Thursday, 28 May 2020

ಹಿಂದಿನ ಕಾಲದಲ್ಲಿ ಋಷಿಗಳು ನಿರಂತರ ತಪಸ್ಯೆಯಲ್ಲಿ ಮುಳುಗಿರುತ್ತಿದ್ದರು ,ಅವರು ಹಸಿವೆ ತೃಷೆ , ಹಾಗು ನೈಸರ್ಗಿಕ ಕರೆಯ ನಡುವೆ ಹೇಗೆ ಸಮತೋಲನ ಸಾಧಿಸುತ್ತಿದ್ದರು ?

ಈ ಗುಂಪಿನಲ್ಲಿ ಮತ್ತೊಬ್ಬರ ಪ್ರಶ್ನೆ.....
ಹಿಂದಿನ ಕಾಲದಲ್ಲಿ ಋಷಿಗಳು ನಿರಂತರ ತಪಸ್ಯೆಯಲ್ಲಿ ಮುಳುಗಿರುತ್ತಿದ್ದರು ,ಅವರು ಹಸಿವೆ ತೃಷೆ , ಹಾಗು ನೈಸರ್ಗಿಕ ಕರೆಯ ನಡುವೆ ಹೇಗೆ ಸಮತೋಲನ ಸಾಧಿಸುತ್ತಿದ್ದರು ? ........

ಯೋಗ ಶಾಸ್ತ್ರದಲ್ಲಿ ನಮ್ಮ ಜೀವಿತಾವಧಿಯನ್ನು ನಿರ್ಣಯಿಸುವುದು ಉಸಿರಾಟ .ಉಸಿರಾಟ ಹೆಚ್ಚಾದಂತೆ ಆಯಸ್ಸು ಕಡಿಮೆಯಾಗುತ್ತದೆ. ವೇಗವಾಗಿ ಉಸಿರಾಟ ನಡೆಸುವ ಪ್ರಾಣಿಗಳ ಜೀವಿತಾವಧಿ ಕಡಿಮೆ ಎನ್ನುವುದನ್ನು ನಾವು ಗಮನಿಸಿರಬಹುದು. ನಾಯಿಯ ಉಸಿರಾಟ ತುಂಬಾ ವೇಗ......ಆದ್ದರಿಂದ ಅದಕ್ಕೆ ಜೀವಿತಾವಧಿ ಇಪ್ಪತ್ತು ಇಪ್ಪತ್ತೈದು ವರ್ಷಗಳ ಕಾಲ..... ಮೊಲ ಮತ್ತೂ ಕಡಿಮೆ.... ಮನುಷ್ಯನ ಜೀವಿತಾವಧಿ ನೂರು ವರ್ಷ..... ಆದರೆ ಈಗ ಆ ಮಟ್ಟದಲ್ಲಿ ಆಯಸ್ಸು ಹೊಂದಿರುವುದು ಒಂದು ಸಾಧನೆಯೇ ಸರಿ. ಇನ್ನು ಅತ್ಯಂತ ನಿಧಾನವಾಗಿ ಉಸಿರಾಡುವ ಪ್ರಾಣಿ ಆಮೆ. ಅದರ ಆಯಸ್ಸು  ಇನ್ನೂರು ವರ್ಷ....
ಹೀಗೇ ಇದು ಮನುಷ್ಯನ ಉಸಿರಾಟ ಹಾಗು ಆಯುಶ್ಯದ  ಸಂಬಂಧ......

ಇನ್ನು ಎಲ್ಲರಿಗೂ ತಿಳಿದಂತೆ ನಮ್ಮ ದೇಹದ metabolism , ಆಧಾರದ ಮೇಲೆ ನಮಗೆ ವಯಸ್ಸಾಗುವುದು ಎಂದರೆ ದೇಹ ತನ್ನ ಶಕ್ತಿ ಕ್ರಮೇಣ ಕಳೆದುಕೊಳ್ಳುವುದು ಅಥವ ಉಳಿಸಿಕೊಳ್ಳುವುದು body metabolism ನಿಂದಲೇ....

ಯೋಗದಲ್ಲಿ ಉಸಿರಾಟದ ನೇರ ನಿಯಂತ್ರಣ ಇದೆ. ಅದು ಮಾತ್ರ ಅಲ್ಲದೆ ,ಕೆಲವು ಪ್ರಾಣಾಯಾಮಗಳಿಂದ ಸ್ನಾನ ಮಾಡದಿದ್ದರೂ  ಕೊಳೆ ಕಳೆದು ದೇಹದಲ್ಲಿ ಸುಗಂಧ ಉಂಟಾಗುವುದಕ್ಕೂ  ಪ್ರಾಣಾಯಾಮ ಇದೆ. ಯೋಗ ಸಾಧನೆಯಲ್ಲಿ ಬಂಧಗಳು ,ಮುದ್ರೆಗಳು ,ಎಲ್ಲಾ ಇದೆ. ಅದರ ಪ್ರಭಾವ muscal control , ಇತ್ಯಾದಿ ಸಾಧಿಸಬಹುದು .ಕೆಲವು ಬಂಧಗಳಿಂದ ಮಲಮೂತ್ರ ವಿಸರ್ಜನೆಗೆ ತಡೆ ವುಂಟಾಗುತ್ತದೆ. 

ಇದೇ ಮಾರ್ಗದಿಂದ ಹತೋಟಿ ಸಾಧಿಸಿರುವ ಸಾಧ್ಯತೆ ಇದೆ. ಇವೆಲ್ಲ ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ ಎನ್ನುವ ಪುಸ್ತಕದಲ್ಲಿ ಅನೇಕ ಸಾಧು ಸಂತರ ವಿಚಾರ ಬರುತ್ತದೆ . ನಿರಾಹಾರ ಯೋಗಿನಿ.....ಮುಂತಾದರೀತಿಯಲ್ಲಿ ಸಾಧನೆ ಮಾಡಿರುವವರ ವಿಶಯ ,ಹಾಗು ಒಂದೇ ದೇಹದಲ್ಲಿ ಸಾವಿರಾರು ವರ್ಷಗಳ ವರೆಗೂ ಬದುಕಿರುವ ಸಾಧಕರ ವಿವರ ಎಲ್ಲಾ ನೋಡಬಹುದು.... ಅಷ್ಟೇ ಏಕೆ ಆಪ್ತ ಮಿತ್ರ ,ಆಪ್ತ ರಕ್ಷಕ ಸಿನಿಮಾದಲ್ಲಿ ಕೂಡ ಅದರ ವಿಷಯ ಉಲ್ಲೇಖ ಇದೆ. 

ಸನಾತನ ಧರ್ಮದ ಎಲ್ಲವೂ ಸತ್ಯ ಮತ್ತು ಅರ್ಥ ಪೂರ್ಣ .ಆದರೂ ಇಂದಿನ ಪೀಳಿಗೆಗೆ ಎಲ್ಲವೂ ಮೂಢನಂಬಿಕೆ ಎನಿಸುವುದು ಖೇದ. ಒಟ್ಟಿನಲ್ಲಿ ಇನ್ನಾದರೂ ಇಂದಿನ ಪೀಳಿಗೆ ಪೊಳ್ಳುತನ ಬಿಟ್ಟು ಹಿಂದಿನವರ ಸತ್ಯ ವಿಮರ್ಶಿಸಿ ಅರ್ಥ ಮಾಡಿಕೊಂಡು ನಡೆಯಲಿ ಎಂದು ಆಶಿಸುತ್ತೇನೆ.....

No comments:

Post a Comment