Thursday, 28 May 2020

ಕಲಿಯುಗದ ಬಗ್ಗೆ ವೇದಗಳು ಏನು ಹೇಳುತ್ತಿವೆ ಗೊತ್ತೇ..?

ಕಲಿಯುಗದ ಬಗ್ಗೆ ವೇದಗಳು ಏನು ಹೇಳುತ್ತಿವೆ ಗೊತ್ತೇ..?

ಪ್ರಸ್ತುತ ನಾವೆಲ್ಲರೂ ಇರುವುದು ಕಲಿಯುಗದಲ್ಲಿ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ...

ಆದರೆ ಈ ಯುಗದಲ್ಲೇ ಯುಗಾಂತ್ಯವಾಗುತ್ತದೆ ಎಂದು ಪುರಾಣಗಳು ಹೇಳುತ್ತಿವೆ...

ಕಲಿಯುಗದಲ್ಲಿ ಮನುಷ್ಯರು ಉನ್ನತ ಸ್ಥಾನಕ್ಕೆ ಸೇರಿಕೊಳ್ಳಲು ವಿಧವಿಧವಾಗಿ ಪ್ರಯತ್ನಿಸುತ್ತಾರೆಂದು ಅಗತ್ಯ ಬಿದ್ದರೆ ಅಡ್ಡದಾರಿ ಸಹ ತುಳಿಯುತ್ತಾರೆ ವಯಸ್ಸು ಎತ್ತರ ಬಲ ಜ್ಞಾನ, ಆಕರ್ಷಣೆಯಂತಹವು ಬರುಬರುತ್ತಾ ಕಲಿಯುಗದಲ್ಲಿ ಕಡಿಮೆಯಾಗುತ್ತವೆ ಎಂದು ಪುರಾಣಗಳು ಹೇಳುತ್ತಿವೆ... 
ಅವೆಲ್ಲಾ ನಡೆಯುತ್ತಿರುವುದನ್ನು ನೋಡುತ್ತಿದ್ದೇವೆ...

ಆದರೆ ವೇದಗಳು ಕಲಿಯುಗದ ಬಗ್ಗೆ ಕೆಲವೊಂದು ಸತ್ಯಗಳನ್ನು ಹೇಳುತ್ತಿವೆ. ಅವು ಏನು ಎಂಬುದನ್ನು ತಿಳಿದುಕೊಳ್ಳೋಣ...

1. ಕಲಿಯುಗದಲ್ಲಿ ನಿಜ ಅನ್ನುವುದು ಸತ್ತು ಹೋಗುತ್ತದೆ... ಮನುಷ್ಯರು ನಿಜ ಹೇಳುವುದನ್ನು ಬಿಡುತ್ತಾರೆ... 
ಸುಳ್ಳಿನ ಮೇಲೆ ಜಗತ್ತು ನಡೆಯುತ್ತದೆ...
ನಿಜ ಹೇಳುವ ಯಾವ ಮನುಷ್ಯ ಸಹ ಕಲಿಯುಗದಲ್ಲಿ ಇರಲಾಗುವುದಿಲ್ಲ...

2. ಮನುಷ್ಯರಲ್ಲಿ ಒಳ್ಳೆಯತನ ಅನ್ನುವುದು ಇರುವುದಿಲ್ಲ..
ಅದನ್ನು ನೋಡಬೇಕೆಂದರೂ ಯಾರಲ್ಲೂ ಕಾಣಸಿಗದು... 
ಎಲ್ಲೋ ಕೋಟಿಗೊಬ್ಬರು ಒಳ್ಳೆಯ ಮನುಷತ್ವ ಇರುವವರು ಕಾಣುತ್ತಾರೆ...

3. ಒಬ್ಬ ವ್ಯಕ್ತಿಗೆ ಇರುವ ಗುಣಗಳಿಗಿಂತ ಆತನಿಗಿರುವ ಆಸ್ತಿ ಇತರರಿಗೆ ಹೆಚ್ಚಾಗಿ ಕಾಣುತ್ತದೆ...
ಹಣ ಅಂತಸ್ತು ನೋಡಿ ಮನುಷ್ಯನ ಗುಣ ಗಣಗಳನ್ನು ನಿರ್ಧರಿಸುತ್ತಾರೆ...

4. ಗಂಡ ಹೆಂಡತಿ ನಡುವೆ ನಿಜವಾದ ಪ್ರೀತಿ ಮಾಯವಾಗುತ್ತದೆ... ಅವರ ನಡುವೆ ಇರುವುದು ಕೇವಲ ಆಕರ್ಷಣೆ ಮಾತ್ರ...
ಇದು ಅವರ ನಡುವಿನ ಸಂಬಂಧಕ್ಕೆ ಹೊಡೆತ ನೀಡುತ್ತದೆ...

5. ತಂದೆತಾಯಿಯನ್ನು ಮೋಸ ಮಾಡುವ ಮಕ್ಕಳು ಮಕ್ಕಳನ್ನು ಮೋಸ ಮಾಡುವ ತಂದೆತಾಯಿ ಇರುತ್ತಾರೆ...

6. ಮತ ಕುಲ ವರ್ಗಗಳ ಹೆಸರಲ್ಲಿ ಮೋಸಗಳು ನಡೆಯುತ್ತವೆ... ಅವುಗಳನ್ನು ಅಡ್ಡವಾಗಿಟ್ಟುಕೊಂಡು ಕೆಲವರು ಕೆಟ್ಟ ಕೆಲಸಗಳಿಗೆ ಕೈಹಾಕುತ್ತಾರೆ...

7. ದುಡ್ಡೇ ಜಗತ್ತಾಗಿ ಬದಲಾಗುತ್ತದೆ...
ಮನುಷ್ಯ ಮನುಷ್ಯನಿಗಿಂತ ಹಣಕ್ಕೆ ಹೆಚ್ಚಿನ ಬೆಲೆ ಕೊಡುತ್ತಾರೆ ಅದರಲ್ಲೇ ಬದುಕುತ್ತಾರೆ...
ಹಣ ಉಳ್ಳವರದ್ದೇ ರಾಜ್ಯ...ಹಣಕ್ಕಾಗಿ ಬಂಧುಗಳು ಕುಟುಂಬ ಸದಸ್ಯರು ಸಾಯಿಸಲು ಹೇಸುವುದಿಲ್ಲ...

8. ಕಳ್ಳರು ದರೋಡೆಕೋರರು ಮೋಸ ಮಾಡುವವರು ರೌಡಿಗಳು ಗೂಂಡಾಗಳು ರಾಜ್ಯವಾಳುತ್ತಾರೆ...
ನಾಯಕರಾಗಿ ಬದಲಾಗಿ ಪ್ರಜೆಗಳ ರಕ್ತ ಹೀರುತ್ತಾರೆ...
ಅವರು ಮಾಡಿದ್ದೇ ಕಾನೂನು ಎಂಬಂತಾಗುತ್ತದೆ...

9. ವೃದ್ಧ ತಂದೆತಾಯಿಗಳನ್ನು ಮಕ್ಕಳು ಸರಿಯಾಗಿ ನೋಡಿಕೊಳ್ಳಲ್ಲ...ಅವರನ್ನು ನಿರ್ಲಕ್ಷಿಸುತ್ತಾರೆ...

 ಕಲಿಯುಗ ಅಂತ್ಯವಾಗುತ್ತಿದೆ ಎಂಬುದರ ಸಂಕೇತಗಳು ಇವು...

1. ಕಲಿಯುಗ ಅಂತ್ಯವಾಗುತ್ತಿದೆ ಎಂದಾಗ ಹಸುಗಳು ಇರುವುದಿಲ್ಲ ಸತ್ತು ಹೋಗುತ್ತವೆ...

2. ಯಾರಿಗೂ ಕರುಣೆ ಇರುವುದಿಲ್ಲ...
ಒಬ್ಬರನ್ನೊಬ್ಬರು ಸಾಯಿಸಿಕೊಳ್ಳುವವರೆಗೂ ಬರುತ್ತದೆ... ಎಲ್ಲರೂ ಮೀನನ್ನು ಮಾತ್ರ ತಿನ್ನುತ್ತಾರೆ...

3. ಮಹಿಳೆಯರು ತುಂಬಾ ಕ್ರೂರವಾಗಿ ನಡೆದುಕೊಳ್ಳುತ್ತಾರೆ... ಎಲ್ಲಿ ನೋಡಿದರೂ ವ್ಯಭಿಚಾರ ಹತ್ಯೆಗಳು ನಡೆಯುತ್ತವೆ...

4. ಮನುಷ್ಯನ ಜೀವಿತ ಕಾಲವಧಿ 15 ವರ್ಷಗಳಿಗೆ ಇಳಿಯುತ್ತದೆ... ಚಿಕ್ಕ ವಯಸ್ಸಿನಲ್ಲೇ ಮಕ್ಕಳನ್ನು ಹೆರುತ್ತಾರೆ...

5. ಎಲ್ಲೂ ದೇವಸ್ಥಾನಗಳು ಇರುವುದಿಲ್ಲ...ಎಲ್ಲವೂ ನಿರ್ನಾಮವಾಗುತ್ತವೆ...

6. ಭೂಮಂಡಲದ ಮೇಲೆ ಉಷ್ಣತೆ ಬೆಳೆಯುತ್ತದೆ...ಅದನ್ನು ಜೀವರಾಶಿಗಳು ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ...

7. ದುಷ್ಟರೆಲ್ಲಾ ಸಾಯುತ್ತಾರೆ...

8. ಪ್ರಳಯ ಸಂಭವಿಸಿ ಭೂಮಿ ಮೇಲೆ ಎತ್ತ ನೋಡಿದರೂ ನೀರು ಕಾಣುತ್ತದೆ...

9. ಮತ್ತೆ ಸತ್ಯಯುಗ ಆರಂಭವಾಗುತ್ತದೆ...

No comments:

Post a Comment