Tuesday, 26 May 2020

ಅಣಿಮಾಂಡವ್ಯನ ಅದ್ಭುತ ಕಥೆ

"ಅಣಿಮಾಂಡವ್ಯನ ಅದ್ಭುತ ಕಥೆ" by ಶ್ರೀನಿ

ಅಣಿಮಾಂಡವ್ಯ ಒಬ್ಬ ಮಹಾನ್ ತಪಸ್ವಿಗಳು. ಅವರು ದಟ್ಟವಾದ ಅರಣ್ಯದಲ್ಲಿ ತಂದೆಯೊಂದಿಗೆ ವಾಸವಿದ್ದರು. ತಂದೆ ಮಹಾನ್ ಬ್ರಹ್ಮಾಣರಾಗಿ ಹೋಮ ಹವನ ಮಾಡುತಿದ್ದರು. ಅವರ ಕಾಲಾನಂತರ ಅಣಿಮಾಂಡವ್ಯ ದೇವರ ಧ್ಯಾನದಲ್ಲಿ ತೊಡಗಿ ಸದಾ ಹರಿಯ ಚಿಂತನೆಯಲ್ಲಿರುತಿದ್ದರು. ಇವರ ಆಶ್ರಯದಲ್ಲಿದ್ದವರು ಕೂಡ ಅಣಿಮಾಂಡವ್ಯರ ಶ್ರದ್ಧಾಭಕ್ತಿ ನೋಡಿ ಅವರೂ ಕೂಡ ದೇವರ ಧ್ಯಾನದಲ್ಲಿ ತೊಡಗುತಿದ್ದರು. 

ಹೀಗಿದ್ದಾಗ ಒಮ್ಮೆ ಅವರ ಅರಣ್ಯ ಸೇರಿದ್ದ ಇಂದು ರಾಜ್ಯದ ರಾಜನ ಆಸ್ಥಾನದಲ್ಲಿ ಕಳ್ಳತನವಾಗುತ್ತದೆ. ಕಳ್ಳರು ಅರಮನೆಯಿಂದ ವಜ್ರ,ವೈಡೂರ್ಯ, ಆಭರಣ ಹಾಗೂ ಒಂದಷ್ಟು ನಗ-ನಾಣ್ಯಗಳನ್ನು ಕದ್ದು ಪರಾರಿಯಾಗಿರುತ್ತಾರೆ. ರಾಜನಿಗೆ ತಲೆಬಿಸಿ ಶುರುವಾಗಿ ಎಲ್ಲೆಡೆ ಹುಡುಕಲು ಹೇಳುತ್ತಾನೆ. ಎಲ್ಲಿಯೂ ಸಿಗದಿದ್ದಾಗ ಒಬ್ಬ ರಾಜಭಟ ಬಂದು ಮೂವರು ಕಳ್ಳರು ದಟ್ಟಾರಾಣ್ಯದ ಕಡೆ ಹೋಗಿತಿದ್ದರು ಎನ್ನುತ್ತಾನೆ. ತಕ್ಷಣ ರಾಜ ಅವರನ್ನು ಹಿಡಿದು ತರಲು ಹೇಳುತ್ತಾನೆ. ಒಂದಷ್ಟು ರಾಜಭಟರು ಅರಣ್ಯಕ್ಕೆ ಬಂದು ಕಳ್ಳರನ್ನು ಹಿಮ್ಮೆಟ್ಟಿದಾಗ ಅವರು ಓಡುತ್ತಾ ಬಂದು ಅಣಿಮಾಂಡವ್ಯರ ಆಶ್ರಮದ ಹಿಂದೆ ಅವಿತುಕೊಳ್ಳುತ್ತಾರೆ. ಅವರು ತಂದಿದ್ದ ಆಭರಣಗಳನ್ಬು ಧ್ಯಾನವಸ್ಥೆಯಲ್ಲಿದ್ದ ಅಣಿಮಾಂಡವ್ಯರ ಮುಂದೆ ಇಟ್ಟಿರುತ್ತಾರೆ. ಇದನ್ನು ಕಂಡ ರಾಜಭಟರು ಕಳ್ಳತನ ಮಾಡಿ ಇವನು ನಾಟಕವಾಡುತಿದ್ದಾನೆ. ಎಂದು ಅಣಿಮಾಂಡವ್ಯ ಮತ್ತು ಅಲ್ಲಿದ್ದ ಕಳ್ಳರನ್ನು ಬಂಧಿಸಿ ರಾಜಮ ಬಳಿಗೆ ಕರೆತಂದಾಗ ರಾಜನು ಏನೂ ವಿಚಾರಿಸದೇ ಅಣಿಮಾಂಡವ್ಯರ ಜೊತೆ ಕಳ್ಳರನ್ನೂ ಶೂಲಕ್ಕೇರಿಸಲು ಆಜ್ಞೆ ಮಾಡುತ್ತಾನೆ. ಅದರಂತೆ ರಾಜಭಟರು ಶೂಲಕ್ಕೆ ಏರಿಸುತ್ತಾರೆ. ಒಂದೆರೆಡು ದಿನ ನರಳಿ ಕಳ್ಳರೆಲ್ಲ ಪ್ರಾಣಬಿಟ್ಟರೆ, ಧ್ಯಾನವಸ್ಥೆಯಲ್ಲಿದ್ದ ಅಣಿಮಾಂಡವ್ಯನಿಗೆ 
ಯಾವುದೇ  ನೋವು, ಸಂಕಟವಿರದೇ ಧ್ಯಾನವಸ್ಥೆಯಲ್ಲಿದ್ದರು. ದಿನಗಳು ಕಳೆದಂತೆ ಅವರು ಇನ್ನು ಬಲಾಡ್ಯರಾಗುತಿದ್ದರು. ತಕ್ಷಣ ರಾಜನಿಗೆ ಇವರ್ಯಾರೋ ಮಹಾಪುರುಷರೇ ಇರಬೇಕೆಂದು ಅವರ ಬಳಿಗೆ ಓಡಿಬಂದು ಕ್ಷಮೆಯಾಚಿಸುತ್ತಾನೆ. ತಕ್ಷಣ ಎಚ್ಚರಗೊಂಡ ಅಣಿಮಾಂಡವ್ಯ ಶೂಲದಲ್ಲಿದ್ದನ್ನು ನೋಡಿ, ಗೋಗರೆವ ರಾಜನನ್ನು ನೋಡಿ ನಗುತ್ತಾ ಚಿಂತಿಸಬೇಡ, ನಾನು ನಿನಗೆ ಯಾವುದೇ ಶಾಪ ಕೊಡುವುದಿಲ್ಲ. ಅಷ್ಟಕ್ಕೂ ಇದರಲ್ಲಿ ನಿನ್ನ ತಪ್ಪೇನು ಇಲ್ಲ. ನಿಷ್ಠೆಯಿಂದ ರಾಜ್ಯಭಾರ ಮಾಡು ಎಂದು ಆಶೀರ್ವದಿಸುತ್ತಾರೆ. ತಕ್ಷಣ ರಾಜನು ರಾಜಭಟರಿಗೆ ಶೂಲದಿಂದ ಇಳಿಸುವಂತೆ ಹೇಳುತ್ತಾರೆ. ಅಷ್ಟರಲ್ಲಿ ನಗುವ ಮುಖದಲ್ಲಿದ್ದ ಅವರ ದೇಹದ ಪ್ರಾಣಪಕ್ಷಿ ಹಾರಿ ಹೋಗಿರುತ್ತದೆ.  ತನ್ನ ತಪ್ಪಿನ ಲೆಕ್ಕಾಚಾರ ಮಾಡಿ ರಾಜನು ಸಕಲ ವಿಧಿ-ವಿಧಾನಗಳಿಂದ ಅವರ ಅಂತ್ಯ ಕ್ರಿಯೆಯನ್ನು ಮಾಡುತ್ತಾನೆ.

#ಶ್ರೀನಿ #srini #sriniwriteups

No comments:

Post a Comment