Thursday, 28 May 2020

ಸಂಖ್ಯಾ ವಿಶೇಷತೆ (ಯಾವುದೇ ಶ್ಲೋಕಗಳನ್ನು ಗೊತ್ತಾದ ಸಂಖ್ಯೆಗಳಲ್ಲಿ ೪೮, ೧೦೮ ಇತ್ಯಾದಿ ಜಪಿಸಲು ಏನು ಕಾರಣ ಎಂಬುದಕ್ಕಾಗಿ ಉತ್ತರ)

ಸಂಖ್ಯಾ ವಿಶೇಷತೆ 
(ಯಾವುದೇ ಶ್ಲೋಕಗಳನ್ನು ಗೊತ್ತಾದ ಸಂಖ್ಯೆಗಳಲ್ಲಿ ೪೮, ೧೦೮ ಇತ್ಯಾದಿ ಜಪಿಸಲು ಏನು ಕಾರಣ ಎಂಬುದಕ್ಕಾಗಿ ಉತ್ತರ)

ತುಂಬಾ ಜನ 48 ದಿನ ಪೂಜೆ ಮಾಡಿ, 108 ಜಪ ಮಾಡಿ, ಅಖಂಡ ಪೂಜೆ ಮಾಡಿ ಅಂತಾರೆ..
ಆದರೆ 48 ಯಾಕೆ, 108 ಯಾಕೆ, ಅಖಂಡ ಅಂದರೆ ಏನು ಅಂತ ಹೇಳೋರು ತುಂಬಾ ಕಮ್ಮಿ..

48 ಅಂದರೆ 27+9+12=48
27 ನಕ್ಷತ್ರಗಳು
9 ಗ್ರಹಗಳು.
12 ರಾಶಿಗಳು

ಹೀಗೆ 27 ನಕ್ಷತ್ರಗಳ 12 ರಾಶಿಗಳ, ಅಂದರೆ, ಮನೆಯ ಎಲ್ಲರಿಗೂ 9 ಗ್ರಹಗಳು ಶುಭವನ್ನುಂಟು ಮಾಡಲಿ ಎಂದು ಇದರ ಅರ್ಥ..

108 ಎಂದರೆ 
108 = 60+27+9+12

60 ಸಂವತ್ಸರಗಳು.
27 ನಕ್ಷತ್ರಗಳು
9   ಗ್ರಹಗಳು
12 ರಾಶಿಗಳು

ಅಖಂಡ ಎಂದರೆ 128 ದಿನ.

128 ರಲ್ಲಿ ಅರ್ಧ 64.
64-ಶಿವ ಶಕ್ತಿ ಪೀಠಗಳು.
64-ದೇವಿ ಶಕ್ತಿ ಪೀಠಗಳು.

64 ರಲ್ಲಿ ಅರ್ಧ 32.
32-ಗಣಪತಿಯ ಆಕಾರಗಳು

32 ರಲ್ಲಿ ಅರ್ಧ 16.
16-ಷೋಡಶ ಸಂಸ್ಕಾರಗಳು

16 ರಲ್ಲಿ ಅರ್ಧ 8

ಎಂಟು - ಅಷ್ಟ ಲಕ್ಷ್ಮಿಯರು, ಅಷ್ಟೈಶ್ವರ್ಯ ಫಲ

8 ರಲ್ಲಿ ಅರ್ಧ 4

ನಾಲ್ಕು ವೇದಗಳು..!

4 ರಲ್ಲಿ ಅರ್ಧ 2
ಎರಡು - ಸೂರ್ಯ, ಚಂದ್ರ..!

2 ರಲ್ಲಿ ಅರ್ಧ 1.
ಒಂದು-ಅದೇ " ನೀನು" ..! ಅದೇ "ಆತ್ಮ"..!

ಆ ಆತ್ಮವನ್ನು ಜಾಗೃತಗೊಳಿಸಿ, ಪರಮಾತ್ಮನನ್ನು ಒಲಿಸಿಕೊಳ್ಳುವುದೇ "ಅಖಂಡ"..!

ಒಂಭತ್ತು (೯) ಅಂಕೆಯ ಮಹತ್ತು..

ಹೆಚ್.ಎಂ.ಚಂದ್ರಶೇಖರ ಭಟ್, ರಾಜ್ಯ ಪ್ರಶಸ್ತಿ ಪುರಸ್ಕೃತರು, ಮಾಲ್ವೆ ಇವರ ಸಂಗ್ರಹದಿಂದ.

ಒಂದು ಕಲ್ಪ - 4,32,00,000 ವರ್ಷ - ಮೊತ್ತ 9
ಕೃತಯುಗ - 1728000 ವರ್ಷ - ಮೊತ್ತ 9
ತ್ರೇತಾಯುಗ - 1296000 ವರ್ಷ - ಮೊತ್ತ 9
ದ್ವಾಪರಯುಗ - 864000 ವರ್ಷ - ಮೊತ್ತ 9
ಕಲಿಯುಗ - 432000 ವರ್ಷ - ಮೊತ್ತ 9

ಏಕಸ್ಥಾನದಿಂದ ಮಹಾಪದ್ಮದವರೆಗೆ 36 ಹಂತ - ಮೊತ್ತ 9
36 ಸಲ 9ನ್ನು ಬರೆದಾಗ ಅದು ಮಹಾ ಪದ್ಮ -  ಮೊತ್ತ 9
ಗಡಿಯಾರದ ಮುಳ್ಳು ಒಂದು ಸುತ್ತು ಸುತ್ತಿದರೆ -720 ನಿಮಿಷ - ಮೊತ್ತ 9
ಒಂದು ದಿನಕ್ಕೆ 1440 ನಿಮಿಷ - ಮೊತ್ತ 9
ಭೂ ಪರಿಧಿ - 360° - ಮೊತ್ತ 9
12 ರಾಶಿಗಳ ಪರಿಧಿ - 360° - ಮೊತ್ತ 9

ನಕ್ಷತ್ರಗಳು -27 - ಮೊತ್ತ 9
ಜಾತಕದ ಭಾಗ್ಯಸ್ಥಾನದ ಮನೆ  ಒಂಬತ್ತು - 9
ಜಾತಕದ ಭಜಕ್ರದ ಪರಿಧಿ - 21,600 -  ಮೊತ್ತ 9
ನಿಮಿಷಕ್ಕೆ 18 ಸಲ ಉಸಿರಾಟ - ಮೊತ್ತ 9
ಹೃದಯ ಬಡಿತ 72 ಸಲ - ಮೊತ್ತ 9
1 ಘಂಟೆಗೆ 4320 ಹೃದಯ ಬಡಿತ - ಮೊತ್ತ 9
ದೇಹದ ಮರ್ಮಬಿಂಧುಗಳ ಸಂಖ್ಯೆ - 207 - ಮೊತ್ತ 9
ಕೈಯಲ್ಲಿ 27 ಎಲುಬು - ಮೊತ್ತ 9
ದೇಹದ ಜೀವಕೋಶಗಳ ಸಂಖ್ಯೆ 72 ಸಾವಿರ - ಮೊತ್ತ 9

ಭಗವದ್ಗೀತೆಯ ಅಧ್ಯಾಯ - 18 - ಮೊತ್ತ 9
ಪುರಾಣಗಳು 18 - ಮೊತ್ತ 9
ಪುರಾಣ ಪರ್ವಗಳು 18 - ಮೊತ್ತ 9
ಗಣಿತದ ಅಂಕೆ 1 ರಿಂದ 9 1+2+3+4+5+6+7+8+9= 45 - ಮೊತ್ತ 9
9×9 = 81
9 ರಿಂದ ನಿಶ್ಯೇಷವಾಗಿ ಭಾಗವಾಗುವೂ ಸಂಖ್ಯೆ - 9
ನವಕಲಶ - 9
ಬ್ರಹ್ಮಕಲಶ - 108 - ಮೊತ್ತ 9
ಅಷ್ಟೋತ್ತರ - 108 - ಮೊತ್ತ 9
ನವರಾತ್ರಿ - ಮೊತ್ತ 9
ನವಗ್ರಹ - ಮೊತ್ತ 9
ನವಧಾನ್ಯ - ಮೊತ್ತ 9

9ರ ಮಹತ್ತು ಆದ್ಯಂತ.
ಅಲ್ಲದೇ ಕಾಲಗಣಿತ, ಖಗೋಳ ಗಣಿತ, ಜೀವರಾಶಿಗಳ ದೇಹಗಣಿತ 9ರ ಅಂಕೆಯಲ್ಲಿ ಅಡಕವಾಗಿದೆ.

ನಿಮ್ಮ ಸಂಗ್ರಹವನ್ನೂ ಸೇರಿಸಿ ಈ ಮಸೇಜ್ ಶೇರ್ ಮಾಡಿ..

No comments:

Post a Comment