#ವೇದಗಳ_ಸಂಕ್ಷಿಪ್ತ_ಮಾಹಿತಿ
#ಋಗ್ವೇದ
ನಾಲ್ಕು ವೇದಗಳಲ್ಲಿ ಮೊದಲನೆಯದು.ಚತುರ್ಮುಖ ಬ್ರಹ್ಮನ ಪೂರ್ವಮುಖದಿಂದ ಹೊರಬಂದಿದೆ.ಈ ವೇದದ ಮಂತ್ರಗಳನ್ನು ಯಜ್ಞ,ಯಾಗಾದಿಗಳನ್ನು ಮಾಡುವಾಗ,ದೇವತೆಗಳನ್ನು ಆಹ್ವಾನಿಸಲು ಉಪಯೋಗಿಸುತ್ತಾರೆ.ಯಜ್ಞದಲ್ಲಿ ಋಗ್ವೇದ ಮಂತ್ರಗಳನ್ನು ಪಠಿಸುವವರಿಗೆ "ಹೋತೃ"ವೆಂದು ಕರೆಯುತ್ತಾರೆ. ಋಗ್ವೇದದಲ್ಲಿ ಅನೇಕ ಶಾಖೆಗಳಿವೆ. ಆಯುರ್ವೇದ ಇದರ ಉಪವೇದ
#ಯಜುರ್ವೇದ
ಯಜುರ್ವೇದನಾಲ್ಕು ವೇದಗಳಲ್ಲಿ ಎರಡನೆಯದು.ಯಜ್ಞಯಾಗಾದಿಗಳ ವಿವರವಾದ ಕ್ರಮ ವಿವರಣೆಗಳು ಸೇರಿದೆ.ಇದರಲ್ಲಿ ೪೦ ಅಧ್ಯಾಯಗಳಿವೆ.ಯಜುರ್ವೇದದಲ್ಲಿ ಎರಡು ವಿಧಗಳಿದ್ದು ಕೃಷ್ಣ ಯಜುರ್ವೇದ ಹಾಗೂ ಶುಕ್ಲ ಯಜುರ್ವೇದಗಳೆಂದು ಹೆಸರು.ಕೃಷ್ಣಯಜುರ್ವೇದಕ್ಕೆ ತೈತ್ತೀರಿಯ ಸಂಹಿತೆ ಎಂದೂ ಶುಕ್ಲಯಜುರ್ವೇದಕ್ಕೆ ವಾಜಸನೇಯ ಸಂಹಿತೆ ಎಂದೂ ಹೆಸರಿದೆ.ಧನುರ್ವೇದ ಇದರ ಉಪವೇದ
#ಸಾಮವೇದ
ಸಾಮವೇದ ಮಂತ್ರಗಳನ್ನು ಸ್ವರ ಸಂಯೋಜನೆ ಮಾಡಿ ಹಾಡುವುದಕ್ಕೆ ಸಾಮ ಎಂದು ಹೇಳುತ್ತಾರೆ. ಸಾಮವೇದವು ಗಾನರೂಪವಾಗಿ ಹಾಡುವ ಮಂತ್ರಗಳಿಂದ ಕೂಡಿದ ವೇದವಾಗಿದೆ.ದೇವತೆಗಳನ್ನು ಸ್ತುತಿಸುವ ಮಂತ್ರಗಳು ಇದರಲ್ಲಿ ಸೇರಿದ್ದು ಎಲ್ಲವನ್ನೂ ಸ್ವರಲಯಸಹಿತ ಛಂದೋಬದ್ದವಾಗಿ ಹೇಳಬೇಕಾಗಿದೆ. ಈ ವೇದದಲ್ಲಿ ಋಗ್ವೇದದ ಮಂತ್ರಗಳೇ ಹೆಚ್ಚು ಇದ್ದು ಹೆಚ್ಚು ಕಡಿಮೆ ೭೮ ಮಂತ್ರಗಳು ಮಾತ್ರ ಹೊಸತಾಗಿವೆ.ಇದರಲ್ಲಿ ೧೫ ಭಾಗಗಳಿದ್ದು ೩೨ ಅಧ್ಯಾಯಗಳಿವೆ.ಗಾಂಧರ್ವವೇದ ಇದರ ಉಪವೇದ
#ಅಥರ್ವವೇದ
ಅಥರ್ವವೇದ ಹಿಂದೂ ಧರ್ಮದ ನಾಲ್ಕು ವೇದಗಳಲ್ಲಿ ಕೊನೆಯದು.ಅಥರ್ವಣ ಅಂಗೀರಸ ಋಷಿಗಳು ರಚಿಸಿದ ಮಂತ್ರಗಳಿಂದ ಕೂಡಿದ ವೇದವಾದುದರಿಂದ ಈ ಹೆಸೆರು.ಇದರಲ್ಲಿ ೨೦ ಕಾಂಡಗಳೂ,೭೬೦ ಸೂಕ್ತಗಳೂ,೬೦೦೦ ಮಂತ್ರಗಳೂ ಇವೆ.ಗದ್ಯ ಹಾಗೂ ಪದ್ಯ ಎರಡೂ ಶೈಲಿಯಲ್ಲಿ ರಚಿತವಾಗಿದೆ.ಈ ವೇದದಲ್ಲಿ ವಿವಾಹ ಪದ್ಧತಿ,ಶವಸಂಸ್ಕಾರ,ಗೃಹನಿರ್ಮಾಣ ಮುಂತಾದ ಜನರ ದಿನನಿತ್ಯದ ಜೀವನಕ್ಕೆ ಸಂಬಂಧಿಸಿದ ವಿಚಾರಗಳು ಕೂಡಾ ಸೇರಿಕೊಂಡಿದೆ.ಮಾಟ ಮಂತ್ರ,ಯಕ್ಷಿಣಿವಿದ್ಯೆ,ಇಂದ್ರಜಾಲ ಮುಂತಾದವುಗಳೂ ವಿಸ್ತಾರವಾಗಿ ಪ್ರಸ್ತಾಪಿಸಲ್ಪಟ್ಟಿದೆ.ಧನುರ್ವಿದ್ಯೆ,ರೋಗನಿವಾರಣೋಪಾಯ,ಔಷಧಿಗಳ ವಿವರ ಕೂಡಾ ಇದರಲ್ಲಿದೆ.ಯಜ್ಞಯಾಗಾದಿಗಳನ್ನು ನಿರ್ವಹಿಸುವ ಕ್ರಮದ ವಿವರಗಳೂ ಸೇರಿದೆ
#ಸಂಗ್ರಹ
#ಶ್ರೀ_ಕೃಷ್ಣಾರ್ಪಣ_ಮಸ್ತು
No comments:
Post a Comment