ರಾಮ-ಲಕ್ಷ್ಮಣರ ಅಂತ್ಯಕ್ಕೆ ಕಾರಣವಾಗಿದ್ದು ಶಿವ..!!? By ಶ್ರೀನಿ
ದೇವನೊಬ್ಬ ನಾಮ ಹಲವು ಎನ್ನುತ್ತೇವೆ. ಆದರೆ ನಾರಾಯಣನ ಅವತಾರವಾದ ಶ್ರೀ ರಾಮನ ಅವತಾರ ಅಂತ್ಯವಾಗಲು, ಜೊತೆಗೆ ಶೇಷನ ಅವತಾರವಾದ ಲಕ್ಷ್ಮಣನ ಅಂತ್ಯವಾಗಲು ರುದ್ರದೇವರು ಅಂದರೆ ಶಿವನು ಕಾರಣ ಎಂದರೇ ಅಚ್ಚರಿ ಪಡಲೇಬೇಕು.
ರಾಮನ ಆಳ್ವಿಕೆಯಲ್ಲಿ
ರಾಮರಾಜ್ಯ ಅತ್ಯಂತ ಸುಂದರವಾಗಿ ,ಯಾವುದೇ ತೊಂದರೆಗಳಿಲ್ಲದೇ ಸ್ವರ್ಗದಂತಾಗಿರುತ್ತದೆ.
ಇಂದ್ರನ ಸ್ವರ್ಗಕ್ಕಿಂತ ಮಿಗಿಲಾದ ಲೋಕ ಮತ್ತೊಂದಿಲ್ಲ, ಆದರೇ ರಾಮನ ಆಳ್ವಿಕೆಯ ರಾಮರಾಜ್ಯ ಇಂದ್ರನ ಅಮರಾವತಿಯನ್ನೇ ಮೀರಿಸುವಂತಿತ್ತು. ಎಲ್ಲಾ ಅಷ್ಟವಿಧವಾದ ದೇವಾನು-ದೇವತೆಗಳು ತಾವು ಅಮರಾವತಿಯನ್ನು ಬಿಟ್ಟು ರಾಮರಾಜ್ಯಕ್ಕೆ ಹೋಗುತ್ತೇವೆನ್ನುತ್ತಿದ್ದರು. ಎಲ್ಲಾ ದೇವತೆಗಳು ರಾಮನ ಸೇವೆಗೆ ಭೂಲೋಕಕ್ಕೋದರೇ ಸೃಷ್ಟಿಯಲ್ಲಿ ಅಲ್ಲೋಲ-ಕಲ್ಲೋಲವಾಗುತ್ತದೆಂದು ಇಂದ್ರನ ಜೊತೆಗೂಡಿ ಹಲವು ದೇವತೆಗಳು ಬ್ರಹ್ಮನ ಬಳಿಗೆ ಹೋಗಿ ಮನವಿ ಮಾಡಿಕೊಳ್ಳುತ್ತಾರೆ. ಬ್ರಹ್ಮದೇವ ರಾಮರಾಜ್ಯ ನಮ್ಮ ದೇವನಗರಿಯನ್ನೇ ಮೀರಿಸುವಂತಿದ್ದು ಎಲ್ಲಾ ದೇವತೆಗಳು ನಾರಾಯಣನ ಸೇವೆಗೆ ಅಯೋಧ್ಯಾ ಪಟ್ಟಣಕ್ಕೋಗುತ್ತೇವೆನ್ನುತ್ತಿದ್ದಾರೆ. ಹೀಗಾದರೇ ಸೃಷ್ಟಿಯಲ್ಲಿ ವೈಪರೀತ್ಯಗಳು ಜರುಗಲಿವೆ. ಹಾಗೂ ನೀನು ದೇವತೆಗಳಿಗೆ ಒಪ್ಪಿಸಿರುವ ಕಾರ್ಯಗಳು ತಟಸ್ಥವಾಗುತ್ತವೆ. ಹಾಗಾಗಿ ರಾಮಾವತಾರವನ್ನು ನಾರಾಯಣನು ಕೊನೆಗೊಳಿಸಿ ವೈಕುಂಠಕ್ಕೆ ಬಂದರೇ ದೇವತೆಗಳಿಗೂ ಸಂತೋಷವಾಗುತ್ತದೆ.
ಅದಲ್ಲದೇ ರಾಮಾವಾತರವಾದದ್ದೇ ರಾವಣ-ಕುಂಭಕರ್ಣರ ವಧೆಗೆ. ಅದು ಆಗಿ ಬಹಳ ವರ್ಷಗಳೆ ಕಳೆದಿವೆ. ಹೇಗಾದರೂ ಮಾಡಿ ನೀವು ರಾಮನಿಗೆ ಅವತಾರ ಸಮಾಪ್ತಿ ಮಾಡಲು ತಿಳಿಸಿ ಎಂದಾಗ ಬ್ರಹ್ಮ ಅರೆಕ್ಷಣ ದಿಙ್ಮೂಡನಾಗಿ ಈ ಕೆಲಸ ನನ್ನಿಂದ ಸಾಧ್ಯವಿಲ್ಲವೆಂದು, ಈಶ್ವರನ ಬಳಿ ದೇವತೆಗಳ ಜೊತೆಗೆ ಬಂದ ಬ್ರಹ್ಮ ರಾಮನ ಅವತಾರ ಸಮಾಪ್ತಿಗೊಳಿಸಲು ನೀನೇ ಹೋಗಿ ತಿಳಿಸಲು ಸೂಕ್ತವಾದವನು ಏಕೆಂದರೇ, ನಾರಾಯಣ ಬ್ರಹ್ಮನ ತಂದೆ, ಬ್ರಹ್ಮನಿಂದ ಜನಿಸಿದವನು ಶಿವ, ಅಂದರೇ ನಾರಾಯಣನ ಮೊಮ್ಮಗ ಶಿವ.
ಅಜ್ಜಂದಿರೂ ಯಾವಾಗಲೂ ಮೊಮ್ಮಕ್ಕಳ ಮಾತನ್ನು ಕೇಳುತ್ತಾರೆ. ಹಾಗಾಗಿ ರಾಮನ ಬಳಿ ಹೋಗಿ ಭೂಲೋಕದಲ್ಲಿ ರಾಮಾವತಾರದ ಸಕಲ ಕಾರ್ಯಗಳು ಮುಗಿದಿರುವುದರಿಂದ ಅವತಾರ ಸಮಾಪ್ತಿಗೊಳಿಸಲು ತಿಳಿಸೆಂದು ಹೇಳುತ್ತಾರೆ. ಅದರಂತೆ ರಾಮನ ಅರಮನೆಗೆ ಕಾಲನ ರೂಪದಲ್ಲಿ ಬಂದ ಶಿವ, ರಾಮನೊಂದಿಗೆ ಏಕಾಂತದಲ್ಲಿ ಮಾತನಾಡಬೇಕು ಯಾರೂ ಕೂಡ ಮಧ್ಯೆ ತೊಂದರೆಕೊಡಬಾರದೆಂದು ಕೇಳಿದಾಗ ರಾಮ, ಲಕ್ಷ್ಮಣನಿಗೆ ಯಾರೇ ಬಂದರೂ ಒಳಗೆ ಬಿಡಬೇಡ, ಹಾಗೂ ಬಿಟ್ಟರೇ ನಿನಗೆ ಮರಣದಂಡನೆ ನೀಡುತ್ತೇನೆಂದು ಹೇಳುತ್ತಾನೆ.
ಲಕ್ಷ್ಮಣನು ಅಣ್ಣನ ಮಾತಿಗೆ ತಲೆಬಾಗಿ ಹೊರಗೆ ಕಾಯುತ್ತಾ ನಿಂತಿದ್ದಾಗ ಅಲ್ಲಿಗೆ ಬಂದವರೇ ದೂರ್ವಾಸ ಮುನಿ,
ರಾಮ, ರಾಮ, ಎಲ್ಲಿ ರಾಮ, ನಾನು ರಾಮನನ್ನ ನೋಡಬೇಕು, ನನ್ನ ಕೋರಿಕೆ ಅವನಿಂದಲೇ ತೀರಬೇಕು ಎನ್ನುತ್ತಾ ಬಂದಾಗ ಲಕ್ಷ್ಮಣ ಅವರನ್ನು ತಡೆದು ಏನೆಂದು ಕೇಳಿದಾಗ ದೂರ್ವಾಸರು ನಿನ್ನಿಂದಾಗದ ಕೆಲಸ ಅದು ಎನ್ನುತ್ತಾರೆ. (ದೂರ್ವಾಸರು ಕೂಡ ರುದ್ರದೇವರ ಅಂಶವೇ) ಆದರೇ ಲಕ್ಷ್ಮಣನ ಒತ್ತಾಯಕ್ಕೆ ಮಣಿದು ನನಗೆ ಹಸಿವಾಗುತ್ತಿದೆ ಊಟ ಬೇಕು, ಆದರೆ ಆ ಊಟ ಈಗಾಗಲೇ ತಯಾರಾಗಿರುವ, ಅಥವಾ ಮುಂದೆ ತಯಾರಾಗುವ ಊಟವಾಗಿರಬಾರದು. ಎಂದಾಗ ಲಕ್ಷ್ಮಣ ವಿಚಲಿತನಾಗುತ್ತಾನೆ. ದೂರ್ವಾಸರು ಮುಂದೆ ಹೋಗಲು ಹೋದಾಗ ಅವರನ್ನ ತಡೆದಾಗ ಕೋಪದಿಂದ ಹಸಿದು ಬಂದವರಿಗೆ ಅನ್ನ ಹಾಕದಂತಾದ ರಾಮನಿಗೆ ಮತ್ತು ಅವನ ರಾಜ್ಯಕ್ಕೆ ಶಾಪ ಕೊಟ್ಟುಬಿಡುತ್ತೇನೆಂದಾಗ ಲಕ್ಷ್ಮಣ ಯೋಚಿಸಿ ಸತ್ತರೇ ಅಣ್ಣನ ಆಜ್ಙೆಯಂತೆ ಸಾಯಲಿ, ಆದರೇ ಈ ದೂರ್ವಾಸರನ್ನೂ ತಡೆದು ರಾಮರಾಜ್ಯ ಶಾಪಕ್ಕೆ ಗುರಿಯಾಗುವುದು ಬೇಡವೆಂದು ಅವರನ್ನು ಒಳಗೆ ಬಿಡುತ್ತಾನೆ.
ಅಷ್ಟರಲ್ಲಿ ಶಿವನು ರಾಮನಲ್ಲಿ ಅವತಾರ ಸಮಾಪ್ತಿ ಮಾಡಲು ಮನವಿ ಮಾಡಿಕೊಂಡಿರುತ್ತಾನೆ. ನಂತರ ದೂರ್ವಾಸರು ಹಸಿವಾಗಿದೆ ಎಂದಾಗ ತನ್ನ ಅಮೃತ ಹಸ್ತದಿಂದ ಮೃಷ್ಟಾನ್ನವನ್ನು ಕೊಟ್ಟು ಹೊರಗೆ ಬಂದು ಲಕ್ಷ್ಮಣ ನೀನು ನನ್ನ ಮಾತನ್ನು ಮೀರಿದ್ದಕ್ಕಾಗಿ ಮರಣದಂಡನೆ ಕೋಡಬೇಕಿತ್ತು ಆದರೇ ನನ್ನ ಅತ್ಯಾಪ್ತನಾಗಿದ್ದ ಕಾರಣ ನಿನಗೆ ಗಡಿಪಾರು ಮಾಡುತ್ತಿದ್ದೇನೆ ಎಂದು ಹೇಳಿದಾಗ ಲಕ್ಷ್ಮಣ ಅಲ್ಲಿಂದ ಹೊರಟು ಸರಾಯು ನದಿಯಲ್ಲಿ ಧ್ಯಾನಾವಸ್ತೆಯಲ್ಲಿಯೇ ಪ್ರಾಣ ತ್ಯಾಗ ಮಾಡುತ್ತಾನೆ. ನಂತರ ರಾಮನು ತನ್ನೊಂದಿಗೆ ಬರಲು ಇಚ್ಚಿಸಿದ ಎಲ್ಲರನ್ನೂ ಕರೆದುಕೊಂಡು ಸರಾಯು ನದಿಯಲ್ಲಿ ಮುಳುಗಿ ಪ್ರಾಣತ್ಯಾಗ ಮಾಡಿ ಎಲ್ಲರಿಗೂ ಮುಕ್ತಿಯನ್ನು ಕೊಡುತ್ತಾನೆ.
ಹೀಗೆ ರಾಮಾವತಾರದ ಸಮಾಪ್ತಿ ಈಶ್ವರನ ಮೂಲಕವಾಗುತ್ತದೆ.
#ಶ್ರೀನಿ #Sriniwriteups #Srini
ಮೂಲ : ವಾಲ್ಮೀಕಿ ರಾಮಾಯಣ ಮತ್ತು ಇತರ ರಾಮಾಯಣ ಕಥೆಗಳು.
ಹೆಚ್ಚಿನ ಕಥೆಗಳಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://www.facebook.com/sriniwriteups
No comments:
Post a Comment