🙏 ಮಹಾಭಾರತ ಸಾರ-49🙏
ಸುವರ್ಣ ಉತ್ಪತ್ತಿ ಮಹಿಮೆ
🏵🏵🏵🏵🏵🏵🏵🏵🏵🏵
ಭೀಚ್ಮಾಚಾರ್ಯರ ಮತ್ತು ಯುಧಿಷ್ಠಿರ ಸಂವಾದ ನಡೆಯುತ್ತಿತ್ತು. ಆಗ ಧರ್ಮರಾಜ ಸುವರ್ಣ ಉತ್ಪತ್ತಿ ಮತ್ತು ಸುವರ್ಣ ದಾನದ ಬಗ್ಗೆ ಕೇಳುತ್ತಾನೆ.
ಆಗ ಭೀಷ್ಮರು ಸುವರ್ಣ ಉತ್ಪತ್ತಿಯ ಕಥೆ ಹೇಳಲು ಆರಂಭಿಸುತ್ತಾರೆ. ನನ್ನ ತಂದೆ ಶಾಂತನು ದೇಹ ತ್ಯಾಗ ಮಾಡಿದರು. ಶ್ರಾದ್ಧ ಮಾಡುವ ಸಲುವಾಗಿ ನಾನು ಗಂಗಾದ್ವಾರಕ್ಕೆ (ಹರಿದ್ವಾರ)ಹೋಗಿದ್ದೆ ಅಲ್ಲಿ ಶ್ರಾದ್ಧ ಕರ್ಮ ಆರಂಭಿಸಿದೆ. ಆನಂತರ ನಾನು ಅನೇಕ ಮುನಿ, ಸಿದ್ಧರ ಸಮ್ಮುಖದಲ್ಲಿ ಜಲದರ್ಪಣ ಮೊದಲಾದ ಶ್ರಾದ್ಧ ಕರ್ಮಗಳನ್ನ್ನು ಆರಂಭಿಸಿದೆ. ಶ್ರಾದ್ಧದ ಪೂರ್ವ ಕರ್ಮಗಳನ್ನೆಲ್ಲ ಮುಗಿಸಿ. ನಂತರ ಪಿಂಡ ಪ್ರದಾನ ಮಾಡಲು ಆರಂಭಿಸಿದೆ. ಪಿಂಡ ಪ್ರದಾನ ಮಾಡಲು ಹಾಸಿದ ದರ್ಬೆಯನ್ನು ಬೇಧಿಸಿ ನೀಳವಾದ ತೋಳು (ಭುಜ) ಹೊರಕ್ಕೆ ಬಂದಿತು. ಪಿಂಡವನ್ನು ಪ್ರತಿಗ್ರಹಿಸಲು ಸಾಕ್ಷಾತ್ ತಂದೆಯೆ ಬಂದಿದ್ದಾನೆ ಎಂದು ನನಗೆ ವಿಸ್ಮಯವಾಯಿತು. ಶಾಸ್ತ್ರವನ್ನು ಬಲ್ಲವನಾದ ನನಗೆ ಮನುಷ್ಯರ ಕೈಯಲ್ಲಿ ಪಿಂಡ ಇಡುವುದು ವೇದ ವಿಹಿತವಲ್ಲ ಎಂಬುದು ಅರಿವಿಗೆ ಬಂದಿತು. ದರ್ಬೆಯ ಮೇಲೆಯೇ ಪಿಂಡ ಪ್ರದಾನ ಮಾಡಬೇಕು ಎಂಬುದು ಶಾಸ್ತ್ರ ವಿಹಿತವಾಗಿದೆ. ಆಗ ತಂದೆಯ ಹಸ್ತದಲ್ಲಿ ಪಿಂಡ ಇಡದೆ ದರ್ಬೆಯ ಮೇಲೆ ಇಟ್ಟೆ. ಆನಂತರ ನನ್ನ ತಂದೆ ತೋಳು ಮಾಯವಾಯಿತು
ಅಂದಿನ ರಾತ್ರಿ ಸ್ವಪ್ನದಲ್ಲಿ ನನ್ನ ಪಿತೃಗಳು ದರ್ಶನ ವಿತ್ತು ನಾನು ಸುಪ್ರಿತಿನಾಗಿದ್ದೇನೆ ಎಂದು ಹೇಳಿದರು. ನಿನಗೆ ಶಾಸ್ತ್ರದಲ್ಲಿರುವ ವಿಶೇಷ ಜ್ಞಾನ ನೋಡಿ ಪ್ರಸನ್ನನಾದೆ. ನೀನು ಧರ್ಮದ ವಿಷಯದಲ್ಲಿ ವ್ಯಾಮೋಹಗೊಳ್ಳಲಿಲ್ಲ. ನೀನು ಶಾಸ್ತ್ರವನ್ನೇ ಪ್ರಮಾಣವನ್ನಾಗಿಟ್ಟುಕೊಂಡು ಕರ್ಮವನ್ನು ಮಾಡಿರುವಿ, ನೀನು ಗೋದಾನ, ಭೂದಾನದ ಜತೆ ಸುವರ್ಣ ದಾನವನ್ನು ಮಾಡು. ಸುವರ್ಣ ದಾನದಿಂದ ಪಿತೃಗಳು ಪಾವನರಾಗುತ್ತಾರೆ. ಸುವರ್ಣವು ಶ್ರೇಷ್ಠವಾದ ವಸ್ತು ವಾಗಿದೆ. ಎಂದು ಪಿತೃಗಳು ಹೇಳಿದರು.
ಜಮದಗ್ನಿ ಪುತ್ರನಾದ ಪರುಷರಾಮನು ಇಪ್ಪತ್ತೊಂದು ಬಾರಿ ಭೂ ಪ್ರದಕ್ಷಿಣೆ ಹಾಕಿ ಕ್ಷತ್ರಿಯರಿಂದ ವಿಹಿತವನ್ನಾಗಿ ಮಾಡಿ ಭೂ ಮಂಡಲವನ್ನೇ ಗೆದ್ದ ನಂತರ ಅಶ್ವಮೇಧಯಾಗ ಮಾಡಿದ. ಆಗ ಅಲ್ಲಿ ಸೇರಿದ್ದ ಖುಷಿಗಳನ್ನು ಕೇಳುತ್ತಾನೆ ಪಾಪ ನಾಶವಾಗಲು ಏನು ಮಾಡಬೇಕು ಎಂದು.
ಪಾಪಗಳಿಂದ ಮುಕ್ತನಾಗಲು ಸುವರ್ಣ ದಾನ ಮಾಡಬೇಕು ಎಂದು ಹೇಳಿದ ವಶಿಷ್ಠರು ಸುವರ್ಣ ಉತ್ಪತ್ತಿಯ ಬಗ್ಗೆ ಹೇಳುತ್ತಾರೆ.
ಚಿನ್ನವು ಅಗ್ನಿ ಮತ್ತು ಸೋಮರ ಅಂಶವಾಗಿದೆ. ಕುರಿ ವರಣನ ಅಂಶ, ಕುದುರೆ ಸೂರ್ಯನ ಅಂಶ, ಆನೆ, ಮೃಗ, ಸರ್ಪ, ಎಮ್ಮೆ ಇವೆಲ್ಲವೂ ಅಸುರರ ಅಂಶಗಳಾಗಿವೆ. ಕೋಳಿ, ಹಂದಿ ರಾಕ್ಷಸ ಅಂಶಗಳಿಂದ ಜನಿಸಿವೆ. ಯಜ್ಞ, ಗೋವು ಸೋಮರಸ ಇವು ಭೂಮಿಯ ಅಂಶಗಳಾಗಿವೆ.
ಜಗತ್ತೆಲ್ಲವನ್ನು ಮಥಿಸಿದ್ದರಿಂದ ಉತ್ಪನ್ನವಾದ ರಾಶಿಯೇ ಸುವರ್ಣವಾಗಿದೆ. ಹೀಗಾಗಿ ಸುವರ್ಣವು ರತ್ನಪ್ರಾಯವಾಗಿದೆ.
ಇದೆ ಕಾರಣಕ್ಕಾಗಿ ದೇವ- ಗಂದರ್ವರು, ಉರಗರು, ರಾಕ್ಷಸರು, ಮಾನವರು ಸುವರ್ಣವನ್ನು ಪ್ರಯತ್ನ್ನ ಪೂರ್ವಕವಾಗಿ ಧರಿಸುತ್ತಾರೆ.
ಸುವರ್ಣ ದಾನವೂ ವಿಶೇಷ ಫಲ ಪ್ರದಾಯಕವಾಗಿದೆ ಎಂದು ವಶಿಷ್ಠಾದಿ ಋಷಿಗಳು ಪರುಷರಾಮನಿಗೆ ಸುವರ್ಣದಾನದ ಮಹಿಮೆ ಉಪದೇಶಿಸುತ್ತಾರೆ.
ಯವುದೇ ಕರ್ಮ ಆಚರಿಸಿದರೂ ತಿಳಿದು ಆಚರಿಸಬೇಕು ಎಂಬ ಸಂದೇಶ ಭೀಷ್ಮರಿಂದ ತಿಳಿಯಬಹುದಾಗಿದೆ. ಕರ್ಮ ಆಚರಣೆ ಹಿಂದಿನ ಮಹತ್ವ ಅರಿತು ಅಚರಿಸಬೇಕು. ಎಲ್ಲರೂ ಕರ್ಮ ಆಚರಿಸುತ್ತಾರೆ ನಾವೇಕೆ ಆಚರಿಸಬಾರದು ಎಂದು ಆಚರಿಸಬಾರದು ಎಂಬುದನ್ನು ಮಹಾಭಾರತ ಹೇಳಿಕೊಟ್ಟಿದೆ.
ಒಂದರಲ್ಲಿ ಒಬ್ಬ ವ್ಯಕ್ತಿ ತಂದೆಯ ಶ್ರಾದ್ಧ ಮಾಡುವಾಗ ಮನೆಯಲ್ಲಿದ್ದ ಬೆಕ್ಕನ್ನು ಕಟ್ಟಿಹಾಕಿ ಕರ್ಮ ಆಚರಿಸುತ್ತಿದ್ದ .ಮುಂದೆ ಆತ ಮೃತಪಟ್ಟ ಆತನ ಮಗ ಕೂಡ ಶ್ರಾದ್ಧ ಸಮಯದಲ್ಲಿ ಬೆಕ್ಕನ್ನು ಕಟ್ಟಿ ಹಾಕಿ ಮಾಡುತ್ತಿದ್ದ. ಮನೆಯಲ್ಲಿ ಬೆಕ್ಕು ಇರಲಿಲ್ಲ ಅವತ್ತು ಹುಡುಕಿಕೊಂಡು ತಂದು ಕಟ್ಟಿ ಹಾಕಿ ಶ್ರಾದ್ಧ ಮಾಡುತ್ತಿದ್ದ.. ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ಬೆಕ್ಕನ್ನು ಕಟ್ಟಿ ಹಾಕುತಿದ್ದ. ಮಗನಾದವನು ಶ್ರಾದ್ಧ ಮಾಡುವಾಗ ಬೆಕ್ಕನ್ನು ಕಟ್ಟಿ ಹಾಕುವುದು ಪದ್ಧತಿ ಅಂತ ತಿಳಕೊಂಡಿದ್ದ. ಹೀಗಾಗಬಾರದು. ಕರ್ಮ ಆಚರಣೆ ಹಿಂದಿನ ಮರ್ಮ ಅರಿಯಬೇಕು.
🙏 , ಶ್ರೀ ಕೃಷ್ಣಾರ್ಪಣಮಸ್ತು 🙏
No comments:
Post a Comment