Thursday, 28 May 2020

ಹದಿನಾಲ್ಕು__ವರ್ಷ___ನಿದ್ರೆಗೆ__ಜಾರಿದ___ಉರ್ಮಿಳ___

#ಹದಿನಾಲ್ಕು__ವರ್ಷ___ನಿದ್ರೆಗೆ__ಜಾರಿದ___ಉರ್ಮಿಳ___
ರಾಮನು ಬಿಲ್ಲನ್ನು ಮುರಿದಾಗ ತಕ್ಷಣವೇ ಸೀತೆಯನ್ನು ಮದುವೆಯಾಗುವುದಕ್ಕೆ ,ಅರ್ಹತೆಯನ್ನು ಪಡೆದನು. ದಶರಥ ಮಹಾರಾಜರು ಮಿತಿಲಾ ಸಾಮ್ರಾಜ್ಯಕ್ಕೆ ಬಂದು ಜನಕ ಮಹಾರಾಜನ ಬಳಿ ಹೋಗಿ, ರಾಮ ಮತ್ತು ಸೀತೆಯ ಮದುವೆಯ  ದಿನ ಮತ್ತು ಸಮಯ ನಿಗದಿ ಮಾಡಿದರು.

ನಂತರ ಇದೇ ಸಮಯದಲ್ಲಿ ರಾಜಕುಮಾರಿ ಊರ್ಮಿಳ ಮತ್ತು ರಾಜ ಕುಮಾರ ಲಕ್ಷ್ಮಣರ ವಿವಾಹವನ್ನು ನಿಶ್ಚಯ ಮಾಡಿ ,ಶ್ರೀ ರಾಮ ಮತ್ತು ಸೀತೆ ಮದುವೆಯಾದ ದಿನದಂದೇ  ಊರ್ಮಿಳೆ ಮತ್ತು ಲಕ್ಷ್ಮಣರ ವಿವಾಹವು ಕೂಡ  ನೆರವೇರಿತು.

 ಲಕ್ಷ್ಮಣನ ಹೆಂಡತಿಯಾದ ಊರ್ಮಿಳೆಯು ತನ್ನ ಭಾವನಾದ ರಾಮ, ಪತಿಯಾದ ಲಕ್ಷ್ಮಣ ಮತ್ತು ತನ್ನ ಅಕ್ಕನಾದ ಸೀತೆಯ ಜೊತೆ  ಹದಿನಾಲ್ಕು ವರ್ಷಗಳ ವನವಾಸಕ್ಕೆ ಕಾಡಿಗೆ ತೆರಳಲು  ಎಲ್ಲಾ ಸಿದ್ಧತೆಯನ್ನು ಮಾಡಿಕೊಂಡಿದ್ದಳು.ಆದರೆ ಲಕ್ಷ್ಮಣ ಅವಳನ್ನು ಇಲ್ಲೇ ಉಳಿಯಲು ಹೇಳುತ್ತಾನೆ .ಹಾಗೆ ಅರಮನೆಯಲ್ಲಿ ಇನ್ನುಳಿದವರ ಯೋಗ ಕ್ಷೇಮವನ್ನು  ನೋಡಿಕೊಂಡು ಇಲ್ಲೇ ಉಳಿಯಲು  ಹೇಳಿದ.

ಇನ್ನು ಮುಂದೆ ನಾನು ನನ್ನ ಅಣ್ಣನ ಜೊತೆಯಲ್ಲಿಯೇ,  ಇದ್ದುಕೊಂಡು  ಅವರ ಸೇವೆ ಮಾಡುತ್ತಾ ನಿನ್ನನ್ನು ಸಹ ನೋಡಿಕೊಳ್ಳಲು ನನಗೆ ಸಮಯ ಸಿಗುವುದಿಲ್ಲ,ನಿನ್ನ ಕಡೆ ಗಮನ ಕೊಟ್ಟು,ನಿನ್ನ ರಕ್ಷಣೆ ಮಾಡಲು ನನ್ನ ಬಳಿ ಸಮಯವು ಇರುವುದಿಲ್ಲ ಆದ್ದರಿಂದ ನೀನು ಇಲ್ಲಿಯೇ ಉಳಿದುಕೊ ನಮ್ಮ ಜೊತೆ ಬರಬೇಡ ಎಂದು ಕೇಳಿಕೊಂಡನು. ತನ್ನ ಪತಿಯ ಆದೇಶದಂತೆ ಉರ್ಮಿಳೆ ಅರಮನೆಯಲ್ಲಿಯೇ ಉಳಿದಳು. 

ಹದಿನಾಲ್ಕು ವರ್ಷಗಳ ವನವಾಸದಲ್ಲಿ, ಮೊದಲ ರಾತ್ರಿಯೇ ಕಾಡಿನಲ್ಲಿ ರಾಮ ಸೀತೆಯರಿಬ್ಬರು  ನಿದ್ರೆಗೆ ಜಾರಿದರು.ಆಗ ಲಕ್ಷ್ಮಣನು ಕೂಡ ಇವರ ಜೊತೆ ಇದ್ದನಾದರೂ .ಆದರೆ ಅವರಿಬ್ಬರನ್ನು ನೋಡಿಕೊಂಡಡೇ ಕುಳಿತು ಬಿಟ್ಟನು. ಆಗ ಲಕ್ಷ್ಮಣನು ನಿದ್ರಾದೇವಿಯನ್ನು ಆಹ್ವಾನಿಸಿ ತನ್ನ ಅಣ್ಣ ಅತ್ತಿಗೆಯನ್ನು ನೋಡಿಕೊಳ್ಳುವ ಕರ್ತವ್ಯದ ಬಗ್ಗೆ ಗಮನ ಹರಿಸುವ ಸಲುವಾಗಿ, ಲಕ್ಷ್ಮಣನು ನಿದ್ರಾದೇವಿಯನ್ನು ಪರಿಪರಿಯಾಗಿ ಬೇಡಿಕೊಂಡು. ಹದಿನಾಲ್ಕು ವರ್ಷಗಳ ವರೆಗೆ ನನ್ನನ್ನು ನಿದ್ರೆಯಿಂದ ದೂರ ಉಳಿಯುವಂತೆ, ಬಿಟ್ಟುಬಿಡಬೇಕಾಗಿ ಕೇಳಿಕೊಂಡ,

ಆಗ ನಾನು ನನ್ನ  ಧರ್ಮವನ್ನು ಪಾಲಿಸಲು ಸಹಕಾರಿಯಾಗುತ್ತದೆ ಮತ್ತು ಯಾವುದೇ ಅಡ್ಡಿ, ಆತಂಕಗಳು ಇಲ್ಲದೆ  ತನ್ನ ಕರ್ತವ್ಯವನ್ನು ಸಹ ನಿರ್ವಹಿಸಬಹುದು ಎಂದನು.ನಿದ್ರಾ ದೇವಿಯು ಅವನ ಈ ಭಕ್ತಿಯನ್ನು ಮೆಚ್ಚಿ ಅವನ ಇಚ್ಛೆಯನ್ನು ಒಪ್ಪಿಕೊಂಡು ಲಕ್ಷ್ಮಣನಿಗೆ ಹದಿನಾಲ್ಕು ವರ್ಷಗಳು ಕಳೆಯುವ ತನಕ ನಿದ್ರೆಯು ಬಾರದೇ ಇರಲಿ ಎಂದು ಆಶೀರ್ವದಿಸಿದಳು.

ಆದರೆ ಲಕ್ಷ್ಮಣನು ಸತತವಾಗಿ ಹದಿನಾಲ್ಕು ವರ್ಷ ನಿದ್ರೆ ಮಾಡದೆ ಉಳಿಯುವುದು ಇದು ಪ್ರಕೃತಿಗೆ ವಿರುದ್ಧವಾಗಿರುವುದರಿಂದ 
ಲಕ್ಷ್ಮಣನ ನಿದ್ರೆಯನ್ನು  ಯಾರಾದರು ಒಬ್ಬರು ಇದರಲ್ಲಿ ಪಾಲನ್ನು ತೆಗೆದುಕೊಳ್ಳಬೇಕಾಗಿತ್ತು. ಆದುದರಿಂದ ನಿದ್ರಾದೇವಿಯನ್ನು ಒಪ್ಪಿಸಿ ತನ್ನ ನಿದ್ರೆಯ ಪಾಲನ್ನು ತನ್ನ ಹೆಂಡತಿಯಾದ ಊರ್ಮಿಳೆಗೆ ಕೊಡಿ,ಅವಳು ಖಂಡಿತವಾಗಿಯೂ ಇದಕ್ಕೆ ಒಪ್ಪಿಕೊಳ್ಳುತ್ತಾಳೆ ಎಂದನು.ಆಗ ನಿದ್ರಾದೇವಿಯು ಊರ್ಮಿಳೆಯ ಬಳಿ ಹೋಗಿ ಪರಿಸ್ಥಿತಿಯನ್ನು ವಿವರಿಸಿದಳು. ಇದಕ್ಕೆ ಊರ್ಮಿಳೆಯು ಸಹ ಒಪ್ಪಿಕೊಂಡಳು.

ಇದರಿಂದಲೇ ಲಕ್ಷ್ಮಣನು ಯಾವಾಗಲೂ ಎಚ್ಚರದಿಂದ ಇದ್ದು  ಯಾವುದೇ  ಒತ್ತಡ ,ಯೋಚನೆಗಳು ಇಲ್ಲದೆ ತನ್ನ ಕರ್ತವ್ಯ ಮತ್ತು ಧರ್ಮ ಪಾಲನೆಯನ್ನು   ಹಗಲು ಇರುಳು ಎನ್ನದೇ  ತನ್ನ ಸೇವೆಯನ್ನು  ಮಾಡಿದನು.ಆಗ ಊರ್ಮಿಳೆಯು ಈ ಕಾರಣದಿಂದಲೇ ಸದಾ ಹಗಲು ರಾತ್ರಿ ಕೂಡ  ಸತತ ಹದಿನಾಲ್ಕು ವರ್ಷಗಳ ಸಹ ನಿದ್ರೆಯಲ್ಲಿಯೇ  ಕಾಲ ಕಳೆದಳು.

ರಾವಣನ ಮಗ ಮೇಘನಾದ ಅತ್ಯಂತ ಶಕ್ತಿಶಾಲಿ  ಮತ್ತು ಪ್ರಭಲನಾಗಿದ್ದನು.  ಯಾವುದೇ ತರದ ಯುದ್ಧದಲ್ಲಿಯೂ ಸಹ ಯಾರು ಕೂಡ ಅವನನ್ನು ಸೋಲಿಸಲು ಆಗುತ್ತಿರಲಿಲ್ಲ.ಆದರೆ ಲಕ್ಷ್ಮಣ ಒಬ್ಬನಿಂದ ಮಾತ್ರ ಈ ಕೆಲಸ ಸಾಧ್ಯವಾಯಿತು ಯಾಕೆಂದರೆ ಅವನಿಗೆ ಹದಿನಾಲ್ಕು ವರ್ಷಗಳ ನಿದ್ರೆಯಿಲ್ಲದ್ದಿದ್ದರಿಂದ,  ಇದೇ ಕಾರಣದಿಂದಾಗಿಯೇ  ಸುಲಭವಾಗಿ ಅಜೇಯನಾದ  ಮೇಘನಾದಾನನ್ನು ಸೋಲಿಸಿ ಒಡೆದು ಉರುಳಿಸಿದನು. ಕೊನೆಗೆ ಲಕ್ಷ್ಮಣನ ಕೈಯಿಂದಲೇ ಹತನಾದನು. ಈ ಕೆಲಸ ಕೂಡ ಅಷ್ಟು ಸುಲಭವಾಗಿರಲಿಲ್ಲ ಇದೆಲ್ಲವೂ ಆಗಿದ್ದು ಊರ್ಮಿಳೆಯ ಆ ಒಂದು ಸಹಾಯದಿಂದ ಎಂಬುದನ್ನು ಮಾತ್ರ ಎಂದು ಮರೆಯುವಂತಿಲ್ವ

ಹದಿನಾಲ್ಕು ವರ್ಷಗಳ ಕಾಡಿನ ವನವಾಸದ ನಂತರ  ರಾಮ ಲಕ್ಷ್ಮಣರು  ಸೀತೆಯ ಸಮೇತ  ಅಯೋದ್ಯೆಗೆ ಮರಳಿ ಬಂದಾಗ ,ನಿದ್ರಾ ದೇವಿಯು ಮತ್ತೆ ಬಂದು ಲಕ್ಷ್ಮಣನ  ಆ ಒಂದು ವಚನದ ಬಗ್ಗೆ  ಜ್ಞಾಪಕ ಮಾಡಿಸಿದಳು.ಆಗ ಲಕ್ಷ್ಮಣ ನಿದ್ರೆಗೆ ಜಾರಿದ ಮತ್ತು ಊರ್ಮಿಳೆಯು  ನಿದ್ರೆಯಿಂದ ಎಚ್ಚರಗೊಂಡಳು. ಆಗ ರಾಮನು ಅಯೋದ್ಯೆಯ ರಾಜನಾಗಿ ಕೀರಿಟ ತೊಟ್ಟು ಸಿಂಹಾಸನದ ಮೇಲೆ ಕುಳಿತಿರುವುದನ್ನು ಕಂಡಳು.

ಊರ್ಮಿಳೆಯು ಕೂಡ ರಾಮಾಯಣದಲ್ಲಿ ನಿಜವಾಗಿಯೂ ಶ್ಲಾಘಿಸುವಂತಹ ವ್ಯಕ್ತಿತ್ವವನ್ನು ಹೊಂದಿದ್ದಳು.ವಾಲ್ಮೀಕಿ ಮಹರ್ಷಿಗಳು ಅವರ ಪುಸ್ತಕದಲ್ಲಿ  ಹೇಳಿರುವ ಪ್ರಕಾರ  ಅವಳು ಅವಳ ಪರಿವಾರವನ್ನು ಭಕ್ತಿ ಭಾವದಿಂದಲೇ ನೋಡುತ್ತಿದ್ದಳು.

 ಮತ್ತು ತನ್ನ ಗಂಡನ ಶ್ರೇಯೋಭಿವೃದ್ಧಿಗೆ ಸಹಾಯ ಮಾಡಿದ್ದಾಳೆ.ಅವಳು ಮಾಡಿರುವ ಕೆಲಸ ಕೇವಲ ಪ್ರಶಂಸನೀಯ ಮಾತ್ರವಲ್ಲ ಅದು ಎಲ್ಲರಿಗೂ ಮಾದರಿಯಂತಿದೆ.ಇದೇ ಕಾರಣಕ್ಕಾಗಿಯೇ ಅವಳನ್ನು ಆಗಾಗ್ಗೆ ರಾಮಾಯಣದ ನಾಯಕಿಯೆಂದು ಕರೆಯುತ್ತಾರೆ.

No comments:

Post a Comment