"ಪುರಾಣಗಳ ಪ್ರಕಾರ ಯಾವ ಸಮಯ ಮಿಲನ ಕ್ರಿಯೆಗೆ ಸೂಕ್ತವಲ್ಲ"
By ಶ್ರೀನಿ
ನಮ್ಮ ಪುರಾಣಗಳು ಇಂದಿನ ವಿಜ್ಞಾನಿಗಳು ತಿಳಿಸಿರದ ಹಲವು ವಿಚಾರಗಳನ್ನು ಸಾವಿರಾರು ವರ್ಷಗಳ ಹಿಂದೆಯೆ ತಿಳಿಸಿದ್ದಾರೆ.
ಬಹುಮುಖ್ಯವಾಗಿ ಇಂದು ನಾವು ಹೇಳಲು ಹೊರಟಿರುವ ವಿಚಾರ ಅಂದರೇ ಅದು ಮಿಲನಕ್ರಿಯೆ ಅಥವಾ ಮೈಥುನ.
ಗಂಡು-ಹೆಣ್ಣು ಸೇರಿ ತಮ್ಮ ಕಾಮನೆಗಳನ್ನು ನೀಗಿಸಿಕೊಳ್ಳುವ ವಿಧಾನ ಅಥವಾ ರತಿಕ್ರೀಡೆ. ಇದು ಪ್ರತಿಯೊಬ್ಬ ಮನುಷ್ಯನಿಗೆ ಅಗತ್ಯವಾಗಿರುವ ವಿಚಾರ ಹಾಗೂ ಅನುಭವಿಸಲೇಬೇಕಾದ ವಿಷಯ.
ಮಿಲನ ಕ್ರಿಯೆಯ ಬಗ್ಗೆ ನಮ್ಮ ಹಿಂದೂ ಸಂಸ್ಕೃತಿಯಲ್ಲಿ ನೇರವಾಗಿ ಮಾತನಾಡಲೂ ಮುಜುಗರ ಪಡುತ್ತಾರೆ. ಆದರೇ ಇಂದಿನ ತಂತ್ರಜ್ಞಾನದ ಬೆಳವಣಿಗೆ , ಇಂಟರ್ನೆಟ್, ಮೊಬೈಲ್ ನ ಬಳಕೆಯಿಂದ ಸೆಕ್ಸ್ ಎನ್ನುವುದು ಸಾಮಾನ್ಯ ವಿಷಯವಾದಂತಾಗಿದೆ. ಇದರ ಬಗ್ಗೆ ಒಂದು ಕಥೆಯಿದೆ. ಮೊದಲಿಗೆ ಭೂಮಿಯ ಮೇಲೆ ಮೈಥುನ ಪ್ರಕ್ರಿಯೆ ಆರಂಭವಾಗಿದ್ದು ಸ್ವಾಯಂಭೂವ ಮನು ಎಂಬ ಗಂಡು ಮತ್ತು ಶತರೂಪ ಎಂಬ ಹೆಣ್ಣಿನ ಮುಖಾಂತರ. ಇವರೇ ಮನುಕುಲದ ಮೊದಲ ದಂಪತಿಗಳು. ಹಾಗಾಗಿಯೇ ನಾವು ಮನುಕುಲದವರು ಎಂದು ಹೇಳುವುದು.
ಯಾವ ಸಂದರ್ಭ ಸೆಕ್ಸ್ ಗೆ ಸೂಕ್ತವಲ್ಲ ಎಂದರೇ ಅದು ಸಂಜೆಯ ಕಾಲ ಅಂದರೇ ಸೂರ್ಯಾಸ್ತದ ಒಂದೂವರೆ ಘಂಟೆ ಮೊದಲು ಒಂದೂವರೆ ಘಂಟೆ ನಂತರ. ಈ ಸಂದರ್ಭದಲ್ಲಿ ಯಾರೂ ಕೂಡ ಮಿಲನಕ್ರಿಯೆಯಲ್ಲಿ ಸೇರಬಾರದೆಂದು ಪುರಾಣಗಳು ಹೇಳುತ್ತವೆ. ಏಕೆಂದರೇ ಈ ಸಂದರ್ಭದಲ್ಲಿ ರುದ್ರದೇವರು ತನ್ನ ಗಣಗಳೊಂದಿಗೆ ಸಂಚಾರ ಮಾಡುತ್ತಿರುತ್ತಾರೆ. ಹಾಗಾಗಿ ಆ ಸಮಯದಲ್ಲಿ ನಿದ್ದೆ, ಆಹಾರ ಸೇವನೆ, ಮಿಲನ, ಮತ್ತು ಅಧ್ಯಯನ ಮಾಡಬಾರೆದೆಂದು ತಿಳಿಸಿವೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಹಿರಣ್ಯಾಕ್ಷ ಮತ್ತು ಹಿರಣ್ಯಕಶ್ಯಪರ ಜನನ.
ಒಂದು ದಿನ ಪ್ರದೋಶ ಕಾಲದ ಇಳಿ ಸಂಜೆಯಲ್ಲಿ ಕಶ್ಯಪರು ತಪಸ್ಸಿನಲ್ಲಿದ್ದಾಗ ದಿತಿಯು ಕಾಮೋದ್ರೇಕದಿಂದ ಅವರನ್ನು ಪ್ರಚೋದಿಸುತ್ತಾಳೆ. ಕಶ್ಯಪರು ಎಷ್ಟೇ ಬೇಡವೆಂದರೂ ಅವಳ ಅತಿಕಾಮದಿಂದ ಕಶ್ಯಪರು ಇದೆಲ್ಲ ದೇವರ ಇಚ್ಚೆಯೆಂದು ಮಿಲನ ಕ್ರಿಯೆಯಲ್ಲಿ ತೊಡಗುತ್ತಾರೆ. ನಂತರ ಶುಚಿಯಾಗಿ ಬಂದ ಕಶ್ಯಪರು ದಿತಿಗೆ ಹೇಳುತ್ತಾರೆ ನೋಡು ದೇವಿ ಅದೆಂಥ ಕೆಟ್ಟ ಕಾಲದಲ್ಲಿ ನಾವು ಸೇರಿದ್ದೇವೆ ಇದರಿಂದ ನಿನಗೆ ಹುಟ್ಟುವ ಮಕ್ಕಳು ಮಹಾನ್ ಕ್ರೂರಿಗಳು ಮತ್ತು ದೈತ್ಯರಾಗಿರುತ್ತಾರೆ ಎನ್ನುತ್ತಾರೆ. ಅವಳು ಎಷ್ಟೇ ಬೇಡಿದರೂ ರುದ್ರ ದೇವರಿಗೆ ಅಪಮಾನ ಮಾಡಿದ ಕಾರಣ ನಾವು ಇದನ್ನು ಅನುಭವಿಸಲೇಬೇಕೆಂದು ಹೇಳುತ್ತಾರೆ. ಮುಂದೆ ಇವಳ ಹೊಟ್ಟೆಯಲ್ಲಿ ಹುಟ್ಟಿ ಬಂದವರೇ ಹಿರಣ್ಯಾಕ್ಷ ಮತ್ತು ಹಿರಣ್ಯ ಕಶ್ಯಪ.
ಹಾಗಾಗಿಯೇ ಸಂಜೆಯ ಸಮಯದಲ್ಲಿ ಮಿಲನ ಕ್ರಿಯೆಯಿಂದ ದೂರವಿರಿ.
No comments:
Post a Comment