ಮಹಾಭಾರತ ಸಾರ-56
🌹|ಮಾತೃಸೇವೆ ಸದ್ಗತಿಯ ಸಂಕೇತ|🌹
ಒಮ್ಮೆ ಕೃಷ್ಣ ದ್ವೈಪಾಯನರು ಎತ್ತಿನ ಬಂಡಿಯಲ್ಲಿ ಹೊರಟಿದ್ದರು. ಆ ಬಂಡಿಯ ಶಬ್ದಕ್ಕೆ ಹೆದುರಿ ಜೀವ ರಕ್ಷಿಸಿಕೊಳ್ಳಲು ಕೀಟವೊಂದು ವೇಗವಾಗಿ ಹರಿದು ಹೋಗುತಿತ್ತು. ವೇಗವಾಗಿ ಹರಿದು ಹೋಗುತ್ತಿರುವ ಆ ಕೀಟವನ್ನು ನೋಡಿದ ವ್ಯಾಸರು, ನೀನು ಭಯಗೊಂಡಂತಿದೆ ಎಂದು ಕೇಳಿದರು.
ದೂರದಲ್ಲಿ ಬರುತ್ತಿರುವ ಎತ್ತಿನ ಬಂಡಿಯ ಶಬ್ಧಕ್ಕೆ ಹೆದುರಿ ಓಡುತ್ತಿದ್ದೇನೆ ಎಂದಿತು ಕೀಟ.
ನೀನು ಕೀಳು ಯೋನಿಯಲ್ಲಿರುವಿ ನಿನಗೆ ಮರಣವೇ ಲೇಸೆಂದು ನಾನು ಬಯಸುವೆ ಎಂದರು ವ್ಯಾಸರು.
ಜೀವವು ತಾನು ಪ್ರವೇಶಿಸಿದ ಪ್ರತಿಯೊಂದು ಯೋನಿಯಲ್ಲಿಯೂ ಸುಖದ ಅನುಭವ ಪಡೆಯುತ್ತದೆ. ಜೀವ ರಕ್ಷಿಸಿಕೊಳ್ಳಲು ಬಯಸುತ್ತದೆ.
ನಾನು ಕೂಡ ಜೀವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವೆ ಎಂದಿತು ಕೀಟ.
ನಾನು ಹಿಂದಿನ ಜನ್ಮದಲ್ಲಿ ಧನಿಕನಾಗಿದ್ದೆ ಬಡ್ಡಿ ಹಣದಿಂದ ಜೀವನ ಸಾಗಿಸುತಿದ್ದೆ. ಎಲ್ಲರನ್ನು ವಂಚಿಸುವ ಬುದ್ದಿ ಯುಳ್ಳವನಾಗಿದ್ದೆ. ಅನ್ನದಾನ ಮಾಡುತ್ತಿರಲಿಲ್ಲ. ಆದರೆ ನಾನು ಒಂದು ಶುಭ ಕಾರ್ಯ ಮಾಡಿದ್ದೇನೆ. ವಯಸ್ಸಾದ ನನ್ನತಾಯಿಯ ಸೇವೆ ಮಾಡಿದ್ದೇನೆ ಎಂದು ಹೇಳಿತು.
ನೀನು ಮಾಡಿದ ಪಾಪ ಕರ್ಮದ ಫಲವಾಗಿ ಕೀಟ ಜನ್ಮ ತಾಳಿರುವಿ ಆದರೆ ಮಾತೆಯ ಸೇವೆ ಮಾಡಿದ ಪುಣ್ಯ ಫಲದಿಂದಾಗಿ ನೀನು ಕ್ಷತ್ರಿಯನಾಗಿ ಜನಿಸುವಿ ಎಂದು ವ್ಯಾಸರು ಅನುಗ್ರಹಿಸಿದರು.
ವ್ಯಾಸರಿಂದ ಉಪದೇಶ ಪಡೆದ ಆ ಕೀಟವು ಎತ್ತಿನ ಬಂಡಿಯ ಚಕ್ರದಲ್ಲಿ ಸಿಲುಕಿ ಪ್ರಾಣ ತ್ಯಾಗ ಮಾಡಿತು. ನಂತರ ಕ್ಷತ್ರೀಯ ಕುಲದಲ್ಲಿ ಜನಿಸಿ ಮತ್ತೆ ವ್ಯಾಸನ್ನು ಸಂದರ್ಶಿಸುತ್ತಾನೆ. ಕೀಟವಾಗಿದ್ದ ನಾನು ನಿಮ್ಮ ಅನುಗ್ರಹದಿಂದ ಶ್ರೇಷ್ಠವಾದ ಮಾನವ ಜನ್ಮ ತಾಳಿರುವೆ. ನಾನು ಮುಂದೇನು ಮಾಡಲಿ ಎಂದು ತಾವು ಆಜ್ಞೆ ಮಾಡಿ ಎಂದು ಕೇಳಿದ.
ನೀನು ಹಿಂದೆ ಮಾಡಿದ ಪಾಪ ಕರ್ಮಗಳು ನಾಶವಾಗಿವೆ. ಈಗ ರಾಜಪುತ್ರನಾಗಿ ಜನಿಸಿರುವೆ. ನೀನು ಈ ಜನ್ಮದ ಅವಸಾನದ ನಂತರ ಬ್ರಾಹ್ಮಣತ್ವ ಪಡೆಯುವೆ ಎಂದು ಆಶೀರ್ವದಿಸಿದರು.
ಕೆಲ ಕಾಲ ಧರ್ಮದಿಂದ ರಾಜ್ಯವನ್ನಾಳಿ ದೇಹ ತ್ಯಾಗ ಮಾಡಿ ವಿಪತ್ರತ್ವವನ್ನು ಪಡೆದನು.
*ತಾಯಿಯ ಸೇವೆ ಮಾಡುವುದರಲ್ಲಿ ಅದೆಂಥ ಶಕ್ತಿ ಇದೆ ಎಂಬುದನ್ನು ಈ ಕಥೆಯಿಂದ ತಿಳಿಯಬಹುದಾಗಿದೆ. *
*ತಾಯಿಯೂ ಇರುಷಷ್ಟು ದಿನ ಮಕ್ಕಳಿಗೆ ಒಳಿತನ್ನೇ ಬಯಸುತ್ತಾಳೆ. ಸೇವೆ ಮಾಡಿದ ಮಕ್ಕಳಿಗೆ ಜನ್ಮಾಂತರದಲ್ಲೂ ಅನುಗ್ರಹಿಸುವ ಶಕ್ತಿ ಆ ತಾಯಿಯಲ್ಲಿದೆ.
*ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸುವ ಇಂದಿನ ಮಕ್ಕಳಿಗೆ ಈ ಕತೆ ಪ್ರೇರಣೆಯಾಗಬೇಕು.
*
ತಾಯಿ ಸೇವೆ ಮಾಡಿದಕ್ಕೆ ಆ ಕೀಟವು ಮುಂದೆ ಕ್ಷತ್ರೀಯನಾಗಿ, ನಂತರ ಶ್ರೇಷ್ಠ ವಿಪ್ರನಾಗಿ ಜನಿಸಿ ಕೊನಗೆ ಸದ್ಗತಿ ಹೊಂದಿದ.
ಅದರಂತೆ ವಯಸ್ಸಾದ ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸುವನ್ನು ಬಿಟ್ಟು ಅವರ ಸೇವೆ ಮಾಡುವ ಮೂಲಕ ನಾವೂ ಈ ಮಾನವ ಜನ್ಮದ ಸಾರ್ಥಕತೆ ಪಡೆದುಕೊಳ್ಳಬೇಕು.
ಎಲ್ಲರಿಗೂ ದರುಶನ ನೀಡಲಾಗದು ಎಂದು ಭಗವಂತ ತಾಯಿಯ ರೂಪದಲ್ಲಿ ಎಲ್ಲರನ್ನು ಅನುಗ್ರಿಸುತ್ತಾನೆ. ತಾಯಿ ಋಣ ಎಷ್ಟು ಜನ್ಮ ತಾಳಿದರೂ ತೀರಿಸಲಾಗದು. ಅಂಥ ದೇವತೆಯನ್ನು ವೃದ್ಧಾಶ್ರಮಕ್ಕೆ ಸೇರಿಸುವ ಸಂಪ್ರದಾಯ ಬೆಳೆದಿದ್ದು ದುರದೃಷ್ಟಕರ ಸಂಗತಿ. ಅಂತ ದೇವತೆ ಸೇವೆ ಮಾಡಿ ಜೀವನ ಸಾರ್ಥಕತೆ ಮಾಡಿಕೊಳ್ಳುವತ್ತ ಹೆಜ್ಜೆ ಹಾಕೋಣ.
|ಶ್ರೀ ಕೃಷ್ಣಾರ್ಪಣಮಸ್ತು |
No comments:
Post a Comment