Monday, 25 May 2020

ಚಾಂಡಾಲ- ಕ್ಷತ್ರಬಂಧು ಸಂವಾದ

ಮಹಾಭಾರತ ಸಾರ- 43

|ಚಾಂಡಾಲ- ಕ್ಷತ್ರಬಂಧು ಸಂವಾದ|

ಒಂದು ದಿನ ಚಾಂಡಾಲನು ನೀರಿನ ಕುಂಡದಲ್ಲಿ ಶರೀರವನ್ನು ತೊಳೆಯುತಿದ್ದ. ಆಗ  ಕ್ಷತ್ರಬಂಧು ಎಂಬ ರಾಜ ಬರುತ್ತಾನೆ. ನೀನು ವೃದ್ಧನಂತೆ ಕಾಣುತ್ತಿರುವೆ ಆದರೂ ಬಾಲಕನಂತೆ ಚೇಷ್ಟೆ ಮಾಡುವಿಯಲ್ಲ. ಎಂದು ರಾಜ ಚಾಂಡಾಲನಿಗೆ ಕೇಳುತ್ತಾನೆ.
ನೀನು ಸದಾ ನಾಯಿ ಮತ್ತು ಕತ್ತೆಗಳ ಜತೆಯಲ್ಲಿಯೇ ಓಡಾಡುತ್ತಿರುವಿಯಲ್ಲ. ಹಸುವಿನ ಧೂಳಿನ‌ ವಿಷಯದಲ್ಲಿ ನೀನು ಯಾಕಿಷ್ಟು ಉದ್ವೇಗಗೊಂಡಿರುವಿ ಎನ್ನುತ್ತಾನೆ ರಾಜ.
ಗೋವಿನ ಧೂಳಿನಿಂದ ಪೂರಿತವಾಗಿರುವ ನಿನ್ನ ದೇಹ ಯಾಕೆ ತೊಳೆದು ಕೊಳ್ಳುತ್ತಿರುವೆ ಎಂದು ರಾಜ ಕೇಳಿದ.
ಸತ್ಪುರಿಷರಿಗೆ ನಿಂದ್ಯವಾದ ಕರ್ಮ ನನಗೆ  ವಿಹಿತವಾಗಿದೆ ಎನ್ನುತ್ತಾನೆ.ಚಾಂಡಾಲ.
ನಾನು ಗೋವಿನ ಧೂಳನ್ನು ತೊಳೆದುಕೊಳ್ಳಲು ಒಂದು ಕಾರಣವಿದೆ ಎಂದು ಹಿಂದೆ ನಡೆದ ಒಂದು ದೃಷ್ಟಾಂತ ಹೇಳುತ್ತಾನೆ.
ಹಿಂದೆ ಬ್ರಾಹ್ಮಣನ ಗೋವುಗಳನ್ನು ಯಾರೋ ಕದ್ದುಕೊಂಡು ಹೋಗುತಿದ್ದರು.ಆಗ ಗೋವುಗಳ ಹಾಲಿನಿಂದ ಮಿಶ್ರಿತವಾದ ಧೂಳು ಸೋಮಲತೆ ಮೇಲೆ ಬಿದ್ದಿತು. ಆ ಸೋಮ ಲತೆಯನ್ನೇ ಯಾಗದಲ್ಲಿ ಉಪಯೋಗಿಸಿ ಯಜಮಾನಾದಿಯಾಗಿ ಎಲ್ಲರೂ ಅದನ್ನು ಸೇವಿಸಿದ್ದರಿಂದ.ಬ್ರಾಹ್ಮಣರ ಸಂಪತ್ತು ಅಪಹರಿಸಿದ ದೋಷ ಅವರೆಲ್ಲರಿಗೂ ಅಂಟಿಕೊಂಡಿತು. ಅದರ ಪರಿಣಾಮವಾಗಿ ದಿಕ್ಷೀತರಾಜ ಸೇರಿ ಅಲ್ಲಿದ್ದ ಎಲ್ಲರೂ  ಅವಸಾನದ ನಂತರ ನರಕಕ್ಕೆ ಹೋದರು.
ಬ್ರಾಹ್ಮಣನ ಗೋವು ಅಪಹರಿಸಿಕೊಂಡು ಹೋಗಿದ್ದ ಊರಿನಲ್ಲಿ ಯಾರೂ ಆ ಗೋವಿನ ಹಾಲು. ತುಪ್ಪ ಸೇವಿಸಿದ್ದರೋ ಎಲ್ಲರೂ ನರಕಕ್ಕೆ ಹೋಗಬೇಕಾಯಿತು.
ಆ ಗೋವುಗಳಿಗೆ ಹಿಂಸೆ ನೀಡಿ ಹೆಚ್ಚಿನ ಹಾಲು ಕರೆಯುತ್ತಿದ್ದರು. ಕರುಗಳಿಗೂ ಕೂಡ ಹಾಲು ಕುಡಿಯಲು ಬಿಡುತ್ತಿರಲಿಲ್ಲ. ಹಿಂಸೆ ತಾಳಲಾಗದೇ  ಆ ಹಸುಗಳು ಕೋಪಕೊಂಡು ತಮ್ಮನ್ನು ಅಪಹರಿಸಿಕೊಂಡು ಬಂದ ಕುಟುಂಬದವರನ್ನೆಲ್ಲರನ್ನೂ ನಾಶ ಮಾಡಿದವು.
ಅದೇ ಹಳ್ಳಿಯಲ್ಲಿ ನಾನು ಹಿಂದಿನ ಜನ್ಮದಲ್ಲಿ ಜಿತೇಂದ್ರಿಯ ನೆಂಬ ಬ್ರಾಹ್ಮಣನಾಗಿದ್ದೆ. ಬ್ರಹ್ಮಚರ್ಯ ವ್ರತಾನುಷ್ಠಾನ ಮಾಡುತ್ತ ವಾಸವಾಗಿದ್ದೆ.
ಒಂದು ದಿನ ನಾನಿಟ್ಟ ಭಿಕ್ಷಾನ್ನ ಆ ಗೋವುಗಳ ಧೂಳಿಯಿಂದ ದೋಷಪೂರಿತವಾಯಿತು. ಆ ಅನ್ನವನ್ನೇ ನಾನು ಸೇವಿಸಿದ್ದರ ಫಲವಾಷಗಿ ಈಗ ಚಾಂಡಾಲನಾಗಿ ಜನ್ಮತಾಳಿದ್ದೇನೆ ಎಂದು ಚಾಂಡಾಲ ರಾಜನಿಗೆ ಹೇಳುತ್ತಾನೆ.
ಚಾಂಡಾಲ ಜನ್ಮದಿಂದ ಮುಕ್ತಿಯಾಗುವ ಉಪಾಯವನ್ನು ತಿಳಿಸು ಎಂದು ರಾಜನಲ್ಲಿ ಪ್ರಾರ್ಥಿ ಸುತ್ತಾನೆ.
ಶ್ರೋತ್ರಿರಾದ ಬ್ರಾಹ್ಮಣರನ್ನು ರಕ್ಷಿಸುವ ಸಲುವಾಗಿ ಪ್ರಾಣ ತ್ಯಾಗ ಮಾಡುವುದರಿಂದ ನಿನ್ನ ಈ ಚಾಂಡಾಲ ಜನ್ಮಕ್ಕೆ ಮುಕ್ತಿ ಸಿಗಲಿದೆ ಎಂದ ರಾಜ.
ಮುಂದೆ ಒಂದು ದಿನ ಬ್ರಾಹ್ಮಣನ ಸ್ವತ್ತನ್ನು  ರಕ್ಷಿಸುವ ಸಲುವಾಗಿ ನಡೆದ ಯುದ್ಧದಲ್ಲಿ ಪ್ರಾಣತ್ಯಾಗ ಮಾಡಿ ಚಾಂಡಾಲ ಸದ್ಗತಿ ಹೊಂದಿದ.

ಸಾತ್ವಿಕರಾದ ಬ್ರಾಹ್ಮಣರ ಸ್ವತ್ತು ಅಪಹರಿಸಬಾರದು. ಬ್ರಾಹ್ಮಣ ಮಾತ್ರವಲ್ಲ ಸಾತ್ವಿಕರ ಸಂಪತ್ತು ಅಪಹರಿಸಬಾರದು ಎಂಬ ಸಂದೇಶ ಮಹಾಭಾರತ ನೀಡಿದೆ.
ನೀಚರ ಸೇವೆ, ದುರಾಭಿಮಾನ ಮತ್ತು ಮಿತ್ರನ ಪತ್ನಿ ಜತೆ ವ್ಯಭಿಚಾರ ಮಾಡುವುದು ಮಹಾ ಅಪರಾಧ. ಅದರಲ್ಲೂ ದುರಾಭಿಮಾನ ಹೆಚ್ಚು ಪಾಪಕಾರಕವಾಗಿದೆ ಎಂದು ಭೀಷ್ಮರು ಚಾಂಡಾಲ ಮತ್ತು ರಾಜನ ಕತೆ ಹೇಳಿದರು.
     🙏  ,ಶ್ರೀ ಕೃಷ್ಣಾರ್ಪಣಮಸ್ತು 🙏

No comments:

Post a Comment