ಪ್ರತಿ ವರ್ಷ #ಆಷಾಢ ಶುದ್ಧ #ಏಕಾದಶಿ (#ಶಯನೈಕಾದಶಿ)ಯಂದು ನಡೆಯುವ #ಮುದ್ರಾಧಾರಣೆ ಪರಮ ಪುಣ್ಯಕರವಾಗಿದೆ. ಪ್ರಸ್ತುತ 13ನೇ ಜುಲೈ 2019 ಶನಿವಾರದಂದು ಸಂಭವಿಸುತ್ತಿದೆ. #ತತ್ವಜ್ಞಾನದ ಪ್ರಾಪ್ತಿಗಾಗಿ ಈ ತಪ್ತ ಮುದ್ರಾ ಧಾರಣೆ ಎಂಬುದು #ವೈಷ್ಣವ (#ಮಾಧ್ವ) ಅನುಯಾಯಿಗಳ ನಂಬಿಕೆಯಾಗಿದೆ.
#ಸುದರ್ಶನ ಹೋಮವನ್ನು ಆಚರಿಸಿ ಶಾಸ್ತ್ರೋಕ್ತಕ್ರಮದಲ್ಲಿ ಉತ್ತಮ ಲೋಹದಿಂದ ತಯಾರಿಸಿದ ಚಕ್ರಾದಿಗಳನ್ನು ಪೂಜಿಸಿ, ಅಭಿಮಾನಿ ದೇವತೆಗಳಾದ #ದುರ್ಗಾ ಮತ್ತು #ಶ್ರೀದೇವಿಯನ್ನು ಸ್ಮರಿಸಿ, ತಮೋರಜೋಗುಣಗಳು ನಾಶ ಪಡಿಸುವಂತೆ ಪ್ರಾರ್ಥಿಸಿ ಏಕಾಗ್ರಚಿತ್ತದಿಂದ ಮುದ್ರಾಧಾರಣೆಯನ್ನು ಮಾಡಲಾಗುತ್ತದೆ.
ದಕ್ಷಿಣಾಯನ ದೇವತೆಗಳಿಗೆ ಇರುಳಾಗಿದ್ದು; ಈ ಪರ್ವಕಾಲದಲ್ಲಿ ಶಯನಿಸಲು ದಕ್ಷಿಣಕ್ಕೆ ವಾಲುತ್ತಿರುವ ಭಗವಂತನ ಶೇಷನೆಡೆಗೆ ಸೂರ್ಯನೂ ವಾಲುತ್ತಾನೆ. ಭಗವಂತನು ಮಲಗಿದಾಗ ನಾವು ಮಲಗಿ ಆತನನ್ನು ಮರೆಯಬಾರದು; ಆತನ ಚಿಹ್ನೆಯಾದ #ಶಂಖ ಮತ್ತು #ಚಕ್ರಗಳು ನಮ್ಮ ದೇಹದಲ್ಲಿ ಅಚ್ಚೊತ್ತಿರಬೇಕು ಹಾಗೂ ಸದಾ ಆತನ ಸ್ಮರಣೆಯಲ್ಲಿ ಲೀನರಾಗಿರಬೇಕೆಂಬ ಭಾವನೆಯಿಂದಲೇ ಶಯನೈಕಾದಶಿಯಂದು ತಪ್ತ ಮುದ್ರಾಧಾರಣೆಯನ್ನು ಮಾಡಲಾಗುತ್ತದೆ.
ಹಿಂದೊಮ್ಮೆ ಇಂದ್ರಾದಿ ದೇವತೆಗಳು #ವೃತಾಸುರನಿಂದ ಸೋತಾಗ ಮಹಾವಿಷ್ಣುವಿನ ಬಳಿ ಹೋಗಿ ಪ್ರಾರ್ಥಿಸಲಾಗಿ “ಎಲೈ ದೇವತೆಗಳೇ, ನೀವೆಲ್ಲ ನನ್ನ ಶಂಖ, ಚಕ್ರಾದಿ ಲಾಂಛನಗಳನ್ನು ಧರಿಸಿ ದೈತರೊಡನೆ ಯುದ್ಧ ಮಾಡಿರಿ; ನಿಮಗೆ ವಿಜಯ ಲಭಿಸುವುದು” ಎಂದು ಶ್ರೀಹರಿಯು ಅಪ್ಪಣೆಯಿತ್ತನು. ಇಂದ್ರಾದಿಗಳು ಇದರಿಂದ ಕೃತಾರ್ಥರಾದರು. ಅಂದಿನಿಂದ ನಮ್ಮೊಳಗಿನ ಕಾಮ, ಕ್ರೋಧಗಳೇ ಮುಂತಾದ ವೈರಿಗಳ ಜಯಕ್ಕೆ ಮುದ್ರಾಧಾರಣೆ ಅಗತ್ಯ ಎಂಬ ನಿಯಮ ವೈಷ್ಣವರಿಗೆ ಶಾಶ್ವತವಾಯಿತು.
ಚಕ್ರಮುದ್ರೆಯನ್ನು ಧರಿಸುವಾಗ ಪಠಿಸಬೇಕಾದ ಮಂತ್ರ;
ಸುದರ್ಶನ ಮಹಾಜ್ವಾಲ ಕೋಟಿ ಸೂರ್ಯಸಮಪ್ರಭ |
ಅಜ್ಞಾನಾಂಧಸ್ಯಮೇನಿತ್ಯಂ ವಿಷ್ಣೋರ್ಮಾರ್ಗಂ ಪ್ರದರ್ಶಯ ||
ಶಂಖಮುದ್ರೆಯನ್ನು ಧರಿಸುವಾಗ ಪಠಿಸಬೇಕಾದ ಮಂತ್ರ;
ಪಾಂಚಜನ್ಯ ನಿಜಧ್ವಾನಧ್ವಸ್ತಪಾತಸಂಚಯ |
ತ್ರಾಹಿ ಮಾಂ ಪಾಪಿನಂ ಘೋರಸಂಸಾರಾರ್ಣವಪಾತಿನಂ ||
ನಮ್ಮ ನಾಡು, ನಮ್ಮ ನುಡಿ, ನಮ್ಮ Someಸ್ಕೃತಿ
No comments:
Post a Comment