"ಯಮನಿಗೆ ಶಾಪಕೊಟ್ಟ ಋಷಿ" by #ಶ್ರೀನಿ
ಸಕಲಜೀವಿಗಳಿಗೆ ಹುಟ್ಟೆಂದ ಮೇಲೆ ಸಾವು ಇದ್ದೇ ಇರುತ್ತದೆ. ನಾವು ಮಾಡಿದ ಪಾಪ ಕರ್ಮಗಳ ಫಲಾನುಸಾರವಾಗಿ ನಮಗೆ ಶಿಕ್ಷೆಗಳು ನಿರ್ಣಯವಾಗಿರುತ್ತವೆ. ಸತ್ತ ನಂತರ ನಮ್ಮ ಪಾಪಗಳಿಗನುಗುಣವಾಗಿ ಸ್ವರ್ಗ ನರಕಗಳು ಪ್ರಾಪ್ತಿಯಾಗುತ್ತವೆಯಂತೆ.
ಅಷ್ಟಕ್ಕೂ ಸ್ವರ್ಗ ಎಂದರೇನೆಂದು ಕೇಳಿದರೆ
ನಮ್ಮ ಹಿರಿಯರು ಹೇಳುವ ಪ್ರಕಾರ ಒಳ್ಳೆಯದನ್ನು ಮಾಡುವ, ಒಳ್ಳೆಯದನ್ನೇ ಬಯಸುವ, ಒಳ್ಳೆಯವನಾಗೇ ಇರುವ ಸದ್ಗುಣ ಸಂಪನ್ನನಿಗೆ ಸಕಲ ಸುಖಗಳು ದೊರೆಯುತ್ತವೆ. ಜೊತೆಗೆ ಮನಸ್ಸಿಗೆ ಸದಾ ನೆಮ್ಮದಿ ಇದ್ದು ಸುಖವೇ ಸುತ್ತಲೂ ಇರುತ್ತದೆ. ಇಂಥಹ ಸ್ಥಳಕ್ಕೆ "ಸ್ವರ್ಗ" ಎಂದು ಹೆಸರು.
ನರಕ ಎಂದರೇ ವಿಚಿತ್ರ ಕಲ್ಪನೆಗಳಿವೆ. ಸಣ್ಣ ಪುಟ್ಟ ತಪ್ಪುಗಳಿಗೂ ಉಗ್ರ ಶಿಕ್ಷೆ ಕೊಡುವ ಊಹಿಸಿಕೊಳ್ಳಲು ಭಯವಾಗುವ ಒಂದು ಕ್ರೂರ ಸ್ಥಳ. ಅಲ್ಲಿ ಕಾದ ಎಣ್ಣೆಯ ಬಾಂಡಲಿ, ಶೂಲಗಳು, ಕಣ್ಣು ಕೀಳುವ, ಕಿವಿಗೆ ಕಾದ ಎಣ್ಣೆ ಸುರಿಯುವ, ದೇಹದ ಚರ್ಮವನ್ನು ಸುಲಿಯುವ ಯಮಭಟರು ಹೀಗೆ ಹೇಳುತ್ತಾ ಹೋದರೇ ಸಾಲದು. ಇಂಥ ಸ್ವರ್ಗ ನರಕಗಳನ್ನು ನೋಡಿಕೊಳ್ಳಲು ಒಬ್ಬೊಬ್ಬ ಅಧಿಪತಿಗಳಿದ್ದಾರೆ. ಅದರಂತೆ ಇಂದ್ರ ಸ್ವರ್ಗಕ್ಕೆ ಅಧಿಪತಿಯಾದರೇ ಯಮನು ನರಕದ ಅಧಿಪತಿ.
ಬ್ರಹ್ಮನಿಂದ ನೇಮಿಸಲ್ಪಟ್ಟವರು.
ಎಲ್ಲರ ತಪ್ಪುಗಳಿಗೆ ಶಿಕ್ಷೆಕೊಡುವ ಯಮನಿಗೆ ಶಾಪಕೊಟ್ಟು ಅವನನ್ನು ಮಾನವನನ್ನಾಗಿ ಹುಟ್ಟುವಂತೆ ಮಾಡಿ ಅನೇಕ ಕಷ್ಟಗಳನ್ನು ಅನುಭವಿಸುವಂತೆ ಮಾಡಿದ ಮುನಿಯೇ ಅಣಿಮಾಂಡವ್ಯ.
ಹೌದು ಅಣಿಮಾಂಡವ್ಯ ಮಾಡದ ತಪ್ಪಿಗೆ ರಾಜನಿಂದ ಬಂಧಿಸಲ್ಪಟ್ಟು ಅವನಿಂದ ಶೂಲಕ್ಕೇರಿಸಿದ್ದಾಗ ಯಮಭಟರು ಬಂದು ಅವರನ್ನು ಕರೆದೊಯ್ದಿದ್ದರು. ಆದರ ವಿಧಿನಿಯಮದಂತೆ ಅವರಿಗೆ ಇನ್ನೂ ಒಂದು ದಿವಸ ಆಯುಷ್ಯವಿತ್ತು. ಆದರೇ ಒಂದು ದಿನ ಮೊದಲೇ ಅವರನ್ನ ಯಮಲೋಕಕ್ಕೆ ಕರೆದು ಬಂದಿದ್ದರಿಂದ ದೇವರ ಸ್ಮರಣೆ ಮಾಡಲು ಸಾಧ್ಯವಾಗದ ಕಾರಣ, ಜೊತೆಗೆ ಅವರು ಚಿಕ್ಕವಯಸ್ಸಿನಲ್ಲಿ ಕೀಟಗಳನ್ನು ಕೊಂದಿದ್ದ ಕಾರಣಕ್ಕಾಗಿ ಅಣಿಮಾಂಡವ್ಯನಿಗೆ ಭೂಮಿಯಲ್ಲಿಯೇ ಶೂಲದ ಶಿಕ್ಷೆಯನ್ನು ಯಮನೇ ರಾಜ ಭಟರ ಮೂಲಕ ಕೊಟ್ಟಿದ್ದನು ತಿಳಿದ ಜ್ಙಾನಿಗಳಾದ ಅಣಿಮಾಂಡವ್ಯ ನೀನು ಮಾನವನಾಗಿ ಜನಿಸಿ ಕಷ್ಟಗಳನ್ನು ಅನುಭವಿಸು ಎಂದು ಶಾಪಕೊಡುತ್ತಾರೆ.
ಇದರಿಂದ ಕಂಗಾಲಾದ ಯಮ ವಿಷ್ಣುವಿನ ಬಳಿ ಅಣಿಮಾಂಡವ್ಯನನ್ನು ಕರೆದುಕೊಂಡು ಹೋದಾಗ ಅಣಿಮಾಂಡವ್ಯರು ಚಿಕ್ಕ ವಯಸ್ಸಿನಲ್ಲಿ ಬುದ್ದಿಯಿಲ್ಲದ ಕಾರಣ ಯಾವುದು ಸರಿ, ಯಾವುದು ತಪ್ಪು ಎಂದು ತಿಳಿಯಲು ಅರ್ಹರಾಗಿರುವುದಿಲ್ಲ ಹಾಗಾಗಿ ಚಿಕ್ಕವಯಸ್ಸಿನ ತಪ್ಪುಗಳಿಗೆ ನರಕದಲ್ಲಿ ಶಿಕ್ಷೆ ವಿಧಿಸಬಾರದೆಂದು ಹರಿಯನ್ನು ಬೇಡಿಕೊಂಡಾಗ ಹರಿಯು ನಸುನಕ್ಕು ತಥಾಸ್ತು ಎಂದಾಗ ಕಣ್ಣಂಚಲಿ ನೀರು ಸುರಿಸುತ್ತಾ ಅಣಿ ಮಾಂಡವ್ಯ ದೇವರ ಪಾದಕ್ಕೆರಗಿ ಯಮನಿಗೆ ಶಾಪ ನೀಡಿದ್ದಕ್ಕೆ ಮನ್ನಿಸಬೇಕೆಂದು ಕೇಳಿಕೊಳ್ಳುತ್ತಾನೆ. ಆದರೆ ಜ್ಙಾನಿಯಾದ ಅಣಿಮಾಂಡವ್ಯ ಕೊಟ್ಟ ಶಾಪದಿಂದ ಯಮನೇ ಮುಂದೆ ಧರ್ಮರಾಯನಾಗಿ ಹುಟ್ಟಿ ಅನೇಕ ಕಷ್ಟಗಳನ್ನು ಎದುರಿಸಿ, ಕೋಪಗೊಳ್ಳದೇ ಧಾರ್ಮಿಕನಾಗಿಯೇ ಉಳಿಯುತ್ತಾನೆ.
#ಶ್ರೀನಿ #srini #sriniwriteups
No comments:
Post a Comment