Thursday, 28 May 2020

ಮಾನವನ ಶರೀರ ರಚನೆ

ಮಾನವನ ಶರೀರ ರಚನೆ
ಶ್ರೀ ಗುರುಭ್ಯೋ ನಮಃ

                 ಈ ಪ್ರಕೃತಿಯಲ್ಲಿ ಅತ್ಯಂತ ಶ್ರೇಷ್ಟವಾದ ಜನ್ಮ ಈ ಮಾನವ ಜನ್ಮ , ಪ್ರತಿ ಒಬ್ಬ ಮನುಜ ಕೂಡ ತನ್ನ ಜನ್ಮದ ಕುರಿತು ಖಂಡಿತ ತಿಳಿದುಕೊಳ್ಳಬಹುದು , ಆದರೆ ನಮ್ಮ ಕರ್ಮ ಏನು ಅಂದರೆ ಸಂಪೂರ್ಣ ವಿಚಾರ ಅರಿತ ಜ್ಞಾನಿಗಳು ಕೂಡ ಯಾವುದೇ ವಿಚಾರಗಳನ್ನು ತಿಳಿಯಪಡಿಸುವುದಿಲ್ಲ .  
ಮೊದಲಿಗೆ ಜಗತ್ತನ್ನು ಬೆಳಗುವ ಶ್ರೀ ಸೂರ್ಯ ಪರಮಾತ್ಮನಿಗೆ ನಮಸ್ಕರಿಸುತ್ತಾ 
( ಸಪ್ತಾಶ್ವಮಾರೂಢಮ್ ಪ್ರಚಂಡಮ್ ಕಶ್ಯಪಾತ್ಮಜಂ ಶ್ವೇತಪದ್ಮಧರಂ   ದೇವಂ ತಂ ಸೂರ್ಯಾಂ ಪ್ರಣಮಾಮ್ಯಹಂ)

ಮಾನವ ಎಂದರೆ  
          ಪಂಚ ಭೂತಗಳು (ಪೃಥ್ವಿ, ಅಪಾನ, ತೇಜಸ್ಸು, ವಾಯು, ಆಕಾಶ )
          ಪಂಚಜ್ಞಾನೇಂಇಂದ್ರಿಯಗಳು (ಕಣ್ಣು, ಮೂಗು ,ನಾಲಿಗೆ,ಕಿವಿ,ಚರ್ಮ)
          ಪಂಚತನ್ಮಾತ್ರಗಳು (ನೋಡುವುದು,ವಾಸನೆ,ರುಚಿ ಕೇಳುವುದು,ಸ್ಪರ್ಶ ),
          ಪಂಚ ಕರ್ಮೇಂದ್ರಿಯಗಳು (ಪಾದ, ಕೈಗಳು, ಗುದದ್ವಾರ , ಬಾಯಿ, ಜನನೇಂದ್ರಿಯ)
          ಮಹತ್ತು :: ( ಮನಸ್ಸು, ಬುದ್ಧಿ, ಅಹಂಕಾರ )
          ನಂತರ ಪ್ರಕೃತಿ, --ಆತ್ಮ--ಪರಮಾತ್ಮ  .ಇಷ್ಟು 
ಈ ಎಲ್ಲ ಪಂಚವಿಂಚತಿತತ್ವಗಳು ಕೂಡಿ ಮನುಷ್ಯನಾಗುತ್ತಾನೆ .

ಮಾನವನ ಜನನ ಕ್ರಿಯೆ ಹೇಗೆ ಆಗುತ್ತದೆ ::
ನಾವು ಎಲ್ಲರೂ ಸರ್ವೇ ಸಾಧಾರಣವಾಗಿ ತಿಳಿದಿರುವಂತೆ  ಒಂದು ಮಗು ಜನನ ಆಗಲಿಕ್ಕೆ ನವ(9 ) ಮಾಸಗಳು ಬೇಕೆಂದು , ಆದರೆ ಇದು ಸಂವತ್ಸರ (12 ) ಕಾಲ ಬೇಕಾಗುವುದು ..
$--ಮಗುವು ತಾಯಿಯ ಗರ್ಭದಲ್ಲಿ ನವ ಮಾಸಗಳು ಬೆಳೆದರೆ ಇದಕ್ಕೆ ಮೊದಲು ನಡೆವ ಪ್ರಕ್ರಿಯೆ ತಿಳಿಯೋಣ 
$--ಇದು ಎಲ್ಲಿ ಅಂದರೆ ತಂದೆಯಲ್ಲಿ ವೀರ್ಯ ತಯಾರಾಗಲಿಕ್ಕೆ , 81  ದಿನ ಬೇಕಾಗುವುದು .
$--ಅಂದರೆ ಮೂರು ನಕ್ಷತ್ರ ಮಾಸಗಳು {ಚಂದ್ರನ 3  ಮಾಸಗಳು}
$--ಈ ವೀರ್ಯಕಣಗಳು ಹೇಗೆ ತಯಾರಾಗುತ್ತವೆ ಎಂದು ನಾವು ನೋಡುವುದಾದರೆ , ಸಪ್ತಧಾತುಗಳ ಸಹಾಯದಿಂದ ಎಂದು 
$-- ಒಮ್ಮೆ ಶರೀರಕ್ಕೆ ಆಹಾರ ಸೇರಿದ ನಂತರ ಈ ಸಪ್ತ ಧಾತುಗಳ ಮುಖೇನ ವೀರ್ಯವಾಗಿ ತಯಾರಾಗುತ್ತದೆ , 
$-- ಮೊದಲಿಗೆ ಆಹಾರ (ರಸ -- ರಕ್ತ --ಮಜ್ಜ --ಮಾಂಸ --ಅಸ್ತ --ಮೇಧಾ--ಶುಕ್ರ )
ರಸ ರೂಪದಿಂದ ರಕ್ತವಾಗಿ , ನಂತರ ಮಜ್ಜವಾಗಿ . ಮಾಂಸವಾಗಿ , ಅಸ್ತವಾಗಿ , ಮೇಧಸ್ಸಿಗೆ ಸೇರಿ , ನಂತರದಲ್ಲಿ ಶುಕ್ರ(ವೀರ್ಯ) ಆಗುತ್ತದೆ .
$--ಇವೆಲ್ಲ ಘಟ್ಟದ ನಂತರ   ಶುಭ್ರವಾದ ವೀರ್ಯ ಅತ್ಯಂತ ಪರಮವಾದದ್ದು , ಆದ್ದರಿಂದ ವಿವಾಹದ ತನಕ ಬ್ರಹ್ಮಚರ್ಯ ಪರಿಪಾಲನೆ ಮಾಡಿ ಎಂದು ಹೇಳಲಾಗಿದೆ .

      ::ಮಾನವನ ಜನನದ ಮೇಲೆ ಗ್ರಹಗಳ ಪ್ರಭಾವ ::
$-- ಒಮ್ಮೆ ಸಂಭೋಗ ನಡೆದ ಮೇಲೆ ವೀರ್ಯ ಹೆಣ್ಣಿನ ಯೋನಿಯ ಒಳಗೆ ಪ್ರವೇಶ ಮಾಡಿದ ನಂತರ ಗ್ರಹಗಳ ಪರಿಣಾಮವಾಗಿ ಮಗುವಿನ ವೃದ್ಧಿ ಹಾಗು ಜನನ ಹಾಗುತ್ತದೆ.
$--ವೀರ್ಯಕಣ ಯೋನಿಯ ಒಳಗೆ ಹೋಗಿ ಸ್ಥಿರವಾಗುತ್ತದೆ , ಈ ಪ್ರಕ್ರಿಯೆಗೆ (9 ) ದಿನ ಸಮಯ ಬೇಕಾಗುತ್ತದೆ :: ಇದರ ಅಧಿಪತಿ (ಭೂಮಿ)
$--ನಂತರದ (9 ) ದಿನ ಈ ಕ್ರಿಯೆಗೆ ರಕ್ತಕಾರಕನಾದ (ಚಂದ್ರ) ಅಧಿಪತಿ 
$--ಹೆಣ್ಣಿಗೆ ತಿಂಗಳಿಗೆ ಒಮ್ಮೆ ಆಗುವ ಆರ್ತವ ಕ್ರಿಯೆಯಲ್ಲಿ ವ್ಯರ್ಥವಾಗಿ ಹೊರಹಾಕಲ್ಪಡುವ ರಕ್ತವು ಮಜ್ಜವಾಗಿ ಪರಿವರ್ತನೆಗೊಂಡು , ಹೆಣ್ಣಿನ ಗರ್ಭದ ಒಳಗೆ ಪಿಂಡಕ್ಕೆ ಸುತ್ತಿಕೊಂಡು ರಕ್ತದ ಮುದ್ದೆಯಾಗಿ ಮಾರ್ಪಾಡಾಗುತ್ತದೆ.
$--ಬುಧನ ಕ್ರಿಯೆಯಿಂದ ರಕ್ತವು ,ಮಜ್ಜದ ಮುದ್ದೆಯನ್ನು ಪಿಂಡವಾಗಿ ಮಾರ್ಪಾಡಾಗುತ್ತದೆ , ಆಗ ಚರ್ಮ ಆ ಪಿಂಡಕ್ಕೆ ಪದರಗಳಾಗಿ ಏರ್ಪಾಡಾಗುತ್ತದೆ .:ಈ ಕ್ರಿಯೆ ಕೂಡ (9 ) ದಿನ .
$--ನಂತರ ಶುಕ್ರ (ನರಕಾರಕಃ), ಪಿಂಡದ ಒಳಗೆ ನರಗಳ ರಚನೆ ಮಾಡುತ್ತಾನೆ. ಇದು (9 )ದಿನದ ಕ್ರಿಯೆ.
$- ಈ ಹೊತ್ತಿಗೆ 36 ನೇ ದಿನ ಸೂರ್ಯನ  ಪ್ರವೇಶಕಾಲ  , ಈ ಹೊತ್ತಿಗೆ ಮಗು ತಂದೆಯ ಅಂಗುಷ್ಟಮಾತ್ರ ಪರಿಮಾಣದಲ್ಲಿ ಇರುತ್ತದೆ .ಅಸ್ತಿಕಾರಕನಾದ ಸೂರ್ಯ ಭಗವಾನರು ಅಸ್ತಿ ರಚನೆ ಮಾಡುತ್ತಾರೆ , ಈ ಕ್ರಿಯೆ ಕೂಡ (9 ) ದಿನ 
$--ಕುಜನ ಅಧಿಪತ್ಯ : ಕುಜನು ಮೂಲತಃ ಮಸ್ತಿಕಾರಕನಾಗಿದ್ದು, ಅಲ್ಲಿಗೆ ಪಿಂಡಕ್ಕೆ ಒಂದು ರೂಪ ಬರಲು ಪ್ರಾರಂಭ ಆಗುತ್ತದೆ , ಹಾಗು ಪಡೆಯುತ್ತದೆ. ಇದರ ಸಮಯ ಕೂಡ (9 ) ದಿನ ಮಾತ್ರ 
$--ನಂತರ ಗುರು ಅಧಿಪತ್ಯ ::ಗುರುವು ಜೀವ ಪ್ರಸಾರಕನಾಗಿದ್ದು , ಮಾತೃಗರ್ಭದಲ್ಲಿ ಜೀವ ಪ್ರಸರಿಸಿ , ಪ್ರಾಣ ನೀಡದೆ ತನ್ನ ಕ್ರಿಯೆ ಮುಗಿಸುತ್ತಾರೆ , ಈ ಕಾಲದಿಂದ ತಾಯಿಯ ಒಕ್ಕಳಿನಿಂದ ಮಗು ಎಲ್ಲ ಪೋಷಕಾಂಶಗಳು ಪಡೆದುಕೊಳ್ಳುತ್ತವೆ .ಇದು ಸಹ (9 ) ದಿನದ ಕ್ರಿಯೆ.
$--ಈಗ ಶನಿ ಮಹಾತ್ಮನ ಪ್ರವೇಶವಾಗುತ್ತದೆ . ಮಹಾತ್ಮನು ಲಿಂಗಕಾರಕನಾಗಿದ್ದು ,ಅವರವರ  ಪೂರ್ವ ಜನ್ಮದ ಕರ್ಮ ಫಲದ ಆಧಾರದ ಮೇಲೆ ಲಿಂಗಗಳ ಜನನ ನೀಡುತ್ತಾರೆ.
$-- 72 ದಿನ ಕಳೆದ ಮೇಲೆ {18 ರಿಂದ 90 } ದಿನಗಳ ಅವಧಿಯಲ್ಲಿ ಪ್ರಾಣ ಇಲ್ಲದ ಶಿಶು ಅವತರಿಸಲ್ಪಡುತ್ತದೆ 
$-- 5 ನೇ ತಿಂಗಳು ಕಳೆದ ಮೇಲೆ ಶಿಶುವಿನಲ್ಲಿ ಚಲನವಲನ ಶುರುವಾಗುತ್ತದೆ , ಏಕೆಂದರೆ ಕಾರಣ ಬೃಹಸ್ಪತಿ ಆಗಿರುತ್ತಾರೆ ಇವರು ಜೀವ ತುಂಬುತ್ತಾರೆ .
$--ನಂತರದಲ್ಲಿ ಆ ಮಗುವಿಗೆ ಶನಿ ಮಹಾತ್ಮ ಪೂರ್ವ ಜನ್ಮದ ಎಲ್ಲ ಕರ್ಮಗಳನ್ನು ಜ್ಞಾಪಿಸಿ ,ಬುದ್ದಿ  ಶಕ್ತಿ ನೀಡುತ್ತಾರೆ .
$-- ಇಷ್ಟು ಹೊತ್ತಿಗೆ ಮಗುವಿಗೆ 7  ಮಾಸವಾಗಿರುತ್ತದೆ , ಕೆಲವರ ಪೂರ್ವ ಜನ್ಮದ ಕರ್ಮಗಳ ಹಾಗು  ಪಾಪಗಳ ಕೇಳಲಾರದೆ  ಹೊರಬಂದುಬಿಡುತ್ತವೆ.
$-- ಈ ತರ ಹೊರಬಂದ ಶಿಶುಗಳು ರೋಗಗ್ರಸ್ತರಾಗಿರುತ್ತವೆ  ಏಕೆಂದರೆ ಅದು ರಾಹುವಿನ ಕಾಲಘಟ್ಟವಾಗಿರುತ್ತದೆ .
$--ಇನ್ನು ಕೊನೆಯಲ್ಲಿ ಕೇತು (ಜ್ಞಾನ ಕಾರಕ) , 84  ಲಕ್ಷ ಯೋನಿಗಳಲ್ಲಿ ಜನಿಸಿದ ಬಳಿಕ , ಈ ಮಾನವ ಜನ್ಮ ಪಡೆಯುತ್ತಿದ್ದು ಜನ್ಮ ಸಾರ್ಥಕತೆ ಪಡಿಸಿಕೊ ಎಂದು ಈ ಜನ್ಮದ ವ್ಯಕ್ತಿತ್ವ ನೀಡಿ  ಜ್ಞಾನ ಪ್ರಸಸಿರುತ್ತಾನೆ .

$--ಕೊನೆಗೆ ಶಿಶುವು ಜನಿಸಿದ ಕ್ಷಣವೇ (ನಾಗ,ಕೃಕರ , ಹಾಗು ಧನಂಜಯ ) ಎಂಬ ವಾಯುವಿನ ಸಹಾಯದಿಂದ ಪೂರ್ವ ಜನ್ಮದ ಜ್ಞಾಪಗಳು ತೆಗೆದುಹಾಕಲ್ಪಡುತ್ತವೆ , ಇಲ್ಲಿಗೆ ಗ್ರಹಗಳು ತಮ್ಮ ಕ್ರಿಯೆ ಸಂಪೂರ್ಣವಾಗಿ  ಮುಗಿಸಿರುತ್ತವೆ 

                                                                             ಸಂಗ್ರಹ :: ಸಿರೀಶ್ ಶರ್ಮ

No comments:

Post a Comment