🕉 ಓಂ ಶ್ರೀ ಗುರುಭ್ಯೋ ನಮಃ 🕉
*ಶಬ್ದಗಳ ಪರಿಣಾಮ...*
ಅದೇ ತಾನೇ ಮಹಾಭಾರತ ಯುದ್ಧ ಮುಗಿದಿತ್ತು. 18 ದಿನಗಳ ಯುದ್ಧ ದ್ರೌಪದಿಯನ್ನು 80ನೇ ವಯಸ್ಸಿನವರೆಗೂ ಕೊಂಡೊಯ್ದಿತು, ಮಾನಸಿಕವಾಗಿ ಮತ್ತು ದೈಹಿಕವಾಗಿ.
ಊರಲ್ಲಿ ಎಲ್ಲಿ ನೋಡಿದರಲ್ಲಿ ವಿಧವೆಯರೇ ಕಾಣಿಸುತ್ತಿದ್ದರು. ಕೈ ಕಾಲು ಮುರಿದುಕೊಂಡು ಅಂಗವೈಕಲ್ಯಗೊಂಡ ಪುರುಷರು, ಅನಾಥ ಮಕ್ಕಳು ಓಡಾಡುತ್ತಿದ್ದರು. ಸ್ಪಶಾನ ಮೌನದಲ್ಲಿತ್ತು, ನಂದನವನದಂತಿದ್ದ ಹಸ್ತಿನಾಪುರ.
ರಾಣಿ ದ್ರೌಪದಿ ಶೂನ್ಯಮನಸ್ಕಳಾಗಿ ತದೇಕಚಿತ್ತದಿಂದ ಗೋಡೆಯನ್ನು ನೋಡುತ್ತಾ ಕುಳಿತಿದ್ದಳು. ಶ್ರೀಕೃಷ್ಣ ಪರಮಾತ್ಮ ಅಲ್ಲಿಗೆ ಬಂದ. ದ್ರೌಪದಿ ಓಡಿ ಹೋಗಿ ಕೃಷ್ಣನನ್ನು ತಬ್ಬಿಕೊಂಡು ಅಳತೊಡಗಿದಳು. ಕೃಷ್ಣ ದ್ರೌಪದಿಯ ತಲೆಯನ್ನು ನೇವರಿಸಿ, ಅವಳನ್ನು ಸಮೀಪದ ಪಲ್ಲಂಗದ ಮೇಲೆ ಕೂರಿಸಿದ.
ದ್ರೌಪದಿ:- ಕೃಷ್ಣ... ಏನಿದೆಲ್ಲ? ಹೀಗೆಲ್ಲ ಆಗುತ್ತದೆ ಎಂದು ನಾನು ಅಂದುಕೊಂಡೇ ಇರಲಿಲ್ಲ.
ಕೃಷ್ಣ:- ಕರ್ತವ್ಯ ಮತ್ತು ನಿಯತ್ತು ಬಹು ಕ್ರೂರಿಗಳು ಪಾಂಚಾಲಿ. ಅವು ನಾವು ಯೋಚಿಸಿದಂತೆ ಇರುವುದಿಲ್ಲ. ನಮ್ಮ ಕರ್ಮಗಳನ್ನು ಪರಿಣಾಮಗಳಲ್ಲಿ ಬದಲಿಸಿಬಿಡುತ್ತವೆ.....ನೀನು ಸೇಡು ತೀರಿಸಿಕೊಳ್ಳಬೇಕು ಅಂದುಕೊಂಡಿದ್ದೆ. ನಿನ್ನ ಸೇಡು ತೀರಿತು. ದುಶ್ಯಾಸನ ದುರ್ಯೋಧನರಷ್ಟೇ ಅಲ್ಲ, ಇಡೀ ಕೌರವ ವಂಶವೇ ನಿರ್ವಂಶವಾಯ್ತು. ಇದು ನೀನು ಸಂತೋಷಪಡುವ ವಿಚಾರ. ಯಾಕೆ ...ನಿನಗೆ ಆನಂದವಾಗುತ್ತಿಲ್ಲವೇ?
ದ್ರೌಪದಿ:- ಕೃಷ್ಣಾ....ನೀನು ನನ್ನ ಕಣ್ಣೀರನ್ನು ಒರೆಸಲು ಬಂದಿರುವೆಯಾ ಅಥವಾ ನನ್ನ ಗಾಯಗಳ ಮೇಲೆ ಉಪ್ಪು ಸುರಿಯಲು ಬಂದಿರುವೆಯಾ?
ಕೃಷ್ಣ:- ಎರಡೂ ಅಲ್ಲ ದ್ರೌಪದಿ. ನಾನು ವಾಸ್ತವಿಕತೆಯನ್ನು ಅರ್ಥೈಸಲು ಬಂದಿದ್ದೇನೆ. ನಮ್ಮ ಕರ್ಮದ ಫಲಗಳ ಪರಿಣಾಮಗಳು ನಮ್ಮ ಕಣ್ಣಿಗೆ ಕಾಣುವುದಿಲ್ಲ. ಅವು ಹತ್ತಿರವಾದಾಗ ನಮ್ಮ ಕೈಯಲ್ಲಿ ಏನೂ ಇರುವುದಿಲ್ಲ.
ದ್ರೌಪದಿ:- ಅಂದರೆ ......ಇದಕ್ಕೆಲ್ಲ ನಾನೇ ಕಾರಣವೇ ಕೃಷ್ಣ?
ಕೃಷ್ಣ:- ಇಲ್ಲ ದ್ರೌಪದಿ...ನಿನ್ನನ್ನು ನೀನು ಅಷ್ಟೊಂದು ಮಹತ್ವಪೂರ್ಣಳು ಎಂದು ತಿಳಿದುಕೊಳ್ಳಬೇಡ. ಆದರೆ ನೀನು ನಿನ್ನ ಕರ್ಮಗಳಲ್ಲಿ ಕಿಂಚಿತ್ತಾದರೂ ದೂರದೃಷ್ಟಿ ಇಟ್ಟಿದ್ದಿದ್ದರೆ ಇಂದು ಹೀಗೆ ದುಃಖಿಸಬೇಕಾದ ಈ ಪರಿಸ್ಥಿತಿ ಬರುತ್ತಿರಲಿಲ್ಲ.
ದ್ರೌಪದಿ:- ???????
ಕೃಷ್ಣ:- ಅಂದು ಸ್ವಯಂವರದಲ್ಲಿ ಕರ್ಣನಿಗೆ ನೀನು ಅವಮಾನಿಸದೆ ಇದ್ದಿದ್ದರೆ, ಭಾಗವಹಿಸಲು ಅವಕಾಶ ಕೊಟ್ಟಿದ್ದರೆ ಅದರ ಪರಿಣಾಮ ಬೇರೆಯೇ ಆಗಿರುತ್ತಿತ್ತು. ನಂತರ ಕುಂತಿಮಾತೆ ನಿನಗೆ ಐವರೂ ಪಾಂಡವರನ್ನು ವಿವಾಹವಾಗಲು ಆಹ್ವಾನಿಸಿದಾಗ ನೀನು ತಿರಸ್ಕರಿಸಿದ್ದರೆ ಅದರ ಪರಿಣಾಮವೂ ಇಂದು ಬೇರೆಯೇ ಇರುತ್ತಿತ್ತು. ನಂತರ ನಿನ್ನ ಮಹಲಿನಲ್ಲಿ ದುರ್ಯೋಧನನಿಗೆ ಅವಮಾನ ಮಾಡಿರದೇ ಇದ್ದಿದ್ದರೆ, ನಿನ್ನ ವಸ್ತ್ರಾಪಹರಣವೇ ಆಗುತ್ತಿರಲಿಲ್ಲ. ಆಗಲೂ ಪರಿಸ್ಥಿತಿ ಬೇರೆಯೇ ಆಗಿರುತ್ತಿತ್ತು.
ನಮ್ಮ ಶಬ್ದಗಳು ಸಹ ನಮ್ಮ ಕರ್ಮಗಳಾಗಿರುತ್ತವೆ ದ್ರೌಪದಿ. ನಾವು ಶಬ್ದಗಳನ್ನು ಆಡುವ ಮೊದಲು ಅವುಗಳನ್ನು ಅಳತೆ ಮಾಡಬೇಕಾಗುತ್ತದೆ. ಇಲ್ಲವಾದರೆ ಅದರ ದುಷ್ಪರಿಣಾಮವನ್ನು ನಾವು ಮಾತ್ರ ಅಲ್ಲ... ನಮ್ಮ ಸುತ್ತಮುತ್ತಲಿನ ವಾತಾವರಣವೂ ಅನುಭವಿಸಬೇಕಾಗುತ್ತದೆ.
ಎಲ್ಲಾ ಜೀವರಾಶಿಗಳಲ್ಲಿ ಮನುಷ್ಯನೆಂಬ ಏಕಮಾತ್ರ ಜೀವಿಯ ವಿಷ ಅವನ ಹಲ್ಲಿನಲ್ಲಿರುವುದಿಲ್ಲ; ಬದಲಾಗಿ ಆತನ ಶಬ್ದಗಳಲ್ಲಿ ಇರುತ್ತದೆ. ಅದಕ್ಕಾಗಿಯೇ ನಾವು ಆಡುವ ಶಬ್ದಗಳನ್ನು ಇತರರಿಗೆ ನಾಟದಂತೆ, ಅವರ ಭಾವನೆಗಳಿಗೆ ಧಕ್ಕೆಯಾಗದಂತೆ ಆಡಬೇಕು. ಅಂತಹ ಶಬ್ದಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ. ಆಗ ಜೀವನ ಸಾರ್ಥಕತೆ ಪಡೆಯುತ್ತದೆ.
ಶ್ರೀಕೃಷ್ಣಂ ವಂದೇ ಜಗದ್ಗುರುಂ
No comments:
Post a Comment