Thursday, 28 May 2020

ನಿಮ್ಮ ವಿವಾಹ ವಿಳಂಬವಾಗುತ್ತಿದೆ ಹಾಗಾದರೆ ಅದಕ್ಕೆ ಕಾರಣ ಇಲ್ಲಿದೆ ನೋಡಿ…!

ನಿಮ್ಮ ವಿವಾಹ ವಿಳಂಬವಾಗುತ್ತಿದೆ ಹಾಗಾದರೆ ಅದಕ್ಕೆ ಕಾರಣ ಇಲ್ಲಿದೆ ನೋಡಿ…!

ಜಾತಕದಲ್ಲಿ ವಿವಾಹ ಸಂಬಂದಪಟ್ಟಂತೆ
ಸಪ್ತಮ ಭಾವವನ್ನು ನೋಡಬೇಕು...
ಹುಡುಗನಿಗೆ ಶುಕ್ರನು ಹುಡುಗಿಗೆ ಕುಜನ ಸ್ಥಾನಗಳನ್ನು ನೋಡಿ ವಿವಾಹ ವಿಚಾರಗಳನ್ನು ತಿಳಿದುಕೊಳ್ಳಬೇಕು...

ಸಪ್ತಮದಲ್ಲಿ ಶನಿ ಇದ್ದರೆ ವಿವಾಹ ವಿಳಂಬ...

ಸಪ್ತಮದಲ್ಲಿ ರಾಹು ಮತ್ತು ಕೇತು ಇದ್ದರೆ ವಿವಾಹ ವಿಳಂಬ...

ಸಪ್ತಮಾಧಿಪತಿ ಕೆಟ್ಟ ಗ್ರಹಗಳ ಜೊತೆ ಇದ್ದರೆ ವಿಳಂಬ...

ಸಪ್ತಮಾಧಿಪತಿಯು ಲಗ್ನದಿಂದ 6,8,12 ರಲ್ಲಿ ಇದ್ದರೆ ವಿಳಂಬ...

ಹುಡುಗನಿಗೆ ಶುಕ್ರ ನೀಚನಿದ್ದರೆ ವಿವಾಹ ವಿಳಂಬ...

ಹುಡುಗಿಗೆ ಕುಜ ನೀಚನಿದ್ದರೆ ವಿವಾಹ ವಿಳಂಬ...

ಶನಿ, ರಾಹು, ಕೇತುಗಳ ಜೊತೆ ಸಪ್ತಮಾಧಿಪತಿ ಇದ್ದರೆ ವಿಳಂಬ ವಿವಾಹ...

ಕಾಲಸರ್ಪ ದೋಷಗಳಿಂದ ವಿವಾಹ ವಿಳಂಬವಾಗುತ್ತದೆ...

ಹೆಚ್ಚಾಗಿ ಕುಜದೋಷದಿಂದ ವಿಳಂಬ ವಾಗುತ್ತದೆ...

ರವಿಯು ನೀಚನಾಗಿ ಸಪ್ತಮದಲ್ಲಿ ಇದ್ದರೆ ಅಥವಾ‌ ದೃಷ್ಠಿಸುತಿದ್ದರೆ ವಿವಾಹಕ್ಕೆ ತನ್ನ ತಂದೆಯಿಂದನೇ ವಿಳಂಬ...

ಚಂದ್ರನು ನೀಚನಿದ್ದು ಸಪ್ತಮಾಧಿಪತಿ ಜೊತೆ ಇದ್ದರೆ ಅಥವಾ ಸಪ್ತಮದಲ್ಲೆ ಇದ್ದರೆ ತಾಯಿಯಿಂದ ವಿವಾಹ ವಿಳಂಬ...

ಬುಧನು ಸಪ್ತಮದಲ್ಲಿ ಕೆಟ್ಟ ಗ್ರಹಗಳ ದೃಷ್ಠಿ ಇದ್ದರೆ ಸಂಬಂಧಿಕರಿಂದ ವಿವಾಹ ವಿಳಂಬವಾಗುತ್ತದೆ...

ಲಗ್ನಾಧಿಪತಿ ಗುರು ಉಚ್ಚಕ್ಷೇತ್ರದಲ್ಲಿ ಸ್ವಕ್ಷೇತ್ರದಲ್ಲಿ ಇದ್ದರೆ ಹುಡುಗ ಅಥವಾ ಹುಡುಗಿ ಹೆಚ್ಚು ಓದಿರುತ್ತಾರೆ ಅದೇ ಕಾರಣದಿಂದ ಅವರಿಗೆ ನನಗಿಂತ ಹೆಚ್ಚು ಓದಿದವರು ಬೇಕು ಎಂದು ವಿವಾಹ ವಿಳಂಬ ಮಾಡುತ್ತಾರೆ... 

ಇಷ್ಟೆ ಅಲ್ಲದೆ ಅನೇಕ ಕಾರಣದಿಂದ ಮದುವೆ ವಿಳಂಬವಾಗುತ್ತು ಎಲ್ಲದಕ್ಕು ಜನ್ಮ ಜಾತಕದಲ್ಲಿ ತಿಳಿಯುತ್ತದೆ...

ಗೋಚಾರದಲ್ಲಿ ಗುರುಗ್ರಹವು ನಿಮ್ಮ ರಾಶಿಯ ಮೇಲೆ ದೃಷ್ಠಿ ಇದ್ದರೆ ಅದೇ ವರ್ಷ ಮದುವೆ ಆಗುವ ಸಂದರ್ಭವಿರುತ್ತದೆ...

No comments:

Post a Comment