ನಿಮ್ಮ ಜಾತಕದಲ್ಲಿ ಉದ್ಯೋಗ ವಿಚಾರಗಳ ಬಗ್ಗೆ ತಿಳಿದುಕೊಳ್ಳಿ..!!
ಪ್ರತಿಯೊಬ್ಬರು ಯಾವ ಉದ್ಯೋಗ ಮಾಡಿದರೆ ಲಾಭವಾಗುತ್ತದೆ ಮತ್ತು ಅದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆಯೋ ಇಲ್ಲವೋ ಎಂದು ಯೋಚಿಸುತಿರುತ್ತಾರೆ...
ಆದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ಸಮಸ್ಸೆಗೆ ಪರಿಹಾರ ಸಿಗುತ್ತದೆ ಅದು ಹೇಗೆ ಎಂದರೆ ಜನ್ಮ ಜಾತಕದಲ್ಲಿ ದಶಮ ಸ್ಥಾನವನ್ನು ಉದ್ಯೋಗ ಸ್ಥಾನವೆಂದು ಕರೆಯುತ್ತಾರೆ...
ದಶಮ ಸ್ಥಾನಧಿಪತಿ ಉಚ್ಚಕ್ಷೇತ್ರ ಸ್ವಕ್ಷೇತ್ರ ಕೇಂದ್ರ ತ್ರಿಕೋನಗಳಲ್ಲಿ ಇದ್ದು ಮತ್ತು ಶುಭ ಗ್ರಹಗಳು ದಶಮದಲ್ಲಿ ಇದ್ದರೆ ಒಳ್ಳೆಯ ವೃತ್ತಿಯಲ್ಲಿದ್ದು ಎಲ್ಲರು ಅವರನ್ನು ಗುರತಿಸುವ ಉದ್ಯೋಗವನ್ನು ಮಾಡುವರು...
ದಶಮದಲ್ಲಿ ರವಿ ಇದ್ದರೆ ದಶಮಾಧಿಪತಿ ರವಿಯಾಗಿದ್ದರೆ ಸರಕಾರಿ ಕೆಲಸ ರಾಜಕೀಯ, ಅಮದು ರಪ್ತು ಆಡಳಿತ ಮಾಡುವರು...
ದಶಮದಲ್ಲಿ ಮತ್ತು ದಶಮಾಧಿಪತಿ ಚಂದ್ರನಾಗಿದ್ದರೆ ವೈದ್ಯರು ನೀರಿಗೆ ಸಂಬಂದ ನಿರಾವರಿ ಸಾರಿಗೆ, ವ್ಯವಸಾಯ ಆಹಾರ ಪಾನೀಯಗಳು ಪಶು ಅರಣ್ಯಗಳಲ್ಲಿ ಕೆಲಸ ಮಾಡುವರು...
ದಶಮದಲ್ಲಿ ಮತ್ತು ದಶಮಾಧಿಪತಿ ಕುಜನಾಗಿದ್ದರೆ ವಕೀಲರು ಪೋಲಿಸ್ ಸೇನಾಧಿಕಾರಿ ದೇಶ ಕಾಯುವುದು ಸಂಘಟನೆ ಮಾಡುವುದು ಭೂಮಿಗೆ ಸಂಬಂದಪಟ್ಟ ವಿದ್ಯುತ್ ಅಡುಗೆ ಹೋಟೆಲ್ ಕೆಲಸಗಳನ್ನು ಮಾಡುವರು...
ದಶಮದಲ್ಲಿ ಮತ್ತು ದಶಮಾಧಿಪತಿ ಬುಧನಾಗಿದ್ದರೆ ವ್ಯಾಪಾರಿ ಲೆಕ್ಕಿಗರು ಸಹಾಯ ದರ್ಜೆಗಳು ಬ್ಯಾಂಕ್ ಕೆಲಸ ಜ್ಯೋತಿಷಿಗಳು ಕಂಪ್ಯೂಟರ್ ಸಂಬಂದಪಟ್ಟಿದು ಟೀವಿ ರೇಡಿಯೋ ವಾಣಿಜ್ಯ ತೆರಿಗೆ ಸಂಬಂದಪಟ್ಟ ಕೆಲಸ ಮಾಡುವರು...
ದಶಮದಲ್ಲಿ ಮತ್ತು ದಶಮಾಧಿಪತಿ
ಗುರುವಾಗಿದ್ದರೆ ಉಪನ್ಯಾಸಕರು ಶಿಕ್ಷಕರು ವೈದ್ಯರು ಪುರೋಹಿತರು ಧರ್ಮಾಧಿಕಾರಿಗಳು ಆಚಾರ್ಯರು ಗುರು ಸ್ಥಾನದಲ್ಲಿರುವರು ಜ್ಯೋತಿಷಿಗಳು ಶಾಲೆ ಕಾಲೇಜುಗಳನ್ನು ನಡೆಸುವವರು...
ದಶಮದಲ್ಲಿ ಮತ್ತು ದಶಮಾಧಿಪತಿ
ಶುಕ್ರನಾಗಿದ್ದರೆ ಕಲಾವಿದರು ನಟನೆ ಮಾಡುವರು ಸಂಗೀತ ನೃತ್ಯ ಕಲಾವಿದರು ಕವಿಗಳು ಶಿಲ್ಪಕಲೆ ಬೇಕರಿ ವಸ್ತ್ರವನ್ಯಾಸರು ಹೋಟೆಲ್ ಟೈಲರಿಂಗ್ ಸುಗಂಧ ತೈಲ ತಯಾರಿಕೆಗಳನ್ನು ನಡೆಸುವವರು...
ದಶಮದಲ್ಲಿ ಮತ್ತು ದಶಮಾಧಿಪತಿ
ಶನಿ ಆದರೆ ರೈತರು ಕಾರ್ಮಿಕರು ನ್ಯಯಾಧೀಶರು ಪಶು ವಿಜ್ಞಾನ ಭೂಗರ್ಭ ಶಾಸ್ತ್ರ ಬಟ್ಟೆ ಮಾರಾಟ ಸಮಾಜ ಶಾಸ್ತ್ರ ವೃತ್ತಿಪರ ವಿದ್ಯೆ ಕಠಿಣ ಕೆಲಸಗಾರರು ಸಿಮೆಂಟ್ ಕಲಿದ್ದಲು ವೆಲ್ಡರ್ ಚರ್ಮ ಕೈಗಾರಿಕೆ ನಡೆಸುವವರು...
ದಶಮದಲ್ಲಿ ರಾಹು ಇದ್ದರೆ ರಾಜಕೀಯ ದಲ್ಲಾಳಿಗಳ ಕೆಲಸ ನಡೆಸುವವರು...
ದಶಮದಲ್ಲಿ ಕೇತುವಿದ್ದರೆ ಸನ್ಯಾಸಿಗಳು ಆಧ್ಯಾತ್ಮಿಕ ಚಿಂತಕರು ಅಧ್ಯಾಪಕರ ವೃತ್ತಿ ನಡೆಸುವವರು....
© 2020 Astro Vedic Science All Rights Reserved
No comments:
Post a Comment