ಇಂದು ನೀವು ಮಾಡಬೇಕಾದ ಬಹು ಮುಖ್ಯ ಕೆಲಸ
ತಪ್ಪದೆ ಮಾಡಿ ಶುಭಮಸ್ತು ಸುದಿನಮಸ್ತು.
ಈದಿನ ಆಶ್ವಿಯುಜ ಮಾಸದ ಬಹುಳ ತ್ರಯೋದಶಿ ಅಂದರೆ ದಿನಾಂಕ 26/10/19 ನೇ ಶನಿವಾರ ಗೋಧೊಳಿ ಲಗ್ನದಲ್ಲಿ ಸಾಯಂಕಾಲ 5 ಘಂಟೆ 13 ನಿಮಿಷದಿಂದ 6 ಘಂಟೆ 58 ನಿಮಿಷದೊಳಗೆ ಎಳ್ಳೆಣ್ಣೆ ದೀಪದಿಂದ ಮನೆಯಲ್ಲಿ ಅಥವಾ ದೇವಾಲಯದಲ್ಲಿ ಪೂಜೆ ಮಾಡಿದರೆ ಆಪಮೃತ್ಯವಿನ ಪಾಶದಿಂದ ಮತ್ತು ದಾರಿದ್ರ್ಯ ನಿವಾರಣೆಯಾಗುವುದು.
ಯಮ ದೀಪ ಎಂದರೇನು ?
ಒಂದು ದಿನ ಯಮಧರ್ಮರಾಜನು ತಂಗಿಯನ್ನು ನೋಡಲು ತಂಗಿಯ ಮನೆಗೆ ಹೋದನು ತಂಗಿ ಯಮಿ ಅಣ್ಣನನ್ನು ನೋಡಿ ಸಂತೋಷ ಕೊಂಡು ವಿವಿಧ ಭಕ್ಷ್ಯಗಳನ್ನು ಮಾಡಿ ಬಡಿಸಿ ಅಣ್ಣನ ಅರೈಕೆ ಮಾಡಿದಳು ತಂಗಿ ಇಟ್ಟಿರುವ ಅಣ್ಣನ
ಮೇಲೆ ಪ್ರೀತಿಯನ್ನೂ ನೋಡಿ ಅಣ್ಣ ತುಂಬಾ ಸಂತೋಷಪಟ್ಟನು.
ಇವರಿಬ್ಬರೂ ಸೂರ್ಯ ದೇವನ ಮಕ್ಕಳು ಯಮಧರ್ಮರಾಜನು ನ್ಯಾಯಕ್ಕೆ ಆದರೆ ತಂಗಿ ಯಮುನಿ ಕಾಲಕ್ಕೆ ಅಧಿಪತಿಯಾದವಳು ಈಕೆಗೆ ಮುಂದೆ ಹೋಗುವುದು ಗೊತ್ತು ಆದರೆ ಹಿಂದೆ ಬರುವುದು ಗೊತ್ತಿಲ್ಲ ಆದೆ ಕಾಲ ಈ ಮಾಸದಲ್ಲಿ ಈ ದಿನ ಬಿಟ್ಟರೆ ಈ ಕಾರ್ತಿಕ ಮಾಸ ಮುಗಿಯುವದರೊಳಗೆ ಬೆಳಿಗ್ಗೆ ಅಥವಾ ಸಂಜೆ ಈ ದೀಪದ ಪೂಜೆ ಮಾಡಬಹುದು .
ತಂಗಿಯ ಈ ಪ್ರೀತಿಯನ್ನು ಕಂಡು ಅಣ್ಣ ಹೋಗುವಾಗ ಏನಾದರೂ ಕೇಳುತಂಗಿ ಕೊಡುವೆ ಎಂದು ಕೇಳಿದ ಅದಕ್ಕೆ ಯಮಿ ಅಣ್ಣ ಯಾರು ಈ ಮಾಸದಲ್ಲಿ ಈ ತಿಥಿಯಂದು ತಂಗಿಯ ಕೈ ಊಟ ಮಾಡುವರೊ ಅವರಿಗೆ ಅಕಾಲಮೃತ್ಯು ನಿವಾರಣೆ ಮಾಡು ಪ್ರತಿಯೊಂದು ಹೆಣ್ಣು ಮಕ್ಕಳು ಪ್ರತಿವರ್ಷವೂ ಅಣ್ಣ ಈ ಮಾಸದಲ್ಲಿ ಬರುವನು ಎಂದು ಎದುರು ನೋಡಲಿ ಎಂದು ವರವನ್ನು ಬೇಡಿಕೊಂಡಳು ಆಗ ಯಮಧರ್ಮರಾಜನು ತಂಗಿಗೆ ಸುಪ್ರಸನ್ನನಾಗಿ ವರವನ್ನು ಕೊಟ್ಟನು.
ಅಂದರಿಂದ ಈ ಮಾಸದಲ್ಲಿ ತಂಗಿ ಮನೆಗೆ ಹೋಗಿ ಊಟ ಮಾಡಿ ಬರುವುದು ಸಾಧ್ಯವಿಲ್ಲದೆ ಇರುವವರು ಪ್ರತಿಯೊಬ್ಬರು ಈ ಯಮ ದೀಪಾರಾಧನೆ ಮಾಡಿದರೆ ಅಕಾಲಮೃತ್ಯು ಹಾಗೂ ದಾರಿದ್ರ್ಯ ನಿವಾರಣೆಯಾಗುತ್ತದೆ.
ಸಂಗ್ರಹ ಮಾಹಿತಿ.
ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು
No comments:
Post a Comment