ಸ್ವಭಾವ ಹೇಳೋ ದಶಾಭುಕ್ತಿ...THE LEADER
* ಯಾವ ವ್ಯಕ್ತಿಯ ಜನ್ಮ ನಕ್ಷತ್ರವು ಕೃತ್ತಿಕಾ ಉತ್ತರ ಉತ್ತರಾಷಾಢ ನಕ್ಷತ್ರವಾಗಿದ್ದರೆ ಅವರು ಜನಿಸಿದ ಕಾಲದಲ್ಲಿ ರವಿದೆಶೆ ಇರುತ್ತದೆ...
ರವಿದೆಶೆ 6 ವರ್ಷಗಳ ಕಾಲ ಇರುತ್ತದೆ...
ಈ ಸಂದರ್ಭದಲ್ಲಿ ಮಾನಸಿಕ ಹಿಂಸೆ ತೊಳಲಾಟ ಬಂಧು ವಿರೋಧಿ ವಿದೇಶ ಪ್ರಯಾಣ ತೀರ್ಥಯಾತ್ರೆ ಮತ್ತಿತರ ಸನ್ನಿವೇಶಗಳು ಎದುರಾಗುತ್ತವೆ...
* ಯಾವ ವ್ಯಕ್ತಿಯ ರೋಹಿಣಿ ಹಸ್ತ ಹಾಗೂ ಶ್ರವಣ ನಕ್ಷತ್ರದಲ್ಲಿ ಜನಿಸಿದ್ದರೆ ಅವರು ಜನಿಸಿದ ಕಾಲದಲ್ಲಿ ಚಂದ್ರದೆಶೆ ಇರುತ್ತದೆ...
ಈ ದೆಶೆಯು 10 ವರ್ಷಗಳ ಕಾಲ ಇರುತ್ತದೆ...
ಈ ದೆಶೆ ಇದ್ದಾಗ ಜಗಳ ಕಲಹ ಜಾಸ್ತಿ ಇರುತ್ತದೆ... ಮನೆಯಲ್ಲಿ ಜಗಳ ಕಲಹ ಉಂಟಾಗುತ್ತದೆ...
* ಯಾವ ವ್ಯಕ್ತಿಯ ಮೃಗಶಿರಾ ಚಿತ್ತಾ ಹಾಗೂ ಧನಿಷ್ಠ ನಕ್ಷತ್ರಗಳಲ್ಲಿ ಜನಿಸಿದ್ದರೆ ಅವರು ಜನಿಸಿದ ಕಾಲದಲ್ಲಿ ಕುಜದೆಶೆ ಇರುತ್ತದೆ...
ಈ ದೆಶೆಯೂ 7 ವರ್ಷಗಳ ಕಾಲ ಇರುತ್ತದೆ...
ಈ ದೆಶೆ ಇದ್ದಾಗ ಆಸ್ತಿ ವಿಚಾರದಲ್ಲಿ ವಿವಾದ ಹೆಚ್ಚಿರುತ್ತದೆ...
ನ್ಯಾಯಾಲಯದ ವಿಷಯದಲ್ಲಿ ಯಶಸ್ಸು ದೊರೆಯುತ್ತದೆ...
* ಯಾವ ವ್ಯಕ್ತಿಯ ಆರಿದ್ರಾ ಸ್ವಾತಿ ಹಾಗೂ ಶತಭಿಷಾ ನಕ್ಷತ್ರಗಳಲ್ಲಿ ಜನಿಸಿದ್ದರೆ ಅವರು ಜನಿಸಿದ ಕಾಲದಲ್ಲಿ ರಾಹು ದೆಶೆ ಇರುತ್ತದೆ...
ಈ ದೆಶೆಯು 18 ವರ್ಷಗಳ ವರೆಗೆ ಇರುತ್ತದೆ...
ಆದರೆ ಜನ್ಮಲಗ್ನದಲ್ಲಿ ರಾಹು ಉಚ್ಛನಾಗಿದ್ದರೆ ಎಲ್ಲಾ ರೀತಿಯ ಜಯ ದೊರೆಯುತ್ತದೆ...
* ಯಾವ ವ್ಯಕ್ತಿಯ ಪುನರ್ವಸು ವಿಶಾಖ ಮತ್ತು ಪೂರ್ವಾಭಾದ್ರ ನಕ್ಷತ್ರದಲ್ಲಿ ಜನಿಸಿದ್ದರೆ ಅವರು ಜನಿಸಿದ ಕಾಲದಲ್ಲಿ ಗುರುದೆಶೆ ಇರುತ್ತದೆ...
ಈ ದೆಶೆಯು 16 ವರ್ಷ ಇರುತ್ತದೆ...
ಈ ಸಂದರ್ಭದಲ್ಲಿ ಎಲ್ಲಾ ರೀತಿಯ ಅನುಕೂಲಗಳು ಉಂಟಾಗುತ್ತವೆ...
* ಯಾವ ವ್ಯಕ್ತಿಯ ಪುಷ್ಯ ಅನುರಾಧ ಮತ್ತು ಉತ್ತರಾಭಾದ್ರ ನಕ್ಷತ್ರದಲ್ಲಿ ಜನಿಸಿದ್ದರೆ ಅವರು ಜನಿಸಿದ ಕಾಲದಲ್ಲಿ ಶನಿ ದೆಶೆ ಇರುತ್ತದೆ...
ಈ ದೆಶೆ 19 ವರ್ಷ ಇರುತ್ತದೆ...
ಶನಿ ದೆಶೆ ಇದ್ದಾಗ ಕಬ್ಬಿಣಕ್ಕೆ ಸಂಬಂಧಪಟ್ಟಂತೆ ಲಾಭ ಉಂಟಾಗುತ್ತದೆ...
* ಯಾವ ವ್ಯಕ್ತಿಯ ಆಶ್ಲೇಷ ಜ್ಯೇಷ್ಠ ಹಾಗೂ ರೇವತಿ ನಕ್ಷತ್ರದಲ್ಲಿ ಜನಿಸಿದ್ದರೆ ಜನನ ಕಾಲದಲ್ಲಿ ಬುಧ ದೆಶೆ ಇರುತ್ತದೆ...
ಈ ದೆಶೆ 17 ವರ್ಷಗಳ ಕಾಲ ಇರುತ್ತದೆ...
ಬುಧ ದೆಶೆಯಲ್ಲಿ ಸಂಪಾದನೆ ಚೆನ್ನಾಗಿರುತ್ತದೆ...
ವ್ಯಾಪಾರದಲ್ಲಿ ಲಾಭ ಉಂಟಾಗುತ್ತದೆ...
ಲಗ್ನ ಕುಂಡಲಿಯಲ್ಲಿ ಬುಧ ನೀಚ ಸ್ಥಾನದಲ್ಲಿದ್ದರೆ 6 8 12 ಮನೆಯಲ್ಲಿದ್ದರೆ ಆರೋಗ್ಯದಲ್ಲಿ ವೈಪರೀತ್ಯ ಉಂಟಾಗಬಹುದು...
* ಯಾವ ವ್ಯಕ್ತಿಯ ಮಘಾ ಮೂಲ ಹಾಗೂ ಅಶ್ವಿನಿ ನಕ್ಷತ್ರಗಳಲ್ಲಿ ಜನಿಸಿದ್ದರೆ ಕೇತು ದೆಶೆ ಇರುತ್ತದೆ...
ಈ ದೆಶೆ 7 ವರ್ಷಗಳ ಕಾಲ ಇರುತ್ತದೆ...
ಹಣಕಾಸಿನಲ್ಲಿ ತೊಂದರೆ ಉಂಟಾಗುತ್ತದೆ...
* ಯಾವ ವ್ಯಕ್ತಿಯ ಪುಬ್ಬ ಪೂರ್ವಾಷಾಢ ಹಾಗೂ ಭರಣಿ ನಕ್ಷತ್ರದಲ್ಲಿ ಜನಿಸಿದ್ದರೆ ಜನನ ಕಾಲದಲ್ಲಿ ಶುಕ್ರದೆಸೆ ಇರುತ್ತದೆ...
ಈ ದೆಶೆ 20 ವರ್ಷಗಳ ಕಾಲ ಇರುತ್ತದೆ...
ಈ ದೆಸೆಯಲ್ಲಿ ವ್ಯಾಪಾರ ಲಾಭ ವಾಹನಗಳ ಖರೀದಿ ಹಾಗೂ ಸುಖ ಸಂತೋಷ ನೆಮ್ಮದಿಯನ್ನು ಕಾಣಬಹುದು...
ಆದರೆ ಕುಂಡಲಿಯಲ್ಲಿ ಶುಕ್ರನು ಬಲಹೀನನಾಗಿದ್ದರೆ ಏಳಿಗೆ ಅಷ್ಟಾಗಿ ಇರುವುದಿಲ್ಲ...
ಧನ್ಯವಾದಗಳು...
ಮಾಹಿತಿ ಇಷ್ಟವಾದರೆ ಶೇರ್ ಮಾಡಿ...
© 2020 Astro Vedic Science All Rights Reserved
ಫೇಸ್‌ಬುಕ್ ಪುಟ ಲೈಕ್ ಮಾಡಿ...
No comments:
Post a Comment