ಈ ಗುಂಪಿನಲ್ಲಿ ಆಸಕ್ತರೊಬ್ಬರು ಕೇಳಿದ ಪ್ರಶ್ನೆ......
ರಾವಣ ಮಹಾಭಕ್ತ...ಆದರೂ ಪರಸ್ತ್ರೀ ಅಪಹರಣದಂತಹ ನೀಚ ಕೃತ್ಯ ಏಕೆ ಮಾಡಿದ? ದೈವಭಕ್ತರು ಪಾಪ ಕೃತ್ಯ ಮಾಡುವುದಿಲ್ಲ .ಅದು ಹೇಗೆ?ಎಂಬ ಪ್ರಶ್ನೆ ಮುಂದಿಟ್ಟರು.ಅದಕ್ಕಾಗಿ ನನ್ನ ಒಂದು ವಿಮರ್ಶೆ........
ಒಬ್ಬ ಮನುಷ್ಯನ ಬಳಿ ನೂರಾರು ದಾರಿಗಳಿರುತ್ತದೆ ,ಜೀವನದಲ್ಲಿ ಮುಂದೆ ಸಾಗಲು. ಒಬ್ಬೊಬ್ಬರು ಒಂದೊಂದು ದಾರಿ ಆರಿಸಿಕೊಳ್ಳುತ್ತಾರೆ.ಫಲ ಎಲ್ಲರಿಗೂ ವಿನಾಶಕಾರಿ ಆದರೆ ಅದನ್ನು ಪಾಪ ಎನ್ನಬಹುದು .ಎಲ್ಲರಿಗೂ ಒಳ್ಳೆಯದಾದರೆ ಅದನ್ನು ಪುಣ್ಯ ಎನ್ನಬಹುದು. ಮನುಷ್ಯ ಏಕೆ ಪಾಪ ಕರ್ಮಗಳನ್ನು ಮಾಡುತ್ತಾನೆ ಎಂದರೆ ಅವನ ಮನಸಿನಲ್ಲಿ ಮುದ್ರಿತವಾದ ಪೂರ್ವ ಜನ್ಮದ ಸಂಸ್ಕಾರ ಅವನನ್ನು ಎಳೆಯುತ್ತದೆ. ಕೆಟ್ಟ ನಿರ್ಧಾರ ತೆಗೆದುಕೊಳ್ಳುವಂತೆ ಮಾಡುತ್ತದೆ. ರಾವಣನ ಪೂರ್ವ ವೃತ್ತಾಂತ ಯಾವುದು? .....
ವೈಕುಂಠದಲ್ಲಿ ದ್ವಾರಪಾಲಕರಾಗಿದ್ದವರು ಜಯಾ ವಿಜಯರು .ಸನಕ ಸನಂದನಾದಿ ಮಹರ್ಷಿಗಳು ನಾರಾಯಣನ ದರ್ಶನಕ್ಕೆ ಬಂದಾಗ ಅವರನ್ನು ತಡೆದದ್ದಲ್ಲದೆ ಅಹಂಕಾರಯುಕ್ತವಾಗಿ ಮಾತನಾಡುತ್ತಾರೆ. ಆಗ ಶಾಪ ನೀಡುತ್ತಾರೆ ಭೂಲೋಕದಲ್ಲಿ ಹುಟ್ಟಿ ವೈಕುಂಠದಿಂದ ದೂರಾಗಿ ಎಂದು.... ಪಶ್ಚಾತ್ತಾಪದಿಂದ ಋಷಿಗಳ ಕ್ಷಮೆ ಕೇಳಿ ನಾರಾಯಣನಲ್ಲಿ ಶಾಪ ವಿಮೋಚನೆ ಬೇಡುತ್ತಾರೆ.ಆಗ ನಾರಾಯಣ ಎರಡು ಆಯ್ಕೆ ನೀಡುತ್ತಾನೆ. ಒಂದು ,ನನ್ನ ಶತೃಗಳಾಗಿ ಜನ್ಮತಾಳಿ ಮೂರು ಜನ್ಮವೆತ್ತಿ ನನ್ನಿಂದ ಹತರಾಗಿ ನನ್ನನ್ನು ಸೇರುವುದು. ಅಥವ ಏಳು ಜನ್ಮಗಳು ನನ್ನ ಮಿತ್ರರಾಗಿ ಜನ್ಮತಾಳಿ ನಂತರ ನನ್ನನ್ನು ಸೇರುವುದು..... ಅವರ ಆಯ್ಕೆ ಶತೃವಾದರೂ ಪರವಾಗಿಲ್ಲ 3ಜನ್ಮ ಸಾಕು ಎಂದು. ಅದಕ್ಕೆ ಹಿರಣ್ಯಾಕ್ಷ , ಹಿರಣ್ಯಕಶಿಪು ಮೊದಲ ಜನ್ಮ ರಾವಣಕುಂಭಕರ್ಣ ಎರಡನೆಯ ಜನ್ಮ ....ದಂತವಕ್ರ ,ಶಿಶುಪಾಲ ಮೂರನೆಯ ಜನ್ಮ.
ಈ ಹಿನ್ನಲೆಯಲ್ಲಿ ಅವರು ಶತೃತ್ವ ಸಾಧಿಸಿದರು.
ಎಷ್ಟೇ ಸಂಸ್ಕಾರ ಇರುವವರಲ್ಲಿ ಕೂಡ ಯಾವುದೋ ದೌರ್ಬಲ್ಯ ಹೊಕ್ಕು ನಾಶಮಾಡಬಹುದು ಎಂದು ಇದರಿಂದ ಅರ್ಥ ಮಾಡಿಕೊಳ್ಳಬಹುದು.
No comments:
Post a Comment