Thursday, 28 May 2020

ಗ್ರಹ ದೋಷ ನಿವಾರಣೆಗೆ ಏನೆಲ್ಲಾ ದಾನ ನೀಡಬೇಕು...

ಗ್ರಹ ದೋಷ ನಿವಾರಣೆಗೆ ಏನೆಲ್ಲಾ ದಾನ ನೀಡಬೇಕು...

* ಸೂರ್ಯ ಗ್ರಹ - ವ್ಯಕ್ತಿಯ ಜಾತಕದಲ್ಲಿ ಸೂರ್ಯ ಗ್ರಹದ ದೋಷವಿದ್ದರೆ ಗೋದಿ ಅಥವಾ ರವೆಯನ್ನು ದಾನ ಕೊಡುವುದರ ಜೊತೆಗೆ ಕೆಂಪು ಬಣ್ಣದ ವಸ್ತ್ರವನ್ನು ದಾನ ಮಾಡಿದರೆ ದೋಷ ಪರಿಹಾರವಾಗುತ್ತದೆ...

* ಚಂದ್ರ ಗ್ರಹ - ವ್ಯಕ್ತಿಯ ಜಾತಕದಲ್ಲಿ ಚಂದ್ರ ನೀಚನಾಗಿದ್ದರೆ ಬಲಹೀನ ನಾಗಿದ್ದರೆ ಚಂದ್ರನ ದೋಷ ಇರುತ್ತದೆ ಅಂತವರು ಚಂದ್ರನ ಧಾನ್ಯವಾದ ಅಕ್ಕಿ ಹಾಗೂ ಬಿಳಿ ಬಣ್ಣದ ವಸ್ತ್ರವನ್ನು ದಾನ ಕೊಡಬೇಕು...

* ಕುಜ ಗ್ರಹ - ಜಾತಕದಲ್ಲಿ ಕುಜ ಅಂಗಾರಕ ಅಥವಾ ಮಂಗಳ ಗ್ರಹದ ದೋಷವಿದ್ದರೆ ಅವರು ತೊಗರಿಬೇಳೆಯ ಜೊತೆಗೆ ಕೆಂಪು ಬಣ್ಣದ ಮಿಶ್ರಣದ ವಸ್ತ್ರವನ್ನು ದಾನ ನೀಡಬೇಕು...

* ಬುಧ ಗ್ರಹ - ಬುಧ ಗ್ರಹದ ದೋಷವಿದ್ದರೆ ಹೆಸರುಕಾಳು ಮತ್ತು ಹಸಿರು ಬಣ್ಣದ ವಸ್ತ್ರವನ್ನು ದಾನವಾಗಿ ನೀಡಬೇಕು...

* ಗುರು ಗ್ರಹ - ಗುರು ಗ್ರಹದ ದೋಷವಿದ್ದರೆ ಕದಲೇಕಾಳು ಮತ್ತು ಹಳದಿ ಬಣ್ಣದ ವಸ್ತ್ರವನ್ನು ದಾನವಾಗಿ ನೀಡಬೇಕು...

* ಶುಕ್ರ ಗ್ರಹ - ಶುಕ್ರ ಗ್ರಹದ ದೋಷವಿದ್ದರೆ ಅವರೇಕಾಳು ಮತ್ತು ಬಿಳಿ ಹಾಗೂ ನೀಲಿ ಬಣ್ಣದ ವಸ್ತ್ರವನ್ನು ದಾನ ಮಾಡಬೇಕು...

* ಶನಿ ಗ್ರಹ - ಶನಿ ಗ್ರಹದ ದೋಷವಿದ್ದರೆ ಕರಿ ಎಳ್ಳು ಸಾಸಿವೆ ಎಣ್ಣೆ ಸಾಸಿವೆ ಕಾಳು ಇದರ ಜೊತೆಗೆ ಕಪ್ಪು ಬಣ್ಣದ ಬಟ್ಟೆಯನ್ನು ದಾನ ಮಾಡಬೇಕು...

* ರಾಹು ದೋಷ - ರಾಹು ದೋಷ ವಿದ್ದರೆ ಸರ್ಪ ದೋಷ ಕಾಳ ಸರ್ಪ ದೋಷಗಳು ಇರುತ್ತವೆ ಅಂತವರು ಉದ್ದಿನ ಬೇಳೆಯನ್ನು ಜೊತೆಗೆ ಮಿಶ್ರ ಬಣ್ಣದ ವಸ್ತ್ರಗಳನ್ನು ದಾನವಾಗಿ ನೀಡಬೇಕು...

* ಕೇತು ಗ್ರಹ - ಕೇತು ಗ್ರಹದ ದೋಷಕ್ಕೆ ಹುರುಳಿಕಾಳನ್ನು ದಾನವಾಗಿ ನೀಡಬೇಕು ಇದರ ಜೊತೆಗೆ ಮಿಶ್ರ ಬಣ್ಣದ ವಸ್ತ್ರಗಳನ್ನು ಸಹ ದಾನ ಮಾಡಿದರೆ ಒಳ್ಳೆಯದು...

ಯಾರ ಜಾತಕದಲ್ಲಿ ಸಾಡೇ ಸಾತಿ ಅಷ್ಟಮ ಶನಿ ಪಂಚಮ ಶನಿ ಇಂತಹ ಶನಿ ದೋಷವನ್ನು ಜಾತಕದಲ್ಲಿ ಹೊಂದಿರುವವವರು ಕರಿ ಎಳ್ಳು ಎಳ್ಳೆಣ್ಣೆ ಕಬ್ಬಿಣಕ್ಕೆ ಸಂಬಂಧಪಟ್ಟ ವಸ್ತುಗಳಾದ ಕಬ್ಬಿಣದ ಬಾಂಡ್ಲಿ ಕರಿ ಬಣ್ಣದ ಬಟ್ಟೆಯನ್ನು ದಾನ ಮಾಡಿದರೆ ದೋಷದ ಪ್ರಮಾಣ ತಗ್ಗುವುದು...

ಅನ್ನದಾನವೇ ಶ್ರೇಷ್ಠದಾನ ಮಹಾದಾನ ಎಂದು ಹೇಳಲಾಗುತ್ತದೆ...
ಅಂತಹ ಅನ್ನವನ್ನು ದಾನ ಮಾಡಿದರೆ ಸದಾ ಕಾಲಕ್ಕೂ ದಾರಿದ್ರ್ಯ ಯಾವುದೇ ಕಾರಣಕ್ಕೂ ನಿಮ್ಮನ್ನು ನಿಮ್ಮ ಮನೆಯನ್ನು ಸುಳಿಯುವುದಿಲ್ಲ ಜೊತೆಗೆ ಸುಖ ಶಾಂತಿ ನೆಮ್ಮದಿ ದೊರೆಯುತ್ತದೆ...

ಎಳ್ಳನ್ನು ದಾನ ಮಾಡಿದರೆ ನಿಮ್ಮ ಮನೆಯಿಂದ ಮತ್ತು ಜೀವನದಿಂದ ದರಿದ್ರ ತೊಲಗುತ್ತವೆ...

ಬಂಗಾರವನ್ನು ದಾನ ಮಾಡಿದರೆ ಆಯಸ್ಸು ವೃದ್ಧಿಯಾಗಿ ನೆಮ್ಮದಿ ಶಾಂತಿ ಸಮೃದ್ಧಿಯಾಗಿ ನೆಲೆಸುವುದು...

ನೀರನ್ನು ದಾನ ಮಾಡಿದರೆ ಮನುಷ್ಯನಿಗೆ ಆತ್ಮ ತೃಪ್ತಿ ಸಿಗುವುದು...

ಬೆಳ್ಳಿಯನ್ನು ದಾನ ಮಾಡಿದರೆ ಸದಾ ಕಾಲಕ್ಕೂ ಶುಕ್ರನ ಕೃಪೆ ನಿಮ್ಮ ಮೇಲೆ ಇರುತ್ತದೆ...

ದೀಪಗಳನ್ನು ದಾನ ಮಾಡಿದರೆ ಕಣ್ಣಿಗೆ ಸಂಬಂಧಪಟ್ಟ ದೃಷ್ಟಿ ದೋಷ ನಿವಾರಣೆಯಾಗುತ್ತದೆ ಮತ್ತು ದೃಷ್ಟಿ ಶಕ್ತಿ ಹೆಚ್ಚುತ್ತದೆ...

ವಸ್ತ್ರಗಳನ್ನು ದಾನ ಮಾಡುವುದರಿಂದ ದಾರಿದ್ರ್ಯ ತೊಲಗಿ ದೂರವಾಗುತ್ತದೆ...

ಗೋವು (ಹಸು) ದಾನ ಮಾಡಿದರೆ ಸಕಲ ರೀತಿಯಲ್ಲೂ ಒಳ್ಳೆಯದಾಗುತ್ತದೆ...

ಭೂ ದಾನ ಮಾಡಿದರೆ ಭೂಮಿಯಿಂದ ಲಾಭವಾಗುವುದು...

ಅರಿಶಿನ ಕುಂಕುಮ ಸುಮಂಗಲಿಯ ಸಂಕೇತವಾಗಿದ್ದು ಕುಂಕುಮ ದಾನ ಮಾಡುವುದರಿಂದ ಹಿತ ಶತ್ರುಗಳು ನಾಶವಾಗುತ್ತಾರೆ...

ಶ್ರೀಗಂಧವನ್ನು ದಾನ ಮಾಡಿದರೆ ಜೀವನದಲ್ಲಿ ಉಲ್ಲಾಸ ಸಂತೋಷ ಶಾಂತಿ ಲಭಿಸುತ್ತದೆ...

ದಾನ ಕೊಡುವಾಗ ತುಂಬು ಹೃದಯದಿಂದ ಒಳ್ಳೆಯ ಮನಸ್ಸಿನಿಂದ ಕೊಡಬೇಕು...
ಯಾವುದೇ ಕಾರಣಕ್ಕೂ ಮನಸ್ಸಿನಲ್ಲಿ ದ್ವೇಷ,ಅಸುಯೇ ಗರ್ವದಿಂದ ದಾನವನ್ನು ಮಾಡಬಾರದು...
ಭಕ್ತಿಪೂರ್ವಕವಾಗಿ ಸಮರ್ಪಣಾ ಮನೋಭಾವದಿಂದ ದಾನ ನೀಡಬೇಕು...

ಧನ್ಯವಾದಗಳು...ಮಾಹಿತಿ ಇಷ್ಟವಾದರೆ ಶೇರ್ ಮಾಡಿ...

© 2020 Astro Vedic Science All Rights Reserved
ಫೇಸ್‌ಬುಕ್ ಪುಟ ಲೈಕ್ ಮಾಡಿ...

No comments:

Post a Comment