ಮಹಾಭಾರತ ಸಾರ-46
|ಉದ್ದಾಲಕಿ ನಚಿಕೇತರ ಸಂವಾದ|
ಒಮ್ಮೆ ಉದ್ದಾಲಕಿಯು ಯಜ್ಞ ದೀಕ್ಷೆ ಕೈಗೊಂಡ. ಯಜ್ಞ ಪೂರ್ಣ ವಾಗುವರೆಗೂ ನೀನು ಸೇವೆ ಯಲ್ಲಿ ನಿರತನಾಗಿರು ಎಂದು ಪುತ್ರ ನಚಿಕೇತನಿಗೆ ಹೇಳುತ್ತಾನೆ.
ತಂದೆಯ ಆಜ್ಞೆ ಯಂತೆ ನಚಿಕೇತ ಸೇವೆಮಾಡಿದ.
ವೇದಾಧ್ಯಯನ ಮಾಡುವ ಆತುರದಲ್ಲಿ ನದಿಯ ತೀರದಲ್ಲಿ ಸಂಗ್ರಹಿಸಿಟ್ಟಿದ್ದ ದರ್ಬೆ, ಹೂ, ಕಲಶವನ್ನು ಅಲ್ಲಿಯೇ ಬಿಟ್ಟು ಬಂದಿರುವೆ. ನೀನು ತೆಗೆದುಕೊಂಡು ಬಾ ಎಂದ ಉದ್ಧಾಲಕಿ. ನಚಿಕೇತ ಹೊರಟ. ಅದೇ ಸಮಯದಲ್ಲಿ ನದಿಯಲ್ಲಿ ಪ್ರವಾಹ ಉಂಟಾಗಿ ಎಲ್ಲ ಸಾಮಗ್ರಿಗಳು ಕೊಚ್ಚಿಕೊಂಡು ಹೋಗಿದ್ದವು. ಮರಳಿ ತಂದೆಯ ಬಳಿಗೆ ಬಂದ ನಚಿಕೇತ ನದಿತೀರದಲ್ಲಿ ಎಲ್ಲ ಸಾಮಗ್ರಿಗಳು ಪ್ರವಾಹದಲ್ಲಿ ಕೊಚ್ಚಿವೆ ಎಂದು ಹೇಳಿದ. ಆಗ ಹಸಿವೆ. ಬಾಯಾರಿಕೆ ಯಿಂದ ಬಳಲುತ್ತಿದ್ದ ಉದ್ಧಾಲಕಿ ಕೋಪದಿಂದ ನೀನು ಯಮನನ್ನು ನೋಡು ಎಂದು ಶಪಿಸಿದ. ನಂತರ ತಂದೆ ಅಲ್ಲಿಯೇ ಕುಸಿದು ಬಿದ್ದ.ಹೀಗೆ ಒಂದು ಭಯಾನಕ ರಾತ್ರಿ ಕಳೆಯಿತು.
ನಿದ್ದೆಯಿಂದ ಎಚ್ಚರಗೊಂಡ ಉದ್ದಾಲಕಿ ಯಮಲೋಕದಿಂದ ಹಿಂದಿರುಗಿ ಬಂದ ಮಗ ನಚಿಕೇತ ನನ್ನು ಕಂಡು ಪ್ರಶ್ನಿಸುತ್ತಾನೆ. ನಿನ್ನ ಶುಭ ಕರ್ಮ ಗಳಿಂದ ಪುಣ್ಯಲೋಕಗಳನ್ನೆಲ್ಲ ಜಯಸಿದ್ದಿಲ್ಲ ಹಿಂದಿನಂತೆ ಮನುಷ್ಯ ಶರೀರವಿಲ್ಲ ದಿವ್ಯವಾದ ಶರೀರ ನೀನು ಹೊಂದಿರುವೆ ಎಂದನು.
ನಚಿಕೇತ ನು ಪರಲೋಕ ದ ವಾರ್ತೆಯನ್ನು ಹೇಳಿದ. ಯಮರಾಜ ನ ಪಟ್ಟಣ ನೋಡಿದೆ. ಸಭೆಯಲ್ಲಿ ಹೋದೆ. ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಿದ.
ನಿನ್ನಲೋಕಕ್ಕೆ ಬಂದಿರುವೆ ನನ್ನ ಕರ್ಮಾನುಸಾರ ಯಾವ ಲೋಕಕ್ಕೆ ಹೋಗಲು ಅರ್ಹನಾಗಿರುವೆ
ಆ ಲೋಕಕ್ಕೆ ಹೋಗಲು ಅನುಮತಿ ಕೊಡು ಎಂದು ನಾನು ಯಮರಾಜನನ್ನು ಕೇಳಿದ.
ಬಾಲಕನೇ ನೀನು ಮರಣಹೊಂದಿ ಇಲ್ಲಿಗೆ ಬಂದವನಲ್ಲ. ಮಹಾತಪಸ್ವಿಯಾದ ನಿನ್ನ ತಂದೆ ಉದ್ದಾಲಕಿ ಆಜ್ಞೆ ಪಾಲಿಸಲು ಬಂದಿರುವಿ. ತಂದೆಯ ಮಾತಿನಂತೆ ಯಮಲೋಕ ನೋಡಿ ಆಯಿತು. ನೀನು ಹಿಂದಿರುಗಿ ಹೋಗು ಎಂದ ಯಮ.
ಯಾರಿಗೂ ಬರಲಾದಂಥ ನಿನ್ನ ಸಾಮ್ರಾಜ್ಯಕ್ಕೆ ಬಂದಿದಿನಿ ಪುಣ್ಯಾತ್ಮರಿಗೆ ಪ್ರಾಪ್ತವಾಗುವ ಲೋಕಗಳನ್ನು ತೋರಿಸು ಎಂದು ನಚಕೇತ ಪ್ರಾರ್ಥಿಸುತ್ತಾನೆ.
ಆಗ ಯಮಧರ್ಮನು ರಥದಲ್ಲಿ ಬಾಲಕನನ್ನು ಕೂಡಿಸಿಕೊಂಡು ತನ್ನ ಅಧೀನ ದಲ್ಲಿದ್ದ ಎಲ್ಲ ಪುಣ್ಯ ಲೋಕಗಳನ್ನು ತೋರಿಸಿದ. ಅಲ್ಲಿ ತೇಜೋಮಯವಾದ ಭವನಗಳು, ಆ ದಿವ್ಯ ಸೌಧಗಳಲ್ಲಿ ಭಕ್ಷ್ಯ ಭೋಜನ ಪದಾರ್ಥಗಳ ರಾಶಿ ನೋಡಿದೆ.
ಯಾವಾಗಲೂ ಪೂರ್ಣವಾಗಿ ಹರಿಯುವ ಕ್ಷೀರ. ತುಪ್ಪದ ನದಿಗಳು ಯಾರ ಉಪಯೋಗಕ್ಕಾಗಿ ನಿಯಮಿತಗೊಂಡಿವೆ ಎಂದು ಕೇಳಿದೆ.
ಯಾರು ಗೋ ರಸ (ಗೋ ಹಾಲು. ಮೊಸರು. ಮಜ್ಜಿಗೆ ತುಪ್ಪ) ವನ್ನು ದಾನ ಮಾಡುತ್ತಾರೋ ಅಂಥವರಿಗೆ ಇಲ್ಲಿರುವ ಹಾಲು,ತುಪ್ಪಗಳ ನದಿಗಳು ಭೋಜನ ಸಾಮಗ್ರಿಗಳಾಗಿವೆ ಎಂದ ಯಮ.
ಯಾರು ವೇದಾಧ್ಯಯನ, ತಪ್ಪಸ್ಸು, ಯಜ್ಞ ಅನುಷ್ಠಾನದಲ್ಲಿ ತೊಡಗಿರುತ್ತಾರೋ ಅವರಿಗೆ ಶುದ್ಧ ಮನಸ್ಸಿಂದ ದಾನ ಮಾಡಬೇಕು.ಅಂಥವರಿಗೆ ಪುಣ್ಯ ಲೋಕ ಪ್ರಾಪ್ತ ವಾಗುತ್ತದೆ.
ಪ್ರತಿಯೊಬ್ಬರಲ್ಲೂ ಗೋವು ಇರುವುದಿಲ್ಲ ವಲ್ಲ.ಪರ್ಯಾಯ ವ್ಯವಸ್ಥೆ ಇಲ್ಲವೆ ಎಂದು ನಚಿಕೇತ ಪ್ರಶ್ನಿಸಿದ.
ಗೋವು ಇಲ್ಲದೇ ಗೋದಾನ ಮಾಡಿದವರೂ ಸಾಕಷ್ಟು ಜನರಿದ್ದಾರೆ. ಘೃತಧೇನು[ತುಪ್ಪದಿಂದ ಮಾಡಿದ ಧೇನು], ಘೃತದಾನ ಮಾಡಲಾಗದವರು ನಿಯಮಾನುಸಾರ ಅನುಷ್ಠಾನ ಮಾಡಿ ಎಳ್ಳಿನಿಂದ ಮಾಡಿದ ಧೇನು ಬ್ರಾಹ್ಮಣರಿಗೆ ದಾನ ಮಾಡಬೇಕು. ಎಳ್ಳು ದಾನ ಮಾಡಲೂ ಆಗದವರು ಜಲಧೇನುವನ್ನು ದಾನ ಮಾಡಬಹುದು ಎಂದು ಯಮರಾಜನು ಹೇಳಿದ ಧರ್ಮದ ಉಪದೇಶದ ಸಾರವನ್ನು ನಚಿಕೇತ ತಂದೆಗೆ ಹೇಳಿದ.
,🙏 ಶ್ರೀ ಕೃಷ್ಣಾ ರ್ಪಣಮಸ್ತು 🙏
No comments:
Post a Comment