Monday, 25 May 2020

ಸಂಕ್ಷಿಪ್ತ_ಶ್ರೀಸತ್ಯ_ನಾರಾಯಣವ್ರತ_ಕಥಾ

*ಸಂಕ್ಷಿಪ್ತ_ಶ್ರೀಸತ್ಯ_ನಾರಾಯಣವ್ರತ_ಕಥಾ "*

*ಹಿಂದೆ ನೈಮಿಷಾರಣ್ಯದಲ್ಲಿ ವಾಸಿಸುತ್ತಿದ್ದ ಶೌನಕಾದಿ ಮುನಿಗಳು ಒಮ್ಮೆ ಸೂತ ಪುರಾಣಿಕರನ್ನು..*

*ಎಲೈ ಸೂತ ಮುನಿಗಳೇ! ದಾರಿದ್ರ್ಯದಿಂದ ಬಳಲುತ್ತಿರುವ ಜನರಿಗೆ ಸಿದ್ಧಿಯನ್ನುಂಟು ಮಾಡುವ ಯಾವುದಾದರೂ ವ್ರತವಿದೆಯಾ?*

ಎಂದು ಕೇಳಲು ಸೂತರು...

*ಶ್ರೀ ಸತ್ಯನಾರಾಯಣ ವ್ರತವನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸಿದರೆ ಎಲ್ಲಾ ಕಷ್ಟಗಳೂ ಪರಿಹಾರವಾಗುವುದು. ಹಿಂದೆ ಶ್ರೀ ನಾರದರು ಶ್ರೀ ಹರಿಯನ್ನು ಇದೇ ವಿಧವಾಗಿ ಕೇಳಲು ಶ್ರೀ ಪರಮಾತ್ಮನು...*

*ಶ್ರೀ ಸತ್ಯನಾರಾಯಣ ಸ್ವಾಮಿಯ ವ್ರತವನ್ನು ಸರಿಯಾದ ವಿಧಿ ವಿಧಾನಗಳಿಂದಲೂ, ಶ್ರದ್ಧಾ ಭಕ್ತಿಗಳಿಂದಲೂ ಸತತವಾಗಿ ೪ ಕಾಲ ಆಚರಿಸಿದರೆ ಇಷ್ಟಾರ್ಥಗಳೆಲ್ಲವೂ ಕೈಗೂಡಿ ಕೊನೆಗೆ ನನ್ನ ಲೋಕವಾದ ವೈಕುಂಠವನ್ನು ಹೊಂದಬಹುದು. ಇದಕ್ಕಾಗಿ ಒಂದು ಕಥೆಯನ್ನು ಹೇಳುತ್ತೇನೆ ಕೇಳಿ....*

*ಹಿಂದೆ ಭಿಕ್ಷೆಯಿಂದಲೇ ಜೀವಿಸುತ್ತಿದ್ದ ವಿಪ್ರನೊರ್ವನಿಗೆ ಶ್ರೀ ಪರಮಾತ್ಮನು ವಿಪ್ರ ವೇಷದಲ್ಲಿ ಬಂದು ಈ ವ್ರತದ ಬಗ್ಗೆ ಹೇಳಲು ಅದನ್ನು ಆಚರಿಸಿ ಕ್ಷಿಪ್ರದಲ್ಲಿಯೇ ಸಕಲ ಸೌಭಾಗ್ಯವನ್ನೂ ಪಡೆದನು.*

*ಇದೇ ರೀತಿ ಈ ವಿಪ್ರನು ಆಚರಿಸುತ್ತಿದ್ದ ವ್ರತವನ್ನು ಕಂಡ ಕಟ್ಟಿಗೆ ಮಾರುವವನು ವ್ರತದ ವಿಧಿ ವಿಧಾನಗಳನ್ನು ಕೇಳಿ ತಿಳಿದುಕೊಂಡು ಶ್ರೀ ಸತ್ಯಾನಾರಾಯಣ ಸ್ವಾಮಿಯ ವ್ರತವನ್ನು ಆಚಾರಿಸಬೇಕೆಂದು ಸಂಕಲ್ಪ ಮಾಡಿದನು. ಅದರಿಂದಾಗಿ ಅವನಿಗೆ ಕಟ್ಟಿಗೆಯ ಮಾರಾಟದಲ್ಲಿ  ಬರಲು ಈ ವ್ರತವನ್ನು ಆಚಾರಿಸಿ ಇಹದಲ್ಲಿ ಸಕಲ ಸೌಭಾಗ್ಯಗಳನ್ನೂ ಪಡೆದು ಕೊನೆಗೆ ವೈಕುಂಠವನ್ನು ಸೇರಿದನು.*

*ಉಲ್ಕಾಮುಖನೆಂಬ ರಾಜನು ಸಂತಾನಕ್ಕಾಗಿ ಶ್ರೀ ಸತ್ಯನಾರಾಯಣಸ್ವಾಮಿ ವ್ರತವನ್ನು ಆಚರಿಸುತ್ತಿರಲು ಒಬ್ಬ ವರ್ತಕನು  ಕಂಡು ತನಗೆ ಮಕ್ಕಳಾದರೆ ತಾನೂ  ಮಾಡುತ್ತೇನೆಂದು ಹರಿಕೆ ಹೊತ್ತನು.*

*ಶ್ರೀ ಸತ್ಯನಾರಾಯಣನ ಕೃಪೆಯಿಂದ ಸತಿಯಾದ ಲೀಲಾವತಿಯು ಸ್ವಲ್ಪ ಕಾಲದಲ್ಲೇ ಹೆಣ್ಣು ಮಗುವಿನ ತಾಯಿಯಾದಳು. ಕಲಾವತಿ ಯೆಂದು ಹೆಸರಿಸಲ್ಪಟ್ಟ  ಮಗು ಶುಕ್ಲ ಪಕ್ಷದ ಚಂದ್ರನಂತೆ ಬೆಳೆಯುತ್ತಿತ್ತು. ಆದರೆ ಆ ವರ್ತಕನು ಮಗುವಿಗೆ ವರ್ಷವಾಗಲೆಂದೂ,  ಅನ್ನ ಮುಹೂರ್ತ ಸಮಯದಲ್ಲೆಯೆಂದೂ, ಮದುವೆಯಾಗಲೆಂದೂ ವ್ರತಾಚರಣೆಯನ್ನು ಮುಂದೂಡುತ್ತಿರಲು ಶ್ರೀ ಪರಮಾತ್ಮನು ಆತನ ಧನ ಮದವಿಳಿಯಲೆಂದು ಮಾಡಲು ದಾರುಣವಾದ ಕಷ್ಟಗಳು ಬರಲೆಂದು ಶಪಿಸಿದನು.*

*ಒಂದಾನೊಂದು  ವರ್ತಕನು ವ್ಯಾಪಾರ ನಿಮಿತ್ತ ಅಳಿಯನೊಡನೆ ರತ್ನಸಾರಪುರಕ್ಕೆ ಹೊರಟನು. ಅಲ್ಲಿ ಒಮ್ಮೆ ಅರಸನಾದ ಚಂದ್ರಕೇತುವಿನ ಅರಮನೆಯಲ್ಲಿ ಧನವನ್ನು ಕದ್ದ ಕಳ್ಳನು ವಿಧಿ ಚೋದಿತನಾಗಿ ಆ ವರ್ತಕನ ಬಳಿಯಿರಿಸಿ ಹೊರಟು ಹೋದನು.*

*ದೇವ ಮಾಯೆಯಿಂದ ರಾಜ ದೂತರು ಇವರ ಮಾತನ್ನು ಕೇಳದೆ ಎಲ್ಲಾ ಧನ  ವಸ್ತುಗಳನ್ನು ಬೊಕ್ಕಸಕ್ಕೆ ಹಾಕಿ ಅವರನ್ನು ಬಂಧಿಸಿ ಕಾರಾಗೃಹಕ್ಕೆ ತಳ್ಳಿದರು. ಇದೇ ರೀತಿಯಾಗಿ ಲೀಲಾವತಿಯ ಮನೆಯಲ್ಲಿಯೂ ಕಳ್ಳತನವಾಗಿ ಸಕಲೈಶ್ವರ್ಯವೂ ಹೋಗಿ ಭಿಕ್ಷೆಯಿಂದ ಜೀವಿಸುತ್ತಿರುವಾಗ ಮಗಳಾದ ಕಲಾವತಿಯು ತಾನೊಮ್ಮೆ ಶ್ರೀ ಸತ್ಯನಾರಾಯಣ ವ್ರತದ ಬಗ್ಗೆ ಹೇಳಲು ತಕ್ಷಣ ಹರಿಕೆಯನ್ನು ನೆನೆದು ಇಬ್ಬರೂ ಸೇರಿ ಭಕ್ತಿಯಿಂದ ಶ್ರೀ ಸತ್ಯನಾರಾಯಣನನ್ನು ಪೂಜಿಸಿ ತಮ್ಮ ಪತಿಗಳು ಬಂದ ನಂತರ ವ್ರತವನ್ನು ಆಚರಿಸುವೆವೆಂದು  ಹೇಳಲು,ದಯಾಮಯನಾದ ಶ್ರೀ ಸತ್ಯನಾರಾಯಣನು...*

*ಚಂದ್ರಕೇತುವಿನ ಸ್ವಪ್ನದಲ್ಲಿ ಬಂದು ಅವರನ್ನು ಕಾರಾಗೃಹದಿಂದ ಬಿಡಿಸಿ, ಅವರ ಧನವನ್ನೂ ಕೊಡಿಸಿದನು. ನಂತರ ಪರೀಕ್ಷೆಗಾಗಿ ವಿಪ್ರ ವೇಷದಲ್ಲಿ ಅವರಿದ್ದಲ್ಲಿಗೆ ಬಂದು ನಾವೆಯಲ್ಲಿ ಇರುವುದು  ಕೇಳಲು ಆ ವರ್ತಕನು ಸೊಪ್ಪು, ಕಟ್ಟಿಗೆ ಇವೆಯೆಂದು ಭಗವಂತನಲ್ಲಿ ಹೇಳಿದನು.*

*ಶ್ರೀ ಪರಮಾತ್ಮನು ಕೋಪಗೊಳ್ಳಲು ನಾವೆಯಲ್ಲವೂ ಸೊಪ್ಪು, ಬಳ್ಳಿಗಳಿಂದಲೇ ತುಂಬಿದ್ದನ್ನು ಕಂಡು ಆ ವರ್ತಕನು ವಿಪ್ರನಲ್ಲಿ  ಬೇಡಲು ಕರುಣಾಮಯಿಯಾದ ಶ್ರೀ ಸತ್ಯನಾರಾಯಣನು ಎಲ್ಲವನ್ನೂ ಹಿಂತಿರುಗಿಸಿ ಅನುಗ್ರಹಿಸಿದನು.*

*ಊರಿಗೆ ಬರಲು ಅವರನ್ನು ಕಾಣಲು ಆತುರದಲ್ಲಿ ಮಗಳು ಪೂಜೆಯನ್ನು ಮುಗಿಸಿ  ತಿನ್ನದೇ ಬರಲು ಅವಳ ಪತಿಯು  ಸಹಿತ ನೀರಿನಲ್ಲಿ ಮುಳುಗಿ ಹೋದನು. ಇದರಿಂದ ದಿಕ್ಕುತೋಚದೆ ದೇವನಲ್ಲಿ ಮೊರೆಯಿಡಲು ಅಶರೀರವಾಣಿಯು ಪ್ರಸಾದ ತಿನ್ನದೇ ಬಂದುದ್ದೇ ಇದಕ್ಕೆ ಕಾರಣವೆಂದು ಹೇಳಲಾಗಿ, ತಕ್ಷಣ ಹೋಗಿ ಪ್ರಸಾದ ಸ್ವೀಕರಿಸಿ ಬರಲು ಪತಿಯೊಡನೆ ನಾವೆಯೂ ತೇಲಿ ಬಂದಿತು.*

*ನಂತರ ಕುಟುಂಬ ಸಹಿತನಾಗಿ ಆ ವರ್ತಕನು ಶ್ರೀ ಸತ್ಯನಾರಾಯಣ ವ್ರತವನ್ನು ಆಚರಿಸಿ ಇಹದಲ್ಲಿ ಸಕಲ ಸಂಪತ್ತುಗಳನ್ನೂ ಹೊಂದಿಗೆ ಕೊನೆಗೆ ಮೋಕ್ಷವನ್ನು ಹೊಂದಿದನು.*

*ಇದೇ ರೀತಿ ಅಂಗಧ್ವಜನೆಂಬ ರಾಜನು ಬೇಟೆ ಆಡುವ ಸಮಯದಲ್ಲಿ ಅಲ್ಲಿಯೇ ಇದ್ದ ಗೋಪಾಲಕರು ಆಚರಿಸುತ್ತಿದ್ದ ಶ್ರೀ ಸತ್ಯನಾರಾಯಣ ವ್ರತವನ್ನು ಕಂಡೂ ಅಲ್ಲಿಗೆ ಹೋಗದೇ ಪ್ರಸಾದ ಸ್ವೀಕರಿಸದೆ ಗರ್ವದಿಂದ ಅರಮನೆಗೆ ಹೋದನು. ಅಲ್ಲಿ ಸ್ವಾಮಿಯ ಅವಕೃಪೆಯಿಂದ ಐಶ್ವರ್ಯವೆಲ್ಲವೂ ನಾಶವಾಗಿ ಸುತರೆಲ್ಲರೂ ಮೃತರಾಗಿರುವುದನ್ನು ಕಂಡನು. ಆಪತ್ತಿನಿಂದ ಪಾರಾಗಲು ಮತ್ತೆ ಗೋಪಾಲಕರ ಬಳಿ ಬಂದು ಅವರೊಡನೆ ಭಕ್ತಿಯಿಂದ ವ್ರತವನ್ನು ಆಚರಿಸಲು ಸುತರನ್ನೂ, ಸಂಪತ್ತನ್ನೂ ಮತ್ತೆ ಹೊಂದಿದನು.*

*ಇಂಥಾ ಪರಮ ಪವಿತ್ರವಾದ ವ್ರತವನ್ನು ಮಾಡುವವರಿಗೆ ಶ್ರೀ ಸತ್ಯನಾರಾಯಣನ ಅನುಗ್ರಹದಿಂದ ಸಕಲ ಸಂಪತ್ತುಗಳೂ ಉಂಟಾಗುವುದು.*

ಈ ವ್ರತಾಚರಣೆಯಿಂದ....

 ದರಿದ್ರನು ಧನಿಕನಾಗುವನು.
ಭಯಗ್ರಸ್ತನ ಭಯವು ನಾಶವಾಗಿ ಸೌಖ್ಯಪ್ರದನಾಗುವನು.
ರೋಗಿಯು ನಿರೋಗಿಯಾಗುವನು.
ಇಷ್ಟಾರ್ಥ ಸಿದ್ಧಿಯಾಗುವುದು.*

*ಈ ಕಲಿಯುಗದಲ್ಲಿ ಇದಕ್ಕಿಂತ ಶ್ರೇಷ್ಟವಾದ ವ್ರತವು ಇನ್ನೊಂದಿಲ್ಲ. ಇಂಥಾ ಶ್ರೀ ಸತ್ಯನಾರಾಯಣನನ್ನು ಕೆಲವರು ಸತ್ಯನೆಂದೂ, ಕೆಲವರು ಈಶ್ವರನೆಂದೂ, ಕೆಲವರು ಸತ್ಯದೇವನೆಂದೂ ಕರೆಯುತ್ತಾರೆ.*

*ಇದಲ್ಲದೇ ಶ್ರೀ ಸತ್ಯನಾರಾಯಣ ಸ್ವಾಮಿಯ ವ್ರತವನ್ನು ಯಾರು ಶ್ರದ್ಧಾ ಭಕ್ತಿಯಿಂದ ಆಚರಿಸುವರೋ; ಯಾರು ಭಕ್ತಿಯಿಂದ ಈ ಕಥೆಯನ್ನು ಶ್ರಾವಣ ಮಾಡುವರೋ; ಅವರು ಇಹದಲ್ಲಿ ಸಕಲ ಸೌಖ್ಯವನ್ನೂ ಹೊಂದಿ ಮುಂದೆ ವೈಕುಂಠವನ್ನು ಹೊಂದುವರೆಂದು ಶ್ರೀ ಸೂತ ಪುರಾಣಿಕರು ಶ್ರೀ ಶೌನಕಾದಿಗಳಿಗೆ ಹೇಳಿದರೆಂಬಲ್ಲಿಗೆ ಶ್ರೀ ಸತ್ಯನಾರಾಯಣಕಥೆಯು ಸಂಪೂರ್ಣವಾಯಿತು*

No comments:

Post a Comment