಿದೆ. ಈ ಮುತ್ತು #ನವರತ್ನಗಳಲ್ಲಿ ಒಂದಾಗಿದ್ದು, ಪವಿತ್ರತೆ ಹಾಗೂ ಶುದ್ಧತೆಗೆ ಪ್ರತೀಕಗಳೆಂದು ಪರಿಗಣಿಸಲ್ಪಟ್ಟಿದೆ. ಹಾಗಾಗಿ ಸ್ವಾತಿ ತಾನು ಮುತ್ತಿನ ಮಾತೆ ಎಂದು ಮೆರೆಯುತ್ತಿರುತ್ತಾಳೆ. ಇದರಿಂದ #ರೋಹಿಣಿಗೆ ಅತಿ ಸಂಕಟ ಉಂಟಾಗಿ, ಹೇಗಾದರೂ ಮಾಡಿ ನಾನೇನೂ ಸ್ವಾತಿಗೆ ಕಡಿಮೆಯಿಲ್ಲ ಎಂದು ಸಾಧಿಸಿಯೇ ತೀರುವ ಹಠ ಅವಳಲ್ಲಿ ಮೂಡುತ್ತದೆ. ಪರಿಣಾಮ ಶ್ರೀಹರಿಯಲ್ಲಿ ಕಠಿಣ ತಮಸ್ಸನ್ನಾಚರಿಸುತ್ತಾಳೆ. ಹೆತ್ತರೆ ಮುತನ್ನು ಮೆಟ್ಟಿ ಮೆರೆಯುವ ಬೆಲೆಬಾಳುವ, ಲೋಕಕ್ಕೆಲ್ಲ ಪ್ರಿಯವಾದ, ಎಲ್ಲರಿಂದಲೂ ಮೆಚ್ಚಲ್ಪಡುವ ರತ್ನವನ್ನೇ ಹೆರಬೇಕೆಂಬುದು ಅವಳ ಆಸೆಯಾಗಿತ್ತು. ತನ್ನ ಈ ಆಸೆಯ ಫಲವಾಗಿ #ಶ್ರೀಹರಿಯು ತನ್ನ ಅವತಾರಗಳಲ್ಲೊಂದಾದ ಶ್ರೀಕೃಷ್ಣನ ಅವತಾರಿಯಾಗಿ ಭೂಲೋಕದಲ್ಲಿ ರೋಹಿಣಿ ನಕ್ಷತ್ರದಲ್ಲಿ ಜನಿಸಿವುದಾಗಿ ವರವನ್ನು ನೀಡುತ್ತಾನೆ. ಮುಂದೆ #ದ್ವಾಪರ ಯುಗದಲ್ಲಿ ರೋಹಿಣಿಯು ಅಂತಿಂತ ರತ್ನವನ್ನು ಹಡೆಯಲಿಲ್ಲ, ಒಂದು ಅಪೂರ್ವವಾದ ನೀಲ ರತ್ನವನ್ನು #ನೀಲಮೇಘ ಶ್ಯಾಮನಾದ #ಶ್ರೀಕೃಷ್ಣನನ್ನು ಹೆತ್ತಳು.
ಗ್ರಂಥ ಋಣ : ಸಪ್ತಗಿರಿ.
ನಮ್ಮ ನಾಡು, ನಮ್ಮ ನುಡಿ, ನಮ್ಮ Someಸ್ಕೃತಿ
No comments:
Post a Comment