#ಸ್ವಾಮಿಯೇ_ಶರಣಂ _ಅಯ್ಯಪ್ಪ
#ಶಬರಿಮಲೆ ಸ್ವಾಮಿ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರಿಗೆ ಅನಾದಿ ಕಾಲದಿಂದಲೂ ಪ್ರವೇಶವೇ ಇಲ್ಲ ಇದ್ದರು ಅದು ಹತ್ತುವಯಸ್ಸಿನೊಳಗಿನ ಬಾಲಕಿಯರಿಗೆ ಮತ್ತು ನಲವತ್ತು ನಲವತ್ತೈದು ದಾಟಿದ ಮಹಿಳೆಯರಿಗೆ ಅವಕಾಶ ಇದೆ ದೇವಸ್ಥಾನಕ್ಕೆ .
ಇದು ಅನಾದಿಕಾಲದಿಂದಲೂ ನಡೆದು ಕೊಂಡು ಬಂದಿರುವ ಸಂಪ್ರದಾಯ . ಸಂಪ್ರದಾಯ ಪಾಲಿಸುವುದು ನಮ್ಮ ಕರ್ತವ್ಯ , ಆದರೆ ಈ ವಿಷಯಕ್ಕಾಗಿ ಬಹುದೊಡ್ಡ ಮಟ್ಟದ ಚರ್ಚೆ ನಡೆದು ಸುಪ್ರೀಂ ಕೋರ್ಟ್ ಸಹ ಪ್ರವೇಶಕ್ಕೆ ಅನುಮತಿ ನೀಡಿ ಕೆಲವು ಭಟ್ಟಂಗಿ ಮಹಿಳೆಯರು ಪೋಲೀಸರ ಸರ್ಪಗಾವಲಿನಲ್ಲಿ ದೇವಸ್ಥಾನ ಪ್ರವೇಶಿಸಲು ಮುಂದಾಗಿ ಬಹಳ ಗಲಾಟೆ ನಡೆದ ವಿಚಾರ ಎಲ್ಲರಿಗೂ ಗೊತ್ತಿದೆ .
ನನಗೂ ಆಗಾಗ ಈ ವಿಷಯಕ್ಕೆ ಕೋಪ ಬರುತ್ತಿತ್ತು ಅಯ್ಯಪ್ಪ ಸ್ವಾಮಿಯ ಮೇಲೆ ಕೋಪಿಸಿಕೊಂಡು ನೀವು ಹೆಣ್ಣು ದ್ವೇಷಿ ನಿಮಗೆ ಹೆಣ್ಣು ಅಂದರೆ ಆಗುವುದಿಲ್ಲ ಬಿಡಿ ನಾನು ನಿಮ್ಮನ್ನು ಎಂದೂ ಪೂಜಿಸುವುದಿಲ್ಲ ಎಂದು ಬಹಳ ಬೇಸರವಾಗಿ ಕುಳಿತಿದ್ದಾಗ ಯಾವುದೋ ದಿವ್ಯ ಜ್ಞಾನ ನನ್ನ ಮನಸ್ಸನ್ನು ಹೊಕ್ಕು ಯಾಕೆ ಮಹಿಳೆಯರಿಗೆ ಪ್ರವೇಶ ನಿಶಿದ್ಧ ಎನ್ನುವ ಸತ್ಯಾಸತ್ಯತೆಯನ್ನು ತಿಳಿಸಿತು .
ನನ್ನ ಮನಸ್ಸನ್ನು ಪ್ರವೇಶಿಸಿದ ಆ ದಿವ್ಯಜ್ಞಾನ ಹೇಳಿದ ಆ ಸತ್ಯವನ್ನು ನಿಮಗೂ ತಿಳಿಸಲು ಬಯಸುತ್ತೇನೆ .
💥 ಹಿಂದೆ ಮಹಿಷಿಯನ್ನು ಸಂಹರಿಸಲು ಹರಿಹರ ಪುತ್ರನಾದ ಮಣಿಕಂಠನು ಜನ್ಮವೆತ್ತಿದನು .
ಆಗ ಮಹಿಷಿಯ ಅಟ್ಟ ಹಾಸವನ್ನು ಮೆಟ್ಟಿ ಆ ಕ್ರೂರ ಅಸುರಿಯಾದ ಮಹಿಷಿಯನ್ನು ಸಂಹರಿಸಿದಾಗ ಮಹಿಷಿ ಸತ್ತಳು . ಆಗ ಆಕೆಯ ದೇಹದಿಂದ ಒಬ್ಬ ಅಪ್ಸರೆ ಹೊರಬಂದು , ಶಾಪದಿಂದಾಗಿ ಅಸುರಳಾಗಿ ಜನ್ಮಿಸಿದ್ದ ನನಗೆ ಶಾಪ ವಿಮೋಚನೆ ಮಾಡಿದಿರಿ , ಸ್ವಾಮಿ ನನ್ನದೊಂದು ಕೋರಿಕೆ , ನನ್ನ ಶಾಪವಿಮೋಚನೆ ಮಾಡಿದ ನಿಮ್ಮನ್ನೇ ವಿವಾಹ ವಾಗಬೇಕು ಎಂದು ಬಯಸಿರುವೆ ಕೃಪೆ ಮಾಡಿ ಎಂದಾಗ .
ಬಾಲಕನಾದಂತಹ ಅಯ್ಯಪ್ಪ ಸ್ವಾಮಿಯು ನಾನು ಜನ್ಮವೆತ್ತಿದ್ದು ಮಹಿಷಿಯ ಸಂಹರಾಕ್ಕಾಗಿ ಅದು ಈಗಷ್ಟೆ ಆಯ್ತು , ಈಗ ಲೋಕ ಕಲ್ಯಾಣಕ್ಕಾಗಿ ನಾನು ತಪಸ್ಸು ಮಾಡುತ್ತೇನೆ ಬಂದ ಭಕ್ತಾದಿಗಳಿಗೆ ಅಭಯವನ್ನು ನೀಡುತ್ತ ಅನಂತ ಕಾಲಗಳೂ ತಪಸ್ಸಿನಲ್ಲಿಯೇ ಕಳೆಯುತ್ತೇನೆ . ಯಾವ ಪ್ರಾಪಂಚಿಕ ವೈಭೋಗಗಳೂ ನನಗೆ ಬೇಡ .
ಸುದೀರ್ಘ ತಪಸ್ಸಿನಲ್ಲಿ ಕುಳಿತು ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸುವೆ ಅಂದಾಗ ಬಹಳ ಬೇಸರಗೊಂಡ ಆ ಅಪ್ಸರೆಯು ಸ್ವಾಮಿ ನನ್ನ ಶಾಪ ವಿಮೋಚನೆ ಮಾಡಿದ ನಿಮ್ಮನೆ ಮದುವೆ ಯಾಗುವುದು ನಾನು ನೀವು ತಪಸ್ಸು ಮುಗಿಸಿ ಬರುವ ವರೆಗೂ ನೀವೆಲ್ಲಿ ತಪಸ್ಸಿಗೆ ಕುಳಿತಿರುತ್ತೀರೋ ಅಲ್ಲೇ ಕಾಯುತ್ತಾ ಇರುವೆ ನೀವು ಪುನಃ ಬರುವ ವರೆಗೂ ಅಂದಾಗ .
ಅಯ್ಯಪ್ಪ ಸ್ವಾಮಿಯು ಮುಗುಳು ನಕ್ಕು ಮಾಯವಾಗುತ್ತಾರೆ . ನಂತರ ಶಬರಿಗಿರಿಯ ಮೇಲೆ ಕುಳಿತು ತಪಸ್ಸು ಮಾಡುತ್ತಾರೆ ಆಗ ಆ ಅಪ್ಸರೆಯು ಮಾಳಿಗೆ ಪುರತ್ತಮ್ಮ ಎಂಬ ಹೆಸರಿನಿಂದ ಸ್ವಾಮಿಯು ತಪಸ್ಸಿಗೆ ಕುಳಿತ ಸ್ಥಳದಲ್ಲೇ ಇರುತ್ತಾಳೆ .
ಮಾಳಿಗೆ ಪುರತ್ತಮ್ಮ ಎನ್ನುವ ಹೆಸರಿಂದ ಆ ಅಪ್ಸರೆಯು ಮಣಿಕಂಠನು ತಪಸ್ಸು ಮುಗಿಸಿ ಬರುವ ವರೆಗೂ ಕಾಯುತ್ತಾ ಇರುತ್ತಾಳೆ .ದಿನ ಕಳೆದಂತೆ ಸ್ವಾಮಿ ಅಯ್ಯಪ್ಪನ ದರ್ಷನಕ್ಕೆ ಭಕ್ತಾದಿಗಳೆಲ್ಲಾ ಬರಲು ಪ್ರಾರಂಬಿಸುತ್ತಾರೆ , ಮಹಿಳೆಯರು ಪುರುಷರು ಎಲ್ಲರೂ .
ಆಗ ಮಾಳಿಗೆ ಪುರತ್ತಮ್ಮ ನಾಗಿದ್ದ ಆ ಅಪ್ಸರೆಯು ಒಂದು ಹೆಣ್ಣುತಾನೆ , ಅವಳಿಗೂ ಎಲ್ಲರ ಹಾಗೆ ಏನೋ ಸಂಶಯ ಅಯ್ಯೋ ಹೀಗಾದರೆ ಏನು ಮಾಡುವುದು ಎಂದು ಮಣಿಕಂಠನ ದರ್ಷನಕ್ಕಾಗಿ ಯಾರಾದರು ಹೆಣ್ಣು ಬಂದು ನನ್ನ ಸ್ವಾಮಿಯನ್ನು ಇಷ್ಟ ಪಟ್ಟರೆ ಸ್ವಾಮಿಯು ಯಾರನ್ನಾದರು ಮೆಚ್ಚಿದರೆ ಏನು ಮಾಡುವುದು ಎನ್ನುವ ಭಯ ಆ ಅಪ್ಸರೆಗೆ ಕಾಡಿತು ಆಗ ಆ ಅಪ್ಸರೆಯು ಇನ್ನುಮುಂದೆ ಅಯ್ಯಪ್ಪ ಸ್ವಾಮಿಯ ದರ್ಷನಕ್ಕೆ ಹೆಣ್ಣು ಮಕ್ಕಳು ಬರಬಾರದು ಬಂದರೂ ಹತ್ತು ವರ್ಷದ ಬಾಲಕಿಯರು ಮತ್ತು ವಯಸ್ಸಾದ ಹೆಂಗಸರು ಬರಬಹುದು ಎಂದು ಆಜ್ಞೆ ಹೊರಡಿಸಿದಳಂತೆ .
ಹತ್ತು ವರ್ಷದೊಳಗೆ ಮತ್ತು ವಯಸ್ಸಾದವರು ಅಂದರೆ ಇನ್ನೂ ದೊಡ್ಡವರಾಗದ ಹೆಣ್ಣು ಮಕ್ಕಳು ಮತ್ತು ಋತುಬಂಧ ವಾದ ಹೆಂಗಸರು ಮಾತ್ರ ಅಂದರೆ ಬಾಲಕಿಯರಿಗೆ ಮತ್ತು ಋತುಬಂದವಾದ ಸ್ತ್ರೀಯಾರೂ ದರ್ಷನಕ್ಕೆ ಹೋದರೂ ಭಕ್ತರಾಗಿಯೇ ಹೋಗುತ್ತಾರೆ ಆದರೆ ಯೌವನಸ್ಥ ಹೆಣ್ಣು ಮಕ್ಕಳು ಹೋದರೆ ಒಂದು ವೇಳೆ ಇಷ್ಟ ಪಟ್ಟರೆ ಸರವಾಮಿಯನ್ನು ಭಕ್ತಿಯಿಂದ ಮೆಚ್ಚಿಸಿದರೆ ನನ್ನ ಗತಿ ಏನು ಅನುಕ್ಷಣವೂ ಸ್ವಾಮಿಗಾಗಿ ಪರಿತಪಿಸುತ್ತಿರುವ ನನ್ನ ಗತಿ ಏನು ಎಂದು ಈ ರೀತಿ ಆಜ್ಞೆ ಮಾಡಿದಳಂತೆ . ಆಗಿನಿಂದ ಯೌವನಸ್ಥಳಾದ ಹೆಣ್ಣು ಮಕ್ಕಳನ್ನು ಗಿರಿಗೆ ಹತ್ತಲು ಬಿಡುತ್ತಿರಲಿಲ್ಲವಂತೆ . ಕಾಲದಿಂದ ಕಾಲಕ್ಕೆ ಈ ಪದ್ದತಿಯೇ ಮುಂದುವರಿಯಿತಂತೆ .
ಹೀಗೆ ಆ ಅಪ್ಸರೆಯು ಸ್ವಾಮಿಯ ಸನ್ನಿದಾನದಲ್ಲೇ ನೆಲೆಸಿದ್ದಾಳಂತೆ ಮಾಳಿಗೆ ಪುರತ್ತಮ್ಮನಾಗಿ . ಅದಕ್ಕೇ ಈಗಲೂ ಯಾವುದೇ ಅಯ್ಯಪ್ಪ ಸ್ವಾಮಿಯ ದೇವಸ್ಥಾನಕ್ಕೆ ಹೋದರೂ ಸ್ವಾಮಿಯ ಸನ್ನಿದಾನದ ಅನತಿ ದೂರದಲ್ಲಿಯೇ ಮಾಳಿಗೆ ಪುರತ್ತಮ್ಮ ನವರ ಪುಟ್ಟ ಗುಡಿ ಇರುತ್ತದೆ .
ಆ ದಿವ್ಯ ಜ್ಞಾನ ಹೇಳಿದ ಕಾರಣ ನನಗೂ ಇರಬಹುದು ಎನಿಸಿತು .
ನಾ ಕಂಡಂತೆ ಅಯ್ಯಪ್ಪ ಸ್ವಾಮಿಯು ತನ್ನ ಸಾಕು ತಾಯಿಗಾಗಿ ಹುಲಿಯ ಹಾಲನ್ನೇ ತಂದವರು . ತನಗಾಗಿ ಕಾಯುತ್ತಿದ್ದ ಶಬರಿಗಾಗಿ ತಾನಿರುವ ಸ್ಥಳವನ್ನೇ ಶಬರಿ ಎಂದು ಇಟ್ಟವರು . ಹೆಣ್ಣು ಮಕ್ಕಳಿಗೂ ಆಶಿರ್ವದಿಸುವರು ಅಂದಾಗ ಅಯ್ಯಪ್ಪ ಸ್ವಾಮಿ ಎಲ್ಲರ ದೇವರು ಅಲ್ಲವೆ .
ಆದರೂ ಹಿರಿಯರು ಪುರಾತನ ಕಾಲದಿಂದಲೂ ನಡೆಸಿ ಕೊಂಡು ಬಂದಿರುವ ಸಂಪ್ರದಾಯವನ್ನು ಪಾಲಿಸುವುದು ಎಲ್ಲಾ ಭಕ್ತರ ಕರ್ತವ್ಯ . ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ನಿಶಿದ್ದ ಅಂದಾಗ ನಾವು ಕೋರ್ಟ್ ಆರ್ಡರ್ ಕಾಪಿ ಹಿಡಿದು ಬಲವಂತದಿಂದ ದೇವಸ್ಥಾನದೊಳಗೆ ನುಗ್ಗುವುದು ಬೇಕಿಲ್ಲ .
ಅಯ್ಯಪ್ಪ ಸ್ವಾಮಿ ಎಲ್ಲರ ದೇವರು ಭಕ್ತಿಯಿಂದ ಮನಸ್ಸಿನಲ್ಲಿಯೇ ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಪ್ರಾರ್ಥಿಸಿದರೂ ಸಾಕು ಅಯ್ಯಪ್ಪ ಸ್ವಾಮಿಯ ಕೃಪೆ ನಮಗೂ ಎಲ್ಲರಿಗೂ ದೊರೆಯುತ್ತದೆ .
ಬಲವಂತವಾಗಿ ನುಗ್ಗಿ ಇತರರ ಧಾರ್ಮಿಕ ಭಾವನೆಯನ್ನು ನೋಯಿಸುವ ಕೃತ್ಯ ನಮ್ಮಿಂದ ನಡೆಯುವುದು ಬೇಡ .
ಅವರವರ ಆಚರಣೆ ಸಂಪ್ರದಾಯಕ್ಕೆ ಅಡ್ಡ ಗಾಲಾಕುವುದು ಬೇಡ ಅಲ್ಲವೆ .
💥 ಈಗ ವೈಜ್ಞಾನಿಕವಾಗಿ ಯೋಚಿಸೋಣ . ಆ ಕಾಲದಲ್ಲಿ ಬೆಟ್ಟ ಹತ್ತಿ ಹೋಗಬೇಕಾಗಿತ್ತು ದುರ್ಗಮ ಅರಣ್ಯ ಹೆಣ್ಣು ಮಕ್ಕಳು ದರ್ಷನಕ್ಕೆ ಹೋಗುವಾಗ ಅಕಸ್ಮಾತ್ ಪಿರಿಯಡ್ ಆದಾಗ ಬಹಳ ಕಷ್ಟ ಅದಕ್ಕಾಗಿ ಈ ಪದ್ದತಿ ಬಂದಿರಬಹುದು . ಇಲ್ಲ ಗಂಡು ಮತ್ತು ಹೆಣ್ಣು ಜೊತೆಯಲ್ಲಿ ಹೋಗುವಾಹ ವ್ರತ ಭಂಗ ವಾಗಬಹುದು ಎನ್ನುವ ಕಾರಣಕ್ಕೋ , ಇಲ್ಲವೆ ಆ ಘೋರವಾದ ಅರಣ್ಯದಲ್ಲಿ ಹೆಣ್ಣು ಮಕ್ಕಳ ಜೀವ ಮಾನ ರಕ್ಷಣೆ ಕಷ್ಟ ಎನ್ನುವ ಕಾರಣದಿಂದಲೋ .
ಮಹಿಳೆಯರಿಗೆ ಪ್ರವೇಶ ನಿಶಿದ್ದ ಮಾಡಿರಬಹುದು . ಈ ಆಧುನಿಕ ಯುಗದಲ್ಲಿ ಎಲ್ಲಾ ಕಡೆ ಮಹಿಳೆಯರು ಸಂಚರಿಸುವರು ಹಿಂದೆ ಇದ್ದಷ್ಟು ಕಷ್ಟಗಳು ಇಲ್ಲ ಆಕೆಯೂ ಮಡಿವಂತಳಾಗಿ ವ್ರತ ನಿಷ್ಟೆಯಿಂದ ದರ್ಷನ ಮಾಡಬಹುದು ತಪ್ಪಿಲ್ಲ . ಈಗ ಬಹಳಷ್ಟು ಕಡೆ ಅಯ್ಯಪ್ಪ ಸ್ವಾಮಿಯ ದೇವಸ್ಥಾನವಿದೆ ನಾವೆಲ್ಲ ಹೋಗುತ್ತಾ ಇರುತ್ತೆವೆ ಹೆಚ್ಚಾಗಿ ಮಹಿಳೆಯರೇ ಪೂಜೆಗೆಂದು ಬರುತ್ತಾ ಇರುತ್ತಾರೆ ಯಾವ ಅಪಚಾರವೂ ಆಗಲ್ಲ ಅಲ್ವಾ ಮತ್ತೇಕೆ ಅನ್ನುವ ಪ್ರಶ್ನೆ ಮೂಡಿದರೂ .
ಪಾರಂಪರಿಕವಾಗಿ ರೂಢಿಸಿ ಕೊಂಡು ಬಂದಿದ್ದಾರೆ ಹಠದಿಂದ ಪ್ರವೇಶಿಸುವುದು ಬೇಡ ಅವರವರ ಸಂಪ್ರದಾಯಕ್ಕೆ ಅಡ್ಡಿ ಪಡಿಸುವ ಇಚ್ಚೆಯಂತೂ ಬೇಡ ಅನ್ನುತ್ತಾ
ಅಯ್ಯಪ್ಪ ಸ್ವಾಮಿಯವರ ಕೃಪೆ ಎಲ್ಲಾ ಭಕ್ತರಿಗೂ ಸಿಗಲಿ .
ಸ್ವಾಮಿಯೇ ಶರಣಂ ಅಯ್ಯಪ್ಪ
ಧನ್ಯವಾದಗಳು
ಮಮತಾ ಎಸ್ ಗೌಡ
No comments:
Post a Comment