#ಹಿಂದೂ_ಧರ್ಮದ_ಇತಿಹಾಸ_ಬಗ್ಗೆ
#ಎಲ್ಲಾ_ಪುರಾಣಗಳ_ಸಂಕ್ಷಿಪ್ತ_ಪರಿಚಯ
ವ್ಯಾಸಂ ವಸಿಷ್ಠನಪ್ತಾರಂ ಶಕ್ತೇ: ಪೌತ್ರಮಕಲ್ಮಶಮ್ | ಪರಾಶರಾತ್ಮಜಂ ವಂದೇ ಶುಕತಾತಂ ತಪೋನಿಧಿಮ್ ||* _ವ್ಯಾಸಾಯ ವಿಷ್ಣುರೂಪಾಯ ವ್ಯಾಸರೂಪಾಯ ವಿಷ್ಣುವೇ | ನಮೋ ವೈ ಬ್ರಹ್ಮ ನಿಧಯೇ ವಾಸಿಷ್ಠಾಯ ನಮೋ ನಮ: |_ ವೇದವ್ಯಾಸರು ರಚಿಸಿರುವ 18 ಪುರಾಣಗಳು ಹಾಗೂ ಅದರ ಸಂಕ್ಷಿಪ್ತ ಮಾಹಿತಿ... 1. *ಬ್ರಹ್ಮ ಪುರಾಣ* ಧರ್ಮವೇ ದೊಡ್ಡದೆಂದು ಧರ್ಮವನ್ನು ರಕ್ಷಿಸಬೇಕು ಯಾವ ಧರ್ಮವನ್ನಾದರು ನಾವು ಆದರಿಸಿ ಅದನ್ನು ಕಾಪಡಿದಾಗಲೇ ಆ ಧರ್ಮದಿಂದ ನಮಗೆ ರಕ್ಷಣೆ ಲಭಿಸುತ್ತದೆ. ಧರ್ಮವೆಂದರೆ ಮಾನವರು ಅನುಸರಿಸಬೇಕಾದ ಧಾರ್ಮಿಕ ಸೂತ್ರಗಳು. 2. *ಪದ್ಮ ಪುರಾಣ* ಶ್ರೀಮನ್ನಾರಾಯನನ ಬಗ್ಗೆ ನಾರಯಣಯನ ಶಕ್ತಿಯ ಬಗ್ಗೆ ನಾರಾಯಣನ ಲೀಲೆಗಳ ಬಗ್ಗೆ ಈ ಪುರಣವು. 3. *ವಿಷ್ಣು ಪುರಾಣ* ಮಹೇಶ್ವರನು, ಮಹಾ ವಿಷ್ಣುವೂ ಇಬ್ಬರು ಒಂದೇ ನಾಣ್ಯದ ಎರಡು ಮುಖಗಳು, ಹರಿಹರರಿಗೆ ಬೇಧವಿಲ್ಲ. ಇಬ್ಬರೂ ಸಮಾನವಾದ ಅದ್ವೈತ ರೂಪಗಳೇ ಎಂದು ಈ ಪುರಾಣ ಹೇಳಿತ್ತದೆ. 4. *ವಾಯು ಪುರಾಣ* ಪುಣ್ಯ ಕ್ಷೇತ್ರಗಳ ಮಹಿಮೆಇದರಲ್ಲಿದೆ. 5. *ಭಾಗವತ ಪುರಾಣ* ಅಮರತ್ವ ಸಿದ್ದಿ ಹೊಂದಲು, ಮರುಜನ್ಮವಿಲ್ಲದ ಮೋಕ್ಷ ಸಿದ್ಧಿಯನ್ನು ಸಾಧಿಸಲು ಮಾನವರೆಲ್ಲಾರಿಗೂ ಭಕ್ತಿ ಮಾರ್ಗವೇ ಉತ್ತಮ ಮಾರ್ಗವೆಂದು ದೇವರನ್ನು ನಂಬಿದವರಿಗೆ ಎಂದು ಕಷ್ಟಗಳು ಬರುವುದಿಲ್ಲವೆಂದು ಈ ಪುರಾಣ ಹೇಳುತ್ತದೆ. 6. *ನಾರದ ಪುರಾಣ* ಧಾರ್ಮಿಕ ವಿಷಯಗಳು, ವ್ರತಗಳು, ತಿಥಿ ವಿಶೇಷಗಳು, ವ್ರತ ನಿಯಮಗಳು, ವ್ರತ ಫಲಗಳು ಇಲ್ಲಿ ಇವೆ. 7. *ಮಾರ್ಕಂಡೇಯ ಪುರಾಣ* ಇದರಲ್ಲಿ ದೇವಿ ಅನುಗ್ರಹದ ವಿಷಯಗಳಿವೆ. 8. *ಅಗ್ನಿ ಪುರಾಣ* ಸೃಷ್ಟಿ, ಸ್ಥಿತಿ, ಲಯಗಳು ಮತ್ತು ಮಾನವರೆಲ್ಲರ ಜೀವನ್ಮರಣಗಳು, ತಿಳಿಯಬೇಕಾಗಿರುವ ವಿದ್ಯೆ, ತಿಳಿಯಲಾರದ ಅವಿದ್ಯೆ, ಸರ್ವವೂ ನಾರಾಯಣನೆಂದು ಭಗವಂತನ ಬಗ್ಗೆ ತಿಳಿಯಪಡಿಸುವುದೇ ಈ ಪುರಾಣ. 9. *ಭವಿಷ್ಯ ಪುರಾಣ* ಸರ್ವ ಪ್ರಾಣಕೋಟಿಗೂ, ಆಹಾರವನ್ನು ಆರೋಗ್ಯವನ್ನು, ಪ್ರಾಣಶಕ್ತಿಯನ್ನು ಪ್ರಸದಿಸುವ ಸೂರ್ಯ ಭಗವಾನನ ಮಹಿಮೆಗಳು ಇದರಲ್ಲಿವೆ. 10. *ಬ್ರಹ್ಮ ವೈವರ್ತ ಪುರಾಣ* ಅತಿಥಿ ದೇವರುಗಳ ಬಗ್ಗೆ ಬೋಧಿಸುತ್ತದೆ. 11. *ಲಿಂಗ ಪುರಾಣ* ವಿಶ್ವೇಶ್ವರನ ಕಾಶಿಕ್ಷೆತ್ರದ ಮಹಿಮೆಯನ್ನು ವಿವರಿಸಲಾಗಿದೆ. 12. *ವರಾಹ ಪುರಾಣ* ಯಮುನಾ, ಸರಸ್ವತಿ, ನದಿಗಳ ಸಂಗಮ ಸ್ಥಳ, ವಿಷ್ಣು ಪೂಜೆಗಳಿಗೆ ಪವಿತ್ರವಾದುದೆಂದು, ನದೀ ಸಂಗಮ ಮಹಿಮೆಯನ್ನು ವಿವರಿಸುತ್ತದೆ. 13. *ಸ್ಕಂದ ಪುರಾಣ* ಶಿಥಿಲವಾದ ದೇವಸ್ಥಾನಗಳನ್ನು ಪುನರುಜ್ಜೀವ ಗೊಳಿಸುವುದರಿಂದ, ಕೆರೆಗಳನ್ನು, ಬಾವಿಗಳನ್ನು ಸಾಯಿಪಡಿಸುವುದರಿಂದ, ಯಜ್ಞ ಯಾಗದಿಗಳ ಫಲವು ಲಭಿಸುತ್ತೆಂದು ಸ್ಕಂದ ಪುರಾಣವು ಹೇಳುತ್ತದೆ. 14. *ವಾಮನ ಪುರಾಣ* ಈ ಪುರಾಣದಲ್ಲಿ ವಿಷ್ಣು ಭಕ್ತರ ವಿವರಣೆಗಳಿವೆ ಮಾತ್ತು ವೈಷ್ಣವ ಮಹಿಮೆಗಳಿವೆ. 15. *ಕೂರ್ಮ ಪುರಾಣ* ಪುಣ್ಯಕ್ಷೇತ್ರಗಳ ದರ್ಶನವು ದೊಡ್ಡದೇ ! ಆದರೇ ಅದಕ್ಕಿಂತಲೂ ಮನುಷ್ಯನಿಗೆ ತನ್ನ ಜವಾಬ್ದಾರಿಗಳು ದೊಡ್ಡವು. ತಾನು ಎಲ್ಲಾ ಕರ್ತವ್ಯಗಳನ್ನು ನಿರ್ವಹಿಸದೆ ನಂತರವೇ ದಿವ್ಯ ಕ್ಷೇತ್ರಗಳ ದರ್ಶನವನ್ನು ಮಾಡಬೇಕು. ದೇಹ ಮಾತ್ರ ದೇವರ ಮುಂದೆ ಧ್ಯಾನವೆಲ್ಲಾ ಮನೆಯ ಕಡೆಗೆ ಇರಬಾರದು ಎಂದು ಹೇಳುತ್ತದೆ ಈ ಪುರಾಣ. 16. *ಮತ್ಸ್ಯ ಪುರಾಣ* ಪಿತೃ ದೇವತೆಗಳಿಗೆ ಶ್ರಾದ್ಧಾದಿ ಕರ್ಮ ಕಾಂಡಗಳು, ವರ್ಷ ತಿಥಿಗಳನ್ನು ನಡೆಸುವುದರಿಂದ ಪಿತೃ ದೇವತೆಗಳು ಸ್ವರ್ಗಲೋಕದಲ್ಲಿ ಸಂತೋಷಿಸುತ್ತಾರೆಂದು ಈ ಪುರಾಣ ಹೇಳುತ್ತದೆ. 17. *ಗರುಡ ಪುರಾಣ* ಸ್ವರ್ಗ ನರಕ ವಿಷಯಗಳು ಇದರಲ್ಲಿವೆ, ಇದರಲ್ಲಿ ಯಮಲೋಕ, ಅಲ್ಲಿನ ಶಿಕೆಗಳನ್ನು, ಸ್ವರ್ಗಲೋಕ ಅದರಲ್ಲಿರುವ ಸುಖಗಳನ್ನು ವಿವರಿಸಲಾಗಿದೆ. 18. *ಬ್ರಹ್ಮಾಂಡ ಪುರಾಣ* ಜಂಬೂದ್ವೀಪದೊಂದಿಗೆ ನವ ಖಂಡಗಳ ವರ್ಣನೆ ಈ ಪುರಾಣದಲ್ಲಿದೆ. ಅಖಂಡ ಭಾರತದೇಶದ ವಿವರಗಳು, ವಿಶೇಷಗಳೆಲ್ಲವೂ ಇವೆ. ನದಿಗಳು, ಪರ್ವತಗಳು, ಜನಪದಗಳ ವಿಶೇಷಗಳು ಇದರಲ್ಲಿದೆ. *ಋಷಿಗಳು 18 ವೇದವ್ಯಾಸರು* ಆಧ್ಯಾತ್ಮದ ಪ್ರಸಾರಕ್ಕಾಗಿ ಅವತರಿಸಿದ ಮಹಾಪುರುಷರಲ್ಲೊಬ್ಬರು *ಭಗವಾನ್ ವೇದವ್ಯಾಸರು ಏಳು ಚಿರಂಜೀವಿ*ಗಳಲ್ಲಿ ಒಬ್ಬರಾಗಿರುವ *ವ್ಯಾಸರು ವಿಷ್ಣುವಿನ ಅವತಾರವೂ ಹೌದು* ಮೀನುಗಾರನ ಮಗಳಾದ *ಮತ್ಸ್ಯಗಂಧಿಯಲ್ಲಿ ಆಷಾಡ ಮಾಸದ ಪೂರ್ಣಿಮೆಯ ದಿನ ಪರಾಶರ ಮುನಿಗಳಿಂದ ಜನಿಸಿದ ಅವರಿಗೆ ಕೃಷ್ಣ ದ್ವೈಪಾಯನ ಎಂಬ ಹೆಸರೂ ಇದೆ *ಕೃಷ್ಣ ವರ್ಣದ ಯಮುನಾ ನದಿಯ ದ್ವೀಪದಲ್ಲಿ ಜನಿಸಿದ್ದರಿಂದ ಅವರಿಗೆ ಈ ಹೆಸರು ಬಂತು .ಆ ದ್ವೀಪದಲ್ಲಿ ಜನಿಸಿದ್ದರಿಂದ ಅವರಿಗೆ ಈ ಹೆಸರು ಬಂತು *ಆ ದ್ವೀಪದಲ್ಲಿ ಬಾದರ ವೃಕ್ಷಗಳಿದ್ದ ಕಾರಣ ಇವರಿಗೆ ಬಾದರಾಯಣ ಎಂಬ ಹೆಸರೂ ಇದೆ* ಮಗುವಾಗಿ ಹುಟ್ಟಿದ ಕ್ಷಣವೇ ದೊಡ್ಡವರಾಗಿ ಬೆಳೆದು ತಾಪಸ ಜೀವನವನ್ನು ನಡೆಸಿದರು ಅವರು ವೇದವನ್ನು ನಾಲ್ಕು ಭಾಗಗಳನ್ನಾಗಿ ವಿಂಗಡಿಸಿದ್ದರಿಂದ ಅವರಿಗೆ *ವೇದವ್ಯಾಸರು ಎಂಬ ಹೆಸರು ಬಂತು* ವ್ಯಾಸರು *ಹದಿನೆಂಟು ಉಪಪುರಾಣಗಳು ಬ್ರಹ್ಮ ಸೂತ್ರಗಳನ್ನು ರಚಿಸಿದ್ದಾರೆ* ಇವುಗಳನ್ನು *ಸುಮಂತ ಜೈಮಿನಿ ವೈಶಾಂಪಾಯನ ಪೈಲ* ಇವರೇ ಮೊದಲಾದ ಶಿಷ್ಯರಿಗೆ ಬೋಧಿಸಿದರು ಇವರ ತಾಯಿ ಹಸ್ತಿನಾವತಿಯ ಶಂತನುವನ್ನು ಮದುವೆಯಾಗಿ ಇಬ್ಬರು ಗಂಡು ಮಕ್ಕಳನ್ನು ಹೆತ್ತಳು . ಈ ಇಬ್ಬರೂ ಸಂತಾನವಿಲ್ಲದೆ ತೀರಿಕೊಂಡರು ಆಗ ಸತ್ಯವತಿಯ ಕೋರಿಕೆಯಂತೆ ವ್ಯಾಸರು ನಿಯೋಗ ಪದ್ದತಿಯ ಪ್ರಕಾರ ತೀರಿಕೊಂಡ ರಾಜನ ಪತ್ನಿಯಾದ *ಅಂಬೆ ಅಂಬಾಲಿಕೆ ಧೃತರಾಷ್ಟ್ರ ಮತ್ತು ಪಾಂಡುವಿನ ತಂದೆಯಾದರು* ಇದೇ ಪದ್ದತಿಯ ಮೂಲಕ ರಾಣಿಯರ ಸೇವಕಿಯಿಂದ *ವಿದುರನ ಜನ್ಮವಾಯಿತು. * ಜನಸಾಮಾನ್ಯರಿಗೂ ಸುಲಭದಲ್ಲಿ ದಿವ್ಯಜ್ಞಾನ ಅರ್ಥವಾಗಲೆಂದು *ಪಂಚಮವೇದ ಎಂದೇ ಪ್ರಖ್ಯಾತಗೊಂಡ ಮಹಾಭಾರತವನ್ನು ರಚಿಸಿದರು* ಅವರು ಮಹಾಭಾರತದ *ಲಿಪಿಕಾರನಾಗುವಂತೆ ಗಣೇಶನನ್ನು ಕೇಳಿಕೊಂಡಾಗ ಒಂದು ಕ್ಷಣವೂ ನಿಲ್ಲಿಸದೇ ಮಹಾಕಾವ್ಯವನ್ನು ಹೇಳುವಂತೆ ಅವರಿಗೆ ಗಣೇಶ ಷರತ್ತು ವಿಧಿಸಿದನು ಇದಕ್ಕೆ ಪ್ರತಿಯಾಗಿ ವ್ಯಾಸರು ತಾವು ಹೇಳಿದ ಪ್ರತಿ ಶ್ಲೋಕಗಳನ್ನು ಅರ್ಥ ಮಾಡಿಕೊಂಡ ನಂತರವಷ್ಟೇ ಬರೆಯಬೇಕೆಂದು ಷರತ್ತು ಹಾಕಿದರು ಎಂಬ ಕತೆ ಜನಪ್ರಿಯವಾಗಿದೆ* ವ್ಯಾಸರು ಜನಿಸಿದ ಆಷಾಢ ಮಾಸದ ಪೌರ್ಣಮಿಯನ್ನು ಎಲ್ಲೆಡೆ *ಗುರುಪೂರ್ಣಿಮೆ*ಎಂದು ಆಚರಿಸುತ್ತಾರೆ. *ಈ ಪುಣ್ಯ ಭರತ ಭೂಮಿಯಲ್ಲಿ ಹುಟ್ಟಿ ವ್ಯಾಸ ಮಹರ್ಷಿಗಳು ಧನ್ಯರಾಗಿದ್ದರೆ. ವೇದವ್ಯಾಸರು ಭಾರತೀಯರನ್ನು ಚರಿತಾರ್ಥರನ್ನಾಗಿ ಮಾಡಿದ್ದಾರೆ
#ಮುಂದುವರೆಯುವುದು
No comments:
Post a Comment