Tuesday, 26 May 2020

ಮಂತ್ರ

ಹಿಂದೂ ಧರ್ಮದಲ್ಲಿ ಮಂತ್ರದಲ್ಲಿ ಬಹಳ ಪ್ರಾಮುಕ್ಯತೆ ಇದೆ, ಯಾವ ಮಂತ್ರವನ್ನು ಯಾವಾಗ ಹೇಳಬೇಕು ಅಂತ ಹೇಳ್ತಿವಿ ನೋಡಿ..!!

ಮಂತ್ರವೆಂದರೆ ಕೆಲವರಿಂದ ಮನೋವೈಜ್ಞಾನಿಕ ಹಾಗು ಆಧ್ಯಾತ್ಮಿಕ ಶಕ್ತಿ ಹೊಂದಿರುವುದೆಂದು ನಂಬಲಾದ ಒಂದು ಪವಿತ್ರ ಹೇಳಿಕೆ. ಅತ್ಯಂತ ಮುಂಚಿನ ಮಂತ್ರಗಳನ್ನು ಭಾರತದಲ್ಲಿನ ಹಿಂದೂಗಳಿಂದ ವೈದಿಕ ಕಾಲದಲ್ಲಿ ರಚಿಸಲಾಯಿತು, ಮತ್ತು ಅವು ಕನಿಷ್ಠ ೩೦೦೦ ವರ್ಷಗಳಷ್ಟು ಹಳೆಯದ್ದಾಗಿವೆ. ಅತ್ಯಂತ ಕಷ್ಟ ಕಾಲದಲ್ಲಿ ಮನಸ್ಸಿನ ಸಮತೋಲನ ಮತ್ತು ವಿಶ್ವಾಸವನ್ನು ಮರಳಿ ತರಲು ಪ್ರಬಲ ಮಂತ್ರಗಳು ಸಹಾಯ ಮಾಡುತ್ತವೆ. ಇದರಿಂದಾಗಿ ಸಮಸ್ಯೆಯನ್ನು ಎದುರಿಸುವ ಧೈರ್ಯ ನಿಮ್ಮಲ್ಲಿ ಮೂಡುತ್ತದೆ

ಮಂತ್ರಗಳು ತಮ್ಮ ಒಂದು ಶಕ್ತಿಯಿಂದ ಮನುಷ್ಯನನ್ನು ಅರೋಗ್ಯ ಮತ್ತು ಮನಸ್ಸು ಶಾಂತಿಯಿಂದ ಇರಲು ಮಂತ್ರಗಳು ಸಹಕರಿಸುತ್ತವೆ. ಹಾಗೆಯೇ ಪ್ರತಿಯೊಂದು ಗುರಿ ಉದ್ದೇಶಗಳು ಸಾಕಾರಗೊಳ್ಳುವುದಕ್ಕೆ ಪ್ರತ್ಯೇಕ ಮಂತ್ರಗಳನ್ನು ಆಧ್ಯಾತ್ಮಿಕ ಚಿಂತಕರು ನೀಡಿದ್ದಾರೆ. ಇಂದಿನ ಲೇಖನದಲ್ಲಿ ಪ್ರತಿದಿನ ಯಾವ ಯಾವ ಸಮಯದಲ್ಲಿ ಯಾವ ಯಾವ ಮಂತ್ರವನ್ನು ಪಠಿಸುವುದರ ಮೂಲಕ ನಿಮಗೆ ಖಿನ್ನತೆಯಿಂದ ಹೊರಬರಬಹುದಾಗಿದೆ ಎಂದು ಹೇಳುತ್ತೇವೆ. ಆ ಮಂತ್ರಗಳು ಹೀಗಿವೆ…

ಬೆಳಿಗ್ಗೆ ಎದ್ದ ಕೂಡಲೇ ಕೈಗಳನ್ನು ನೋಡುತ್ತಾ ಹೇಳುವ ಮಂತ್ರ:

ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೆ ಸರಸ್ವತಿl
ಕರಮೂಲೇ ತು ಗೋವಿಂದಃ ಪ್ರಭಾತೇ ಕರದರ್ಶನಂll

ಬೆಳಿಗ್ಗೆ ಎದ್ದ ಕೂಡಲೇ ನೆಲ ಮುಟ್ಟುವಾಗ ಹೇಳುವ ಮಂತ್ರ:

ಸಮುದ್ರ ವಸನೆ ದೇವಿ ಪರ್ವತ ಸ್ತನಮಂಡಲೆl
ವಿಷ್ನುಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವಮೆll

ಸ್ನಾನ ಮಾಡುವ ಸಮಯದಲ್ಲಿ ನೀರನ್ನು ಮುಟ್ಟಿ ಹೇಳುವ ಮಂತ್ರ:

ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿl
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರುll

ಮಂತ್ರ ಸ್ನಾನ:

ಅಪವಿತ್ರ ಪವಿತ್ರೋವಾ ಸರ್ವಾವಸ್ತಾಂ ಗತೋಪಿವಾl
ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭಂತರ ಶುಚಿಃll

ಪ್ರದಕ್ಷಿಣೆ ನಮಸ್ಕಾರ ಹೇಳುವ ಮಂತ್ರ:

ಯಾನಿ ಕಾನಿಚ ಪಾಪಾನಿ ಜನ್ಮಾಂತರ ಕೃತಾನಿಚl
ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣ ಪದೇಪದೇll

ತ್ವಮೇವ ಮಾತಾಚl ಪಿತಾ ತ್ವಮೇವl ತ್ವಮೇವ ಬಂಧುl ಸಖಾ ತ್ವಮೇವl ತ್ವಮೇವ ವಿದ್ಯಾಶ್ಚl ದ್ರವಿಣಂ ತ್ವಮೇವl ತ್ವಮೇವ ಸರ್ವಂ ಮಮ ದೇವ ದೇವll

ತೀರ್ಥ ಸೇವನೆ ಸಮಯದಲ್ಲಿ ಹೇಳುವ ಮಂತ್ರ:

ಅಕಾಲ ಮೃತ್ಯು ಹರಣಂ ಸರ್ವವ್ಯಾಧಿ ನಿವಾರಣಂl
ಸಮಸ್ತ ದುರಿತೋಪಶಮನಂ ವಿಷ್ಣು ಪಾದೋದಕಂ ಶುಭಂll

ಶರೀರೆ ಜರ್ಜರೀ ಭೂತೆ ವ್ಯಾಧಿಗ್ರಸ್ತೇ ಕಳೇಬರೇl
ಔಷಧಂ ಜಾಹ್ನವಿ ತೋಯಂ ವೈದ್ಯೋ ನಾರಾಯಣೋ ಹರೀಃll

ಸಂಕಷ್ಟದಲ್ಲಿರುವಾಗ ಪ್ರಾರ್ಥನೆ:

ಕಾರ್ಕೋಟಕಸ್ಯ ನಾಗಸ್ಯ ದಮಯಂತ್ಯಾ ನಲಸ್ಯಚl
ಋತುಪರ್ಣಸ್ಯ ರಾಜರ್ಷೆ ಕೀರ್ತನಂ ಕಲಿ ನಾಶನಂll

ಕ್ಷಮಾಪಣೆಗೆ ಹೇಳುವ ಮಂತ್ರ:

ಅಪರಾಧ ಸಹಸ್ರಾಣಿ ಕ್ರಿಯಂತೆ ಅಹರ್ನಿಶಂl
ದಾಸೋ ಆಯಮಿಥಿಮಾಂ ಮತ್ವ ಕ್ಷಮಸ್ವ ಪರಮೇಶ್ವರll

ಪಾಪೋಹಂ ಪಾಪಕರ್ಮಾಹಂ ಪಾಪಾತ್ಮ ಪಾಪ ಸಂಭವಃl
ತ್ರಾಹಿಮಾಂ ಕೃಪಯಾ ದೇವಶರಣಾಗತ ವತ್ಸಲll

ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮl
ತಸ್ಮಾತ್ ಕಾರುಣ್ಯ ಭಾವೇನ ರಕ್ಷ ರಕ್ಷ ಜನಾರ್ಧನಃll

ಲೋಕ ಕಲ್ಯಾಣಕ್ಕೆ ಹೇಳುವ ಮಂತ್ರ:

ಸ್ವಸ್ತಿ ಪ್ರಜಾಭ್ಯ ಪರಿಪಾಲಯಂತಾಂl ನ್ಯಾಯೇನ ಮಾರ್ಗೆನ ಮಹೀಂ ಮಹೇಶಃl
ಗೋಬ್ರಾಹ್ಮಣೇಭ್ಯೊ ಶುಭಮಸ್ತು ನಿತ್ಯಂl
ಲೋಕಾ ಸಮಸ್ತ ಸುಖಿನೋ ಭವಂತು

ಆರತಿ ತೆಗೆದು ಕೊಳ್ಳುವಾಗ ಹೇಳುವ ಮಂತ್ರ:

ಶ್ರದ್ಧಾಂ ಮೇಧಾಂ ಯಶಃ ಪ್ರಜ್ಞಾಂ ವಿದ್ಯಾಂ ಬುದ್ಧಿಂ ಶ್ರೀಯಂ ಬಲಂl ಆಯುಷ್ಯಂ ತೇಜಃ ಆರೋಗ್ಯಂ ದೇಹಿ ಮೇ ಹವ್ಯವಾಹನll

ಜ್ಯೋತಿ ಬೆಳಗುವಾಗ ಹೇಳುವ ಮಂತ್ರ:

ದೀಪಂ ಜ್ಯೋತಿ ಪರಬ್ರಹ್ಮ ದೀಪೇನ ಸರ್ವತಮೋಪಃl
ದೀಪೇನ ಸಾಧ್ಯತೇ ದೀಪಂ ಸಂಧ್ಯಾ ದೀಪಂ ನಮೋಸ್ತುತೇll

ಶುಭ ಪ್ರಯಾಣಕ್ಕೆ ಹೇಳುವ ಮಂತ್ರ:

ಕುಂಕುಮಾಂಕಿತ ವರ್ಣಾಯ ಕುಂದೇಂದು ಧವಲಾಯಚl
ವಿಷ್ಣುವಾಹ ನಮಸ್ತುಭ್ಯಂ ಪಕ್ಷಿರಾಜಾಯತೇ ನಮಃll

ಚಿರಂಜೀವಿಗಳ ಸ್ಮರಿಸುವಿಕೆ:

ಅಶ್ವತ್ಥಾಮಾ ಬಲಿರ್ವ್ಯಾಸೋ ಹನೂಮಾಂಚ ವಿಭೀಷಣಃl
ಕೃಪಃ ಪರುಶುರಾಮಚ ಸಪ್ತೈತೆ ಚಿರಜೀವಿನಃll

ಮಾತಾ ಪಿತೃಗಳ ಸ್ಮರಣೆ:

ಮಾತೃ ದೇವೊ ಭವಃl ಪಿತೃ ದೇವೋ ಭವಃl ಆಚಾರ್ಯ ದೇವೋ ಭವಃl ಅತಿಥಿ ದೇವೋ ಭವಃl

ಸರ್ಪ ಭಯಕ್ಕೆ ಹೇಳುವ ಮಂತ್ರ:

ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಂ
ಶಂಖಪಾಲಂ ದೃತರಾಷ್ಟ್ರಂ ತಕ್ಷಕಂ ಕಾಲಿಯಂ ತಥಾ

ಅಶ್ವತ್ಥ ಪ್ರದಕ್ಷಿಣೆ ಸ್ತೋತ್ರ:

ಮೂಲತೋ ಬ್ರಹ್ಮರೂಪಾಯl ಮಧ್ಯತೋ ವಿಷ್ಣುರೂಪಿಣೇl ಅಗ್ರತಃ ಶಿವರೂಪಾಯl ಅಶ್ವತ್ಥಾಯ ನಮೋ ನಮಃll

ಶಾಂತಿ ಮಂತ್ರಗಳು:

ಓಂ ಅಸತೋಮಾ ಸದ್ಗಮಯl ತಮಸೋಮಾ ಜ್ಯೋತಿರ್ಗಮಯl
ಮೃತ್ಯೋರ್ಮಾ ಅಮೃತಂಗಮಯಾll
ಓಂ ಶಾಂತಿಃ ಶಾಂತಿಃ ಶಾಂತಿಃ

ಓಂ ಸಹನಾವವತು ಸಹನೌ ಭುನಕ್ತು ಸಹವೀರ್ಯಂ ಕರವಾವಹೈl
ತೇಜಸ್ವಿನಾವದೀತಮಸ್ತು ಮಾವಿದ್ವಿಶಾವಹೈll
ಓಂ ಶಾಂತಿಃ ಶಾಂತಿಃ ಶಾಂತಿಃ

ಮಲಗುವಾಗ ಹೇಳುವ ಮಂತ್ರ:

ರಾಮಂ ಸ್ಕಂದಂ ಹನೂಮನ್ತಂ ವೈನತೇಯಂ ವೃಕೋದರಂl
ಶಯನೇಯಃ ಸ್ಮರೇನಿತ್ಯಂ ದುಸ್ವಪ್ನಂ ತಸ್ಯ ನಸ್ಯತಿಃll

ಮೇಲೆ ತಿಳಿಸಲಾದ ಮಂತ್ರಗಳು ಮನಸ್ಸಿನ ಶಾಂತಿ ಹಾಗೂ ಆರೋಗ್ಯ ವೃದ್ಧಿಸಲು ಸಹಕಾರಿಯಾಗಿದೆ ಎಂಬ ನಂಬಿಕೆ ನಮ್ಮಲಿದೆ. ಅಷ್ಟೇ ಅಲ್ಲದೇ ಯಾವುದರ ಬಗ್ಗೆ ಏಕಾಗ್ರತೆಯಿಂದ ಅಂತರಂಗದಲ್ಲಿ ಜಪಿಸುತ್ತೇವೆಯೋ ಅದು ಈಡೇರುತ್ತದೆ, ಇದಕ್ಕೆ ಮಂತ್ರಗಳು ಪೂರಕವಾಗಿರಲಿದೆ ಎಂಬ ನಂಬಿಕೆ ಕೂಡ ನಮ್ಮಲಿದೆ.
🕉🕉🕉🕉🕉🕉🕉🕉🕉

No comments:

Post a Comment