ಕಿವಿಮಾತು ಬೇಕಾದರೆ ಉಪಯೋಗ ಪಡೆದುಕೊಳ್ಳಿ.
ನಮ್ಮ ಹಿಂದೂ ಧರ್ಮದಲ್ಲಿ ಆಚಾರ ವಿಚಾರ ಎಂಬುದು ತುಂಬಾ ಪ್ರಾಮುಖ್ಯತೆಯನ್ನು ಪಡೆದಿದೆ ನಾವು ಮಾಡುವ ಪೂಜೆಯಲ್ಲಿ ಸಾಕಷ್ಟು ವಿಧಿ ವಿಧಾನಗಳು ಇದೆ ಅದನ್ನು ನಾವು ಸರಿಯಾದ ಕ್ರಮದಲ್ಲಿ ಮಾಡಿದರೆ ಮಾತ್ರ ನಮಗೆ ಅದರ ಫಲ ದೊರೆಯಲಿದೆ.
ಎಲ್ಲರಿಗೂ ಸಾಮಾನ್ಯವಾಗಿ ತಿಳಿದಿರುವಂತೆ ದೇವರ ಪೂಜೆಗೆ ಉಪಯೋಗಿಸುವಂತಹ ಹೂ ತೆಂಗಿನಕಾಯಿ ಅಗರಬತ್ತಿ ಕರ್ಪೂರದಂತಹ ವಸ್ತುಗಳನ್ನು ಕೆಳಗೆ ಇಡುವುದಿಲ್ಲ.
ಆದರೆ ಒಂದು ವೇಳೆ ಇಟ್ಟರೆ ಅವುಗಳನ್ನು ಪೂಜೆಗೆ ಉಪಯೋಗಿಸುವುದಿಲ್ಲ. ಹಾಗೆ ಉಪಯೋಗಿಸಿದರೆ ಅಶುಭವಾಗುತ್ತದೆಂದು ಹಿಂದುಗಳ ನಂಬಿಕೆ ಹಾಗು ಶಾಸ್ತ್ರದಲ್ಲೂ ಇದರ ಬಗ್ಗೆ ಹೆಚ್ಚಿನ ರೀತಿಯಲ್ಲಿ ಹೇಳಿದ್ದಾರೆ.
ಇವುಗಳೊಂದಿಗೆ ಹಿಂದೂ ಧರ್ಮಶಾಸ್ತ್ರದ ಪ್ರಕಾರ ಎಂತಹ ಸಂದರ್ಭದಲ್ಲೂ ಕೆಲವು ವಸ್ತುಗಳನ್ನು ಕೆಳಗೆ ಇಡಬಾರದು. ಇಟ್ಟರೆ ಅದರಿಂದ ಯಾವುದೇ ವಿಷಯಗಳಲ್ಲಿ ಶುಭ ಎಂಬುದು ಸಿಗುವುದಿಲ್ಲ ಅಗದರೆ ಆ ವಸ್ತುಗಳು ಯಾವುವು ನೋಡೋಣ.
ಹಿಂದೂಗಳಲ್ಲಿ ಬಹಳಷ್ಟು ಮಂದಿಗೆ ಜನಿವಾರವನ್ನು ಧರಿಸುವ ಆಚಾರವಿರುತ್ತದೆ. ಆದರೆ ಅದನ್ನು ಯಾವ ಪರಿಸ್ಥಿತಿಯಲ್ಲೂ ನೆಲದ ಮೇಲಿಡಬಾರದು.
ತಂದೆತಾಯಿಯರು, ಗುರುಗಳಿಗೆ ಪ್ರತಿರೂಪವಾಗಿ ಅದನ್ನು ಭಾವಿಸುತ್ತಾರಂತೆ.
ಆ ವರಸೆಯಲ್ಲಿ ಜನಿವಾರವನ್ನು ಕೆಳಗಿಟ್ಟರೆ ಅವರನ್ನು ಅವಮಾನಿಸಿದಂತೆ ಆಗುತ್ತದಂತೆ. ಆದ್ದರಿಂದಲೇ ಅದನ್ನು ಯಾವಾಗಲೂ ನೆಲದ ಮೇಲೆ ಇಡಬಾರದು.
ಬಂಗಾರವನ್ನು ಸಾಕ್ಷಾತ್ ಲಕ್ಷ್ಮಿ ಸ್ವರೂಪವಾಗಿ ನೋಡುತ್ತೇವೆ. ಅಂತಹ ಬಂಗಾರವನ್ನು ನೆಲದ ಮೇಲಿಟ್ಟರೆ ಲಕ್ಷ್ಮಿದೇವಿ ಕೋಪಗೊಳ್ಳುತ್ತಾಳೆ ಹಾಗೂ ಇದರಿಂದ ತುಂಬಾ ಕಷ್ಟಕ್ಕೊಳಗಾಗುತ್ತಾರೆ. ಹಾಗೆಯೇ ಅವರ ಹತ್ತಿರ ಸಂಪತ್ತು ನಿಲ್ಲುವುದಿಲ್ಲವಂತೆ. ಎಲ್ಲಾ ಸಮಸ್ಯೆಗಳು ಎದುರಾಗುತ್ತವೆ.
ಶಿವಲಿಂಗ ಇದರಲ್ಲಿ ಸಾಕ್ಷಾತ್ ಶಿವನೇ ನೆಲೆಸಿರುತ್ತಾನೆ ಹಾಗಾಗಿ ಇದನ್ನು ಯಾವುದೇ ಕಾರಣಕ್ಕೂ ನೆಲದ ಮೇಲಿಡಬಾರದು.
ಹಾಗೆ ಮಾಡಿದರೆ ಎಲ್ಲಾ ಸಮಸ್ಯೆಗಳು ಎದುರಾಗುತ್ತವೇ ಒಂದು ವೇಳೆ ಅವುಗಳನ್ನು ನೆಲದ ಮೇಲಿಡಬೇಕಾದರೆ ಪರಿಶುದ್ಧವಾದ ಮಣೆಯ ಮೇಲಿಡಬೇಕು ಇಲ್ಲ ಬಟ್ಟೆಯ ಮೇಲೆ ಇಡಬೇಕು.
ದೀಪಗಳನ್ನು ಸಹ ದೇವರಿಗೆ ಸಮಾನ ಇದನ್ನು ಹಚ್ಚಿದಗ ಇದರಿಂದ ಬರುವ ಜ್ಯೋತಿಯ ಬೆಳಕು ನಮ್ಮ ಮನೆಯನ್ನು ಮನಸ್ಸನ್ನು ಬೆಳಗುತ್ತದೆ ಹಾಗಾಗಿ ಯಾವುದೇ ಪರಿಸ್ಥಿತಿಯಲ್ಲೂ ದೇವರ ಮುಂದೆ ಇಡುವ ದೀಪಗಳನ್ನು ನೆಲದ ಮೇಲೆ ಇಡಬಾರದು.
ಅವುಗಳನ್ನು ಬೆಳಗಿಸಿದರೂ, ಬೆಳಗಿಸದೇ ಇದ್ದರೂ, ಯಾವಾಗಲೂ ಅವುಗಳನ್ನು ಶುದ್ಧವಾದ ವಸ್ತ್ರದ ಮೇಲೆಯೇ ಇಡಬೇಕು.
ಇಲ್ಲ ತಟ್ಟೆಯ ಮೇಲೆ ಇಡಬೇಕು ವಿನಹ ನೆಲದ ಮೇಲಿಡಬಾರದು. ಹಾಗೆ ಮಾಡಿದರೆ ದೇವರು, ದೇವತೆಗಳನ್ನು ಅವಮಾನಿಸಿದಂತಾಗುತ್ತದೆಯಂತೆ.
ಶಂಖದಲ್ಲಿ ಸಾಕ್ಷಾತ್ತೂ ಲಕ್ಷ್ಮಿದೇವಿ ನೆಲಸಿರುತ್ತಾಳೆ ಎಂಬುದು ಎಲ್ಲರ ನಂಬಿಕೆ ಆದ್ದರಿಂದ ಶಂಖವನ್ನು ಯಾವುದೇ ಕಾರಣಕ್ಕೂ ಕೂಡ ನೆಲದ ಮೇಲಿಡಬಾರದು.
ಇಟ್ಟರೆ ಆರ್ಥಿಕ ಸಮಸ್ಯೆಗಳು. ಮನಸ್ಸು ಕೆಡುವ ಸಮಸ್ಯೆಗಳು ಎದುರಾಗುತ್ತವೆ. ಕಳಸ ಇದರಲ್ಲಿ ಲಕ್ಷಿ ನೆಲೆಸಿರುತ್ತಾಳೆ ಇದನ್ನು ಯಾವುದಾದರೂ ತಟ್ಟೆಯ ಒಳಗೆ ಇಡಬೇಕು ಯಾವುದೇ ಕಾರಣಕ್ಕೂ ನೆಲದ ಮೇಲೆ ಇಡಬಾರದು.
ದೇವರ ಮನೆಯ ಕಟ್ಟೆಗೆ ಒಂದು ವಸ್ತ್ರ ಹಾಸಿ ಅದರ ಮೇಲೆ ದೇವರಿಗೆ ಸಂಬಂಧ ಪಟ್ಟ ಎಲ್ಲಾ ವಸ್ತುಗಳನ್ನು ಇಡಬಹುದು.
ಶುಭಕರವಾಗಿರಲಿ ನಿಮ್ಮ ದಿನಗಳು.
ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು
No comments:
Post a Comment