🌺🌺🌺🌺🌺 *#ಪ್ರದೋಷ ಪೂಜೆ ಮತ್ತು ಅದರ ಲಾಭಗಳು* 🌺🌺🌺🌺
*ಪ್ರದೋಷ* ಎಂದರೆ ಪಾಪಗಳಿಂದ ಮುಕ್ತಿ ಎಂದರ್ಥ.
ಅಮೃತಕ್ಕಾಗಿ ದೇವ ದಾನವರು ಕ್ಷೀರ ಸಾಗರವನ್ನು ಕಡೆಯುವಾಗ ಹಾಲಾಹಲ ವಿಷವು ಉಕ್ಕಿ ಬಂದಿತು. ಆಗ ಧ್ಯಾನಾವಸ್ಥೆಯಲ್ಲಿದ್ದ ಶಿವನು ಲೋಕವನ್ನು ವಿಷದಿಂದ ಕಾಪಾಡಲು ಎಚ್ಚರಗೊಂಡನು. ಆ ಎಚ್ಚರಗೊಂಡ ಕಾಲವೇ *ಪ್ರದೋಷ ಕಾಲ*.
ಸಂಜೆ ನಾಲ್ಕು ಮೂವತ್ತರಿಂದ ಆರೂವರೆಯವರೆಗೆ ಈ ಕಾಲ ಇರುತ್ತದೆ. ಸಾಮಾನ್ಯವಾಗಿ ಧ್ಯಾನದಿಂದ ಶಿವ ಎಚ್ಚರಗೊಂಡಾಗ ಕೋಪಗೊಳ್ಳುವುದು ಸಹಜ. ಆದರೆ ಲೋಕ ಕಲ್ಯಾಣಕ್ಕಾಗಿ ಎಚ್ಚರಗೊಂಡ ಶಿವನು ಹಾಲಾಹಲವನ್ನು ಕುಡಿಯಲು ಸಂತೋಷದಿಂದ ಆಗಮಿಸುತ್ತಾನೆ. ಬರುವ ದಾರಿಯಲ್ಲಿ ನಂದಿಯ ಮೇಲೆ *“ಆನಂದ ತಾಂಡವ”* (ಸಂತೋಷಕ್ಕಾಗಿ ನೃತ್ಯ ಮಾಡುವ ವಿಧಾನ. ರುದ್ರ ತಾಂಡವ ಎಂದರೆ ಪ್ರಪಂಚದ ಪ್ರಳಯಕ್ಕಾಗಿ ಮಾಡುವ ವಿಧಾನ) ಮಾಡಿಕೊಂಡು ಸ್ವಯಂ ಸಂತೋಷದಿಂದ ಆಗಮಿಸಿದ ಶಿವ ಹಾಲಾಹಲವನ್ನು ಕುಡಿದು ಮೂರ್ಛೆ ತಪ್ಪುತ್ತಾನೆ.
ಆಗ ಬ್ರಹ್ಮ ದೇವನು ಗಂಗೆಯನ್ನು ಕರೆದು ಶಿವನ ದೇಹಕ್ಕೆ ನೀರಿನಿಂದ ಜಳಕ ಮಾಡಿಸುತ್ತಾನೆ. ಇದನ್ನೇ *ರುದ್ರಾಭೀಷೇಕ* ಎಂಬ ಹೆಸರಿನಿಂದ ಈಗ ಕರೆಯುತ್ತಾರೆ. ಅಂದಿನಿಂದ ಪ್ರತಿ ಹದಿನೈದು ದಿನಗಳಿಗೊಮ್ಮೆ ಬರುವ *ತ್ರಯೋದಶಿಯಂದು* ಸಾಕ್ಷಾತ್ ದೇವತೆಗಳೇ ಪ್ರದೋಷ ಪೂಜೆಯನ್ನು ಮಾಡುತ್ತಾ ಬಂದರು.
ಅಂದು ಉಪವಾಸವಿದ್ದು, ಶಿವ ಪೂಜೆಯನ್ನು ಮಾಡಿದರೆ ಒಳ್ಳೆಯದು.
ಅಂದಿನ ದಿನ ಪ್ರದೋಷ ಕಾಲದಲ್ಲಿ (ಸೂರ್ಯ ಮುಳುಗುವ ಹೊತ್ತಿನಲ್ಲಿ) ಪೂಜೆ ಮಾಡಿದರೆ ಎಲ್ಲಾ ದೇವರ ಅನುಗ್ರಹವನ್ನು ಗಳಿಸಬಹುದು.
ಸೋಮವಾರ ಬರುವ ಪ್ರದೋಷ *ಸೋಮ ಪ್ರದೋಷ* ಎಂದು ಹೆಸರಾಗಿದೆ. ಶನಿವಾರ ಬರುವ ಪ್ರದೋಷವನ್ನು *ಶನಿ ಪ್ರದೋಷ* ಎಂದು ಕರೆಯುತ್ತಾರೆ.
ಈ ಮೊದಲೇ ತಿಳಿಸಿದಂತೆ, ಈಶ್ವರ ಹಾಲಾಹಲ ಕುಡಿದದ್ದು, ಶನಿವಾರವಾದ್ದರಿಂದ *“ಶನಿ ಪ್ರದೋಷ”* ತುಂಬಾ ಒಳ್ಳೆಯದಾಗಿರುತ್ತದೆ.
ಒಂದು *ಶನಿ ಪ್ರದೋಷ* ಮಾಡಿದರೆ ಐದು ವರ್ಷ ಪ್ರತಿದಿನ “ಶಿವನ ದೇವಾಲಯಕ್ಕೆ” ಹೋಗಿ ಪೂಜೆ ಮಾಡಿದ ಫಲ ದೊರೆಯುತ್ತದೆ.
ಶನಿವಾರ ಪ್ರದೋಷ ಪೂಜೆ ಮಾಡಿದರೆ, ಪದವಿಯಲ್ಲಿ ಉನ್ನತಿ, ಕಳೆದು ಹೋದ ಸಂಪತ್ತು ಮತ್ತೆ ದೊರೆಯುತ್ತದೆ. ಸಾಡೆ ಸಾತಿಯ ಪ್ರಭಾವ ಸಹ ಕಡಿಮೆಯಾಗಬಹುದು/ಹೊರಟು ಹೋಗಬಹುದು. ಈ ದಿನ ಈಶ್ವರ ಮತ್ತು ಶನಿ ಇಬ್ಬರೂ ಈ ಪೂಜೆ ಮಾಡುವವರನ್ನು ಆಶೀರ್ವದಿಸುತ್ತಾರೆ.
*ಮಾಡಬಹುದಾದ ಪೂಜೆಗಳು*
– ಅರ್ಚನೆ, ಶಿವ ಅಷ್ಟೋತ್ತರದ ಸಮೇತ
– ಹಾಲಿನ ಅಭಿಷೇಕ
– ಮಹಾಮೃತ್ಯುಂಜಯ ಮಂತ್ರ ನೂರ ಎಂಟು ಬಾರಿ
– ಶಿವನ ದೇವಾಲಯದಲ್ಲಿ ದೀಪ ಹಚ್ಚುವಿಕೆ
ಪ್ರದೋಷ ಅಭಿಷೇಕದ ವಸ್ತುಗಳು ಮತ್ತು ಅದರ ಫಲಗಳು
ಪಂಚಗವ್ಯ – ಎಲ್ಲಾ ಪಾಪಗಳಿಂದ ಮುಕ್ತಿ
ಪಂಚಾಮೃತ – ಸಂಪತ್ತನ್ನು ನೀಡುತ್ತದೆ
ತುಪ್ಪ – ಮೋಕ್ಷವನ್ನು ನೀಡುತ್ತದೆ
ಹಾಲು – ದೀರ್ಘಾಯುಷ್ಯ
ಮೊಸರು – ಮಕ್ಕಳ ಭಾಗ್ಯ
ಜೇನು ತುಪ್ಪ – ಉತ್ತಮ ಧ್ವನಿ
ಅಕ್ಕಿ ಪುಡಿ – ಸಾಲಗಳಿಂದ ಮುಕ್ತಿ
ಕಬ್ಬಿನ ರಸ – ಆರೋಗ್ಯ ಭಾಗ್ಯ, ಶತ್ರು ನಾಶ
ನಿಂಬೆ ರಸ – ಸಾವಿನ ಭಯದಿಂದ ದೂರ ಮಾಡುತ್ತದೆ
ಎಳೆನೀರು – ಸಂತೋಷ ಮತ್ತು ಜೀವನ ಆನಂದ
ಬೇಯಿಸಿದ ಅನ್ನ – ಜೀವನವನ್ನು ಅದ್ಭುತ ಗೊಳಿಸುತ್ತದೆ.
ಗಂಧ (ಗಂಧದ ಪೇಸ್ಟ್) – ಲಕ್ಷ್ಮಿ ಕಟಾಕ್ಷ
ಸಕ್ಕರೆ – ಶತ್ರು ನಾಶ
ಪ್ರದೋಷ ಕಾಲದಲ್ಲಿ ಮಾಡುವ ಪೂಜೆ, ಪುರಸ್ಕಾರ, ಆರಾದನೆ, ಉಪವಾಸ, ಜಪ-ತಪಗಳು ವಿಶೇಷ ಪುಣ್ಯಕರವೆಂದು ಶ್ರುತಿ-ಸ್ಮೃತಿಗಳು ಹೇಳುತ್ತವೆ.
ಅಂದಿನ ದಿನ ಪ್ರದೋಷ ಕಾಲದಲ್ಲಿ (ಸೂರ್ಯ ಮುಳುಗುವ ಹೊತ್ತಿನಲ್ಲಿ) ಪೂಜೆ ಮಾಡಿದರೆ ಎಲ್ಲಾ ದೇವರ ಅನುಗ್ರಹವನ್ನು ಗಳಿಸಬಹುದು.
ಸೋಮವಾರ ಬರುವ ಪ್ರದೋಷ ಸೋಮ ಪ್ರದೋಷ ಎಂದು ಹೆಸರಾಗಿದೆ.
ಶನಿವಾರ ಬರುವ ಪ್ರದೋಷವನ್ನು ಶನಿ ಪ್ರದೋಷ ಎಂದು ಕರೆಯುತ್ತಾರೆ.
ಈ ಮೊದಲೇ ತಿಳಿಸಿದಂತೆ, ಈಶ್ವರ ಹಾಲಾಹಲ ಕುಡಿದದ್ದು, ಪ್ರದೋಷ ಕಾಲದಲ್ಲಿ ತುಂಬಾ ಒಳ್ಳೆಯದಾಗಿರುತ್ತದೆ.
ಒಂದು ಶನಿ ಪ್ರದೋಷ ಮಾಡಿದರೆ ಐದು ವರ್ಷ ಪ್ರತಿದಿನ “ಶಿವನ ದೇವಾಲಯಕ್ಕೆ” ಹೋಗಿ ಪೂಜೆ ಮಾಡಿದ ಫಲ ದೊರೆಯುತ್ತದೆ.
ಪ್ರದೋಷ ಪೂಜೆ ಮಾಡಿದರೆ, ಪದವಿಯಲ್ಲಿ ಉನ್ನತಿ, ಕಳೆದು ಹೋದ ಸಂಪತ್ತು ಮತ್ತೆ ದೊರೆಯುತ್ತದೆ.
ಸಾಡೆ ಸಾತಿಯ ಪ್ರಭಾವ ಸಹ ಕಡಿಮೆಯಾಗಬಹುದು/ಹೊರಟು ಹೋಗಬಹುದು. ಈ ದಿನ ಈಶ್ವರ ಮತ್ತು ಶನಿ ಇಬ್ಬರೂ ಈ ಪೂಜೆ ಮಾಡುವವರನ್ನು ಆಶೀರ್ವದಿಸುತ್ತಾರೆ.
ಮಾಡಬಹುದಾದ ಪೂಜೆಗಳು
– ಅರ್ಚನೆ, ಶಿವ ಅಷ್ಟೋತ್ತರದ ಸಮೇತ
– ಹಾಲಿನ ಅಭಿಷೇಕ
– ಮಹಾಮೃತ್ಯುಂಜಯ ಮಂತ್ರ ನೂರ ಎಂಟು ಬಾರಿ
– ಶಿವನ ದೇವಾಲಯದಲ್ಲಿ ದೀಪ ಹಚ್ಚುವಿಕೆ
ಪ್ರದೋಷ ಅಭಿಷೇಕದ ವಸ್ತುಗಳು ಮತ್ತು ಅದರ ಫಲಗಳು
ಪಂಚಗವ್ಯ – ಎಲ್ಲಾ ಪಾಪಗಳಿಂದ ಮುಕ್ತಿ
ಪಂಚಾಮೃತ – ಸಂಪತ್ತನ್ನು ನೀಡುತ್ತದೆ
ತುಪ್ಪ – ಮೋಕ್ಷವನ್ನು ನೀಡುತ್ತದೆ
ಹಾಲು – ದೀರ್ಘಾಯುಷ್ಯ
ಮೊಸರು – ಮಕ್ಕಳ ಭಾಗ್ಯ
ಜೇನು ತುಪ್ಪ – ಉತ್ತಮ ಧ್ವನಿ
ಅಕ್ಕಿ ಪುಡಿ – ಸಾಲಗಳಿಂದ ಮುಕ್ತಿ
ಕಬ್ಬಿನ ರಸ – ಆರೋಗ್ಯ ಭಾಗ್ಯ, ಶತ್ರು ನಾಶ
ನಿಂಬೆ ರಸ – ಸಾವಿನ ಭಯದಿಂದ ದೂರ ಮಾಡುತ್ತದೆ
ಎಳೆನೀರು – ಸಂತೋಷ ಮತ್ತು ಜೀವನ ಆನಂದ
ಬೇಯಿಸಿದ ಅನ್ನ – ಜೀವನವನ್ನು ಅದ್ಭುತ ಗೊಳಿಸುತ್ತದೆ.
ಗಂಧ (ಗಂಧದ ಪೇಸ್ಟ್) – ಲಕ್ಷ್ಮಿ ಕಟಾಕ್ಷ
ಸಕ್ಕರೆ – ಶತ್ರು ನಾಶ
ಪ್ರದೋಷ ಪೂಜೆ ಮತ್ತು ಅದರ ಲಾಭಗಳು
ಪ್ರದೋಷ ಎಂದರೆ _ ಪಾಪಗಳಿಂದ ಮುಕ್ತಿ ಎಂದರ್ಥ.
ನೆನ್ನೆ ಗಂಗೆಯು ಧರೆಗಿಳಿದ ದಿನ ನಾಳೆ ಗಂಗೆ ಸ್ನಾನ ಬಹಳ ಪವಿತ್ರ.
"ಪುಷ್ಕರ ಎಂದರೇನು?"
ಗಂಗೆಯೇ ಮೊದಲಾದ ೧೨ ನದಿಗಳಲ್ಲಿ ಸಾರ್ಧತ್ರಿಕೋಟಿ
ತೀರ್ಥ ಸಹಿತ ಪುಷ್ಕರನು ನಿವಾಸಮಾಡುವ ಕಾಲಕ್ಕೆ
"ಪುಷ್ಕರ" ಎಂದು ಹೆಸರು.
ಮೇಷ ಮೊದಲಾದ ೧೨ ರಾಶಿಗಳಲ್ಲಿ ಬೃಹಸ್ಪತಿ (ಗುರು) ಸಂಚರಿಸುವ
ಸಮಯದಲ್ಲಿ ಪುಷ್ಕರನು ಆಯಾ ನದಿಗಳಲ್ಲಿ ವಾಸಿಸುವನು.
ಬೃಹಸ್ಪತಿ ಯು ಒಂದೊಂದು ವರ್ಷ ಒಂದೊಂದು ರಾಶಿಯಲ್ಲಿ ಸಂಚರಿಸುವನು.
ಆಗ ಆಯಾ ನದಿಗಳಲ್ಲಿ ಮೂರುವರೆಕೋಟಿ ತೀರ್ಥಗಳಿಂದ ಸಹಿತನಾದ
ಪುಷ್ಕರನು (ತೀರ್ಥರಾಜ) ಹಾಗೂ ಸಕಲಮುನಿಗಳು ವಾಸಿಸುವರು.
ಆದಕಾರಣ ವ್ರವೇಶ ದಿನದಿಂದ ೧೨ ದಿನಗಳು-ಆದಿಪುಷ್ಕರ ಎಂದೂ,
ಕೊನೆಯ ೧೨ ದಿನಗಳು-ಅಂತ್ಯ ಪುಷ್ಕರ ಎಂದು ಪ್ರಸಿದ್ಧಿಯಾಗಿದೆ.
ಈ ದಿನಗಳಲ್ಲಿ ನದೀ ತೀರಗಳಲ್ಲಿಮಾಡುವ ಕ್ಷೇತ್ರೋವಾಸ-ತೀರ್ಥ
ಶ್ರಾದ್ಧ/-ಸ್ನಾನ- ದಾನ- ವ್ರತ-ಜಪ-ತಪ-ಪೂಜಾದಿಗಳೆಲ್ಲವೂ
ಅನಂತ ಫಲಪ್ರದವಾಗಿದೆ.
೬೦ ಸಾವಿರ ವರ್ಷ ಗಂಗೆಯಲ್ಲಿ ಮೀಂದ
ಫಲ ಪುಷ್ಕರ ಸಮಯದಲ್ಲಿ ಒಂದು ದಿನ ಸ್ನಾನ ಮಾಡಿದರೆ ಬರುವುದು.
೧) ಮೇಷ ರಾಶಿಯಲ್ಲಿ ಪ್ರವೇಶ ಮಾಡಿದಾಗ ಗಂಗಾ ನದಿಗೆ ಪುಷ್ಕರ
೨) ವೃಷಭ ರಾಶಿಯಲ್ಲಿ ಪ್ರವೇಶ ಮಾಡಿದಾಗ ನರ್ಮದಾ ನದಿಗೆ ಪುಷ್ಕರ
೩) ಮಿಥಿನ ರಾಶಿಯಲ್ಲಿ ಪ್ರವೇಶ ಮಾಡಿದಾಗ ಸರಸ್ವತಿ ನದಿಗೆ ಪುಷ್ಕರ
೪) ಕರ್ಕಾಟಕ ರಾಶಿಯಲ್ಲಿ ಪ್ರವೇಶ ಮಾಡಿದಾಗ ಯಮುನಾ ನದಿಗೆ ಪುಷ್ಕರ
೫) ಸಿಂಹ ರಾಶಿಯಲ್ಲಿ ಪ್ರವೇಶ ಮಾಡಿದಾಗ ಗೋದಾವರೀ ನದಿಗೆ ಪುಷ್ಕರ
೬) ಕನ್ಯಾ ರಾಶಿಯಲ್ಲಿ ಪ್ರವೇಶ ಮಾಡಿದಾಗ ಕೃಷ್ಣಾ ನದಿಗೆ ಪುಷ್ಕರ
೭) ತುಲಾ ರಾಶಿಯಲ್ಲಿ ಪ್ರವೇಶ ಮಾಡಿದಾಗ ಕಾವೇರಿ ನದಿಗೆ ಪುಷ್ಕರ
೮) ವೃಶ್ಚಿಕ ರಾಶಿಯಲ್ಲಿ ಪ್ರವೇಶ ಮಾಡಿದಾಗ ಭೀಮಾರಥಿ ನದಿಗೆ ಪುಷ್ಕರ
೯) ದನುರ್ ರಾಶಿಯಲ್ಲಿ ಪ್ರವೇಶ ಮಾಡಿದಾಗ ಪುಷ್ಕರ ನದಿಗೆ ಪುಷ್ಕರ
೧೦) ಮಕರ ರಾಶಿಯಲ್ಲಿ ಪ್ರವೇಶ ಮಾಡಿದಾಗ ತುಂಗಭದ್ರಾ ನದಿಗೆ ಪುಷ್ಕರ
೧೧) ಕುಂಭ ರಾಶಿಯಲ್ಲಿ ಪ್ರವೇಶ ಮಾಡಿದಾಗ ಸಿಂಧು ನದಿಗೆ ಪುಷ್ಕರ
೧೨) ಮೀನ ರಾಶಿಯಲ್ಲಿ ಪ್ರವೇಶ ಮಾಡಿದಾಗ ಪ್ರಣೀತಾ ನದಿಗೆ ಪುಷ್ಕರ
ಮೇಷೇ ಗಂಗಾ ವೃಷೇ ರೇವಾ ಗತೇ ಯುಗ್ಮೇ ಸ್ರಸ್ವತಿ
ಯಮುನಾ ಕರ್ಕಟೇ ಚೈವ ಗೊದಾವರ್ಯಪಿ ಸಿಂಹಗೇ!!
ಕನ್ಯಾಯಾಂ ಕೃಷ್ಣವೇಣೀ ಚ ಕಾವೇರಿ ಚ ತುಲಾಗತೇ
ವೃಸ್ಚಿಕೇ ಸ್ಯಾದ್ಭೀಮರಥೀ ಸಿಂಧುಃ ಪ್ರಣಿತಾ ತಟಿನೀ ಝುಷೇ
ಮೇಷೇಗುರೌ ಪ್ರವಿಷ್ಟೇ ಗಂಗಾ ಪುಷ್ಕರಯುತಾ ಭವತೀತಿವತ್
ಸರ್ವತ್ರಾನ್ವಯಃ!!
ಜನ್ಮ ಪ್ರಭೃತಿ ಯತ್ಪಾಪಂ ಸ್ತ್ರೀಯಾ ವಾ ಪುರುಷೇಣ ವಾ
ಪುಷ್ಕರೇ ಸ್ನಾತಮಾತ್ರಸ್ಯ ಸರ್ವಮೇವ ಪ್ರಣಶ್ಯತಿ!!
ಸ್ತ್ರೀಯರಾಗಲಿ ಪುರುಷರಾಗಲೀ ಹುಟ್ಟಿದಾರಾಭ್ಯ ಮಾಡಿದ ಪಾಪಗಳು
ಪುಷ್ಕರ ಸಮಯದಲ್ಲಿ ಸ್ನಾನ ಮಾಡುವುದರಿಂದ ಅನಂತ ಪುಣ್ಯಫಲವನ್ನು ಪ್ರಾಪ್ತವಾಗುತ್ತದೆ
ಸಮುದ್ರ ಸೇರದ ನದಿಗಳಲ್ಲಿ ಮಿಂದರೆ ಮೂರು ದಿನ ಉಪವಾಸ ಮಾಡಿದ ಫಲ,
ಸಮುದ್ರ ಸೇರುವ ನದಿಗಳಲ್ಲಿ ೧೫ ದಿನದ ಫಲ,
ತಿಂಗಳು ಉಪವಾಸ ಗೈದ ಫಲ ಸಮುದ್ರ ಸ್ನಾನದಿಂದ, ೬ ತಿಂಗಳ ಫಲ ಗೋದಾವರಿಯ ಮಜ್ಜನದಿಂದ,
ಗಂಗಾ ಸ್ನಾನದಿಂದ ಒಂದು ವರ್ಷ ಉಪವಾಸದ ಫಲ, ಅದುವೇ ಭಕ್ತಿಯಿಂದ ಒಂದು ಬಾರಿ ವಿಷ್ಣು ಪಾದೋದಕ ಸೇವಿಪ ಮನುಜ ಪೊಂದುವ ೧೨ ವರ್ಷ ಉಪವಾಸದ ಫಲ, ಇದೇ ತೀರ್ಥದ ಮಹಿಮೆ
ಪ್ರದೋಷ ಪೂಜೆ ಸಲ್ಲಿಸಿ ಶಿವನ ಕೃಪೆಗೆ ಪಾತ್ರರಾಗಿ
ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು
🌺🌺🌺🌺🌺🌺🌺🌺🌺🌺🌺🌺
*ಪ್ರದೋಷವು ಪ್ರತಿಯೊಬ್ಬರಿಗೂ ಒಳ್ಳೆಯದನ್ನು ನೀಡುವ ಒಂದು ಆಚರಣೆ*.
ಸಂಪೂರ್ಣ ಮಾಹಿತಿ ಇದೆ ಓದಿ ಅಚರಣೆ ಮಾಡಿಎಲ್ಲಾರಿಗು ಶಿವನ ಅನುಗ್ರಹದಿಂದ ಸುದಿನಮಸ್ತು.
🙏
....ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು
No comments:
Post a Comment