ನಾಳೆ ಅಂದರೆ ಮಂಗಳವಾರ ಡಿಸೆಂಬರ್ ಇಪ್ಪತ್ತನಾಲ್ಕು ನೆ ತಾರೀಖಿನಂದು ಮಾಸ ಶಿವರಾತ್ರಿ.
ಈ ಮಾಸ ಶಿವರಾತ್ರಿ ಎಂದರೆ ಏನು ..,?
ಇದರ ಹಿಂದಿರುವ ಕಥೆಯ ಬಗ್ಗೆ ನಿಮಗೆ ಒಂದಿಷ್ಟು ಮಾಹಿತಿ.
ಓದಿರಿ ಶ್ರವಣ ದರ್ಶನ ಕೂಡ ಒಂದು ಸಮಯದಲ್ಲಿ
ನಿಮ್ಮ ಕಷ್ಟ ಪರಿಹಾರಕ್ಕೆ ಸುಲಭವಾದ ಮಾರ್ಗ.
ನಾಳೆ ಮಾಸ ಎಲ್ಲಾರಿಗು ಶಿವನ ಕೃಪಾಕಟಾಕ್ಷ ಸಿಗಲಿ .
🌿🌿🌿🌿🌿🌿🌿🌿🌿🌿🌿🌿🌿🌿🌿🌿🌿🌿🌿🌿🌿🌿🌿🌿
ಮಾಸಶಿವರಾತ್ರಿಯು ಅತ್ಯಂತ ಪವಿತ್ರದಿನ ಎಂದು ಅನೇಕ ಪುರಾಣಗಳು ಹೇಳುತ್ತವೆ. ವಿಶೇಷವಾಗಿ ಸ್ಕಾಂದ ಪುರಾಣದಲ್ಲಿ ಈ ವ್ರತದ ವಿವರಣೆ, ಪ್ರಾಮುಖ್ಯತೆಗಳನ್ನು ನೀಡಲಾಗಿದೆ.
ಆಯುರಾರೋಗ್ಯ, ಐಶ್ವರ್ಯಾಭಿವೃಧ್ಧಿ, ವಿಘ್ನನಿವಾರಣೆ, ದುರಿತಗಳ ನಾಶ, ದೈರ್ಯ, ಸ್ಥರ್ಯ ಮುಂತಾದ ಅನೇಕ ಫಲಗಳನ್ನು ಅನುಭವಿಸಬಹುದು.
ಮಾಸ ಶಿವರಾತ್ರಿ ವ್ರತದ ಹಿಂದಿನ ಕಥೆ ಇಂತಿದೆ:
ಹಿಂದೊಮ್ಮೆ, ಬ್ರಹ್ಮ-ವಿಷ್ಣು ಇವರಲ್ಲಿಯಾರು ಹೆಚ್ಚು ಪ್ರತಿಷ್ಟಿತರೆಂಬ ಜಿಜ್ಞಾಸೆ ಪ್ರಾರಂಭಗೊಂಡಿತು.
ಇವರೀರ್ವರಲ್ಲಿ ಯಾರು ಮೇಲೆಂಬುದನ್ನು ತೀರ್ಮಾನಿಸುವ ಬಗೇ ಹೇಗೆ ಎಂಬ ಚಿಂತೆಯೂ ಉಂಟಾಯಿತು.
ಆ ಸಂದರ್ಭಕ್ಕೆ ಸರಿಯಾಗಿ ಕೊನೆ-ಮೊದಲಿಲ್ಲದ ಬೆಂಕಿಯ ಕೋಲೊಂದು ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಯಿತು.
ಅದನ್ನು ನೋಡಿದ ಎರಡೂ ಬಣಗಳ ಜಿಜ್ಞಾಸುಗಳು “ಯಾರು ಈ ಅಗ್ನಿಯ ಕೋಲಿನ ತುದಿಯನ್ನು ಕಾಣುವರೋ ಅವರೇ ಹೆಚ್ಚು” ಎಂಬ ತಿರ್ಮಾನಕ್ಕೆ ಬಂದರು.
ಅನೇಕ ಸಹಸ್ರವರ್ಷಗಳ ದೀರ್ಘ ಕಾಲ ಬ್ರಹ್ಮನು ಹಂಸರೂಪದಿಂದ ಮೇಲೆ ಹಾರಿ ಮೇಲ್ತುದಿಯನ್ನೂ, ವಿಷ್ಣುವು ,ಮುಳ್ಳುಹಂದಿರೂಪ ತಳೆದು ಭೂಮಿಯನ್ನು ಕೊರೆದು ಕೆಳಾಂತ್ಯವನ್ನು ಕಂಡುಹಿಡಿಯಲು ಪ್ರಯತ್ನಿಸಿದರೂ ಸಹ, ಯಾರೊಬ್ಬರಿಗೂ ಬೆಂಕಿಯ ಮೂಲಾಂತ್ಯಗಳು ಗೋಚರವಾಗಲೇ ಇಲ್ಲ.
ಆಗ ಪರಶಿವನು ಪ್ರತ್ಯಕ್ಷನಾಗಿ ತಾನೆ ಬೆಂಕಿಯ ರೂಪದಲ್ಲಿ ಆವಿರ್ಭಸಿರುವುದಾಗಿ ಹೇಳುತ್ತಾನೆ. ಏತನ್ಮಧ್ಯೆ, ಪರಬ್ರಹ್ಮನು ತಾನು ಮೇಲ್ತುದಿಯನ್ನು ಕಂಡುದಾಗಿ ಸುಳ್ಳಾಡುತ್ತಾನೆ.
ಪರಶಿವನು ಪರಬ್ರಹ್ಮನಿಗೆ “ಇನ್ನುಮುಂದೆ ನಿನ್ನ ಮೂರ್ತಿಯನ್ನು ಪ್ರತಿಷ್ಠಾಪಿಸುವುದಾಗಲಿ, ನಿನಗಾಗಿ ಪ್ರತ್ಯೇಕವಾದ ದೇವಾಲಯವಾಗಲಿ, ನಿನಗೆ ಬೇರಾವ ರೀತಿಯಲ್ಲೂ ಭೂಲೋಕದಲ್ಲಿ ಅರ್ಚನೆ, ಪ್ರಾರ್ಥನೆಗಳಿರುವುದಿಲ್ಲ, ಇದು ನೀನು ಅಸತ್ಯವನ್ನಾಡಿದುದಕ್ಕೆ ಶಿಕ್ಷೆಯಾಗಿದೆ,” ಎಂದು ಶಾಪವಿತ್ತನು.
ಇದೇ ಸಂದರ್ಭದಲ್ಲಿ, ಪರಶಿವನು ಲಿಂಗರೂಪವನ್ನು ಧರಿಸುತ್ತಾನೆ. ಆದ್ದರಿಂದ, ಮತ್ತು ಪರಶಿವನು ಅದೇ ದಿನದಂದು ಲಿಂಗರೂಪಧಾರಣೆಯನ್ನು ಮಾಡಿದ್ದರಿಂದ ಈ ದಿನವನ್ನುಮಾಸ ಶಿವರಾತ್ರಿಯೆಂಬುದಾಗಿ ಶಿವಾರಾಧನೆಯನ್ನು ಮಾಡುತ್ತಾರೆ.
ಚತುರ್ದಶೀ ತಿಥಿಯ ರಹಸ್ಯ
ಶಿವನನ್ನು ಪೂಜಿಸಲು ಕೃಷ್ಣ ಪಕ್ಷದ ಚತುರ್ದಶೀ ತಿಥಿಯು ಪ್ರಶಸ್ತವಾದದ್ದು.
ಪ್ರತೀ ಮಾಸದಲ್ಲೂ ಈ ತಿಥಿಯಂದು
ಶಿವನನ್ನು ಪೂಜಿಸುವುದು ಶ್ರೇಯಸ್ಕರ.ಆಗ ಅದು
" ಮಾಸ ಶಿವರಾತ್ರಿ" ಎನಿಸುತ್ತದೆ.
ಪರಶಿವನ ಪೂಜೆಗೆ ಚತುರ್ದಶೀ ತಿಥಿಯು ಅತ್ಯಂತ ಶ್ರೇಷ್ಠವಾದದ್ದು ಎಂದು ಪ್ರಸಿದ್ಧಿ.
ಇದರ ರಹಸ್ಯಾರ್ಥ:-ಚತುರ್ದಶೀ ಎಂದರೆ ಹದಿನಾಲ್ಕು ಎಂದರ್ಥ.
ಹದಿನಾಲ್ಕು ಇಂದ್ರಿಯ ಗಳನ್ನೂ ಜಯಿಸಿದ ಈಶ್ವರನನ್ನು ಚತುರ್ದಶಿ ಯಂದು ಪೂಜಿಸ ಬೇಕಲ್ಲವೇ?
ಹಾಗೂ ಹದಿನಾಲ್ಕು ಲೋಕಗಳಿಗೂ
ಪ್ರಭುವಾಗಿರುವ ಪರಮೇಶ್ವರನನ್ನು
ಚತುರ್ದಶೀ ದಿನದಂದುಪೂಜಿಸುವುದು ಯುಕ್ತವೇ ಆಗಿದೆ.
ಶಿವನು ಚತುರ್ದಶೇಂದ್ರಿಯ ವಿಜಯೀ ; ಹೇಗೆಂದರೆ
#ನೇತ್ರೇಂದ್ರಯ #:- ಬಾಹ್ಯ ವಿಷಯ ಗಳಿಂದ ತನ್ನ ಕಣ್ಣುಗಳನ್ನು ಒಳಗಡೆ ಸರಿಸಿಕೊಂಡು ಆತ್ಮನಲ್ಲೇ ನೆಲೆಗೊಳಿಸಿದ್ದ ಧೀರ ದೇವತೆಯೇ ಶಿವ.
#ಶ್ರೋತ್ರೇಂದ್ರಿಯ#:- ಪ್ರಾಕೃತ ಶಬ್ದ ಗಳನ್ನು ಕೇಳದೇ ಸದಾ ಓಂಕಾರವನ್ನೇ ಶ್ರವಣ ಮಾಡುತ್ತಿದ್ದ ಅಂತರ್ಮುಖಿಯೇ ಶಿವ.
#ಘ್ರಾಣೇದ್ರಿಯ#:- ಅನಾತ್ಮ ವಸ್ತುಗಳ ಗಂಧದಿಂದ ದೂರವಿದ್ದವನು.
# ಜಿಹ್ವೇಂದ್ರಿಯ#:- ರುಚಿಯನ್ನು ಗೆದ್ದ ಶ್ರೀಮಂತನೇ ಶಿವ.
#ಚರ್ಮೇಂದ್ರಿಯ#:- ಗಜಚರ್ಮಧಾರಿಯಾಗಿ
ಸ್ಪರ್ಶ ಸುಖದಿಂದ ದೂರವಿದ್ದ ತಪೋ ಮೂರ್ತಿಯೇ ಪರಮ ಶಿವ.
#ವಾಗಿಂದ್ರಿಯ#:- ಮೌನವಾಗಿ ನಾಲಿಗೆಯನ್ನು ಗೆದ್ದವನೇ ಶಿವ.
#ಪಾಣೀಂದ್ರಿಯ#:-- ಹಸ್ತಗಳ ಚಾಪಲ್ಯರಹಿತಾಗಿ ಶಾಂತನಾಗಿದ್ದವನು.
#ಪಾದೇಂದ್ರಿಯ#- ಎಲ್ಲೂ ಚಲಿಸದ ಕೂಟಸ್ತನಾಗಿದ್ದ ತಪಸ್ವಿ ಇವನು.
#ಪಾಯು ಇಂದ್ರಿಯ
#ಉಪಸ್ಥೇಂದ್ರಿಯ#:-ತಪಸ್ಸಿನಲ್ಲಿ ನಿಷ್ಠನಾದ ಪರಮೇಶ್ವರನು ವಿವೇಕ- ವೈರಾಗ್ಯಗಳಿಂದ ಕಾಮಲೀಲೆಗಳನ್ನು ಗೆದ್ದ ಧೀರನು.
#ಮನಸ್ಸು#:-ಆತ್ಮನಷ್ಠನಾಗಿ ಮನಶ್ಚಾಂಲ್ಯವನ್ನು ಗೆದ್ದವನು.
#ಬುದ್ಧಿ#:- ತನ್ನಲ್ಲಿಯೇ ತನ್ನ
ಬುದ್ಧಿ ಇಟ್ಟುಕೊಂಡವನು.
#ಚಿತ್ರ#:- ಚಿತ್ರವೃತ್ತಿಗಳನೆಲ್ಲಾ ನಾಶಮಾಡಿಕೊಂಡವನು.
#ಅಹಂಕಾರ#:- ಅಹಂಕಾರಾಸುರನನ್ನು ಭಸ್ಮ ಮಾಡಿದ ಧೀರ.
ಹೀಗೆ ಚತುರ್ದಶೇಂದ್ರಿಯಗಳನ್ನು ಜಯಿಸಿದ ತಿಥಿಯೇ ಚತುರ್ದಶೀ ತಿಥಿ.
ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು
No comments:
Post a Comment