Thursday, 28 May 2020

ಐತಿಹಾಸಿಕ ಆ 18 ದಿನಗಳ ಮಹಾಭಾರತ ಯುದ್ಧದಿಂದ ಈ ಪ್ರಂಪಂಚ ಅರಿಯಬೇಕಾದ ಅದೆಷ್ಟು ಜೀವನ ಮೌಲ್ಯಗಳು ಹೊಂದಿರುವುದನ್ನು ಕಾಣಲು ಈ ಒಂದು ಘಟನೆ ತಿಳಿಯುವ.

#ಐತಿಹಾಸಿಕ ಆ 18 ದಿನಗಳ ಮಹಾಭಾರತ ಯುದ್ಧದಿಂದ ಈ ಪ್ರಂಪಂಚ ಅರಿಯಬೇಕಾದ ಅದೆಷ್ಟು ಜೀವನ ಮೌಲ್ಯಗಳು ಹೊಂದಿರುವುದನ್ನು ಕಾಣಲು ಈ ಒಂದು ಘಟನೆ ತಿಳಿಯುವ.

ಕರ್ಣ ಮತ್ತು ಅರ್ಜುನರ ಯುದ್ದದ ಸಂದರ್ಭದಲ್ಲಿ ಕರ್ಣ ಬಿಡುವ ಬಾಣಗಳ ರಭಸಕ್ಕೆ ಅರ್ಜುನನ ರಥ ಎರಡು ಮೂರು ಅಡಿ ಹಿಂದಕ್ಕೆ ಹೋಗುತ್ತಿತ್ತು. ಅದೇ ಗಳಿಗೆಯಲ್ಲಿ ಅರ್ಜುನ ಬಿಡುವ ಬಾಣದ ವೇಗಕ್ಕೆ ಕರ್ಣನ ರಥ ಹತ್ತಾರು ಅಡಿಗಳ ದೂರ ಹಾರಿ ಹಿಂದಕ್ಕೆ ಹೋಗುತ್ತಿತ್ತು . ಆಗಲ್ಲಾ ಅರ್ಜುನ ಗಹಗಹಿಸಿ ‌ನಕ್ಕು ಬೀಗುತ್ತಿದ್ದ.

ಯುದ್ಧವೆಲ್ಲಾ ಮುಗಿದ ನಂತರ, ಅರ್ಜುನ ತನ್ನ ರಥದ ಸಾರಥಿಯಾದ ಜಗದೊಡೆಯ ಶ್ರೀ ಕೃಷ್ಣ ಪರಮಾತ್ಮನಿಗೆ ನೋಡಿದಿಯಾ ಕೃಷ್ಣ ನನ್ನ ಬಾಣದ ವೇಗಕ್ಕೆ ಕರ್ಣನ ರಥ ಹೇಗೆ ಹಿಂದಕ್ಕೆ ಹತ್ತಾರು ಅಡಿಗಳಷ್ಟು ಹಾರುತ್ತಿತ್ತು ಎಂದು ಜಂಭದಿಂದ ಹೇಳಿದಾಗ. ಶ್ರೀ ಕೃಷ್ಣ ನಸುನಗುತ್ತಾ ನಿನ್ನ ರಥದಲ್ಲಿ ಕಪಿಶ್ರೇಷ್ಠ ಹನುಮಂತ ಮತ್ತು  ನಾನೆ ಕುಳಿತ್ತಿದ್ದರು ನಿನ್ನ ರಥ ಎರಡು ಮೂರು ಅಡಿ ಹಿಂದಕ್ಕೆ ಹಾರುತ್ತಿತ್ತು ಎಂದಾಗ ಅರ್ಜನನಿಗೆ ಆಗ ಅರಿವಾಗುತ್ತದೆ ನಿಜ ಜಗದೊಡೆಯನೆ ಇದ್ದ ರಥ ಎರಡೂ ಮೂರಡಿ ಹಿಂದಕ್ಕೆ ಪುಟಿಯುತ್ತೆ ಅಂದರೆ ಆ ಕರ್ಣನ ಬಾಣದ ವೇಗ ಹೇಗಿರುತ್ತೆ ! , ಕರ್ಣ ಸಾಮನ್ಯನಲ್ಲ ಎಂಬುದು ಹರಿವಾಗಿ, ತನ್ನ ಜಂಬದ ಮಾತಗಳಿಗೆ ಅವಮಾನದಿಂದ ಜಗದೊಡೆಯನ ಮುಂದೆ ಕ್ಷಮಾಪಣೆ ಕೇಳಿ ತಲೆತಗ್ಗಿಸುವ.

 (ಶ್ರೀ ಕೃಷ್ಣ ಆ ಯುದ್ಧದ 18 ದಿನಗಳು ರಥದಿಂದ ಮೊದಲು ಅರ್ಜನನ್ನು ಇಳಿಸಿ ನಂತರ ಇಳಿಯುತ್ತಿದ್ದ,  ಅರ್ಜುನ ಯುದ್ದ ಸಮಾಪ್ತಿಯಾದ ದಿನದೊಂದು ಶ್ರೀ ಕೃಷ್ಣನಿಗೆ ಪ್ರತಿ‌ ಬಾರಿ ನಾನೆ ರಥದಿಂದ ಇಳಿಯುತ್ತಿರುವೆ ಈ ದಿನ ನೀವೆ ರಥದಿಂದ ಮೊದಲು ಇಳಿಯಿರಿ ನಂತರ ನಾ ಇಳಿಯುವೆ ಎಂದಾಗ ಆಗಲೂ ಶ್ರೀ ಕೃಷ್ಣ ಒಪ್ಪದೆ ಅರ್ಜುನನ್ನು ಇಳಿಸಿ ನಂತರ ತಾನು ಇಳಿದು ಸ್ವಲ್ಪ ದೂರಕ್ಕೆ ಹೋಗಿ ನಿಂತ ಅರ್ಜುನನಿಗೆ ನೋಡು ರಥವನ್ನು ಎಂದಾಗ ರಥ ಭಯಂಕರ ಶಬ್ದದಿಂದ ಪುಡಿಪುಡಿಯಾಗುವುದನ್ನು ಕಂಡು ಆಶ್ಚರ್ಯ ಚಿಕಿತನಾಗಿ ಅರ್ಜುನ ಶ್ರೀ ಕೃಷ್ಣನನ್ನು ಕಂಡಾಗ . ಆ ಪರಮಾತ್ಮನು ಅರ್ಜುನಾ ಅನೇಕ ಅತಿರಥ ಮಹಾರಥರು ಪ್ರಯೋಗಿಸಿದ ದಿವ್ಯಾಸ್ತ್ರಗಳ ಶಕ್ತಿ ನಾ ಸಿಡಿಯದಂತೆ ಹಿಡಿದಿಟ್ಟಿದ್ದೆ ಇಂದು ಅವುಗಳ ಶಕ್ತಿ ಬಿಡುಗಡೆ ಮಾಡಿದೆ. ಈಗ ತಿಳಿಯಿತೇ ನಾ ಏಕೆ ಕೊನೆಯಲ್ಲಿ ಇಳಿಯುತ್ತಿದ್ದೆ ಎಂದು!!)

ಪ್ರತಿಯೊಬ್ಬರ ಜೀವನದಲ್ಲೂ ಸಹ ಇಂತಹ ಅನೇಕ ಘಟನೆಗಳು ನಮಗೆ ಅರಿವಿಲ್ಲದೆಯೇ ಯಾವುದೋ ಒಂದು ಅಗೋಚರ ಶಕ್ತಿ ನಮ್ಮನ್ನು ಕಾಪಾಡುತ್ತಿರುತ್ತದೆ ಅದನ್ನು ಅರಿತು ನಾವು ಮುನ್ನಡೆದರೆ ಖಂಡಿತ ಪ್ರತಿಪಲ ಈ ಜನ್ಮದಲ್ಲೆ ಪಡೆಯಬಹುದು ಇಲ್ಲ ಮುಂದಿನ ಜನ್ಮಗಳಲ್ಲಿ ಕಾಯುತ್ತಾ ಕೂರಬೇಕು.

ಜೈ ಶ್ರೀ ಕೃಷ್ಣ ಪರಮಾತ್ಮ

ವಂದೇಮಾತರಂ ಸೋಮಶಂಕರ

No comments:

Post a Comment