Thursday, 28 May 2020

ಅನಸೂಯಾ ಮತ್ತು ಅವರ ತಂಗಿ ಸುಮತಿ ಪತಿವ್ರತದ ಮಹಿಮೆ

ಪುರಾಣ ಕಥೆಗಳು 1🕉️⚛️🔯🙏
ಅನಸೂಯಾ ಮತ್ತು ಅವರ ತಂಗಿ ಸುಮತಿ  ಪತಿವ್ರತದ ಮಹಿಮೆ

ತಂದೆ ಕರ್ದಮ ಮುನಿ ತಾಯಿ ದೇವಹೂತಿಯವರಲ್ಲಿ 9ನೇ ಮಗಳಾಗಿ ಅನಸೂಯ ಜನಿಸಿದಳು. ಆಕೆಯ ಪತಿ ಅತ್ರಿ. ಸಪ್ತಋಷಿಗಳಲ್ಲಿ ಒಬ್ಬ. ಬ್ರಹ್ಮ ಮಾನಸಪುತ್ರ ದತ್ತಾತ್ರೇಯ ಮಗ. ಅನಸೂಯ ಮಹಾ ಪತಿವ್ರತೆ. ಆಕೆಯ ಪತಿವ್ರತ ಧರ್ಮವನ್ನು ಪರೀಕ್ಷಿಸಲು ತ್ರಿಮೂರ್ತಿಗಳು ಬಂದರು. ಭಿಕ್ಷೆ ಹಾಕಲು ಹೋದಳು. ನೀನು ನಿರ್ವಸ್ತ್ರದಿಂದ ಭಿಕ್ಷೆ ಹಾಕು ಎಂದರು. ಆ ಕೂಡಲೆ ತನ್ನ ಪತಿಯ ಪಾದ ತೊಳೆದು ಆ ನೀರನ್ನು ಆ ತ್ರಿಮೂರ್ತಿಗಳ ಮೇಲೆ ಪ್ರೋಕ್ಷಣೆ ಮಾಡಿದಳು. ಆ ಕೂಡಲೇ ಅವರೆಲ್ಲ ಚಿಕ್ಕ ಮಕ್ಕಳಾದರು. ಆಗ ಅನಸೂಯ ಅವರನ್ನು ಎತ್ತಿಕೊಂಡು ನಿರ್ವಸ್ತ್ರದಿಂದ ತನ್ನ ಎದೆ ಹಾಲನ್ನೇ ಕೊಟ್ಟಳು ಅಂಥ ಪತಿವ್ರತೆ. ದತ್ತಾತ್ರೇಯ, ಚಂದ್ರ, ದೂರ್ವಾಸರು ಆಕೆ ಮಕ್ಕಳು. ತ್ರಿಮೂರ್ತಿಗಳ ಪತ್ನಿಯರಾದ ಲಕ್ಷ್ಮಿ, ಸರಸ್ವತಿ, ಪಾರ್ವತಿಯರು ಬಂದು ಪತಿ ಭಿಕ್ಷೆ ಬೇಡಿದಾಗ ಸಣ್ಣ ಮಕ್ಕಳಾದ ತ್ರಿಮೂರ್ತಿಗಳನ್ನು ಇವರಿಗೆ ಕೊಟ್ಟಳು. ಇದೇ ಪತಿವ್ರತಾ ಮಹಾವ್ರತ. ಈಗ ಅವರ ತಂಗಿ ಸುಮತಿ ಕಥೆ ಓದೋಣ, 

ಅನಸೂಯೆಯ ತಂಗಿ ಸುಮತಿಯ ಗಂಡ ಒಬ್ಬ ವೇಶ್ಯೆಯೊಂದಿಗೆ ಸಂಬಂಧ ಹೊಂದಿದ್ದ ಕರ್ಮ ಧರ್ಮ ಸಂಯೋಗದಿಂದ ಅವನಿಗೆ ಕುಷ್ಠ ರೋಗ ಪ್ರಾಪ್ತವಾಯಿತು. ಆದರೆ ಅವನ ಹೆಂಡತಿ ಮಹಾನ್ ಪತಿವ್ರತೆ ಒಂದಿಷ್ಟೂ ಬೇಸರಿಸದೆ ತ್ರಿಕರಣ ಪೂರ್ವಕವಾಗಿ ಅವನ ಸೇವೆ ಮಾಡುತ್ತಿದ್ದಳು. ಒಮ್ಮೆ ತಾನು ವೇಶ್ಯೆಯ ಮನೆಗೆ ಹೋಗಲಿಕ್ಕೆ ಆಗುತ್ತಿಲ್ಲವೆಂದು ನೊಂದುಕೊಳ್ಳುತ್ತಿರುವಾಗ ಸುಮತಿ ಗಂಡನನ್ನು ಒಂದು ಬಿದುರಿನ ಹೆಡಿಗೆಯಲ್ಲಿ ಕೂಡಿಸಿಕೊಂಡು ಹೋಗಿ ಬರುತ್ತಿರುವಾಗ ಕತ್ತಲಲ್ಲಿ ತಿಳಿಯದೆ ಅವನ ಕಾಲು ಅಲ್ಲಿ ಹೊರಟಿದ್ದ ಮಾಂಡವ್ಯ ಋಷಿಗಳಿಗೆ ತಾಗಲು ಅವರು ಕೋಪದಲ್ಲಿ ನನಗೆ ಒದ್ದೆ  ಮಾನವ ಸೂರ್ಯೋದಯವಾದ ಕೂಡಲೇ ಮರಣ ಹೊಂದಲಿ ಎಂದು ಶ್ರಾಪ ಕೊಟ್ಟರು ಇದನ್ನು ಕೇಳಿ ಹೆದರಿದ ಸುಮತಿ ಆ ಸೂರ್ಯನಿಗೆ ಉದಯವಾಗಬಾರದೆಂದು ಶಪಿಸಿದಳು. ಪತಿವ್ರತೆಯ ಶಾಪಕ್ಕೆ ಹೆದರಿ ಸೂರ್ಯ ಉದಯಿಸಲಿಲ್ಲ. ಸೃಷ್ಟಿಯ ಎಲ್ಲಾ ಕಾರ್ಯಗಳು ನಿಂತವು ಆಗ ಇಲ್ಲ ದೇವತೆಗಳು ಅನಸೂಯಳ ಬಳಿ ಹೋಗಿ ಕೇಳಿಕೊಂಡಾಗ ಅವಳು ತನ್ನ ತಂಗಿಯ ಮನ ಒಲಿಸಿ ಅವಳ ಗಂಡನಿಗೆ ಯಾವ ಪ್ರಾಣಾಪಾಯ ಆಗದಂತೆ ಭರವಸೆ ನೀಡಿದಾಗ ಸುಮತಿ ಸೂರ್ಯೋದಯ ಆಗುವಂತೆ ಮಾಡಿದಳು. 

ಇದೇ ಪತಿವ್ರತೆಯ ಮಹಾತ್ಮೆ. ನಮ್ಮ ದೇಶದಲ್ಲಿ ಪತಿವ್ರತೆಯರು ಇರುವ ದೇಶ. ಯುಗದಿಂದ ಯುಗಕ್ಕೆ ಎಷ್ಟೇ ವ್ಯತ್ಯಾಸವಾದರು ನಾಗರಿಕತೆಯನ್ನು ಹೊಂದಿಕೊಂಡು ಬೆಳೆಸಿಕೊಳ್ಳುತ್ತಿದೆ. ಈ ಭದ್ರತೆಗೆ ಈ ಉನ್ನತಿಗೆ ಮೂಲಾಧಾರ ಸ್ತ್ರೀ ಕುಲದ ಮನೋಧರ್ಮ. ಅವರ ಶೀಲ, ಅವರ ತ್ಯಾಗ ಅವರಿಂದ ಬಂದ ಅಕ್ಷಯ ಸಂಪತ್ತು ಎಲ್ಲವನ್ನು ರಕ್ಷಿಸಿಕೊಂಡಿದೆ. ಹೀಗೆ ಭಾರತೀಯ ಋಷಿಕೆಯರನ್ನು ಬಹಳ ಶ್ರದ್ಧಾ ಗೌರವಗಳಿಂದ ಸ್ಮರಿಸಬೇಕು. ವೈದಿಕ ಯುಗದಲ್ಲಿ ಗೋದಾ, ಘೋಷಾ, ವಿಶ್ವವಾರ, ಅಪಾಲಾ, ಇಂದ್ರಾಣಿ, ರೋಮಕಾ, ಇಂದ್ರಮಾತಾ, ಮೈತ್ರೇಯಿ, ಸಾವಿತ್ರಿ ದೇವಿಯವರ ಹೆಸರು ಪ್ರಸಿದ್ಧವಾಗಿದೆ. ದೈವದ ಹೊರತಾಗಿ ಯಾರಿಗೂ ನಮಸ್ಕಾರ ಮಾಡದ ಸಂನ್ಯಾಸಿ ತಾಯಿಗೆ ಮೊದಲು ನಮಸ್ಕಾರ ಮಾಡುತ್ತಾನೆ.

👉 👥👨‍👩‍👧‍👦 ನೀವು facebook ಅಲ್ಲಿ ಬೇರೆ ಆದ್ಯಾತ್ಮ ಗ್ರೂಪಗಳಲ್ಲಿ ಇದ್ರೆ ಆ ಗ್ರೂಪ್ ಗೆ ಈ ವಿಷಯ share ಮಾಡಿ, 

 "ನಾವು ತಿಳಿದುಕೊಂಡಿದ್ದನ್ನ ಬೇರೆಯವರಿಗೆ ತಿಳಿಸುವುದು ಒಂದು ದೇವರ ಸೇವೆ ]

No comments:

Post a Comment