Saturday, 30 May 2020

ಹರ+ಸಾಹಸ ಅಂದರೆ ನಿಮಗೆ ಗೊತ್ತೇ..?

ಹರ+ಸಾಹಸ ಅಂದರೆ ನಿಮಗೆ ಗೊತ್ತೇ..?

 #ಶಿವನ ಸಾಹಸ. 

ಸಾಮಾನ್ಯವಾಗಿ ನಾವೇನಾದರೂ ಯಾವುದಾದರೂ ಕಾರ್ಯವನ್ನು ಬಹಳ ಕಷ್ಟಪಟ್ಟು ಮಾಡಿದರೆ, ಅದನ್ನು “ಹರಸಾಹಸ” ಎನ್ನುತ್ತೇವೆ. 

 ಆದರೆ ಪುರಾಣದಲ್ಲಿ ಇದಕ್ಕೆ ಬಹು ಮುಖ್ಯವಾದ ಒಂದು ಕಥೆ ಇದೆ.
ಓದಿ ತಿಳಿದುಕೊಳ್ಳಿ

ಬ್ರಹ್ಮನ ಐದನೆ ತಲೆಯನ್ನು ತೆಗೆದ ಶಿವ -

ಬ್ರಹ್ಮದೇವರಿಗೆ ಮೊದಲು ಐದು ತಲೆಗಳಿದ್ದವು.  

ಅವನು ತನ್ನ ಎಲ್ಲಾ ತಲೆಗಳಿಂದಲೂ ವೇದವನ್ನು ಪಾರಾಯಣ ಮಾಡುತ್ತಿದ್ದನು.  

ಅದರಲ್ಲಿ ಒಂದು ತಲೆಯಲ್ಲಿ ಬೇಕೆಂದೇ ಶ್ರೀಹರಿಯ ಆಜ್ಞೆಯಂತೆ ಅಸುರಜನ ಮೋಹನಾರ್ಥ ತಪ್ಪುತಪ್ಪಾಗಿ ಹೇಳುತ್ತಿದ್ದನು. 

 ಶಿವನು ಇದನ್ನು ಕಂಡು ಕ್ರೋಧಗೊಂಡು ಆ ಐದನೇ ತಲೆಯನ್ನು ಕಡಿದನು.

  ಇದರಿಂದ ಅವನಿಗೆ ಬ್ರಹ್ಮಹತ್ಯಾ ದೋಷ ಬಂದಿತು ಮತ್ತು ಬ್ರಹ್ಮನ ಕಪಾಲ ಶಿವನ ಕೈಯಲ್ಲಿ ಮೆತ್ತಿಕೊಂಡಿತು. 

ಅದನ್ನು ಬಿಡಿಸಲು ಬಹಳ ಪ್ರಯತ್ನಪಟ್ಟರೂ ಅದು ಅವನ ಕೈಯಿಂದ ಬಿಡಿಸಲಾಸದ್ಯವಾಯಿತು.

ನಂತರ ಶಿವ ಬಹಳ ಕಡೆ ಹೋಗಿ ಕಪಾಳದಿಂದ ಬಿಡಿಸಿಕೊಳ್ಳಲು ಪ್ರಯತ್ನ ಪಟ್ಟನು.

೧.  ಶಿವನು ಎಲ್ಲಾ ಹತ್ತು ದಿಕ್ಕುಗಳಿಗೂ ಹೋಗಿ ಪ್ರಯತ್ನಿಸಿದರೂ, ಅಲ್ಲಿ ಹರಿ ಸರ್ವೋತ್ತಮ ಪ್ರತಿಪಾದನೆ ಮಾಡಿದರೂ ಆ ಕಪಾಲ ತನ್ನ ಕೈಯಿಂದ ಬಿಡಿಸಲಾಗಲಿಲ್ಲ.

೨.  ಬದರೀ ಕ್ಷೇತ್ರಕ್ಕೆ ಹೋಗಿ ಬದರೀ ನಾರಾಯಣನನ್ನು ದರ್ಶನಮಾಡಲು ಪ್ರಯತ್ನಿಸಿದಾಗ, ಅಲ್ಲಿ ದರ್ಶನವಾಗಲಿಲ್ಲ.

೩.  ನಂತರ ಯಮುನಾ ನದಿಗೆ ಹೋದರೆ, ಅಲ್ಲಿ ಯಮುನೆಯೇ ಒಣಗಿ ಹೋಯಿತು.

೪.  ನಂತರ ಪ್ಲಾಕ್ಷ್ಮ ದ್ವೀಪಕ್ಕೆ ಹೋದನು

೫.  ನಂತರ ಪುಷ್ಕರ ಕ್ಷೇತ್ರಕ್ಕೆ ಹೋದನು

೬.  ನಂತರ ನೈಮಿಷಾರಣ್ಯಕ್ಕೆ ಹೋದನು

೭.  ನಂತರ ಸೈಂಧವಾರಣ್ಯಕ್ಕೂ, ಧರ್ಮಾರಣ್ಯಕ್ಕೂ ಹೋದನು

೮.  ನಂತರ ಕುರುಕ್ಷೇತ್ರಕ್ಕೆ ಹೋದನು.  ಅಲ್ಲಿ ಶ್ರಿ ಹರಿಯು ಕೇಶವ ರೂಪದಿಂದ ಪ್ರತ್ಯಕ್ಷನಾಗಿ ಅವನ ಬ್ರಹ್ಮ ಹತ್ಯಾದೋಷವನ್ನು ಪರಿಹಾರ ಮಾರ್ಗ‌ಸೂಚಿಸಿದನು.

  ಆದ್ದರಿಂದ ಇದನ್ನೇ “ಹರಸಾಹಸ”ವೆಂದು ಕರೆಯುತ್ತಾರೆ.

ಪರಿಹಾರ ಮಾರ್ಗ ಯಾವುದು ಗೊತ್ತಾ..?

ಅನ್ನಪೂರ್ಣೇಶ್ವರಿ ‌ದೇವಿಗೆ ಶರಣಾಗುವುದು

, ಅನ್ನಪೂರ್ಣೇಶ್ವರಿ ಎದುರು ತಲೆ ಬಾಗುತ್ತಾನೆ ಶಿವ. ಆಗ ಬುರುಡೆ ತುಂಬಿ, ಶಿವನ ಕೈಯಿಂದ ಬುರುಡೆ ಕೆಳಗೆ ಬೀಳುತ್ತದೆ.

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು

No comments:

Post a Comment