💥💥ತ್ರಿಮೂರ್ತಿಗಳಲ್ಲಿ ಒಬ್ಬರಾದ ಶಿವನ ಸೋದರಿಯ ಬಗ್ಗೆ ನಿಮಗೆ ಗೊತ್ತಾ ...? 💥💥
#ಶಿವನಿಗೂ ಸೋದರಿ ಇದ್ದಾಳೆ 😱
"The Two womans are (Not related blood) could not live happy for too long under the same roof "
ಎನ್ನುವ ಹಾಗೆ ಎರಡು ಹೆಣ್ಣುಗಳು ಒಂದೇ ಸೂರಿನಲ್ಲಿ ಹೆಚ್ಚು ದಿನ ಇರಲಾರರು.....ಒಡ ಹುಟ್ಟಿದವರು ಬಿಟ್ಟು .....
ಬನ್ನಿ ಶಿವನ ತಂಗಿ ಆಶಾವರಿ ದೇವಿಯ ಬಗ್ಗೆ ತಿಳಿಸುವುದರ ಜೊತೆಗೆ ....ಹೆಣ್ಣಿಗೆ ಮತ್ತೊಬ್ಬ ಹೆಣ್ಣಿನ ಜೊತೆ ಅಸೂಹೆ ಮತ್ತು ಇಬ್ಬರ ಮನಸ್ಸೂ ಸೇರುವುದಿಲ್ಲ .....ಇದರ ಬಗ್ಗೆ ಸಂಕ್ಷಿಪ್ತವಾಗಿ ಹೇಳುವೆನು. 😊
ಶಿವ ತ್ರಿಮೂರ್ತಿಗಳಲ್ಲಿ ಒಬ್ಬರು. ಶಿವ ಲಯ ಕಾರಕ ಕರುಣಾ ಸಾಗರ ಬೇಡಿದ ವರವನ್ನು ಕೊಡುವ ದಯಾಮಯ. ಸುರ ಅಸುರರೆನ್ನದೆ ಪ್ರತಿಯೊಬ್ಬರೂ ಪೂಜಿಸುವ ದೇವ ಮಹಾದೇವ. ಒಂದು ಬಿಲ್ವಪತ್ರೆ ಅರ್ಪಸಿದರೆ ಸಾಕು ಪ್ರಸನ್ನನಾಗಿ ಬೇಡಿದ ವರವನ್ನು ಕೊಡುವ ಕರುಣಾ ಸಾಗರ. ಶಿವನ ಲೀಲೆಗಳು ಅನಂತ, ಶಿವ ನಾದ ರೂಪ ಶಿವನಿಗೆ ಆದಿ ಅಂತ್ಯ ಎಂಬುದೇ ಇಲ್ಲ.
ತಂದೆ ತಾಯಿ ಇಲ್ಲ ಆದರೂ ಶಿವನಿಗೆ ಒಬ್ಬಳು ತಂಗಿ ಇದ್ದಾಳೆ. ಅವಳೇ #ಆಶಾವರಿ . ಯಾರಿದು ಆಶಾವರಿ ಹೇಗೆ ಶಿವನಿಗೆ ತಂಗಿ ಯಾದಳು ಅವಳ ಸೃಷ್ಟಿ ಹೇಗೆ ಆಯ್ತು ಎಂಬುದನ್ನು ತಿಳಿಯೋಣ ☀
#ಸತಿಯ ಅಗ್ನಿ ಪ್ರವೇಶದ ನಂತರ ಶಿವನು ಅಕ್ಷರಶಃ ವಿರಾಗಿ ಯಾಗಿ ದಿಗಂಬರನಾಗಿ ಲೋಕ ಲೋಕ ಗಳನ್ನು ಅಲೆದಲೆದು ದ್ಯಾನಾಸಕ್ತನಾಗಿ ಕುಳಿತು ಬಿಡುತ್ತಾನೆ. ಸತಿಯ ಅಗಲಿಕೆ ಯಿಂದಾಗಿ ವಿರಾಗಿ ಯಾಗಿ ತಪಸ್ಸಿಗೆ ಕುಳಿತು ಬಿಡುತ್ತಾನೆ.
ದೇವತೆಗಳು ಮತ್ತೆ ಶಿವನನ್ನು ಕೈಲಾಸಕ್ಕೆ ತರಲು ಮತ್ತು ಲೋಕ ಕಾರ್ಯಗಳನ್ನು ಮಾಡಲು ಶಿವನಿಗೂ ಆದಿ ಶಕ್ತಿಗೂ ವಿವಾಹ ಮಾಡಿಸಲು ನಿರ್ಧರಿಸುತ್ತಾರೆ .
ದೇವತೆಗಳ ಕೋರಿಕೆ ಯಂತೆ ಆದಿ ಶಕ್ತಿಯು ಪಾರ್ವತಿಯಾಗಿ ಹಿಮವಂತ ಮತ್ತು ಮೇನೆಯರ ಮಗಳಾಗಿ ಜನಿಸುತ್ತಾಳೆ. ನಂತರ ಘೋರ ತಪಸ್ಸನ್ನು ಆಚರಿಸಿ ಶಿವನನ್ನು ತನ್ನ ತಪಸ್ಸಿನಿಂದ ಮೆಚ್ಚಿಸಿ ವಿವಾಹ ಆಗುತ್ತಾಳೆ.
ನಂತರ ಶಿವ ಪಾರ್ವತಿರು ಕೈಲಾಸಕ್ಕೆ ಬರುತ್ತಾರೆ. ಆದರೆ ಅಲ್ಲಿ ಬರೀ ಗಂಡಸರೇ ಇರುತ್ತಾರೆ ಹೆಂಗಸರು ಇರುವುದಿಲ್ಲ. ಗಣ ಪ್ರೇತಾದಿಗಳೆಲ್ಲರೂ ಪಾರ್ವತಿಯನ್ನು ಮಾತೆ ಎಂದು ಕರೆಯುತ್ತಾರೆ. ಇಷ್ಟಾದರೂ ಪಾರ್ವತಿಗೆ ಬೇಸರ ಒಂದು ಹೆಣ್ಣು ಜೀವ ಕೈಲಾಸದಲ್ಲಿ ಇಲ್ಲ.ತಂದೆಯ ಮನೆಯಲ್ಲಿ ಹಲವಾರು ಗೆಳತಿಯರು ಇದ್ದರು ಆದರೆ ಇಲ್ಲಿ ಒಂದು ಹೆಣ್ಣೂ ಇಲ್ಲ ....ಇಡೀದಿನ ಕಳೆಯಲು ಬಹಳ ಬೇಸರ ವಾಗಿದೆ ಎಂದು ಚಿಂತೆಮಾಡುತ್ತಾಳೆ. ಆಗ ಪಾರ್ವತಿಯ ಚಿಂತೆಯನ್ನು ಅರಿತ ಶಿವನು ಏನಾಯ್ತು ಯಾಕೆ ಬೇಸರ ಎಂದಾಗ ಪಾರ್ವತಿಯು ಕೈಲಾಸದಲ್ಲಿ ನನ್ನಜೊತೆ ಸದಾ ಇರಲು ಒಂದು ಹೆಣ್ಣು ಇಲ್ಲ ತುಂಬಾ ಬೇಸರವಾಗುತ್ತಿದೆ ಎಂದಳು.
ಆಗ ಕರುಣಾ ಸಾಗರನಾದ ಶಿವ ಪಾರ್ವತಿಯ ಬೇಸರವನ್ನು ಹೋಗಲಾಡಿಸಲು ತನ್ನಂತೆಯೇ ಇರುವ #ಆಶಾವರಿ ಯನ್ನು ಸೃಷ್ಟಿಸುವರು. ಶಿವನ ತಂಗಿ ಆಶಾವರಿಯು ಥೇಟ್ ಶಿವನಂತೆ ಹುಲಿಯ ಚರ್ಮವನ್ನು ದರಿಸಿರುತ್ತಾಳೆ. ಉದ್ದನೆಯ ಕೂದಲು ಹೊಡೆದ.ಪಾದ ಒಂದು ತರಹ ವಿಲಕ್ಷಣವಾಗಿ ಇರುತ್ತಾಳೆ. ಬಹಳ ಕುಳ್ಳಗೆ ಇರುತ್ತಾಳೆ. ಸುಂದರ ವಾಗಿ ಇರುವುದಿಲ್ಲ.
ಆದರೂ ಪಾರ್ವತಿ ಸಂತೋಷದಿಂದ ಕೈಲಾಸಕ್ಕೆ ಕರೆದು ತರುತ್ತಾಳೆ.
ನೋಡಲು ಅಷ್ಟು ಚೆನ್ನಾಗಿ ಇರುವುದಿಲ್ಲ ಆಶಾವರಿಯು .
ಆಗ ಪಾರ್ವತಿ ಆಶಾವರಿಯನ್ನು ಬಗೆ ಬಗೆ ಯಲ್ಲಿ ಅಲಂಕರಿಸುತ್ತಾಳೆ ....ಹೊಸ ವಸ್ತ್ರ .....ಆಭರಣ ..ಗಳಿಂದ ಅಲಂಕರಿಸುತ್ತಾಳೆ. ಹೊಸ ಬಟ್ಟೆ ಕೊಡುತ್ತಾಳೆ ....ಆದರೆ ಆಶಾವರಿ ಅದು ಹೊಂದಿಕೆ ಯಾಗುತ್ತಿಲ್ಲ ಎಂದು ಹೇಳಿ ಹಠ ಮಾಡುತ್ತಾಳೆ. ಆಶಾವರಿ ನಗ್ನ ರೂಪಿ ಸೃಷ್ಟಿಯಾದಾಗ ನಗ್ನವಾಗಿದ್ದಳು ....ಉದ್ದನೆಯ ಕೂದಲು ಅಷ್ಟೇ ಇದ್ದದ್ದು. ಅವಳಿಗೆ ಉಡುಪು ಕೊಡುವಷ್ಟರಲ್ಲಿ ಪಾರ್ವತಿಗೆ ಸಾಕು ಎನಿಸುತ್ತದೆ.
ಆಗ ಆಶಾವರಿಯು ಹಸಿವು ಹಸಿವು ಎಂದಾಗ ಪಾರ್ವತಿಯು ಮಾಡಿದ ಎಲ್ಲಾ ಭೋಜನವನ್ನು ಬಡಿಸುವಳು. ಆದರೂ ಆಶಾವರಿಯು ತೃಪ್ತಿ ಹೊಂದಲಿಲ್ಲ .....ಮತ್ತೆ ಹಸಿವು ಎನ್ನುವಳು. ಕೈಲಾಸದಲ್ಲಿ ಇದ್ದ ಅಷ್ಟೂ ಭೋಜನವನ್ನು ಮತ್ತು ಫಲಹಾರಗಳನ್ನು ಕೊಟ್ಟರೂ ಮತ್ತೂ ಬೇಕು ಎನ್ನುವಳು....ಶಿವನಿಗೂ ಊಟ ಮಿಕ್ಕುವುದಿಲ್ಲ .
ಪಾರ್ವತಿಗೆ ಬಹಳ ಬೇಸರವಾಗುತ್ತದೆ.
ಜೊತೆಗೆ ಆಶಾವರಿಯ ಪಾದ ಬಹಳ ಹೊಡೆದಿರುತ್ತದೆ. ಅದನ್ನು ನೀರಿನಲ್ಲಿ ಮುಳುಗಿಸಿ ಪಾದಗಳನ್ನು ನಯಗೊಳಿಸಲು ಆಶಾವರಿ ಪಾರ್ವತಿಗೆ ಹೇಳುತ್ತಾಳೆ. ಆಗ ಬೇಸರ ಗೊಂಡ ಪಾರ್ವತಿ ಕೋಪ ಗೊಂಡು ಶಿವನಲ್ಲಿ ಇರುವ ವಿಷಯ ಹೇಳುತ್ತಾಳೆ .....ಮೊದಲು ನಿಮ್ಮ ತಂಗಿಯನ್ನುಮದುವೆ ಮಾಡಿ ಅತ್ತೆಯ ಮನೆಗೆ ಕಳುಹಿಸಿ ಎನ್ನುವಳು.
ಆಗ ಶಿವನು ಆಶಾವರಿಯನ್ನು ಕೇಳಿದಾಗ ಅವಳು ಪಾರ್ವತಿಯ ಮೇಲೆ ಚಾಡಿ ಹೇಳುವಳು. ಆಗ ಎಲ್ಲಾ ವಿಷಯ ಗೊತ್ತಿದ್ದ ಮಹಾದೇವಾ ...ಆಶಾವರಿಗೆ ಕೈಲಾಸ ಬಿಟ್ಟು ಹೋಗು ಎಂದು ಆಜ್ಞ್ನೆಯನ್ನು ಮಾಡುತ್ತಾನೆ. ಆಗ ಆಶಾವರಿಯು ಕೈಲಾಸ ತ್ಯಜಿಸುತ್ತಾಳೆ.
ಆಗ ಶಿವನು ಪಾರ್ವತಿಯನ್ನು ಕುರಿತು ....ಒಂದೇ ಸೂರಿನ ಕೆಳಗೆ ಇಬ್ಬರು ಹೆಣ್ಣುಮಕ್ಕಳು ಇರುವುದಿಲ್ಲ ಇದ್ದರೂ ಆ ಸಂಬಂಧ ದೀರ್ಗಕಾಲ ಉಳಿಯುವುದಿಲ್ಲ ಎಂದು ಹೇಳುರು.
ಇಂದಿನ ಸಮಾಜದಲ್ಲಿಯೂ ನಡೆಯುತ್ತಿರುತ್ದೆ. ಇಂತಹ ಘಟನೆಗಳೆ .....
ನಾವು ಕಾಣಬಹುದು 😜
ಹೀಗೆ ಪಾರ್ವತಿಯ ಬೇಸರಕಳೆಯಲು ಮತ್ತು ಜೊತೆಗೆ ಟೈಮ್ ಪಾಸ್ ಮಾಡಲು ಆಶಾವರಿ ದೇವಿಯ ಸೃಷ್ಟಿ ಆಯ್ತು ......ಆದರೆ ಹೆಚ್ಚುದಿನ ಬಾಂಧವ್ಯ ಉಳಿಯಲಿಲ್ಲ.
ಇದು ಇಷ್ಟಕ್ಕೆ ಮುಗಿಯಲಿಲ್ಲ ಪಾರ್ವತಿ ಮತ್ತು ಗಂಗೆಯಲ್ಲಿ ಹಲವಾರು ಮನಸ್ತಾಪಗಳಾಗಿವೆ .ಒಮ್ಮೆ ಪಾರ್ವತಿಯು ತವರು ಮನೆಗೆ ಹೋಗಿದ್ದಾಗ ಮೇನೆಯು ನಮ್ಮ ಗಂಗಾ ಅಷ್ಟು ಸೌಮ್ಯ ಸ್ವಭಾವದ ಹೆಣ್ಣು ಯಾರೂ ಇಲ್ಲ ಎಂದಾಗ ...ಕುಪಿತಗೊಂಡು ಪಾರ್ವತಿಯು ಬ್ರಹ್ಮನ ಕುರಿತು ತಪಸ್ಸು ಮಾಡಿ ತನ್ನಲ್ಲಿದ್ದ ಕಾಳಿಯ ಅಂಶ ವನ್ನು ತ್ಯಜಿಸಿ ಶಾಂತ ಸ್ವರೂಪಿಣಿಯಾದ ಗೌರಿ ಯಾಗುತ್ತಾಳೆ. ಪಾರ್ವತಿಯು ಅಕ್ಕನನ್ನು ತಾನೆ ಹೊಗಳಿದ್ದು ಎಂದು ಸುಮ್ಮನೆ ಇರುವುದಿಲ್ಲ ಹಠಮಾಡಿ ಕಾಳೀ ಅಂಶವನ್ನು ತ್ಯಜಿಸಿದಳು.
ಒಂದು ದಿನ ಗಂಗೆಯು ಹೀಗೆ ಮಾತನಾಡುತ್ತಾ ಇರುವಾಗ ನಾನು ಯಾವುದೇ ಕಷ್ಟ ಪಡದೆ ಶಿವನ ತಲೆಯಮೇಲೆ ಜಾಗ ಪಡೆದೆ. ಆದರೆ ನೀನು ಕಠಿಣ ತಪಸ್ಸು ಮಾಡಿ ಶಿವನನ್ನು ಮದುವೆ ಯಾದೆ ಎಂದಾಗ ಕೋಪಗೊಂಡ ಪಾರ್ವತಿಯು ಕೈಲಾಸವನ್ನು ತ್ಯಜಿಸಿ ಭಯಂಕರ ಕಾಳಿಯ ಅವತಾರವನ್ನು ತಾಳುತ್ತಾಳೆ. ಆಗ ದಶಮಹಾವಿದ್ಯೆಯಾಗಿ ಬಗಳಾಮುಖಿಯಾಗಿ ಅವತಾರ ಎತ್ತಿ ಶತ್ರುಗಳ ನಾಲಿಗೆಯನ್ನು ಕತ್ತರಿಸುತ್ತಾಳೆ.
ಮಾನಸ ಶಿವ ಮತ್ತು ಕದ್ರುವಿನ ಪುತ್ರಿ ಎಂಬ ಕಾರಣಕ್ಕೆ ಪಾರ್ವತಿಯು ಮಾನಸಾಳನ್ನು ದ್ವೇಷಿಸುತ್ತಾಳೆ.ಅವಳ ಒಂದು ಕಣ್ಣನ್ನು ಕೀಳುತ್ತಾಳೆ
ಸಮುದ್ರ ಮಂಥನ ಮಾಡಿದಾಗ ಬಂದ ವಿಷವನ್ನು ಶಿವನು ಕುಡಿದಾಗ ಮಾನಸಳೇ ವಿಶದಿಂದ ಯಾವುದೇ ತೊಂದರೆ ಆಗದಂತೆ ನೋಡಿದ್ದು ....ಮಾನಸ ಎಂತಹ ವಿಶವನ್ನಾದರೂ ತೆಗೆಯುತ್ತಿದ್ದಳಂತೆ ...ಇದನ್ನು ಕಂಡು ಪಾರ್ವತಿ ಅಸೂಹೆ ಗೊಳ್ಳುತ್ತಾಳೆ. ಮಾನಸ ಮದುವೆ ಆದಾಗ ಹಾವುಗಳಿಂದ ಮಾನಸಳನ್ನು ಅಲಂಕರಿಸಿ ಪ್ರಸ್ಥದ ಕೋಣೆಗೆ ಕಳಿಸಿದಾಗ ಅದನ್ನು ಕಂಡು ಭಯ ಪಟ್ಟ ಮಾನಸಳ ಗಂಡ ಜಕಾರ್ತು ಶಾಶ್ವತವಾಗಿ ಮಾನಸಳನ್ನು ಬಿಟ್ಟು ಹೋಡಿ ಹೋಗುತ್ತಾನೆ.
ಆಗ ಮಾನಸಾಳ ದ್ವೇಷ ಮತ್ತಷ್ಟು ಉಲ್ಬಣವಾಗುತ್ತದೆ.
ಕೆಲವು ಸಲ ಪಾರ್ವತಿಗೆ ಇಷ್ಟು ಅಸೂಹೆಯಾ ಎನಿಸುತ್ತದೆ.
ಒಮ್ಮೆ ನಾರದರು ತ್ರಿಮಾತೆಯರ ಬಳಿ ಬಂದು ಜಗತ್ತಿನಲ್ಲಿ ಮಹಾ ಪತಿವ್ರತೆ ಅನಸೂಯ ಅವರೇ ಶ್ರೇಷ್ಠ ಹೆಣ್ಣು ಎಂದಾಗ ಅಸೂಹೆ ಗೊಂಡ ತ್ರಿಮಾತೆಯರು ನಾನಾ ವಿಧವಾಗಿ ಅನಸೂಯೆ ಯನ್ನು ಪರೀಕ್ಷಿಸಿದರು. ಎಲ್ಲವನ್ನು ಎದಿರಿಸಿದಳು ಅನಸೂಯಾ .....ಆದರೂ ಇಷ್ಟಕ್ಕೆ ಬಿಡದೆ ತ್ರಿಮಾತೆಯರು ಪತಿಯರ ಜೊತೆ ತಮ್ಮ ಕಷ್ಟ ಹೇಳಿಕೊಳ್ಳುತ್ತಾರೆ ನಮಗಿಂತಲೂ ಅನಸೂಯೆಯೇ ಶ್ರೇಷ್ಠ ಎಂದು ಆಗ ತ್ರಿಮೂರ್ತಿಗಳು ಅನಸೂಯೆಯನ್ನು ಪರೀಕ್ಷಿಸುವರು. ಕೊನೆಗೆ ಮಕ್ಕಳಾಗಿ ಅನಸೂಯೆಯ ಮಡಿಲಲ್ಲಿ ಆಡುವರು.
ಲಕ್ಷ್ಮೀ ಸರಸ್ವತಿಯರು ನಾನು ಶ್ರೇಷ್ಟ ನಾನು ಶ್ರೇಷ್ಠ ಎಂದು ತಮ್ಮಲ್ಲಿಯೇ ಹಲವು ಪಂದ್ಯಗಳನ್ನು ಹಾಕಿಕೊಂಡರು .ಹೀಗೆ ತ್ರಿಮಾತೆಯರೇ ಅಸೂಹೆ ಪಟ್ಟರೆ ಸಾಮಾನ್ಯ ಹೆಣ್ಣು ಮಕ್ಕಳು ಎಷ್ಟು ಪಡಬೇಕು.
ಅದಕ್ಕೆ ಬೇರೆ ಮನೆಮಾಡುವ ನಿರ್ಧಾರ ಅನೇಕರು ಮಾಡುತ್ತಿರುವುದು.
ಮೊದಲು ಹಲವು ಹೆಣ್ಣುಗಳನ್ನು ವಿವಾಹ ಆಗುತ್ತಿದ್ದರು ಪುರುಷರು ಆದರೆ ಈಗ ಒಂದೇ ಮದುವೆ ....ಯಾಕೆಂದರೆ ಎರಡು ಮೂರು ಮದುವೆ ಯಾಗಿ ಎಲ್ಲರೂ ಒಂದೇ ಮನೆಯ ಸೂರಿನಲ್ಲಿದ್ದರೆ ದಿನಾ ಅವರ ವ್ಯಾಜ್ಯ ತಿರ್ಮಾನಿಸುವುದೇ ಆಗಿರುತ್ತದೆ. ಗಂಡಿಗೆ ಹೊರಗಡೆ ಸಾವಿರ ಕೆಲಸ ಇರುತ್ತದೆ ದಿನಾ ಮನೆಯಲ್ಲಿ ಜಗಳ ಆಗುತ್ತಿದ್ದರೆ ಕೆಲಸ ಮಾಡಲು ಆಗುವುದಿಲ್ಲ .ಒಬ್ಬಳೇ ಪತ್ನಿ ಇದ್ದರೆ ಯಾವ ಸಮಸ್ಯೆಯೂ ಇಲ್ಲ ಅದಕ್ಕಾಗಿ ಪುರುಷರು ಈಗ ಒಂದೇ ಮದುವೆ ಆಗುತ್ತಿರುವುದು ....😜 😜 😜 😜 😜
ನೋಡಿದಿರಲ್ಲವೆ ಹೆಣ್ಣಿಗೆ ಹೆಣ್ಣು ಶತ್ರು .......ಎರಡು ಜಡೆ ಒಟ್ಟಿಗೆ ಎಂದೂ ಸೇರೋದಿಲ್ಲ ಎಂಬ ಹಿರಿಯರ ಮಾತು ಸತ್ಯ .......ಇದ್ದರೂ ದೀರ್ಗಕಾಲದವರೆಗೆ ಇರುವುದಿಲ್ಲ ಸಾಕಷ್ಟು ಮನಸ್ತಾಪಗಳ ಜೊತೆ ಇರಬೇಕಾಗುತ್ತದೆ.
ಹೀಗೆ ದೇವಾದಿ ದೇವತೆಗಳಲ್ಲಿಯೇ ಪರಸ್ಪರಸೇರದೆ ಇದ್ದಾಗ ನರಮನುಷ್ಯರು ಸೇರುವರಾ .....???
ಕಟ್ಟ ಕಡೆಯ ಕುತೂಹಲ ಪ್ರಶ್ನೆ ಶಿವನು ಸೃಷ್ಟಿಯಂತೂ ಮಾಡಿದ. ಕುರೂಪಿಯಾದ ತಂಗಿಯನ್ನು ಸೃಷ್ಟಿ ಮಾಡುವ ಬದಲು ಯಾಕೆ ಸುಂದರ ಹುಡುಗಿಯನ್ನು ಸೃಷ್ಟಿ ಮಾಡಬಾರದಿತ್ತು .......😂 😂 😂
ಧನ್ಯವಾದಗಳು
ಮಮತಾ ಎಸ್ ಗೌಡ 😊
No comments:
Post a Comment