ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು 🌺🌺🌺
ಯುಗಾದಿ ಹಬ್ಬವನ್ನು ಆಚರಿಸುವುದರ ಮಹತ್ವ ಮತ್ತು ಕಾರಣಗಳು
ಎಲ್ಲ ವರ್ಷಾರಂಭಗಳಲ್ಲಿ ಅತ್ಯಂತ ಯೋಗ್ಯ ವರ್ಷಾರಂಭದ ದಿನವೆಂದರೆ ‘ಚೈತ್ರ ಶುಕ್ಲ ಪ್ರತಿಪದೆ. ’ಜನವರಿ ೧ ರಂದು ವರ್ಷಾರಂಭವನ್ನು ಏಕೆ ಮಾಡಬೇಕು ಎನ್ನುವುದಕ್ಕೆ ಯಾವುದೇ ಕಾರಣ ಇಲ್ಲ. ಯಾರೋ ಒಬ್ಬರು ನಿರ್ಧರಿಸಿದರು ಮತ್ತು ಅದು ಪ್ರಾರಂಭವಾಯಿತು. ತದ್ವಿರುದ್ಧ ಚೈತ್ರ ಶುಕ್ಲ ಪ್ರತಿಪದೆಯಂದು ವರ್ಷಾರಂಭವನ್ನು ಮಾಡಲು ನೈಸರ್ಗಿಕ, ಐತಿಹಾಸಿಕ ಮತ್ತು ಆಧ್ಯಾತ್ಮಿಕ ಕಾರಣಗಳಿವೆ.
ನೈಸಗಿಕ ಕಾರಣಗಳು: ಸರಿಸುಮಾರು ಪ್ರತಿಪದೆಯ ಸಮಯದಲ್ಲಿ ಸೂರ್ಯನು ವಸಂತ – ಸಂಪಾತದ ಮೇಲೆ ಬರುತ್ತಾನೆ (ಸಂಪಾತ ಬಿಂದು ಎಂದರೆ (ಮಕರ) ಕ್ರಾಂತಿವೃತ್ತ ಮತ್ತು ವಿಷುವವೃತ್ತ (ಕರ್ಕಾಟಕ) ಈ ಎರಡು ವೃತ್ತಗಳು ಯಾವ ಬಿಂದುವಿನಲ್ಲಿ ಪರಸ್ಪರ ಭೇದಿಸುತ್ತವೆಯೋ ಆ ಬಿಂದು) ಮತ್ತು ವಸಂತ ಋತುವು ಪ್ರಾರಂಭವಾಗುತ್ತದೆ. ಎಲ್ಲ ಋತುಗಳಲ್ಲಿ ‘ಕುಸುಮಾಕರಿ ವಸಂತ ಋತುವು ನನ್ನ ವಿಭೂತಿಯಾಗಿದೆ’ ಎಂದು ಭಗವಂತನು ಶ್ರೀಮದ್ಭಗವದ್ಗೀತೆಯಲ್ಲಿ (೧೦:೩೫) ಹೇಳಿದ್ದಾನೆ. ಈ ಸಮಯದಲ್ಲಿ ಸಮಶೀತೋಷ್ಣ, ಉತ್ಸಾಹವರ್ಧಕ ಮತ್ತು ಆಹ್ಲಾದಕರ ವಾತಾವರಣವಿರುತ್ತದೆ. ಶಿಶಿರ ಋತುವಿನಲ್ಲಿ ಗಿಡಮರಗಳ ಎಲೆಗಳು ಉದುರಿ ಹೋಗಿರುತ್ತವೆ ಮತ್ತು ಪ್ರತಿಪದೆಯ ಸಮಯದಲ್ಲಿ ಅವುಗಳಿಗೆ ಹೊಸ ಚಿಗುರು ಬರುತ್ತಿರುತ್ತವೆ. ಗಿಡಮರಗಳು ಚೆನ್ನಾಗಿ ಕಾಣುತ್ತವೆ. ಯುಗಾದಿ ಪಾಡ್ಯದಂದು ಪ್ರಾರಂಭವಾಗುವ ಹೊಸವರ್ಷದ ಕಾಲಚಕ್ರವು ವಿಶ್ವದ ಉತ್ಪತ್ತಿಯ ಕಾಲಚಕ್ರಕ್ಕೆ ಸಂಬಂಧಿಸಿದೆ. ಆದುದರಿಂದ ಸೃಷ್ಟಿಯು ನವಚೇತನದಿಂದ ತುಂಬಿರುತ್ತದೆ. ತದ್ವಿರುದ್ಧವಾಗಿ ಡಿಸೆಂಬರ್ ೩೧ ರಂದು ರಾತ್ರಿ ೧೨ ಗಂಟೆಗೆ ಪ್ರಾರಂಭವಾಗುವ ಹೊಸವರ್ಷದ ಕಾಲಚಕ್ರವು ವಿಶ್ವದ ಲಯಕಾಲಕ್ಕೆ ಸಂಬಂಧಿಸಿದೆ. ಯುಗಾದಿ ಪಾಡ್ಯದಂದು ಪ್ರಾರಂಭವಾಗುವ ಹೊಸವರ್ಷದ ತುಲನೆಯನ್ನು ಸೂರ್ಯೋದಯಕ್ಕೆ ಉದಯವಾಗುವ ತೇಜೋಮಯ ದಿನದೊಂದಿಗೆ ಮಾಡಬಹುದು.
ನಿಸರ್ಗದ ನಿಯಮವನ್ನು ಅನುಸರಿಸಿ ಮಾಡಿದ ವಿಷಯಗಳು ಮನುಷ್ಯರಿಗೆ ಪೂರಕವಾಗಿರುತ್ತವೆ ಮತ್ತು ಅದಕ್ಕೆ ವಿರುದ್ಧವಾಗಿ ಮಾಡಿರುವ ವಿಷಯಗಳು ಮನುಷ್ಯರಿಗೆ ಹಾನಿಕಾರಿಯಾಗಿರುತ್ತವೆ. ಆದುದರಿಂದ ಪಾಶ್ಚಾತ್ಯ ಸಂಸ್ಕೃತಿಗನುಸಾರ ಜನವರಿ ಒಂದರಂದು ಹೊಸವರ್ಷಾರಂಭವನ್ನು ಮಾಡದೇ, ಯುಗಾದಿ ಪಾಡ್ಯದಂದೇ ಹೊಸವರ್ಷವನ್ನು ಆಚರಿಸುವುದರಲ್ಲಿ ನಮ್ಮ ನಿಜವಾದ ಹಿತವಿದೆ.
ಐತಿಹಾಸಿಕ ಕಾರಣಗಳು: ಈ ದಿನದಂದು ರಾಮನು ವಾಲಿಯನ್ನು ವಧಿಸಿದನು. ವಿಜಯದ ಪ್ರತೀಕವು ಎತ್ತರದಲ್ಲಿರುತ್ತದೆ. ಹಾಗಾಗಿ ಬ್ರಹ್ಮಧ್ವಜ ಎತ್ತರದಲ್ಲಿರುತ್ತದೆ. ಈ ದಿನದಿಂದಲೇ ‘ಶಾಲಿವಾಹನ ಶಕೆ’ ಪ್ರಾರಂಭವಾಯಿತು, ಏಕೆಂದರೆ ಈ ದಿನ ಶಾಲಿವಾಹನನು ಶತ್ರುಗಳ ಮೇಲೆ ವಿಜಯವನ್ನು ಪಡೆದನು.
ಆಧ್ಯಾತ್ಮಿಕ ಕಾರಣಗಳು : ಬ್ರಹ್ಮದೇವನು ಇದೇ ದಿನದಿಂದು ಸೃಷ್ಟಿಯನ್ನು ನಿರ್ಮಿಸಿದನು. ಅರ್ಥಾತ್ ಈ ದಿನ ಸತ್ಯಯುಗವು ಪ್ರಾರಂಭವಾಯಿತು. ಆದುದರಿಂದಲೇ ಈ ದಿನದಂದು ವರ್ಷಾರಂಭವನ್ನು ಮಾಡುತ್ತಾರೆ. ಯುಗಾದಿಯಂದು ತೇಜ ಮತ್ತು ಪ್ರಜಾಪತಿ ಲಹರಿಗಳು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತವೆ. ಸೂರ್ಯೋದಯದ ಸಮಯದಲ್ಲಿ ಈ ಲಹರಿಗಳಿಂದ ಪ್ರಕ್ಷೇಪಿತವಾಗುವ ಚೈತನ್ಯವು ಹೆಚ್ಚಿನ ಸಮಯದವರೆಗೆ ಉಳಿಯುತ್ತದೆ. ಅದು ಜೀವದ ಜೀವಕೋಶಗಳಲ್ಲಿ ಸಂಗ್ರಹವಾಗುತ್ತದೆ ಹಾಗೂ ಅವಶ್ಯಕತೆಗನುಸಾರ ಆ ಜೀವದಿಂದ ಉಪಯೋಗಿಸಲ್ಪಡುತ್ತದೆ.
*ಯುಗಾದಿ ಹಬ್ಬದ ಮಹತ್ವ*
ಚೈತ್ರಮಾಸಕ್ಕೆ ವಿಷ್ಣು ನಿಯಾಮಕ
ಚೈತ್ರ ಶುಕ್ಲ ಪ್ರತಿಪತ್ತಿನoದು ಯುಗಾದಿ ಹಬ್ಬದ ದಿನ ನೂತನ ವರ್ಷಾರಂಭ
*ಈ ದಿನ ಅರುಣೋದಯದ ಕಾಲದಲ್ಲಿಯೇ ಎದ್ದು ಭಗವಂತನ ನಾಮಸ್ಮರಣೆಯನ್ನು ಮಾಡುತ್ತಾ -ದೇವರ ಮನೆಗೆ ಹೋಗಿ ದೇವರ ಮುoದೆ ಇಟ್ಟಿರುವ ಪಂಚಾoಗ ,ತರಕಾರಿಗಳು -ಧಾನ್ಯಗಳು ,ಫಲ-ತಾoಬೂಲಗಳು ಎಣ್ಣೆ ನೆಲ್ಲಿಕಾಯಿ* *ಮುoತಾದ ವಸ್ತುಗಳನ್ನು ಹೊಸ ಕನ್ನಡಿಯ ಮೂಲಕ ನೋಡಬೇಕು* .ಯಾವ ಯಾವ ವಸ್ತುಗಳನ್ನು ಕನ್ನಡಿಯ ಮೂಲಕ ನೋಡುವೇವೋ ಅವುಗಳನ್ನು ಬಿoಬರೂಪಿ ಪರಮಾತ್ಮನು ದೊರಕಿಸಿಕೋಡುವನು. ಮುಖಪ್ರಕ್ಷಾಲನೆಯನ್ನು ಮಾಡಿ *ಗಜೇoದ್ರ ಮೋಕ್ಷಪಾರಯಣ ಮಾಡಬೇಕು*
ಯುಗಾದಿಯಂದು ಪ್ರತಿಯೋಬ್ಬನು
ಅಭ್ಯoಜನ ಮಾಡಲೇಬೇಕು . ಈ ಮೊದಲು ಪೂಜಕನು ಸ್ನಾನ ಮಾಡಿ *ಭಗವoತನಿಗೆ ಎಣ್ಣೆ ಸೀಗೆಪುಡಿ -ಬಿಸಿನಿರಿನಿoದ ಅಭ್ಯoಜನವನ್ನು ಮಾಡಿಸಬೇಕು . ಭಗವಂತನಿಗೆ* *ಮಾಡಿ ಉಳಿದ ಎಣ್ಣೆ -ಸೀಗೆಪುಡಿಗೆ ಬೇರೆ ಎಣ್ಣೆ ,ಸೀಗೆಪುಡಿಯನ್ನು ಬೆರೆಸಿ ಪ್ರತಿಯೋಬ್ಬರು ಹಚ್ಚಿಕೊoಡು ನಂತರ ಸ್ನಾನ ಮಾಡಬೇಕು.*
*ಸಪ್ತಚಿರoಜೀವಿಸ್ಮರಣೆ*
ಎಣ್ಣೆಯನ್ನು ಹಚ್ಚಿಕೊಳ್ಳುವಾಗ ಅಶ್ವತ್ಥಾಮಾದಿ ಸಪ್ತ ಚಿರoಜೀವಿಗಳನ್ನು ಮಾರ್ಕoಡೇಯನನ್ನು ಈ ಕೆಳಗೆ ಕೊಟ್ಟಿರುವ ಮಂತ್ರವನ್ನು ಹೇಳಿ ಸ್ಮರಿಸಬೇಕು .
अश्वत्तामा बलिर्व्यास: हनूमांश्च विभीषण: । कृप: परशुरामश्च सप्तैते चिरंजीविन: ।
ಅಶ್ವತ್ತಾಮಾ ಬಲಿರ್ವ್ಯಾಸ: ಹನೂಮಾಂಶ್ಚ ವಿಭೀಷಣ: | ಕೃಪ: ಪರಶುರಾಮಶ್ಚ ಸಪ್ತೈತೇ ಚಿರಂಜೀವಿನ: |
ಅಭ್ಯoಜನವನ್ನು ಮಾಡಿದ ನಂತರ ಭಗವಂತನ ವಿಶೇಷ ಪೂಜೆಯನ್ನು ಮಾಡಿ ನಂತರ ಹೊಸಬಟ್ಟೆಯನ್ನು ಧರಿಸಿ ನಿoಬಕ ದಳ ಬಕ್ಷಣ
(ಬೇವು -ಬೆಲ್ಲ)ವನ್ನು ಮಾಡಬೇಕು
*ಬೇವು ಬೆಲ್ಲ ಭಕ್ಷಣೆ ಮಾಡುವಾಗ ಹೇಳಬೇಕಾದ ಮ oತ್ರ*
*शतायुर्वज्रदेहाय सर्वसंपत्कराय च सर्वारिष्टविनाशाय निंबकदळभक्षणम*्
*ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯ ಚ | ಸರ್ವಾರಿಷ್ಟವಿನಾಶಾಯ ನಿಂಬಕದಳಭಕ್ಷಣಮ್ |*
*ನೂರು ವರ್ಷಆಯುಸ್ಸು -ವಜ್ರದಂತೆ ಧೃಢವಾದ ಶರೀರ ಸರ್ವಸಂಪತ್ತು ಸರ್ವರಿಷ್ಟನಾಶ* *ಇವುಗಳಿಗಾಗಿ ಯುಗಾದಿಯoದು ಬೇವು ಬೆಲ್ಲಗಳ ಭಕ್ಷಣೆ ಮಾಡಬೇಕು*
*ನಂತರ ಪಂಚಾoಗ ಶ್ರವಣಮಾಡಬೇಕು*
No comments:
Post a Comment