ಧರ್ಮಶಾಸ್ತ್ರದ ಪ್ರಕಾರ ನಿಮ್ಮ ಜಾತಕದಲ್ಲಿ ಯಾವ ಗ್ರಹಸ್ಥಿತಿಗಳಿಂದ ಸಂಭವಿಸಬಹುದಾದ ರೋಗಗಳು ಯಾವುದು ಎಂದು ನಿಮಗೆ ತಿಳಿದಿದೆಯೇ...!
* ರವಿ ಮತ್ತು ಚಂದ್ರನು ಒಟ್ಟಿಗೆ ಕೂಡಿ ಸಿಂಹ ಅಥವಾ ಕಟಕ ರಾಶಿಯಲ್ಲಿ ಇದ್ದರೆ ದೀರ್ಘವಾದ ಖಾಯಿಲೆಯಿಂದ ನರಳುತ್ತಾರೆ...
* ಚಂದ್ರನು ಕಟಕ ಅಥವಾ ವೃಶ್ಚಿಕದಲ್ಲಿದ್ದು ಕ್ರೂರಗ್ರಹಗಳ ಸಂಬಂಧವಿದ್ದರೆ ಕರುಳುಬೇನೆಗಳು ಕಾಣಿಸಿಕೊಳ್ಳುತ್ತದೆ...
* ಶುಕ್ರ ಮತ್ತು ಕುಜ ಗ್ರಹಗಳು 7ನೆ ಮನೆಯಲಿದು ಕ್ರೂರಗ್ರಹ ದೃಷ್ಟಿಯಿದ್ದರೆ ಗುಪ್ತವ್ಯಾಧಿಗಳು ಕಾಣಿಸುತ್ತದೆ...
* ಶನಿ ಮತ್ತು ಚಂದ್ರರು ಒಟ್ಟುಗೂಡಿ ಕುಜನ ದೃಷ್ಟಿಗೊಳಗಾದರೆ ಮೂರ್ಛೆರೋಗ ಬರುತ್ತದೆ...
* ಗುರು ಲಗ್ನದಲ್ಲೂ ಶನಿ 7ನೆ ಮನೆಯಲ್ಲಿ ಇದ್ದರೆ ವಾತರೋಗ ನರಳುವರು...
* ಚಂದ್ರನು 10ನೆ ಮನೆಯಲ್ಲಿ ಕುಜನು 7ನೆ ಮನೆಯಲ್ಲಿ ಶನಿಯು 2ನೆ ಮನೆಯಲ್ಲಿ ಇದ್ದರೆ ಜಾತಕನಿಗೆ ಪಾರ್ಶ್ವವಾಯು ಕಾಣಿಸುತ್ತದೆ...
* ಚಂದ್ರ ಮತ್ತು ರವಿಯು ಲಗ್ನದಿಂದ 12ನೆ ಮನೆಯಲ್ಲಿ ಮತ್ತು 6ನೆ ಭಾವದಲ್ಲಿ ಇದ್ದರೆ ಅಂಧತ್ವವು ಕಾಣಿಸುತ್ತದೆ...
* ರವಿ ಮತ್ತು ಶುಕ್ರನು 5 ಮತ್ತು 7 ಭಾವದಲ್ಲಿ ಕೂಡಿಕೊಂಡಿದ್ದರೆ ಜಾತಕನ ಪತ್ನಿಗೆ ಅಂಗವಿಕಲತೆಕಾಣಿಸುತ್ತದೆ...
* ಕುಜನು 5 ನೆ ಭಾವದಲ್ಲಿದ್ದರೆ ಹೊಟ್ಟೆಯ ಭಾಗ ಕೆಡುತ್ತದೆ...
* ಕ್ರೂರಗ್ರಗಳು 7ನೆ ಮನೆಯಲ್ಲಿ ಶುಭಗ್ರಹಗಳ ದೃಷ್ಟಿ ಗೊಳಗಾದರೆ ದಂತರೋಗ ಉಂಟಾಗುತ್ತದೆ...
* ಶನಿಯು 5ನೆ ಅಥವ 9ನೆ ಸ್ಥಾನದಲ್ಲಿದ್ದು ಕ್ರೂರಗ್ರಹಗಳಿಂದ ನೋಡಲ್ಪಟ್ಟರೆ ನಾನಾ ರೋಗಗಳುಂಟಾಗುವುವು...
* ಕುಜನು ಕಟಕದಲಿದ್ದು ಶುಭಗ್ರಹಗಳ ದೃಷ್ಟಿವಿಲ್ಲದಿದ್ದರೆ ಮಾಂಸಕಂಡಗಳಿಂದ ತೊಂದರಿಗಳು ಕಾಣಿಸಿಕೊಳ್ಳುತ್ತದೆ...
* ರವಿಗ್ರಹವು ನೀಚನಾಗಿ ಅಥವಾ ಕ್ರೂರಗ್ರಹಗಳ ದೃಷ್ಟಿವಿದ್ದರೆ ಹೃದಯಕ್ಕೆ ಸಂಬಂಧಿಸಿದ ರೋಗಗಳು ಕಾಣಿಸುತ್ತದೆ...
* ಚಂದ್ರನು ರಾಹುವಿನೊಡನೆ ಸೇರಿ ಲಗ್ನದಲ್ಲಿದ್ದು 5ನೆ ಅಥವ 9ನೆ ಭಾವಗಳಲ್ಲಿ ಕ್ರೂರಗ್ರಹಗಳು ಸ್ಥಿತರಾಗಿದ್ದರೆ ದೆವ್ವ ಭೂತಗಳ ಕೆಟ್ಟ ಕನಸುಗಳು ಬರುತ್ತದೆ...
ಧನ್ಯವಾದಗಳು...ಮಾಹಿತಿ ಇಷ್ಟವಾದರೆ ಶೇರ್ ಮಾಡಿ...
© 2020 Astro Vedic Science All Rights Reserved
No comments:
Post a Comment